Daily Archive: February 18, 2021
ಕಛ್ ನ ಮರುಭೂಮಿಯತ್ತ ಹೋಟೆಲ್ ತುಳಸಿಗೆ ಬಂದು, ಮಧ್ಯಾಹ್ನದ ಊಟ ಮುಗಿಸಿ ಪ್ರಯಾಣ ಮುಂದುವರಿಯಿತು. ಅಲ್ಲಿಂದ ಮೂವತ್ತು ಕಿಮೀ ದೂರದಲ್ಲಿರುವ ಕಛ್ ನ ಮರುಭೂಮಿಯಲ್ಲಿ ‘ರಣ್ ಉತ್ಸವ’ ಜರುಗುತ್ತದೆ. ರಸ್ತೆಯಲ್ಲಿ ಕಾಣಸಿಗುವ ಮರುಭೂಮಿಯ ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆಯಬೇಕು. ಸುತ್ತಲೂ ಕುರುಚಲು ಗಿಡಗಳು, ಮರಳು...
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು, ಸರಳ ವಿವಾಹ ಸುಸೂತ್ರವಾಗಿ ನೆರವೇರಿ, ನಂಜನಗೂಡಿನಲ್ಲಿರುವ ಪತಿಗೃಹ ಸೇರಿದಳು….ಮುಂದಕ್ಕೆ ಓದಿ) ಮಾರನೆಯ ದಿನ ನನ್ನವರು ಮಾವನವರು ಅವರವರ ಕೆಲಸಗಳಿಗೆ...
ನಮ್ಮ ತಂದೆ ಸೇವೆಯಲ್ಲಿದ್ದಾಗ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕವಿಗೋಷ್ಠಿ, ಉಪನ್ಯಾಸದಂಥಹ ಕಾರ್ಯಕ್ರಮಗಳಿಗೆ ಆಹ್ವಾನದ ಮೇರೆ ಹೋಗುತ್ತಿದ್ದರು. ಸಂಘಟಕರು ಬಹುಪಾಲು ಕಛೇರಿಯ ಹತ್ತಿರವೇ ಬಂದು ಆಹ್ವಾನಿಸುತ್ತಿದ್ದರು. ದಿನಾಂಕ, ವೇಳೆ, ಸ್ಥಳ ತಿಳಿದುಕೊಂಡು ತಾವೇ ಅಲ್ಲಿಗೆ ಹೋಗುತ್ತಿದ್ದರು. ಆಗೆಲ್ಲ ಸಮಾರಂಭಗಳು ಸಾಮಾನ್ಯವಾಗಿ ನಡೆಯುತ್ತಿದ್ದುದು ಪುರಭವನ, ಕಲಾಕ್ಷೇತ್ರ ಅಥವಾ ಪರಿಷತ್ ಸಭಾಂಗಣದಲ್ಲಿ. ನಮ್ಮ ತಂದೆಯವರು ಕೆಲಸ ಮಾಡುತ್ತಿದ್ದ ಕರ್ನಾಟಕ ಹೌಸಿಂಗ್...
ಓಂ ಸೂರ್ಯಂ ಸುಂದರಲೋಕನಾಥಮಮೃತಂ ವೇದಾಂತಸಾರಂ ಶಿವಂ ಜ್ಞಾನಂ ಬ್ರಹ್ಮಮಯಂ ಸುರೇಶಮಮಲಂ ಲೋಕೈಕಚಿತ್ತಸ್ವಯಂ ಇಂದ್ರಾದಿತ್ಯನರಾಧಿಪಂ ಸುರಗುರುಂ ತ್ರೈಲೋಕ್ಯಚೂಡಾಮಣಿಂ ಬ್ರಹ್ಮವಿಷ್ಣುಶಿವಸ್ವರೂಪಹೃದಯಂ ವಂದೇ ಸದಾ ಭಾಸ್ಕರಂ. ನಯನ ಮನೋಹರ ಜಗದೊಡೆಯನೂ ಆಮೃತನು ವೇದಾಂತಸಾರನೂ ಆದ, ಬ್ರಹ್ಮಜ್ಞಾನಿಯೂ ದೇವತೆಗಳಿಗೆ ಈಶನೂ, ಪವಿತ್ರನೂ, ಜೀವಲೋಕದ ಮನಸ್ಸಿಗೆ ಮೂಲ ಪ್ರೇರಕನೂ ಆದ, ಇಂದ್ರನಿಗೂ, ದೇವತೆಗಳಿಗೂ, ಮಾನವರಿಗೂ...
ಹೇಳಿಬಿಡಲೇನು ಮನದ ಇಂಗಿತವ ಸುತ್ತು ಬಳಸುವುದೇನು ನಿನ್ನೊಡನೆ ಬೆನ್ನಿಗಾತು ಕುಳಿತು ಪಿಸುಗುಟ್ಟುವ ಚಡಪಡಿಕೆ , ಬಚ್ಚಿಟ್ಟ ಮಾತುಗಳಿವು ಉಳಿದ ಕಾರಣವೇನೋ ತಿಳಿದಿಲ್ಲ ಕೊಪ್ಪರಿಗೆಯಷ್ಟು ಕನವರಿಕೆಗಳಿವೆ ನಿನ್ನ ಪ್ರೀತಿಯಲ್ಲಿ ಬಂಧಿ ನಾನು ಖುಷಿಯ ಕಬಳಿಸಲೆಂದೇ ನಿರುಕಿಸುತ್ತಿರುವೆ ಹೃದಯಾಂತರಾಳದಲ್ಲಿ ಖೈದಿಯಾಗಿರುವೆನು ಖುಲಾಸೆಯ ಗೊಡವೆ ಎನಗಿಲ್ಲ ದೂರದಿ ಮುಗುಳುನಗೆ ಹೊತ್ತ ರಜನೀಶನೂ...
‘ಓಹೊ ಬನ್ರಿ ಮಾರಾಯ್ರೆ… ಆ ಬದಿಗೆ ಬಾನಿ ಒಳಗೆ ನೀರಿದ್ದು, ಕೈಕಾಲು -ಮೊರೆ ತೊಳ್ಕಂಡು ಒಳಬದಿಗ್ ಬನ್ನಿ’. ‘ಕುಡಿಲಕ್ಕೆ ಮುರಗಲಹಣ್ಣಿನಪಾನಕಅಡ್ಡಿಲ್ಯೆ ನಿಮಗೆ? ಹೊಯ್ ಆಸರಿಂಗೆ ‘ ‘ತೆಳ್ಳೆವು, ಕಾಯಿಚಟ್ನಿ ಮಾಡಿದ್ನಿ, ಒಂದೆರಡು ತಿನ್ನಲಕ್ಕಿ ಬನ್ನಿ. ಕವಳ ಪೇಟಿ ಇದ್ದು, ಕವಳ ಹಾಕುದಿದ್ರೆ ಹಾಕಿ.. ಹಂಗೆ ಊರ್ ಬದಿಗೆ ತಿರ್ಗಾಡಲೇ ಹೋಪ…’ ಇದೇನಿದು? ಯಾವ ಭಾಷೆ? ಕನ್ನಡವೇ ಹೌದಾ!? ಅಂತ ಮೂಗಿನ ಮೇಲೆ ಬೆರಳು ಇಡಬೇಡಿ. ಇದು ಹವ್ಯಕ ಕನ್ನಡ. ನಾವು ಇವತ್ತು ಹೋಗ್ತಾ ಇರೊದು ಉತ್ತರ...
ಸತ್ತ ನೆನ್ನೆಯ ಶವಗಳೆದುರಿಗೆ ಕಣ್ಣೀರ್ಗರೆದು ನರಳಿ ಹೊರಳಾಡುವುದೇಕೆ? ಸತ್ತ ನೆನ್ನೆಗಳ ರಾಶಿಯಲಿ ಜೀವಂತಿಕೆಯ ಬೆದಕಿ ದಕ್ಕಿದ ಜೀವದ್ರವವ ನಿರ್ಭಾವಗಳಿಗೆ ಲಸಿಕೆಯಾಗಿಸಿ ವರ್ತಮಾನದ ಸುಳ್ಳು ಭರವಸೆ ಪೊಳ್ಳು ಬಾಳಿನ ಬೂಟಾಟಿಕೆಗೆ, ನಯವಂಚಕತನಕೆ ಕೊಕ್ ಕೊಟ್ಟು ಸೆಟೆಯುವ ಬದಲಿಗೆ ನಗುವ ಲೇಪಿಸಿಕೊಳಬಾರದೇಕೆ? ತಾನೇ ಬಿತ್ತಿಕೊಂಡ ಬೇಗುದಿಗಳ ಉಸಿರಗಟ್ಟಿಸಿ ಹೆಸರಿಲ್ಲದಂತೆ ಹೆಡೆಮುರಿ...
ಬದುಕೆಲ್ಲ ಇರುಳಾಗಿರಲು ನಿನ್ನ ನೆನಪು ಬೆಳಕಾಗಿ ಬಂತು ಬದುಕೆಲ್ಲ ಬರಡಾಗಿರಲು ನಿನ್ನ ನೆನಪು ಮಳೆಯಾಗಿ ಬಂತು ಮರ ಚಿಗುರಿ ತಾ ಹಸಿರಾಗಿ ನಿಂತಂತೆ ಮನದಾಸೆ ಹಸಿರಾಯ್ತು ನಿನ್ನ ನೆನಪು ಬಂದು ಬಾಡಿದ ಈ ಬಾಳಿನ ಬತ್ತಿದ ಮನದಲಿ ಪ್ರೀತಿಸೆಲೆ ಉಕ್ಕಿತು ನಿನ್ನ ನೆನಪು ಬಂದು ಸತ್ತ ಬಯಕೆಗಳಾಗಸದಲಿ...
ಅರಿತುಕೊಂಡು ಬಾಳಬೇಕು ಮಾನವ ಆಡಂಬರವನು ಬಿಡಬೇಕು ಮಾನವ ಇರುವುದರಲ್ಲಿ ತೃಪ್ತಿಪಡಬೇಕು ಮಾನವ ಈಶ್ವರನನೆಂದಿಗೂ ನಂಬಬೇಕು ಮಾನವ. ಉಪಕಾರಿ ನೀನಾಗಬೇಕು ಮಾನವ ಊರಿಗೆ ಮಗನಾಗಬೇಕು ಮಾನವ ಋಣತ್ರಯಗಳ ತೀರಿಸಬೇಕು ಮಾನವ ಎಷ್ಟೆತ್ತರ ಬೆಳೆದರು ಬಾಗಬೇಕು ಮಾನವ. ಏನಿದ್ದರೂ ಹಂಚಿ ತಿನ್ನಬೇಕು ಮಾನವ ಐದಿಂದ್ರೀಯ ನಿಗ್ರಹಿಸಬೇಕು ಮಾನವ ಒಲವೇ ಬಾಳಿನುಸಿರಾಗಬೇಕು...
ಮಾಯಾಲೋಕದೊಳು ಬಾಳುವುದು ಹೇಗೆಂದು ನಾನಾ ಚಿಂತೆಯನು ಮಾಡುವುದು ನೀತೊರೆದು ಪರಿಪಕ್ವದಲ್ಲಿಂದು ಮನಸನ್ನು ಹೊಂದು ತಿಳಿಗೊಡದ ನೀರಂತೆ ಸಿಗುವುದದಕೆ ಉತ್ತರ ಪರಿಶುದ್ಧತೆಯ ಮನಸ್ಸನ್ನು ನೀ ಹೊಂದಿದಾಗ ಸ್ನೇಹ ಸೌಹಾರ್ದತೆಗೆ ಮನಕರಗಿದಾಗ ಬಿತ್ತಿದಂತೆ ಫಲವನ್ನು ಬೆಳೆಯುತ್ತಿರುವಾಗ ಮೇರು ಶಿಖರತಂತೆ ಬೆಳೆಯುವೆ ನೀ ಎತ್ತರ ಭವರೋಗ ಕಳೆದು ಮಾನವೀಯತೆ ಹೊಂದಿ ಮಾತುಗಾರಿಕೆಯ...
ನಿಮ್ಮ ಅನಿಸಿಕೆಗಳು…