ಅವಳಲ್ಲವೇ…
ಹೆತ್ತವಳವಳಲ್ಲವೇ
ಹೊತ್ತವಳವಳಲ್ಲವೇ
ತುತ್ತಿಟ್ಟವಳವಳಲ್ಲವೇ
ಮುತ್ತಿಟ್ಟವಳವಳಲ್ಲವೇ.
ಹಾಲುಣಿಸಿದವಳವಳಲ್ಲವೇ
ಲಾಲಿ ಹಾಡಿದವಳವಳಲ್ಲವೇ
ಜೋಲಿ ತೂಗಿದವಳವಳಲ್ಲವೇ
ಲಾಲಿಸಿ ಪಾಲಿಸಿದವಳವಳಲ್ಲವೇ.
ಹಡೆದವಳವಳಲ್ಲವೇ
ಒಡಹುಟ್ಟಿದವಳವಳಲ್ಲವೇ
ಒಡನಾಡಿಯಾದವಳವಳಲ್ಲವೇ
ನಡೆನುಡಿ ಕಲಿಸಿದವಳವಳಲ್ಲವೇ.
ಮನೆಯ ದೀಪವಳವಳಲ್ಲವೇ
ಮನೆಯ ಬೆಳಗುವಳವಳಲ್ಲವೇ
ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ
ಮನೆತನ ವೃಕ್ಷಕ್ಕೆ ಬೇರವಳಲ್ಲವೇ.
ಪ್ರಕೃತಿಯ ಪ್ರತಿರೂಪ ಅವಳಲ್ಲವೇ
ಸಂಸ್ಕೃತಿಯ ಜ್ಯೋತಿ ಅವಳಲ್ಲವೇ
ಅವಳಿಲ್ಲದೇ ನಾವ್ಯಾರಿಲ್ಲ ಅಲ್ಲವೇ
ಅವಳ ರಕ್ಷಣೆ ಹೊಣೆ ನಮ್ಮದಲ್ಲವೇ..
-ಶಿವಮೂರ್ತಿ.ಹೆಚ್ , ದಾವಣಗೆರೆ.
ಅರ್ಥಪೂರ್ಣವಾಗಿದೆ ಕವನದ ಸಾಲುಗಳು
ಧನ್ಯವಾದಗಳು ಸರ್
ತುಂಬಾ ಚೆನ್ನಾಗಿದೆ. ಕೆಲವೇ ಸಾಲುಗಳಲ್ಲಿ ಹೆಣ್ಣಿನ ಎಲ್ಲ ಪಾತ್ರಗಳನ್ನು ವಿವರಿಸಿದ್ದೀರಿ.
ಧನ್ಯವಾದಗಳು ಮೇಡಂ
ಹೆಣ್ಣಿನ ಬಗ್ಗೆ ಮೌಲಕ ಕವನ ಅರ್ಥ ಪೂರ್ಣ ವಾಗಿದೆ ಸಾರ್. ಧನ್ಯವಾದಗಳು.
ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿದೆ
ಧನ್ಯವಾದಗಳು ಮೇಡಂ
ಕವನಾ ಚೆನ್ನಾಗಿದೆ ಸರ್
ಧನ್ಯವಾದಗಳು
ತುಂಬಾ ಚೆನ್ನಾಗಿದೆ
ಧನ್ಯವಾದಗಳು
ನಮ್ಮ ಕವನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು
ಹೆಣ್ಣು ವಹಿಸುವ ವಿಭಿನ್ನ ಪಾತ್ರಗಳ ಸುಂದರ ಸಂಕ್ಷಪ್ತ ರೂಪ ಕವನ ರೂಪದಲ್ಲಿ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು.
ಧನ್ಯವಾದಗಳು ಮೇಡಂ
ಹೆಣ್ಣಿನ ಮಹತ್ವದ ಪಾತ್ರಗಳ ಬಗೆಗಿನ ಸೊಗಸಾದ ಕವನ.
ಧನ್ಯವಾದಗಳು ಮೇಡಂ
ಚಂದದ ಕವನ ಸರ್
ಧನ್ಯವಾದಗಳು ಮೇಡಂ
ಮನಮುಟ್ಟುವ ಕವನ. ಧನ್ಯವಾದಗಳು ಸರ್
ಧನ್ಯವಾದಗಳು ಮೇಡಂ…