Author: Dr.Krishnaprabha M

14

ಶಿಷ್ಯ ಗುರುವಾದಾಗ

Share Button

ಕೆಲವೊಮ್ಮೆ ಕೆಲವು ವಿಷಯಗಳು ಸಂಭವಿಸುತ್ತವೆ. ಯಾವ ಕಾರಣದಿಂದ ಆ ವಿಷಯ ಸಂಭವಿಸಿತು ಅನ್ನುವುದಕ್ಕೆ ಕಾರಣಗಳು ಗೊತ್ತಾಗುವುದೇ ಇಲ್ಲ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಬೇರೇನೋ ನಡೆದುಬಿಡುತ್ತದೆ. ಎಲ್ಲವೂ ಇದ್ದು ಇಲ್ಲದಂತೆ, ಎಲ್ಲರೂ ಇದ್ದೂ ಇಲ್ಲದಂತೆ ಆಗುವುದುಂಟು. ಗುರುತು ಪರಿಚಯ ಇರದವರು ಕೂಡಾ ನಮ್ಮ ನೆರವಿಗೆ ಧಾವಿಸುವುದು ಕಂಡಾಗ ಎಲ್ಲೋ...

9

ಅಧಿಕ ವರ್ಷ- ಒಂದು ಪಕ್ಷಿನೋಟ

Share Button

‘ಕೆಲವಂ ಬಲ್ಲವರಿಂದ ಕಲ್ತು’ ಅನ್ನುವ ಮಾತಿನಂತೆ ಕೆಲವೊಂದು ವಿಷಯಗಳನ್ನು ನಾವು ಕೇಳಿ ತಿಳಿದಿರುತ್ತೇವೆ. ಇನ್ನು ಕೆಲವನ್ನು ಓದಿ ತಿಳಿದಿರುತ್ತೇವೆ. ನಮ್ಮ ಮನಸ್ಸಿಗೆ ಸರಿ ಅನ್ನಿಸಿದ ವಿಷಯದ ಬಗ್ಗೆ/ಸಂಶಯವಿಲ್ಲದ ವಿಷಯಗಳ ಜಾಸ್ತಿ ಕೆದಕಲು ಹೋಗುವುದಿಲ್ಲ, ಜಾಸ್ತಿ ಯೋಚನೆಯೂ ಮಾಡುವುದಿಲ್ಲ. ಆದರೆ ಸಂಶಯವಿರುವ ವಿಷಯಗಳಾದರೆ ಆ ವಿಷಯದ ಬಗ್ಗೆ ಇನ್ನೂ...

12

ಸರ್ವರುಜಾಪಹಾರಿಯಂತೆ ಈ ನೆಲ್ಲಿಕಾಯಿ!

Share Button

ಯಾವುದೇ ಲೇಖನ ಬರೆಯಬೇಕಾದರೂ ಅದಕ್ಕೊಂದು ಕಾರಣವಿರುತ್ತದೆ. ಬರೆಯಬೇಕೆನ್ನುವ ತುಡಿತ ಇದ್ದರೆ ಸಾಕೇ? ಅದಕ್ಕೆ ಸಮಯವೂ ಬೇಕು. ವಿಚಾರವೊಂದು ಮನಸ್ಸಿಗೆ ಹೊಳೆದಾಗ ಆ ಕೂಡಲೇ ಬರೆದರೆ ಅದೇನೋ ಸಮಾಧಾನ. ಆದರೆ ನಾನಾ ಕಾರಣಗಳಿಂದ ಅದೇ ದಿನ ಬರೆಯಲು ಸಾಧ್ಯವಾಗುವುದಿಲ್ಲ. ನಾಳೆ ಬರೆಯೋಣ ಎಂದು ಆ ಕೆಲಸ ಮುಂದೂಡಿದಾಗ ಹಲವು...

17

ರಫೂ-ಗಾರಿಯೆಂಬ ಅಚ್ಚರಿ

Share Button

ಏನಿದು ರಫೂಗಾರಿ? ಈ  ಬಗ್ಗೆ ಬರೆಯುವ ಮುನ್ನ ಆ ಪದದ ಜಾಡು ಹಿಡಿಯಲು ಕಾರಣವಾದ ನನ್ನ ಅನುಭವವನ್ನು ಮೊದಲಿಗೆ ವಿವರಿಸದಿದ್ದರೆ ಈ ಲೇಖನ ಅಪೂರ್ಣವಾಗುವುದು.            @@@@@@@@@@@@@@ ನಾರಿಯರಿಗೆ ಸೀರೆಯ ಮೇಲಿರುವ ಒಲವು ಇಂದು ನಿನ್ನೆಯದಲ್ಲ. ಕಪಾಟು ಭರ್ತಿಯಾಗಿದ್ದರೂ ಸಹಾ ಪತಿರಾಯ ಹೊಸ ಸೀರೆ ತಂದಾಗ “ಯಾಕೆ...

9

ಹೊಸ ಫಲದ ಕಥೆ!

Share Button

ನಮ್ಮ ಮನೆಯಲ್ಲಿಯೇ ಬೆಳೆದ ಹೂಗಿಡಗಳಲ್ಲಿ ಯಥೇಚ್ಛ ಹೂಗಳು ಅರಳಿರುವುದು ಕಂಡಾಗ ಮನಸ್ಸಿಗೇನೋ ಖುಷಿ. ಹಾಗೆಯೇ ಮನೆಯ ಸುತ್ತಮುತ್ತಲಿರುವ ಜಾಗದಲ್ಲಿ ನಾವೇ ಬೆಳೆದ ತರಕಾರಿ ಗಿಡ/ಹಣ್ಣಿನ ಗಿಡದಿಂದ ಯಥೇಚ್ಛ ತರಕಾರಿ/ಹಣ್ಣುಗಳು ದೊರೆತಾಗ ಸಿಗುವ ಆ ಖುಷಿಯೇ ಬೇರೆ. ನಾವು ತಿಂದೆಸೆದ  ಹಣ್ಣಿನ ಬೀಜ ಮೊಳೆತು ಸಸಿಯಾಗಿ, ಪುಟ್ಟ ಮರವಾಗಿ...

22

ಕಾಡಿದ ಕೆಪ್ಪಟ್ರಾಯ

Share Button

ಏಪ್ರಿಲ್ ತಿಂಗಳ ಮೊದಲ ವಾರವದು.  ನಮ್ಮ ಮನೆಯಲ್ಲಿ ಹಾಗೆಯೇ ತೀರಾ ಹತ್ತಿರದ ಬಂಧುಗಳ ಶುಭಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಗೆ ಕಾಲೇಜಿನ ಪಾಠಪ್ರವಚನಗಳಿಗೆ ಕೊಂಚವೂ ವ್ಯತ್ಯಯವಾಗದಂತೆ ವ್ಯಸ್ತಳಾಗಿದ್ದೆ. ಹೇಳಿಕೊಳ್ಳಲಾಗದಂತಹ ಸುಸ್ತು ದೇಹವನ್ನು ಕಾಡುತ್ತಿತ್ತು. ಜೊತೆಯಲ್ಲಿ   ಮೈ ಕೈ ನೋವು, ಸ್ನಾಯು ಸೆಳೆತ,  ಜ್ವರ. ದಿನಕ್ಕೆರಡು ಪ್ಯಾರಸೆಟಾಮಲ್ ಮಾತ್ರೆ ನುಂಗುತ್ತಾ ದೈನಂದಿನ...

7

ವಾವ್!ಇದು ಅದಾಲಜ್ ನಿ ವಾವ್!!

Share Button

ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದಾಗ, ಭೇಟಿ ನೀಡಿದ ಅದಾಲಜ್ ನಿ ವಾವ್ ಬಗ್ಗೆ ಈ ಲೇಖನ.                                    “ಇಲ್ಲೇ ಹತ್ತಿರದಲ್ಲಿ ನಾವು ನೋಡಲೇ ಬೇಕಾದ ಜಾಗ ಒಂದಿದೆ. ಹೇಗೂ ಇಷ್ಟು ದೂರ ಬಂದಿದ್ದೇವೆ. ನೋಡಿಕೊಂಡು ಬರೋಣ ಆಗದೇ?” ನಮ್ಮ ಜೊತೆ ಬಂದಿದ್ದ ರಮೇಶ್ ಸರ್...

13

ಪಿಂಕ್ ರಿಕ್ಷಾ- ಹೆಣ್ಣಿಗೆ ಶ್ರೀರಕ್ಷೆ

Share Button

ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು. ಈ  ಸಂದರ್ಭದಲ್ಲಿ ಗುಜರಾತಿನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಸರ್ದಾರ್ ವಲ್ಲಭ ಭಾಯಿ ಪಟೇಲರ 182 ಮೀಟರ್ ಎತ್ತರದ ಮೂರ್ತಿಯನ್ನು ಸಂದರ್ಶಿಸಲೆಂದು ಹೋಗಿದ್ದಾಗ, ಅಲ್ಲಿ ಸಾಲಾಗಿ ನಿಂತಿದ್ದ ಕೇವಲ ಮಹಿಳೆಯರೇ ಚಲಾಯಿಸುವ ಗುಲಾಬಿ...

15

ನೆನಪಿನ ಸುರುಳಿ ಬಿಚ್ಚಿಕೊಂಡಾಗ

Share Button

ನೆನಪಿನ ಪುಟಗಳನ್ನು ತಿರುವಿದಾಗ ಥಟ್ಟನೆ ತೆರೆದುಕೊಳ್ಳುವ ಪುಟಗಳಲ್ಲಿ ಈ ಘಟನೆಯೂ ಒಂದು. 1994 ರಲ್ಲಿ ನಡೆದ ಘಟನೆ. ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿ ವರುಷವೊಂದು ಕಳೆದಿತ್ತು. ದೇವರ ದಯೆಯಿಂದ ಉದ್ಯೋಗವೂ ಖಾಯಂ ಆಗಿತ್ತು. ಅದೊಂದು ದಿನ ಮಧ್ಯಾಹ್ಞದ ಹೊತ್ತಿನಲ್ಲಿ ನಮ್ಮ ವಿಭಾಗ ಮುಖ್ಯಸ್ಥರು ನನ್ನ ಬಳಿ ಬಂದು...

16

 ದೊಡ್ಡನೆಕ್ಕರೆ- ಇರಲಿ ಅಕ್ಕರೆ

Share Button

“ನೀನು ಮುತ್ತೈದೆಯೇ ಆಗಿದ್ದರೆ, ನನ್ನನ್ನು ನೋಡಿದ ಕೂಡಲೇ ಗಿಡದಿಂದ ಕೊಯಿದು(ಕಿತ್ತು) ನಿನ್ನ ತಲೆಯಲ್ಲಿ ಮುಡಿಯುವೆ” ಅಂತ ಈ ಗಿಡ ಹೇಳುತ್ತದೆಯೆಂದು ನನ್ನಮ್ಮ ಹೇಳುತ್ತಿದ್ದರು. ಆಹಾ! ಎಂತಹ ಒಂದು ಸುಂದರ ಕಲ್ಪನೆ! ಹಾಗಾದರೆ, ಹೂವಿನ ಗಿಡಗಳಿಗೂ ಗೊತ್ತು ಹೂವುಗಳೆಂದರೆ ಹೆಣ್ಣಿಗೆ ಇಷ್ಟ, ಹೂವುಗಳನ್ನು ಮುಡಿಯುವುದು ಇಷ್ಟ ಎಂದಾಯಿತು ತಾನೇ?...

Follow

Get every new post on this blog delivered to your Inbox.

Join other followers: