ಬೆಳಕು-ಬಳ್ಳಿ

ಬೇಸರ

Share Button

ಬದುಕಲ್ಲಿ ತುಂಬಿರಲು ಬೇಸರ
ಜೀವನ ಎನಿಸುವುದು ನಶ್ವರ
ಕಿರಿಕಿರಿಯು ಆಗುವುದು ಪ್ರತಿಕ್ಷಣ
ಮನದಿ ಕಾಡುವುದು ವಿಲಕ್ಷಣ

ಕುಳಿತಲ್ಲಿ ಕುಳಿತುಕೊಳ್ಳಲಾಗದ
ಚಡಪಡಿಕೆ ಗೊಂದಲದ ಗೂಡು
ಹತಾಶೆ ನಿರಾಸೆಗೆ ಸಿಲುಕುವುದು
ಹೇಳಲಾಗದು ಮನದ ಪಾಡು

ಯಾವೊಂದೂ ಮಾತು ರುಚಿಸದು
ಮೌನವಷ್ಟೇ ಆಗ ಹಿತವೆನಿಸುವುದು
ಸಿಟ್ಟಿನಿಂದ ಮನವು ಸಿಡಿಯುವುದು
ಆಕ್ರೋಶವು ಹೊರ ಹೊಮ್ಮುವುದು

ಶೂನ್ಯದತ್ತ ವಾಲುವುದು ಮನಸು
ಪ್ರತಿಯೊಂದಕ್ಕೂ ತೋರುವುದು
ನಿರುತ್ಸಾಹ ತುಂಬಿದ ಮುನಿಸು
ಯಾವುದರ ಮೇಲಿರದು ಪ್ರೀತಿ

ಎಲ್ಲರಿಂದ ದೂರ ಸರಿಯುವುದು
ಸುತ್ತಲೂ ಕತ್ತಲು ಕವಿದಂತೆನಿಸುವುದು
ಭರವಸೆಯ ಬೆಳಕು ಎಲ್ಲೂ ಕಾಣಿಸದು
ಜೀವನವೇ ಸಾಕು ಸಾಕೆನಿಸಿಬಿಡುವುದು

ಎಲ್ಲವೂ ಇಲ್ಲಿ ಕ್ಷಣಿಕ ಅರಿತರಿದೆ ಸುಖ
ಒಂದಿಷ್ಟು ಸಾಕು ಇದ್ದು ಹೋಗುವುದಕ್ಕೆ
ಶಾಶ್ವತವಾಗಿರದು ಯಾವುದೂ ಜೊತೆಗೆ
ಜೀವಿಸಬೇಕು ಸುಖ ದುಃಖಗಳ ಮರೆತು
ನಗುನಗುತಾ ಎಲ್ಲರೊಡನೆ ಸ್ನೇಹದಿಂದ ಬೆರೆತು

ನಾಗರಾಜ ಜಿ. ಎನ್. ಬಾಡ, ಕುಮಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *