Monthly Archive: February 2021
ಪೂರ್ವದಲ್ಲಿ ಲೋಕಕಲ್ಯಾಣಕ್ಕಾಗಿ, ಸತ್ಪುರುಷರ ರಕ್ಷಣೆಗಾಗಿ ದೇವಮಾನವರು ತ್ಯಾಗ, ಬಲಿದಾನಗಳನ್ನು ಮಾಡುತ್ತಿದ್ದರು. ರಾಕ್ಷಸರಿಂದ, ಚೋರರಿಂದ, ದೇಶದ್ರೋಹಿಗಳಿಂದ ರಕ್ಷಿಸಲು ತಮ್ಮ ದೇಹವನ್ನೇ ಮುಡಿಪಾಗಿಸುತ್ತಿದ್ದರು. ಕೆಲವು ವೇಳೆ ಯಾವುದಕ್ಕೂ ಬಗ್ಗದ ರಾಕ್ಷಸರಿಂದ ದೇವತೆಗಳಿಗೆ ಬಹಳ ಉಪಟಳವಾಗುತ್ತಿತ್ತು. ಈ ಸಂದರ್ಭದಲ್ಲಿ ದೇವತೆಗಳ ಒಡೆಯನಾದ ದೇವೆಂದ್ರನನ್ನು ಮುಂದಿಟ್ಟುಕೊಂಡು ಬ್ರಹ್ಮನಲ್ಲಿಗೋ ವಿಷ್ಣುವಿನಲ್ಲಿಗೋ ಹೋಗಿ...
ಹುಟ್ಟಿ ಬೆಳೆದ ಮನೆಯನ್ನು, ಹೆತ್ತವರನ್ನು, ಒಡಹುಟ್ಟಿದವರನ್ನು ಬಿಟ್ಟು ಹೋಗುವಾಗ ನನಗೂ ಎಲ್ಲರಂತೆ ದುಃಖ ಮಡುಗಟ್ಟಿತ್ತು. ತಡೆಯಲಾರದೆ ಅಮ್ಮನನ್ನು ಅಪ್ಪಿಕೊಂಡು ಅತ್ತುಬಿಟ್ಟೆ. ಅಲ್ಲಿಯೇ ಇದ್ದ ಅಪ್ಪ ಶಲ್ಯದಲ್ಲಿ ಮುಖ ಮರೆಮಾಡಿಕೊಂಡು ದುಃಖವನ್ನು ತಡೆಯುತ್ತಿದ್ದರು. ಒಡಹುಟ್ಟಿದವರ ಕಣ್ಣುಗಳಲ್ಲೂ ನೀರು ತುಂಬಿತ್ತು. ಆದರೆ ಅವರು ತಮ್ಮ ಸಂಗಾತಿಗಳೊಡನೆ ನನ್ನ ಜೊತೆಯಲ್ಲಿ ಬಂದು...
ಅದೊಂದು ದೊಡ್ಡ ಮರ. ಆ ಮರದ ಎದುರಲ್ಲೇ ಕವಿಯೊಬ್ಬನ ಮನೆ. ಅವನು ದಿನವೂ ಮರದ ಮೇಲಿನ ಆಗುಹೋಗುಗಳನ್ನು ನೋಡುತ್ತಿದ್ದಾನೆ. ಆ ಮರದ ಪೊಟರೆಯಲ್ಲಿ ಗಿಳಿಗಳೆರಡು ಸಂಸಾರ ಹೂಡಿವೆ. ಕೆಲವು ತಿಂಗಳಲ್ಲಿ ಮೂರು ಮೊಟ್ಟೆ ಇಟ್ಟಿತು ಹೆಣ್ಣು ಗಿಳಿ. ಮುದ್ದು ಮರಿಗಳ ಆಗಮನಕ್ಕಾಗಿ ಮೊಟ್ಟೆಗಳಿಗೆ ಕಾವು ಕೊಡತೊಡಗಿತು. ದೊಂದು...
‘ಕಛ್ ಮ್ಯೂಸಿಯಂ’ ಐನಾ ಮಹಲ್ ಮತ್ತು ಪ್ರಾಗ್ ಮಹಲ್ ಅರಮನೆಗಳನ್ನು ನೋಡಿ, ಒಂದೆರಡು ಕಿ.ಮೀ ಪ್ರಯಾಣಿಸಿ ‘ಕಛ್ ಮ್ಯೂಸಿಯಂ’ಗೆ ಭೇಟಿ ಕೊಟ್ಟೆವು. ಎಲ್ಲಾ ಮ್ಯೂಸಿಯಂಗಳಲ್ಲಿ ಇರುವಂತೆ ಇಲ್ಲಿಯೂ ಸ್ಥಳೀಯ ವೈಶಿಷ್ತ್ಯಗಳು, ಆಳಿದ ರಾಜರಾಣಿಯ ಪಟಗಳು, ಆಯುಧಗಳು, ಸಿಂಹಾಸಗಳು, ಸ್ಥಳೀಯ ಬುಡಕಟ್ಟು ಜನರ ಜೀವನ ಶಿಲಿಯನ್ನು ನಿರೂಪಿಸುವ ಗುಡಿಸಲುಗಳು,...
ಏಕಿಷ್ಟು ಕಾಡುವುದು ಬೇಸರ? ನಗುವುದಂತೂ ದುಸ್ತರ, ಬಿಮ್ಮನೆ ಕೂತರೂ, ಸುಮ್ಮನೆ ಹುಡುಕಾಟ, ಕಾಯುತಿದೆ ಕಡಲು ಹುಣ್ಣಿಮೆಯ ಪೂರ್ಣಚಂದ್ರನ ಚುಂಬಿಸಲು, ಅದೇನೋ ನಲವಿಲ್ಲದ ಗೆಲುವಿಲ್ಲದ ಈ ಮನಸಿಗೆ ನಿಮ್ಮ ನೆನಪು ಕೊಂಚ ಇಂಪು, ಬರೆಯದೇ ಬದುಕಿದ್ದ ಪದ್ಯಗಳನು ಬರೆದು ಈಗೀಗ ಹೃದಯಕೆ ತಂಪು –ನಳಿನ ಡಿ +8
ಸಮಯವೆಂಬುದು ಅತ್ಯಮೂಲ್ಯ.. ಕಳೆದ ಸಮಯವನ್ನು ಹಿಂದೆ ಪಡೆಯಲಾಗದು. ಅದರೊಂದಿಗೆ, ಸಮಯಕ್ಕೆ ಸರಿಯಾಗಿ ಆಗಬೇಕಾದುದು ಆಗಲೇಬೇಕು, ಮುಂದೂಡುವಂತೆಯೇ ಇಲ್ಲ. ಅದು ಹೌದು…ಆದರೆ ಒಮ್ಮೊಮ್ಮೆ ನಮ್ಮ ಯಾವುದೋ ಕೆಲಸದ ನಡುವೆ, ‘ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ(ಕರಡಿಗೆ ಬಿಟ್ಟಂತೆ..?)’, ಇನ್ನೊಂದೇನೋ ಬಂದು ಬಿಟ್ಟರೆ ಅದು ಮನಸ್ಸಿಗೆ ಸ್ವಲ್ಪ ಕಿರಿಕಿರಿ ಮಾಡುವುದು ಸಹಜ. ನೋಡಿ,...
1970 ರ ಸೆಪ್ಟೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ವಕೀಲರಾದ ಶ್ರೀ ಜಿ ಯು ಭಟ್ ರವರು ನಮ್ಮತಂದೆಯವರಿಗೆ ಪತ್ರವೊಂದನ್ನು ಬರೆದು ಕೆ.ಎಸ್.ನ. ಅವರನ್ನು ಉತ್ತರ ಕನ್ನಡದ ಜನ ಕವಿತೆಯ ಮೂಲಕ ಬಲ್ಲರಾದರೂ ಕವಿಯನ್ನು ನೋಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಆದ್ದರಿಂದ ಕವಿ ಬಸ್ ಮೂಲಕ ಹೊನ್ನಾವರಕ್ಕೆ...
ಕೌಶಿಕನ ತ್ಯಜಿಸಿ ದಿಗಂಬರೆಯಾಗಿ ಕಲ್ಯಾಣದತ್ತ ಹೆಜ್ಜೆಹಾಕಿದೆ. ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ? ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ. ವಚನ ಸಾಹಿತ್ಯ ಲೋಕದಲ್ಲಿ ಧೃವತಾರೆಯಂತೆ ಮಿನುಗಿದೆ. ನಿನ್ನೊಲುಮೆಯ ಚನ್ನಮಲ್ಲಿಕಾರ್ಜುನನ ಅರಸುತ್ತಾ ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ ಜಂಜಾಟಗಳಿಂದ...
ಆಕಾಶಕ್ಕೆ ಏಣಿ ಚಾಚುವ ಹುಚ್ಚು ಕನಸು ಅಂಗೈಯಲ್ಲೆ ನೀರನೆಲ್ಲ ಹಿಡಿದಿಡುವ ಮನಸು ಆಟ ತುಂಟಾಟಗಳಿಗೆ ದಣಿವಿರದ ವಯಸು ಬೈಸಿಕಲ್ಲಿನಲೆ ಊರೆಲ್ಲ ಸುತ್ತುವುದೆ ಸೊಗಸು ಬಾಲ್ಯದಲಿ ನಲಿದ ಆ ದಿನಗಳು ಗೆಳೆಯರೆಲ್ಲ ಸೇರಿ ಆಡಿದ ಆಟಗಳು ಕಾಡು ಮೇಡು ನದಿ ತೊರೆ ಅಲೆದ ಕ್ಷಣಗಳು ಮತ್ತೆ ಮತ್ತೆ ಮನದಿ...
ಪುಸ್ತಕ :- ಮಗ್ಗ (ಕಥಾಸಂಕಲನ) ಲೇಖಕಿ :- ಸ್ನೇಹಲತಾ ದಿವಾಕರ್ ಕುಂಬ್ಳೆ ಪ್ರಕಾಶಕರು :- ಸಿರಿವರ ಪ್ರಕಾಶನ ಗಡಿನಾಡಿನ ಸಾಹಿತ್ಯಾಸಕ್ತ ಕನ್ನಡಾಭಿಮಾನಿ ಬರಹಗಾರರು ಹಾಗೂ ಓದುಗರ ಸಾಲಿಗೆ ಸೇರ್ಪಡೆಯಾಗುವ ಇನ್ನೊಂದು ಹೆಸರು ಸ್ನೇಹಲತಾ ದಿವಾಕರ್ ಕುಂಬ್ಳೆ. “ಮಗ್ಗ” ಇವರು ಬರೆದಿರುವ ಕಥಾ ಸಂಕಲನ. ಇದರಲ್ಲಿ ಇವರು ಬೇರೆ...
ನಿಮ್ಮ ಅನಿಸಿಕೆಗಳು…