ನಾವು ಪ್ರತಿನಿತ್ಯ ನಮ್ಮ ಜೀವನದಲ್ಲಿ ನಮ್ಮ ಸುತ್ತಮುತ್ತ ಅನೇಕ ವ್ಯಕ್ತಿಗಳು, ಅವರ ಮಾತು, ಕ್ರಿಯೆ ನೋಡ್ತಾ ಇದ್ರೂ ಗಮನಿಸೋದೇ ಇಲ್ಲ. ಅದಕ್ಕೆ ನಮ್ಮ ಬಳಿ ಸಮಯ ಇಲ್ಲ. ಸಮಾಜದಲ್ಲಿ ಇತರರ ಬಗ್ಗೆ ಗಮನಿಸುವ ಆಸಕ್ತಿ ಕುತೂಹಲ ಇರೋದೆ ಇಲ್ಲ. ಆದರೆ ನಾನು ಪ್ರತಿನಿತ್ಯ ಸಮಾಜಮುಖಿ ಆಸಕ್ತಿಯಿಂದ ಗಮನಿಸ್ತಿರ್ತಿನಿ.
ಮೊನ್ನೆ ನಂಜನಗೂಡಿಂದ ಮೈಸೂರಿಗೆ ಮಧ್ಯಾಹ್ನ 3.30ಗೆ ಸರಕಾರಿ ಕೆಂಪು ಬಸ್ಸಿನಲ್ಲಿ ಬರ್ತಿದ್ದೆ. ನನ್ನ ಪಕ್ಕ ಕೂತಿದ್ದ ಒಬ್ಬ ಯುವತಿ ಸತತ ಒಂದರ ಮೇಲೊಂದರಂತೆ ಯರ‍್ಯಾರಿಗೋ ಫೋನ್ ಮಾಡಿ ದಬಾಯಿಸಿ ಬೈತಿದ್ದ ಗಡಸುತನ ಕಂಡೆ. ಬಸ್‌ನ ಹೊರಗಿಂದ ಒಬ್ಬ ಯುವಕ ಆಕೆಯನ್ನು ಬಾ ಬಾ ಎಂದು ಬಲವಂತವಾಗಿ ಕರೆಯುತ್ತಾ, ಆಕೆಯ ಕೈ ಹಿಡಿದು ಹೊರಗೆ ಬರಲು ಕರೆದರೂ, ಆಕೆ ನಾ ಬರೋಲ್ಲ ಮನೆಗೆ ಅಂತಿದ್ದಳು. ಆಕೆಯ ಬಗ್ಗೆ ಕುತೂಹಲ-ಅನುಕಂಪ. ಆದರೆ ಏನಾದರೂ ನಾ ಕೇಳಿದರೆ, ಆಕೆ ಸಿಡಿದರೆ ಎಂದು ಸುಮ್ಮನಾದೆ.
ಆ ಪಕ್ಕದ ಬದಿ ಸೀಟಿನಲ್ಲಿ ಒಬ್ಬ ವಯಸ್ಸಾದ ಹಳ್ಳಿಯ ರೈತ. ಆತನ ಪಕ್ಕ ಒಬ್ಬ ಮಧ್ಯವಯಸ್ಸಿನ ಮಹಿಳೆ, ಆತನ ತಲೆ, ಕೆನ್ನೆ ಸವರುತ್ತಾ ಕಣ್ಣೀರು ಸುರಿಸಿ ಅಳುತ್ತಾ ಉಷಾರಾಗಿ ಮನೆಗೆ ಹೋಗ್ತಿಯಪ್ಪ ಅಂತಿದ್ದಳು ನಾನು ಏನೆಂದು ವಿಚಾರಿಸಿದೆ. ಆಕೆ ಹೇಳಿದಳು ಇವರಿಗೆ ಆಸ್ಪತ್ತೇಲಿ ಇ.ಸಿ.ಜಿ ಕಣ್ಣಿನ ತಪಾಸಣೆ ಎಲ್ಲ ಪರೀಕ್ಷೆ ಮಾಡಿಸಿದರು. ಇವರಿಗೆ 3 ದಿನಗಳ ನಂತರ ಕಣ್ಣಿನ ಆಪರೇಷನ್ ಇದೆ. ಈಗ ಅವರೊಬ್ಬರೇ ನಮ್ಮ ಹಳ್ಳಿ ಗದ್ದಿಗೆಗೆ ಹೋಗ್ತಿದಾರೆ. ಕಂಡಕ್ಟರ್ ಹೇಳಿದರು. ಈ ಬಸ್ ನಂಜನಗೂಡಿಂದ ಮೈಸೂರು ಸಿಟಿ ಬಸ್ ಸ್ಟಾಂಡ್‌ಗೆ ಹೋಗುತ್ತಂತೆ. ಅವರಿಗೆ ಅಲ್ಲಿಂದ ದೊಡ್ಡ ಬಸ್‌ಸ್ಟಾಂಡಿಗೆ ಹೋಗಲು ಗೊತ್ತಾಗೊಲ್ಲ.
ನೀನ್ಯಾರು ನಾನು ಕೇಳಿದೆ. ನಾನು ಇವರ ಮಗಳು ಎಂದಳು. ನೀನ್ಯಾಕೆ ಅವರ ಜೊತೆ ಹೋಗೋಲ್ಲ ಕೇಳಿದೆ. ನಾನು ಕಡಕೊಳದಲ್ಲಿ ಇಳೀಬೇಕು. ಮನೇಲಿ ಹಸುಗಳಿಗೆ ಇನ್ನೂ ಹುಲ್ಲು ಹಾಕಿಲ್ಲ. ಶಾಲೆ-ಕಾಲೇಜಿಗೆ ಹೋದೆ. ನನ್ನ 2 ಹೆಣ್ಣು ಮಕ್ಕಳು ಮನೆಗೆ ಬರೋ ಸಮಯ ಅವರಿಗೆ ಕೊಡಬೇಕು. ನನ್ನ ಗಂಡನಿಗೆ ಅಡಿಗೆ ಮಾಡಬೇಕು. ಆಕೆ ಅಳುತ್ತಲೇ ಹೇಳಿದಳು.
‘ಅಲ್ಲಮ್ಮ ಇವನ ಹೆಂಡತಿ ಎಲ್ಲಿ’ ಆಕೆ ಗದ್ದಿಗೆ ಹಳ್ಳೀಲಿ ಹಳ್ಳೀ ಮನೆ, ಜಮೀನು ಕೆಲಸ, ದನಕರು ನೋಡ್ಕೋಳ್ಳೋ ಕೆಲಸದಲ್ಲಿ ಪುರುಸೊತ್ತೇ ಇಲ್ಲ’
‘ಅಲ್ಲಮ್ಮ ಇಷ್ಟು ಅಳ್ತಿದಿಯಲ್ಲ ತಾಯಿ ನಿನ್ನ ಮದುವೆ ಆಗಿ ಎಷ್ಟು ವರ್ಷ? ‘ಅಣ್ಣಾ 17 ವರ್ಷ ಆಯ್ತು. ಅದ್ರು ನಮ್ಮ ಅಪ್ಪನ್ನ ಕಂಡ್ರೆ ನಂಗೆ ಬೋ ಪ್ರೀತಿ’ ಎನ್ನುತ್ತಾ ಅಪ್ಪ ನನ್ನ ಕಟ್ಟಿಕೊಂಡಳು.ನನ್ನ ಕಣ್ಣಲ್ಲೂ ನೀರು. ಮುಖದಲ್ಲಿ ಸಂತಸ.’ಅಲ್ಲಮ್ಮ ಮದ್ವೆ ಆಗಿ 17 ವರ್ಷ ಆದರೂ ಈ ಅಪ್ಪನ್ನ ಕಂಡು, ಅವನನ್ನ ನಂಜನಗೂರು ಆಸ್ಪತ್ರೆಗೆ ಕರೆತಂದು ವಾಪಸ್ ಬಸ್‌ನಲ್ಲಿ ಹತ್ತಿಸಿದ್ದಿ. ಅವನ ಜೇಬಲ್ಲಿ ಬಸ್ ಟಿಕೆಟ್ಟು ಕೆಲವು ನೋಟ್‌ಗಳು ಹಾಕಿ ಹತ್ತು ಬಾರಿ ‘ಹುಷಾರಾಗಿ ಹೋಗಿ ಬಾ ಜೋಪಾನ’ ಎನ್ನುತ್ತ ಧಾರಾಕಾರ ಕಣ್ಣೀರು ಸುರಿಸಿದಾಗ ನನಗೂ ಅಳು ಬಂತು. ಈ ಮಗಳು ಅಪ್ಪನ ಬಗ್ಗೆ ತಾಳಿರುವ ಪ್ರೀತಿ, ಗೌರವ ಬಗ್ಗೆ.
ಆಗ ಕುಟುಂಬದ ಮಹತ್ವವೇ ಹೀಗೆ ಅಂದೆ ‘ಕಂಡಕ್ಟರ್‌ಗೆ ಆಕೆ ವಿನಂತಿಸಿದಳು. ‘ಅಪ್ಪಾಗೆ ದೊಡ್ಡ ಬಸ ಸ್ಟಾಂಡ್ ತಲುಪಿಸಿ’ ಎಂದು ನನ್ನ ಬಳಿಯೂ ಹಾಗೆ ಕೇಳಿಕೊಂಡಾಗ ಆ ಕಂಡಕ್ಟರ್ ನಗುತ್ತ ತಮಾಷೆ ಮಾಡಿದೆ. ‘ಅಲ್ಲಮ್ಮ ಈ ಬಸ್‌ನಲ್ಲಿರುವ ಎಲ್ಲರ ಬಳಿ ಹೇಳಿದಿಯಲ್ಲ ನನ್ನ ಬಗ್ಗೆ ನಂಬಿಕೆ ಇಲ್ವಾ ಆಕೆ ಕಡಕೊಳದಲ್ಲಿ ಇಳಿಯುವಾಗಲೂ ಅಪ್ಪಾ ಜೋಪಾನ ನಿಂಗೆ ಚೆನ್ನಾಗಿ ಕಣ್ಣು ಕಾಣೋಲ್ಲ ಅನ್ನುತ್ತಾ ಇಳಿದಳು.
ಆ ಈ ಪಕ್ಕದ ಹುಡುಗೆ ಬಾಯಿ ಬಿಟ್ಟಳು. ಅಣ್ಣಾ ನನ್ನ ಮನೆಯವರೆಲ್ಲ ಕೆಟ್ಟವ್ರು. ಅಮ್ಮಾ, ಮಾಮಂದಿರು ತಂಗಿ ಆಕೆ ಗಂಡ ಎಲ್ಲ ಸ್ವಾರ್ಥಿಗಳು. ‘ಯಾಕಮ್ಮ ಹೀಗಂತಿ? ಕೇಳಿದ. ನಾನು ಒಬ್ಬನ್ನ ಲವ್ ಮಾಡಿದೆ. ನಮ್ಮ ಸೋದರಮಾವನ ಮಗನ್ನ ಮನೇಲಿ ಮಾವಂದಿರು ನಮ್ಮಮ್ಮ ಒಪ್ಪಲಿಲ್ಲ ಬೆಂಗಳೂರು ಮಾವ-ಅತ್ತೆ ಒಪ್ಪಿ ನನ್ನ ಅವರ ಮಗನ ಲಗ್ನ ಫಿಕ್ಸ್ ಮಾಡಿ ಲಗ್ನಪತ್ರಿಕೇನ ಅವರ ಖರ್ಚಲ್ಲೇ ಮಾಡಿ 1 ವರ್ಷ ಆಯ್ತು. ನನ್ನ ಅಮ್ಮ ಬೇರೆ ಮಾವಂದಿರು ಖರ್ಚು ಮಾಡಲಿಲ್ಲ. ಭಾಗವಹಿಸಲೂ ಇಲ್ಲ ನಾ ಬೆಂಗಳೂರು ಮಾವನ ಮನೆಗೆ ಹೋಗ್ತೀನಿ ಅಂದ್ರೆ ನನ್ನ ಕಳಿಸೋಕೇ ಒಪ್ತಿಲ್ಲ. ನಾ ಅದಕ್ಕೆ ಜಗಳ ಆಡಿ ಬಸ್ ಹತ್ತಿದೀನಿ ತಂಗಿ ಗಂಡ ಬಂದು ಮನೇಗೆ ಕರೀತೀದಾನೆ
‘ಅಲ್ಲಮ್ಮ ಮದುವೆಗೆ ಮೊದಲು ಲವ್ವರ್ ಮನೆಗೆ ಹೋಗ್ತಿದಿಯಲ್ಲ?
‘ಅಯ್ಯೋ ಅಣ್ಣಾ ನನ್ನ ಎಂಗೇಜ್ ಮೆಂಟ್ ಆಗಿದೆ. ಈಗ ಅವರೇ ಕರೀತಿದಾರೆ. ಹೋಗ್ತಿದಿನಿ.’
‘ ಅಲ್ಲಮ್ಮ ನೀ ಬಎಂಗಳೂರು ತಲುಪಿ ಅವರ ಮನೆಗೆ ಹೋಗೋಕೆ ರಾತ್ರಿ ಆಗೋಲ್ವಾ’
‘ನಂಗೇನು ಹೆದರಿಕೆ ನಾ 7ನೇ ಕ್ಲಾಸ್ ಓದಿದೀನಿ ನಂಗೆಲ್ಲ ಗೊತ್ತು. ‘ನನ್ನ ಕಸಿನ್‌ಗೆ ಫೋನ್ ಮಾಡ್ತೀನಿ. ಅವನು ಬಂದು ಕಾರಲ್ಲಿ ಕರಕೊಂಡು ಹೋಗ್ತಾನೆ’
‘ಹುಷಾರಮ್ಮ ಎಲ್ಲರ ಹತ್ತಿರ ಜಗಳ ಆಡಬೇಡ ಸಂಬಂ ಕೆಟ್ಟು ಹೋಗುತ್ತೆ. ‘ನಾನೆಂದೆ.
‘ಅಣ್ಣಾ ನಂಗೆ 19. ನಾನು ಮೆಜಾರಿಟಿಗೆ ಬಂದಿದೀನಿ ಬೇರೆ ಯಾರ ಸಹಾಯವೂ ಬೇಡ ಅಂದ್ರು. ಹೆಣ್ಣಿನ 2 ಮುಖಗಳನ್ನು ಒಂದೇ ಬಾರಿ ಕಂಡೆ.
ಎನ್.ವ್ಹಿ.ರಮೇಶ್

