Author: B.R.Nagarathna

5

ವಾಟ್ಸಾಪ್ ಕಥೆ 59: ವಾಸ್ತವಿಕತೆಯ ಅರಿವು.

Share Button

ಈಗಿನ ಯುವಕರು ಕಾಲೇಜಿಗೆ ವ್ಯಾಸಂಗಕ್ಕಾಗಿ ಸೇರಿದರೆ ಅವರು ಬಯಸಿದ್ದನ್ನೆಲ್ಲ ಅಪ್ಪ, ಅಮ್ಮ ತೆಗೆಸಿಕೊಡಲೇಬೇಕೆಂದು ಹಟಮಾಡುತ್ತಾರೆ. ಅಪ್ಪನ ಹಣಕಾಸು ಪರಿಸ್ಥಿತಿಯೇನು ಎಂಬುದನ್ನು ಅವರು ತಿಳಿದುಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಹೀಗೆ ಒಬ್ಬ ಮಗನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ. ಅವನ ತಂದೆ ಕೆಳಮಧ್ಯಮ ವರ್ಗದ ಕಾರ್ಮಿಕರು. ಕಷ್ಟಪಟ್ಟು ಹುಡುಗನನ್ನು ಓದಿಸುತ್ತಿದ್ದರು. ತನ್ನ...

13

ಯಾರು ಹಿತವರು?

Share Button

ಬೆಳಗಿನ ವಾಕಿಂಗ್ ಮುಗಿಸಿ ಮನೆಯಕಡೆಗೆ ಹಾದಿಹಿಡಿದಿದ್ದರು ಕುಮುದಾ, ಸದಾನಂದ ದಂಪತಿಗಳು. ಮನೆಯ ಗೇಟಿನಬಳಿ ನಿಂತಿದ್ದ ತಮ್ಮ ಚಿಕ್ಕಪ್ಪನ ಮಗಳು ರೇವತಿಯನ್ನು ಕಂಡು ಅಚ್ಚರಿಪಟ್ಟರು ಸದಾನಂದ. “ಇದೇನೇ ಕುಮುದಾ ಬೆಳಗ್ಗೆ ಬೆಳಗ್ಗೇನೆ ಇವಳಿಲ್ಲಿ? ಮತ್ತೇನು ಯಡವಟ್ಟು ಮಾಡಿಕೊಂಡು ಬಂದಿದ್ದಾಳೋ ಈ ಹುಡುಗಿ? ಪಾಪ ಬಂಗಾರದಂತಹ ಗಂಡ, ಇವಳ ಯಾವ...

10

ವಾಟ್ಸಾಪ್ ಕಥೆ 58: ಆಲೋಚಿಸಿ ಕೆಲಸ ಮಾಡಬೇಕು.

Share Button

ಒಂದು ಮರಳುಗಾಡಿನಲ್ಲಿ ಒಬ್ಬ ಪ್ರಯಾಣಿಸುತ್ತ ದಾರಿತಪ್ಪಿದ. ಜೋರಾದ ಬಿರುಗಾಳಿ ಬೀಸಿತು. ಎಲ್ಲೆಲ್ಲೂ ಮರಳು. ಅವನಿಗೆ ತನ್ನ ಗುಂಪಿನವರು ಎಲ್ಲಿದ್ದಾರೆಂಬುದು ತಿಳಿಯದೆ ಸುಮ್ಮನೆ ಅಲೆದಾಡಿದ. ಮೇಲೆ ಸುಡುತ್ತಿರುವ ಸೂರ್ಯನ ಬಿಸಿಲು, ಕೆಳಗೆ ಕಾಯ್ದು ಸುಡುತ್ತಿರುವ ಮರಳು. ಜನವಸತಿ ಎಲ್ಲಿಯಾದರೂ ಇದ್ದರೆ ಸ್ವಲ್ಪ ನೀರನ್ನಾದರೂ ಕುಡಿಯಬಹುದೆಂದು ಹುಡುಕಾಡಿದ. ಅವನಲ್ಲಿದ್ದ ನೀರಿನ...

7

ವಿಶ್ವ ಮಹಿಳಾ ದಿನಾಚರಣೆ.

Share Button

ವಿಶ್ವ ಮಹಿಳಾ ದಿನವನ್ನು ಮಾರ್ಚಿ ತಿಂಗಳ 8 ನೆಯ ತಾರೀಖಿನಂದು ಆಚರಿಸುತ್ತಾರೆ. ಇದು ಏಕೆ? ಎಂದಿನಿಂದ ಪ್ರಾರಂಭವಾಯಿತು? ಇದರ ಮೂಲ ಉದ್ದೇಶವೇನು? ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ. ಇದನ್ನು ಮಹಿಳೆಯರ ಹಕ್ಕುಗಳ ರಕ್ಷಣೆ, ಸಮಾನತೆ, ಮತ್ತು ಶೋಷಣೆಗಳ ವಿರುದ್ಧ ಹಿಂದೆ ನಡೆದ ಪ್ರತಿಭಟನೆಯ ಸ್ಮರಣೆಗಾಗಿ...

10

ವಾಟ್ಸಾಪ್ ಕಥೆ 57 : ಸೂಕ್ತ ಸಲಹೆ.

Share Button

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ತನ್ನ ಅಕ್ಕಪಕ್ಕದ ರಾಜ್ಯಗಳನ್ನೆಲ್ಲ ಗೆದ್ದು ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಆಸೆ. ಅದಕ್ಕಾಗಿ ಹಲವಾರು ಬಾರಿ ಪ್ರಯತ್ನಿಸಿದರೂ ಏಕೋ ಪ್ರತಿ ಬಾರಿಯೂ ಅವನಾಸೆ ಈಡೇರಲಿಲ್ಲ. ಅವನಿಗೆ ನಿರಾಸೆಯಾಯಿತು. ಹೀಗೇ ಏನು ಮಾಡಬೇಕೆಂಬುದು ತಿಳಿಯದೇ ಆಲೋಚನೆಯಲ್ಲಿ ಮುಳುಗಿದ್ದ. ಒಮ್ಮೆ ಮನರಂಜನೆಗಾಗಿ ಬೇಟೆಯಾಡಲು ಹೋದ....

11

ವಾಟ್ಸಾಪ್ ಕಥೆ 56: ಮಾಡದವರ ಪಾಪ ಆಡಿದವರ ಬಾಯಲ್ಲಿ.

Share Button

ಒಂದೂರಿನಲ್ಲಿ ಒಬ್ಬ ರಾಜ ವಿಶೇಷ ದಿನಗಳಲ್ಲಿ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿಸುತ್ತಿದ್ದ. ಒಂದು ಬಾರಿ ದೊಡ್ಡದೊಂದು ಬಯಲಿನಲ್ಲಿ ಆಹ್ವಾನಿತರು ಸಾಲಾಗಿ ಊಟಕ್ಕೆ ಕುಳಿತಿದ್ದರು. ಸಿದ್ಧ ಪಡಿಸಿದ್ದ ಆಹಾರದ ಮುಖ್ಯ ಖಾದ್ಯಗಳನ್ನು ಅಲ್ಲಿಗೆ ಬಂದಿದ್ದ ರಾಜನು ತಾನೇ ಸ್ವಹಸ್ತದಿಂದ ಬ್ರಾಹ್ಮಣರಿಗೆ ಬಡಿಸಿದ. ಅದೇ ವೇಳೆಗೆ ಆಕಾಶದಲ್ಲಿ ಗಿಡುಗವೊಂದು ನಾಗರ...

11

ವಾಟ್ಸಾಪ್ ಕಥೆ 55: ಜೀವವೆಷ್ಟು ಅಮೂಲ್ಯವಾದುದು.

Share Button

ಒಂದು ಚಿಕ್ಕ ಹಡಗಿನಲ್ಲಿ ಹಲವಾರು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ ಒಬ್ಬ ತನ್ನೊಡನೆ ತನ್ನ ನಾಯಿಯನ್ನು ಕರೆತಂದಿದ್ದ. ನಾಯಿಯು ಎಂದೂ ನಾವೆಯಲ್ಲಿ ಕುಳಿತು ಪ್ರಯಾಣ ಮಾಡಿರಲಿಲ್ಲ. ಅದಕ್ಕೆ ಒಂದೇ ಕಡೆ ತೆಪ್ಪಗೆ ಕುಳಿತಿರಲು ಆಗುತ್ತಿರಲಿಲ್ಲ. ಅದರಿಂದ ಅತ್ತಿಂದ ಇತ್ತ, ಇತ್ತಿಂದ ಅತ್ತ ನೆಗೆದಾಡುತ್ತಿತ್ತು. ಪ್ರಯಾಣಿಕರಿಗೆ ನಾಯಿ ಕಚ್ಚುತ್ತಾನೋ...

10

ಪುನರ್ಜೀವನ.

Share Button

ಅಶೋಕ ಮತ್ತು ಶಾರದಾ ದಂಪತಿಗಳಿಗೆ ತೋಟಗಾರಿಕೆ ಮಾಡುವುದರಲ್ಲಿ ತುಂಬ ಆಸಕ್ತಿ. ಅಶೋಕ ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಹತ್ತಾರು ಊರುಗಳಲ್ಲು ಕೆಲಸ ನಿರ್ವಹಿಸಿ ವೈವಿಧ್ಯಮಯ ಅನುಭವಗಳನ್ನು ಪಡೆದಿದ್ದರು ನಿವೃತ್ತರಾಗುವಾಗ ಡಿ.ವೈಎಸ್‌ಪಿ., ಆಗಿದ್ದರು. ವಿಶ್ರಾಂತ ಜೀವನ ಕಳೆಯಲು ಮೈಸೂರನ್ನು ಆರಿಸಿಕೊಂಡಿದ್ದರು. ನಗರದಿಂದ ಸ್ವಲ್ಪ ದೂರದಲ್ಲಿ ಅರ್ಧ ಎಕರೆ ಜಾಗವನ್ನು...

8

ಮುಚ್ಚಿಟ್ಟ ಬದುಕು.

Share Button

“ಸಾರ್..ಸಾರ್.. ನಿಮ್ಮನ್ನು ಭೇಟಿಮಾಡಲು ಯಾರೋ ಬಂದಿದ್ದಾರೆ. ಒಳಗೆ ಕಳಿಸಲೇ?” ಎಂದು ಇಂಟರ್‌ಕಾಂನಿಂದ ಕೇಳಿಬಂತು ರಿಸೆಪ್ಷನಿಸ್ಟಳ ಧ್ವನಿ. ಆಗ ತಾನೇ ಬಿಸಿನೆಸ್ ಮೀಟಿಂಗ್ ಮುಗಿಸಿ ಆಫೀಸಿಗೆ ಹಿಂದಿರುಗಿದ್ದ ವಿಶ್ವಾಸ್‌ಗೆ ತಕ್ಷಣ ಯಾರನ್ನೂ ಭೇಟಿಮಾಡುವ ಆಸಕ್ತಿಯಿರಲಿಲ್ಲ. ಆದರೂ ಬಂದವರಾರೆಂಬ ಕುತೂಹಲದಿಂದ “ಅವರ ಹೆಸರೇನು?” ಎಂದು ಕೇಳಿದ.“ಅವರು ಕಂಟ್ರಾಕ್ಟರ್ ಮಾಧವ ಎನ್ನುವವರು”...

12

ಸಾವಿತ್ರಿ…

Share Button

ಮನೆಯಲ್ಲಿ ಹೆಂಡತಿ ಮಕ್ಕಳು ಊರಿಗೆ ಹೋಗಿದ್ದರಿಂದ ಸ್ವಲ್ಪ ತಡವಾಗಿಯೇ ಮನೆಗೆ ಬಂದರು ವಕೀಲ ಸದಾನಂದರು. ಬಟ್ಟೆಬದಲಾಯಿಸಿ ಕೈಕಾಲು ಮುಖ ತೊಳೆದುಕೊಂಡು ಅಡಿಗೆಯವನು ಕೊಟ್ಟ ಟೀ ಕುಡಿದು ಟೀಪಾಯಿಯ ಮೇಲಿದ್ದ ಮ್ಯಾಗಜಿನ್ ಕೈಗೆತ್ತಿಕೊಂಡು ಕಣ್ಣಾಡಿಸಿದರು. ಅಡಿಗೆಯ ರಾಮಪ್ಪ ಅಲ್ಲೇ ನಿಂತಿದ್ದುದನ್ನು ಕಂಡು ರಾತ್ರಿ ಅಡಿಗೆಯ ಬಗ್ಗೆ ಕೇಳಲು ನಿಂತಿರಬೇಕೆಂದು...

Follow

Get every new post on this blog delivered to your Inbox.

Join other followers: