Author: Nalina D, nalina200082@gmail.com
ಏಕಿಷ್ಟು ಕಾಡುವುದು ಬೇಸರ? ನಗುವುದಂತೂ ದುಸ್ತರ, ಬಿಮ್ಮನೆ ಕೂತರೂ, ಸುಮ್ಮನೆ ಹುಡುಕಾಟ, ಕಾಯುತಿದೆ ಕಡಲು ಹುಣ್ಣಿಮೆಯ ಪೂರ್ಣಚಂದ್ರನ ಚುಂಬಿಸಲು, ಅದೇನೋ ನಲವಿಲ್ಲದ ಗೆಲುವಿಲ್ಲದ ಈ ಮನಸಿಗೆ ನಿಮ್ಮ ನೆನಪು ಕೊಂಚ ಇಂಪು, ಬರೆಯದೇ ಬದುಕಿದ್ದ ಪದ್ಯಗಳನು ಬರೆದು ಈಗೀಗ ಹೃದಯಕೆ ತಂಪು –ನಳಿನ ಡಿ +8
ಬಂಗಾರದಂತ ಅವಳು, ತನ್ನ ಬತ್ತಳಿಕೆಯ ಬಾಣಗಳೆಲ್ಲಾ, ಖಾಲಿ ಮಾಡಿ, ಸೋಗು ಹಾಕಿ ಸುಮ್ಮನೆ, ಒಮ್ಮೊಮ್ಮೆ ಗುಮ್ಮನೆ, ಸಾಗಿಸಿಹಳು ಜೀವದಾರಿ, ಸಂಸಾರದ ಕತ್ತಲೆಯಲಿ ದೀಪದಾರಿ, ನೆರಳು ಬೆಳಕಿನಾಟಕೆ ಮಡಿಲು ತುಂಬಿದ ಮಗಳು, ಕನಸು ಹೊಡೆದು ಕಣ್ಡೆರೆಯುವುದರೊಳಗೆ, ಮಗಳು ಮೈನೆರೆದು, ಮದುವೆಯು ಮುಗಿಯಲು, ತನ್ನಂತೆ ಬಿರುಸಾಗಿ ಮತ್ತೊಬ್ಬಳು ದೀಪದಾರಿ, ಮೊದಲ...
ಆಸೆ ಆಗಸಕ್ಕೆ ಕನಸು ನೆಲಕ್ಕೆ ಪಾದ ಪಾದಾಳಕ್ಕೆ ನಡುವೆ ತಲೆಕೆಳಗಾಗಿ ಬಿದ್ದು ನಡ ಮುರಿದುಕೊಂಡವರು, ಬೀಸೋ ಧೂಳಿಗೆ, ಎಂಜಲ ಉಗುಳಿಗೆ, ಮೈಮೇಲಿನ ಬಣ್ಣಕ್ಕೆ ರೋಸಿ, ವೇಷ ಮರೆತು ನೇಪಥ್ಯದೊಳಗೆ ನೂಕಾಟದಲಿ ಮರೆಯಾದರು. ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರು ಗುಜರಿ ಕಾವ್ಯದೊಳಗೆ ಬಡವ ಬಲ್ಲಿದ ಬೇಧವೆಲ್ಲಿಯದು, ಸರ್ಕಾರ ಇಲ್ಲಿಲ್ಲ, ಸರ್ಕಸ್ಸು ...
ದೀಪಾವಳಿ ಹತ್ತಿರವಾದರೆ ಸಾಕು ಚಿಕ್ಕಮಗಳೂರು, ಹಾಗೂ ಸುತ್ತಮುತ್ತಲ ಜಿಲ್ಲೆಯವರಲ್ಲಿ ಒ೦ದು ಹೊಸ ಹುಮ್ಮಸ್ಸು, ಮನೆಮ೦ದಿಯೆಲ್ಲಾ ಬೆಟ್ಟ ಹತ್ತುವುದೇ ಇದಕ್ಕೆ ಕಾರಣ. ದೇವಿರಮ್ಮನ ಇರುವ ಬೆಟ್ಟವನ್ನೆ ದೇವಿರಮ್ಮನ ಬೆಟ್ಟ ಎ೦ದು ಕರೆಯುತ್ತಾರೆ. ಇಲ್ಲಿ ದೇವಿರಮ್ಮನಿಗೆ ವರ್ಷಕ್ಕೊಮ್ಮೆ ಮಾತ್ರ ಭಕ್ತರ ಮಹಾಪೂರ ಹರಿದುಬರುತ್ತದೆ. ದೀಪಾವಳಿಯ ಮೊದಲ ಹಬ್ಬದ ದಿನ ಬೆಟ್ಟ...
ಮಂಜು ನಗಲಿ, ಮಳೆ ಬರಲಿ, ಹರುಷ ಉಕ್ಕಲಿ ಬಾಳಲಿ, ದುಗುಡ ದುಮ್ಮಾನ ದೂರಾಗಲಿ, ಒಂಟೊಂಟಿಗೆ ಜತೆ ಸಿಗಲಿ, ಆಸೆ ನೂರಾಗಲಿ, ಸಂತಸ ಹೊಳೆಯಾಗಲಿ, ಬಿಗಿದ ಹಣೆಗಂಟು ಸಡಿಲಿಸಲಿ, ಅನುಮಾನಗಳಿಗೆಲ್ಲ ಸತ್ಯ ಧುತ್ತನೇಳಲಿ, ಮತ್ತೊಂದು ಹೊಸ ಕಾಲಮಾನದಲಿ, ನಮ್ಮ ಖುಷಿ ನಮ್ಮೊಂದಿಗೆ ಮರಳಲಿ… ಹೊಸ ಹುಮ್ಮಸ್ಸು ಹೊತ್ತು ಹೃದಯ...
ನಿಮ್ಮ ಅನಿಸಿಕೆಗಳು…