Monthly Archive: March 2022
ನಾನು ಊರ್ಮಿಳೆ. ಯಾರೆಂದು ಕೇಳುವಿರಾ? ಜನಕ ಮಹಾರಾಜ ಹಾಗೂ ಮಹಾರಾಣಿ ಸುನೈನಾಳ ಪ್ರೀತಿಯ ಪುತ್ರಿ. ಸೀತೆ ಭೂಮಿಯಲ್ಲಿ ದೊರೆತ ದತ್ತು ಪುತ್ರಿ ಜನಕನಿಗೆ. ನನಗೆ ಸಹೋದರಿಯಾದರೂ ಅದಕ್ಕಿಂತ ಹೆಚ್ಚು ಸ್ನೇಹಿತೆಯೆಂದೇ ಅನಿಸಿಕೆ. ನನ್ನನ್ನು ಜಾನಕಿಯೆಂದೇ ಕರೆಯುತ್ತಿದ್ದರೆಂಬುದು ವಿಶೇಷ. ರಾಮನು ಶಿವಧನುಸ್ಸನ್ನು ಭೇದಿಸಿದ ಸೀತೆಯ ಸ್ವಯಂವರವಾದ ಮೇಲೆ ವಿಶ್ವಾಮಿತ್ರರ...
ಹೆತ್ತವಳವಳಲ್ಲವೇಹೊತ್ತವಳವಳಲ್ಲವೇತುತ್ತಿಟ್ಟವಳವಳಲ್ಲವೇಮುತ್ತಿಟ್ಟವಳವಳಲ್ಲವೇ. ಹಾಲುಣಿಸಿದವಳವಳಲ್ಲವೇಲಾಲಿ ಹಾಡಿದವಳವಳಲ್ಲವೇಜೋಲಿ ತೂಗಿದವಳವಳಲ್ಲವೇಲಾಲಿಸಿ ಪಾಲಿಸಿದವಳವಳಲ್ಲವೇ. ಹಡೆದವಳವಳಲ್ಲವೇಒಡಹುಟ್ಟಿದವಳವಳಲ್ಲವೇಒಡನಾಡಿಯಾದವಳವಳಲ್ಲವೇನಡೆನುಡಿ ಕಲಿಸಿದವಳವಳಲ್ಲವೇ. ಮನೆಯ ದೀಪವಳವಳಲ್ಲವೇಮನೆಯ ಬೆಳಗುವಳವಳಲ್ಲವೇಮನೆಗೆ ಮಹಾಲಕ್ಷ್ಮೀ ಅವಳಲ್ಲವೇಮನೆತನ ವೃಕ್ಷಕ್ಕೆ ಬೇರವಳಲ್ಲವೇ. ಪ್ರಕೃತಿಯ ಪ್ರತಿರೂಪ ಅವಳಲ್ಲವೇಸಂಸ್ಕೃತಿಯ ಜ್ಯೋತಿ ಅವಳಲ್ಲವೇಅವಳಿಲ್ಲದೇ ನಾವ್ಯಾರಿಲ್ಲ ಅಲ್ಲವೇಅವಳ ರಕ್ಷಣೆ ಹೊಣೆ ನಮ್ಮದಲ್ಲವೇ.. -ಶಿವಮೂರ್ತಿ.ಹೆಚ್ , ದಾವಣಗೆರೆ. +5
1.ಎಳೆ ತಾಯ ಸೊಂಟಕ್ಕಂಟಿದಮುತ್ತು; ಮತ್ತಿನಲಿ ತೂಕಡಿಸುತ್ತಾ ಕಳೆದುಕೊಂಡಿತು ಅಮೂಲ್ಯ ಹೊತ್ತು..ದೊರಕದೆ ನ್ಯಾಯ, ಒಡೆಯಿತುಅಯ್ಯೋ ಒಂದೊಳ್ಳೆ ನತ್ತು..ಯಾವ ಶಾಪವೋ ಇದು; ಹೀಗೆಲ್ಲಾಆಗುವುದು ಈ ನೆಲಕ್ಕಂಟಿದ ಘೋರಆಪತ್ತು.. 2.ಹಾದಿಬದಿ ಒಣಮರದಕೊಂಬೆಗೊಂದು ಇಳಿಬಿದ್ದಜೋಳಿಗೆ. ಒಳಗೆ ಮಲಗಿದೆಬಡಕಲು ನಡುಹೊತ್ತ ಅಮೃತಕಳಸದಮ್ಮನ ಪಾಲಿನ ಹೋಳಿಗೆ. 3.ಮೂರು ಕಲ್ಲು ನಾಕಾರುತುಂಡು ಸೌದೆ. ಉರಿವ ಬೆಂಕಿ;ಏನು ಘಮಲು!...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ತಂದೆಯ ಮಾತನ್ನು ಕೇಳಿದ ಭಾಗ್ಯ ಹೂಂ ಬೇಡವೆಂದು ಹೇಳಿದರೆ ಇದನ್ನು ನಿಲ್ಲಿಸಿಬಿಡುತ್ತಾರಾ, ತಂಗಿ ಭಾವನಾ ಹೇಳಿದಂತೆ ಎಂದಾದರೂ ಮದುವೆಯಾಗಲೇಬೇಕಲ್ಲ. ಇಂದಾದರೇನು, ಮುಂದಾದರೇನು. ಅಲ್ಲದೆ ನನ್ನ ನಂತರದವರದ್ದೆಲ್ಲ ಸುಗಮವಾಗಿ ಸಾಗಲು ನಾನು ನಾಂದಿ ಹಾಡಲೇಬೇಕು. ಎಂದು ಮನದಲ್ಲೇ ಅಂದುಕೊಂಡು ಬಹಿರಂಗವಾಗಿ ಅವರುಗಳು ಒಪ್ಪಿ ”ನಿಮಗೂ...
ಅಂದು ಸಂಕ್ರಾಂತಿ. ಭಾಸ್ಕರನು ತನ್ನ ಪಥವನ್ನು ಬದಲಿಸುವ ಸಂಕ್ರಮಣಕಾಲ. ಮಾಗಿಯ ಚಳಿಯಲ್ಲಿ ಮಾಗಿದ ಜೀವವೊಂದು ತನ್ನ ಇಹಲೋಕದ ಪಯಣಕ್ಕೆ ಇತಿಶ್ರೀ ಹಾಡಲು, ತನ್ನ ಇಷ್ಟದೈವವಾದ ದಾನಮ್ಮನನ್ನು ನೆನೆಯುತ್ತಿತ್ತು. ಎಂಭತ್ತೈದರ ಹರೆಯದ ದೊಡ್ಡವ್ವ ಹಾಸಿಗೆಯ ಮೇಲೆ ಹಿಡಿಯಷ್ಟಾಗಿ ಮಲಗಿದ್ದಳು. ನಿಧಾನಗತಿಯ ಉಸಿರಾಟವೊಂದೇ ಅವಳ ಅಸ್ತಿತ್ವವನ್ನು ಸಾರುತ್ತಿತ್ತು. ‘ದೊಡ್ಡವ್ವನ’ ಹೆಸರು...
ಸರ್ಕಾರಿ ಶಾಲೆಗಳಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಅಂತಹ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೋ ಇಲ್ಲ ಮುಖ್ಯಸ್ಥರೋ ಮಕ್ಕಳನ್ನು ಕುರಿತು ಒಂದೆರಡು ಮಾತುಗಳನ್ನು ಆಡಬೇಕೆಂದು ಕೋರಿಕೆ ಇಡುತ್ತಾರೆ. ಸಹಜವಾಗಿಯೇ ನನಗೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ನಾನು ಮಾತನಾಡುವಾಗ ಮಧ್ಯದಲ್ಲಿ ‘ಹೆಣ್ಣೊಬ್ಬಳು ಕಲಿತರೆ…..’ ಎನ್ನುತ್ತೇನೆ. ಮರುಕ್ಷಣವೇ...
4D ಸಿನಿಮಾ ಮಜ… ಅದಾಗಲೇ ಮಧ್ಯಾಹ್ನದ ಹೊತ್ತು.. ಹಸಿದ ಹೊಟ್ಟೆಯನ್ನು ತಣಿಸಿ ಮುಂದಕ್ಕೆ ಅತೀ ಕುತೂಹಲದ 4D ಸಿನಿಮಾ ನೋಡಲು ನಮ್ಮ ದಂಡು ಹೊರಟಿತು. ನನಗಂತೂ ಸಮಾಧಾನ..ಇದರಲ್ಲಾದರೂ ಭಯಪಡುವಂತಹುದು ಏನೂ ಇರಲಾರದು ಎಂದು.. ಆದರೆ ಮೊದಲೊಮ್ಮೆ ‘ಕುಟ್ಟಿಚ್ಚಾತನ್’ ಎಂಬ 3D ಸಿನಿಮಾ ನೋಡಿ ಹೆದರಿ ಕಣ್ಣುಮುಚ್ಚಿ ಕುಳಿತಿದ್ದುದು...
ಪ್ರತೀ ನಿತ್ಯ ಬೆಳಗಿನ ಜಾವ ಚಳಿ ಇದ್ದರೂ, ಮಧ್ಯಾಹ್ನ ಸೆಕೆ ಆರಂಭವಾಗಿದೆ. ಬರುವ ಈ ಬೇಸಿಗೆ ಕಾಲದಲ್ಲಿ ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು ಬತ್ತಿ, ನಿರ್ಜಲೀಕರಣವಾಗದಂತೆ ಈ ಪಾನಕ ಅಥವಾ ನಿಂಬೆಹಣ್ಣಿನ ಪಾನಕ ನಮ್ಮನ್ನು ಕಾಯುತ್ತದೆ. 1. ಬೇಲದ...
ತುರ್ತಾಗಿ ವೈದ್ಯರನ್ನು ಭೇಟಿಯಾಗಬೇಕಿತ್ತು. ಸಾಯಂಕಾಲ ಐದು ಘಂಟೆಗೆ ಭೇಟಿಯ ಸಮಯ ನಿಗದಿಯಾಗಿದ್ದರೂ, ಸಂಜೆ ಏಳು ಘಂಟೆಯವರೆಗೂ ನನ್ನ ಸರದಿ ಬಂದಿರಲಿಲ್ಲ. ನನ್ನಂತೆ ಹಲವರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಅತ್ತ ಇತ್ತ ನೋಡುವುದು, ನಮ್ಮ ಹೆಸರೆಲ್ಲಾದರೂ ಕರೆಯಬಹುದಾ ಅಂತ ಕಿವಿ ಆಗಾಗ ನೆಟ್ಟಗೆ ಮಾಡುತ್ತಾ ಸಮಯ ಸಾಗುತ್ತಿತ್ತು. ಒಮ್ಮೆಲೇ ...
ಕಾವ್ಯವು ಚಿತ್ರವು ಸಂಧಿಸಿ ಹೊಸ ಹೊಳಹನ್ನು ಉಣಬಡಿಸುವ”ಭೂರಮೆ ವಿಲಾಸ” ಕವನ ಸಂಕಲನ ಕಗ್ಗೆರೆ ಪ್ರಕಾಶರ ನಾಲ್ಕನೆ ಕವನ ಸಂಕಲನ. ಇಲ್ಲಿರುವ ಉತ್ಕೃಷ್ಟ ಕವಿತೆಗಳಿಗೆ ಮುನ್ನುಡಿ ಬೆನ್ನುಡಿ ಬರೆಯಿಸುವ ಗೋಜಿಗೆ ಹೋಗದೆ ಸಮಚಿತ್ತದಿಂದ ಓದುಗರಿಗೆ ನೀಡಿಬಿಟ್ಟಿದ್ದಾರೆ. ಸರಳ, ನೇರ , ದಿಟ್ಟ, ಪರಿಶುದ್ಧವಾದ ಇಲ್ಲಿನ ಕವಿತೆಗಳೆಲ್ಲದರಲ್ಲು ಒಂದು ನೀತಿಯಿದೆ....
ನಿಮ್ಮ ಅನಿಸಿಕೆಗಳು…