ನೆನಪು
ಏಕಿಷ್ಟು ಕಾಡುವುದು
ಬೇಸರ?
ನಗುವುದಂತೂ ದುಸ್ತರ,
ಬಿಮ್ಮನೆ ಕೂತರೂ,
ಸುಮ್ಮನೆ ಹುಡುಕಾಟ,
ಕಾಯುತಿದೆ ಕಡಲು
ಹುಣ್ಣಿಮೆಯ ಪೂರ್ಣಚಂದ್ರನ ಚುಂಬಿಸಲು,
ಅದೇನೋ ನಲವಿಲ್ಲದ
ಗೆಲುವಿಲ್ಲದ
ಈ ಮನಸಿಗೆ
ನಿಮ್ಮ ನೆನಪು
ಕೊಂಚ ಇಂಪು,
ಬರೆಯದೇ ಬದುಕಿದ್ದ ಪದ್ಯಗಳನು
ಬರೆದು ಈಗೀಗ
ಹೃದಯಕೆ ತಂಪು
–ನಳಿನ ಡಿ
ನೆನಪು ಹಸಿರಾಗಲಿ…ಧನ್ಯವಾದಗಳು
ನೆನಪುಗಳು ಮಧುರತನ ತರಲಿ.ಕವಿತೆ ಇಷ್ಟವಾಯಿತು ಮೇಡಂ
ಚಂದದ ಕವನ
ಸರಳ ಸುಂದರ ಕವನ.
ನೆನಪುಗಳು ಬಹಳ ಸುಂದರ. ಬದುಕಿನ ಕೆಲವು ಕಹಿ ಘಟನೆಗಳನ್ನು ಮರೆಯುವಲ್ಲಿ ಪೇರಿಸಿಟ್ಟ ಸುಂದರ ನೆನಪುಗಳು ಸಹಕಾರಿ.
ಸುಂದರ ಕವನ
ಬೇಸರವನ್ನು ಕಳೆಯಲು ಶಬ್ದಗಳಿಗೆ ಜೀವತುಂಬಿದ ಬಗೆ ಇಷ್ಟವಾಯ್ತು. ಚಂದದ ಕವನ.
ಸೊಗಸಾಗಿದೆ ಕವನ
Nice.. ತುಂಬಾ ಚೆನ್ನಾಗಿದೆ.