Author: Sangeetha Raviraj
ಸುನೀತಾ ಕುಶಾಲನಗರ ಇವರ ‘ ಇಂಜಿಲಗೆರೆ ಪೋಸ್ಟ್ ‘ ಎಂಬ ವಿನೂತನ ಶೀರ್ಷಿಕೆ ಹೊತ್ತ , ಆಕರ್ಷಕ ಮುಖಪುಟದ ಕಥಾಸಂಕಲನ ಸಾರಸ್ವತ ಲೋಕಕ್ಕೆ ಚಂದನೆಯ ಉಡುಗೊರೆ. ಹತ್ತು ಕಥೆಗಳ ಗುಚ್ಚದ ಈ ಭಾವ ಪ್ರಪಂಚದಲ್ಲಿ ನೋವು ನಲಿವಿನ ಸಂಗಮವಿದೆ. ಕೊಡಗಿನ ಪ್ರಾಕೃತಿಕ ದುರಂತಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ...
ಕಾವ್ಯವು ಚಿತ್ರವು ಸಂಧಿಸಿ ಹೊಸ ಹೊಳಹನ್ನು ಉಣಬಡಿಸುವ”ಭೂರಮೆ ವಿಲಾಸ” ಕವನ ಸಂಕಲನ ಕಗ್ಗೆರೆ ಪ್ರಕಾಶರ ನಾಲ್ಕನೆ ಕವನ ಸಂಕಲನ. ಇಲ್ಲಿರುವ ಉತ್ಕೃಷ್ಟ ಕವಿತೆಗಳಿಗೆ ಮುನ್ನುಡಿ ಬೆನ್ನುಡಿ ಬರೆಯಿಸುವ ಗೋಜಿಗೆ ಹೋಗದೆ ಸಮಚಿತ್ತದಿಂದ ಓದುಗರಿಗೆ ನೀಡಿಬಿಟ್ಟಿದ್ದಾರೆ. ಸರಳ, ನೇರ , ದಿಟ್ಟ, ಪರಿಶುದ್ಧವಾದ ಇಲ್ಲಿನ ಕವಿತೆಗಳೆಲ್ಲದರಲ್ಲು ಒಂದು ನೀತಿಯಿದೆ....
ಸರಳ, ಸುಂದರ, ಅರ್ಥಗರ್ಭಿತ ಕವಿತೆಗಳ ಒಡತಿ ಶ್ರೀಮತಿ ಕೃಪಾ ದೇವರಾಜ್ ಇವರ ಪ್ರಥಮ ಕಾವ್ಯ ಕೃತಿ ‘ಭಾವದ ಕದ ತಟ್ಟಿ’ ನೇರವಾಗಿ ನಮ್ಮ ಹೃದಯವನ್ನು ತಟ್ಟುವಂತಹ ಕವಿತೆಗಳು. ಓದಿದೊಡನೆ ಮನಸ್ಸಿನ ಕದ ದಾಟಿ ನೇರವಾಗಿ ಒಳಗೆ ಬಂದು ನೆಲೆಗೊಳ್ಳುವ ಸಾಲುಗಳು. ಆದರಿಂದ ಇವರ ಕವಿತೆಗಳಿಗೆ ಮುಂದೊಂದು ದಿನ ಭದ್ರ...
2020 ರ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕೃತ ಕೃತಿಯಾದ ಅಕ್ಷತಾ ಕೃಷ್ಣಮೂರ್ತಿಯವರ ‘ನಾನು ದೀಪ ಹಚ್ಚಬೇಕೆಂದಿದ್ದೆ ‘ ಕವನ ಸಂಕಲನ ಹಚ್ಚಿದ ದೀಪ ಸದಾ ಬೆಳಗುತಿರುವಂತಹ ರೂಪದ ಕವಿತೆಗಳು. “ಎದೆಯ ದನಿಗು ಮಿಗಿಲು ಶಾಸ್ತ್ರವಿಹುದೇನು? ” ಎಂಬ ಕುವೆಂಪುವಾಣಿಯ ಸಾಲೊಂದು ಕವಿತೆಗಳನ್ನು ಓದಿದ ನಂತರ ನಮ್ಮಮನಸ್ಸಿಗೆ...
ಚದುರಿ ಬಿದ್ದ ಆತ್ಮದ ತುಣುಕುಗಳು ಒಂದೆಡೆ ಸೇರಿದ ಚರಿತ್ರೆ ಡಾ.ಪುರುಪೋತ್ತಮ ಬಿಳಿಮಲೆಯವರ ಆತ್ಮಚರಿತ್ರೆ ಕಾಗೆ ಮುಟ್ಟಿದ ನೀರು. ಕೃತಿಯಲ್ಲಿ ಪ್ರಾಮಾಣಿಕವಾಗಿ , ನಿಷ್ಕಲ್ಮಶವಾಗಿ ಎಲ್ಲವನ್ನು ತೆರೆದು ಹೇಳಿದ್ದು ಇವರ ಕವಿಧರ್ಮದ ಮನಸ್ಸು ಆತ್ಮಚರಿತ್ರೆಯಲ್ಲಿ ಯಾರು ಸಂಪೂರ್ಣ ಸತ್ಯ ಹೇಳಲಾರರು ಎಂಬುದನ್ನು ಕವಿಯೋರ್ವರು ಉಲ್ಲೇಖಿಸಿದನ್ನು ಓದಿರುವೆ. ಇವರೆ...
ಸೈಕಲ್ ತುಳಿಯುತ್ತ ,ಚಕ್ರ ತಿರುಗಿದ ಕಾಲಗತಿಯಲ್ಲಿ ಕಾಲಚಕ್ರವು ಸದ್ದಿಲ್ಲದೆ ಉರುಳುತ್ತಾ,ಈಗ ನನಗೆ ನಾನೆ ಹುಬ್ಬೇರುವಂತೆ ಎರಡು ಮಕ್ಕಳ ತಾಯಿಯಾಗಿ , ಮೂರು ಕತ್ತೆ ವಯಸ್ಸಾಗಿ , ಬಳುಕದ ಬಳ್ಳಿಯಾಗಿ ಬಾಳುತ್ತಿದ್ದರು ಸೈಕಲ್ ಕಂಡಾಗಲೊಮ್ಮೆ ತುಳಿಯಬೇಕೆಂಬ ಮನದ ಹುಚ್ಚು ವಾಂಛೆ ಈ ಕ್ಷಣಕ್ಕು ಹೋಗಿಲ್ಲ ಎಂದರೆ ಯಾರು ನಂಬಲಾರರು....
ಡಾ.ಪ್ರಭಾಕರ ಶಿಶಿಲರ ಇತ್ತೀಚೆಗೆ ಪ್ರಕಟಗೊಂಡ ಕಾದಂಬರಿ ‘ದೊಡ್ಡ ವೀರ ರಾಜೇಂದ್ರ’ ಕೊಡಗಿನ ಐತಿಹಾಸಿಕ ಕಾದಂಬರಿಗಳಲ್ಲಿ ಪ್ರಮುಖವಾಗಿ ನಿಲ್ಲುತ್ತದೆ. ಇದು ಕೊಡಗಿನ ಇತಿಹಾಸವನ್ನು ಆಧರಿಸಿ ಮತ್ತು ಅಧ್ಯಯನ ಮಾಡಿ ಬರೆದಂತಹ ಇವರ ಮೂರನೆ ಕಾದಂಬರಿ. ಈ ಮೊದಲು ಮೂಡಣದ ಕೆಂಪು ಕಿರಣ ಮತ್ತು ನದಿ ಎರಡರ ನಡುವೆ...
ಡಾ.ಕೋರನ ಸರಸ್ವತಿಯವರ ‘ಕೊಡಗು ಗೌಡ ಸಮುದಾಯ ಸಾಂಸ್ಕೃತಿಕ ಅನನ್ಯತೆ‘ ಎನ್ನುವ ಸಂಶೋಧನಾತ್ಮಕ ಕೃತಿ , ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ , ಸಂಪ್ರದಾಯ, ಆಚರಣೆ , ಪದ್ಧತಿ ಇವುಗಳ ಕೂಲಂಕುಷ ವಿವರಗಳೊಂದಿಗೆ ವಿಶಿಷ್ಟವಾಗಿ ಮೂಡಿಬಂದಿದೆ.೨೦೦೮ ರಲ್ಲಿ ಅಧ್ಯಯನ ಬರಹ ಲೋಕಾರ್ಪಣೆಗೊಂಡರು ಪ್ರಸ್ತುತ ದಿನಗಳವರೆಗು ಗೌಡ ಅರೆಭಾಷೆನ...
ನಿನ್ನಾಸೆಗಳೆಲ್ಲವು ಗುರಿಗಳಾಗಿದ್ದರೆ ಎಷ್ಟು ಚೆನ್ನಾಗಿತ್ತು ಚೆಲುವೆ… ಇಂತಹ ಹಲವಾರು ವಿಭಿನ್ನ ಸಾಲುಗಳಿಂದ ‘ ತೆರೆದ ಕಿಟಕಿ’ ಎಂಬ ಕೃತಿಯ ಮೂಲಕ ಸಾರಸ್ವತ ಲೋಕಕ್ಕೆ ಕಾಲಿಟ್ಟು , ಸಾಹಿತ್ಯಾಸಕ್ತರನ್ನೆಲ್ಲ ಇದಿರುಗೊಂಡಿದ್ದಾರೆ ವೃತ್ತಿಯಿಂದ ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಕೆ. ಎಸ್. ಮರಿಯಯ್ಯಸ್ವಾಮಿಯವರು. ಬರವಣಿಗೆ ಯಾರಿಗು ಯಾವ ಸಂದರ್ಭದಲ್ಲು ಒಲಿದು ಬರುತ್ತದೆ...
ಧಾವಂತ ಧಾವಿಸುವ ಕಾಲುಗಳ ಕಾಲಡಿಗೆ ಎಷ್ಟೊಂದು ದಾರಿಗಳು…. ಅನಿಯಮಿತ ನಡೆದಾಡುವ ಹಾದಿಯ ತುಂಬ ಅದೆಷ್ಟು ಗುರಿಗಳು…… ದಮ್ಮು ಕಟ್ಟುತ್ತ ಕೆಮ್ಮುವ ಅಪ್ಪನ ದವಖಾನೆಗೆ ಸೇರಿಸುವ ಆತುರ ಮಗಳಿಗಾದರೆ, ಚಿಂದಿ ಆಯ್ದ ಹುಡುಗ ಹೊರಲಾರದೆ ಹೊತ್ತು ದಾಪುಗಾಲಲ್ಲಿ ಬರುವುದರ ಕಾಯುವ ಅಮ್ಮ ಭಿಕ್ಷೆ ಬೇಡುವ ಅಜ್ಜಿಯ ಇಂಗಿದ ಕಣ್ಣುಗಳ...
ನಿಮ್ಮ ಅನಿಸಿಕೆಗಳು…