ಅರಿಯಬೇಕೆಲ್ಲರು.
ಅವನಾಡಿಸಿದಂತೆಆಡುತಿರಬೇಕು ನಾವೆಲ್ಲರು. ಇರುವುದೆಲ್ಲವ ಬಿಟ್ಟುಈಶ್ವರನೆಡೆಗೆ ನಡೆಯಬೇಕೆಲ್ಲರು. ಉಸಿರು ನಿಲ್ಲುವ ಮುಂಚೆಯೇಊರ ಜನ ಕೊಂಡಾಡಬೇಕೆಲ್ಲರು. ಋಣತ್ರಯಗಳ ತೀರಿಸಿಯೇಎಲ್ಲವ ತೊರೆದು ನಡೆಯಬೇಕೆಲ್ಲರು. ಏನಿದ್ದರೂ ಏನಿಲ್ಲದವರಂತೆಐಹಿಕ ಸುಖಿಗಳಾಗಬೇಕೆಲ್ಲರು. ಒಂದೊಂದು ಕ್ಷಣವ ಮಕ್ಕಳಂತೆಓಜಸ್ಸು ಮೊಗದಿ ಬೆರೆಯಬೇಕೆಲ್ಲರು. ಔಚಿತ್ಯಪೂರ್ಣ ಮಾತುಗಳೆಲ್ಲರೂಅಂತಃಕರಣದಿ ಅರಿಯಬೇಕೆಲ್ಲರು. –ಶಿವಮೂರ್ತಿ.ಹೆಚ್, ದಾವಣಗೆರೆ. +3
ನಿಮ್ಮ ಅನಿಸಿಕೆಗಳು…