Monthly Archive: March 2021

4

ಭಾಷೆ ಮತ್ತು ಸಾಮರಸ್ಯ

Share Button

ಭಾಷೆ ಸಂವಹನ ಮಾಧ್ಯಮವಾಗಿರುವಂತೆಯೇ ಬಾಂಧವ್ಯವನ್ನು ಬೆಸೆಯುವುದಕ್ಕೂ ಇರುವ ಸಾಧನ. ಅದೊಂದು ವ್ಯವಸ್ಥೆ. ಮನುಷ್ಯ ಸಮಾಜ ಜೀವಿಯಾಗಿರುವುದರಿಂದಲೇ ಈ ವ್ಯವಸ್ಥೆಯ ಅನಿವಾರ್ಯತೆ. ಒಂದು ಸಮುದಾಯಕ್ಕೆ ಒಳಪಟ್ಟವರು ತಮ್ಮ ಭಾವನೆಗಳನ್ನು , ವಿಚಾರಗಳನ್ನು ಬೇಕು ಬೇಡಗಳನ್ನು ವಿನಿಮಯ ಮಾಡಿಕೊಳ್ಳಲು ಭಾಷೆ ಒಂದು ಕೊಂಡಿ. ಮನುಕುಲ ತನ್ನ ವಿಕಾಸದ ಹಾದಿಯಲ್ಲಿ ಭಾಷೆ...

9

ಕಿರುಗತೆ : ಗಡ್ಡ

Share Button

  ಸ್ವಾಮೀಜಿಗಳು ಎಲ್ಲ ಮೋಹಗಳನ್ನೂ ಬಿಟ್ಟವರು. ಎಲ್ಲ ಆಡಂಬರಗಳನ್ನೂ ತೊರೆದವರು. ಸುಖ ವ್ಯರ್ಜಿಸಿದವರು. ಅವರು ತಮ್ಮ ಶಿಷ್ಯರುಗಳಲ್ಲಿಯೂ ಈ ಗುಣವಿರಬೇಕೆಂದು ಬಯಸುತ್ತಿದ್ದವರು. ಒಂದು ಸಲ ಅವರ ನೀಳ ಗಡ್ಡದ ಬುಡದಲ್ಲಿ ಸಣ್ಣ ಗಡ್ಡೆಯಂಥದು ಕಾಣಿಸಿಕೊಂಡಿತು. ಗಡ್ಡ ನೀವುವಾಗ ಅದು ಅವರ ಕೈಗೆ ತಾಕುತ್ತಿತ್ತು. ಅದು ದೊಡ್ಡದಾದರೆ ಸಮಸ್ಯೆಯಾದೀತು...

5

‘ನೆಮ್ಮದಿಯ ನೆಲೆ’-ಎಸಳು 12

Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ, ಆಧುನಿಕ ಮನೋಭಾವನೆಯೊಂದಿಗೆ ತಮ್ಮ ವಿವಾಹದ ವ್ಯವಸ್ಥೆ ತಾವೇ ಮಾಡಿಕೊಳ್ಳುವುದು ಬಿಸಿತುಪ್ಪದಂತಾಗುತ್ತದೆ. ಮಗ ತಮ್ಮ ಅಗತ್ಯಕ್ಕಾಗಿ ಅಮೇರಿಕಾಕ್ಕೆ ಕರೆಯಿಸಿಕೊಳ್ಳುತ್ತಾನೆ, ಬರಬರುತ್ತಾ ಸೊಸೆಯ ಅನಾದರ ಗಮನಕ್ಕೆ...

3

ಸ್ತ್ರೀ ಸಮಾನತೆ – ಸಾಧನಾ ಪರಂಪರೆ- ಪುಟ 1

Share Button

ಸ್ತ್ರೀ ಪರಿಸರ ಎರಡನೇ ದರ್ಜೆಯವರು: ಮಹಿಳೆಯನ್ನು ಪುರುಷನಿಗೆ ಸಮಾನಳಲ್ಲ ಎಂದು ಸಮಾಜ ಪಾಶ್ಚಾತ್ಯ ಪ್ರಾಚ್ಯ ಎಂಬ ಭೇದವಿಲ್ಲದೆ ಪರಿಗಣಿಸಿದೆ. ಅದು ಅವಳಿಗೆ ಎರಡನೇ ದರ್ಜೆಯ ಸ್ಥಾನ ಮಾತ್ರ ಕೊಡಬಹುದು ಎಂದು ಮಾತ್ರ ತಿಳಿದಿದೆ. ವಿಚಾರವಾದಿ ಪುರುಷರೂ ಸಹ ಬಹುಮಟ್ಟಿಗೆ ಸ್ತ್ರೀಯರು ತಮಗೆ ಸರಿಸಮಾನ ಆಗಲಾರರು ಎಂದೇ ವಾದಿಸುತ್ತಾರೆ....

11

ಸಿಹಿ ಕಹಿ ನೆನಪುಗಳ ಬುತ್ತಿ

Share Button

‘ನೀನು ವಿಜ್ಞಾನದ ವಿಧ್ಯಾರ್ಥಿಯಾಗಲು ಲಾಯಕ್ಕಿಲ್ಲ’ ಎಂದು ಅಪ್ಪ ತೀರ್ಪು ನೀಡಿದ್ದು ನನ್ನ ಪಿ.ಯು.ಸಿ. ಫಲಿತಾಂಶ ನೋಡಿದ ಮೇಲೆಯೇ. ನನಗೆ ಖುಷಿಯೋ ಖುಷಿ. ಸಧ್ಯ ಅರ್ಥವಾಗದ ವಿಷಯಗಳಿಂದ ಬಿಡುಗಡೆ ದೊರೆಯಿತು ಎಂದು. ನಾನು ಬಿ.ಎ. ಗೆ ಸೇರುವಾಗ ಇಂಗ್ಲಿಷ್ ಸಾಹಿತ್ಯದ ಜೊತೆ ಇತಿಹಾಸ ಆಯ್ಕೆ ಮಾಡಿದೆ. ಚಿತ್ರದುರ್ಗದ ಕನ್ನಡ...

4

ಕೆ ಎಸ್‌ ನ ಕವಿನೆನಪು 38: ಪ್ರಶಸ್ತಿಗಳ ಪ್ರಸಂಗ

Share Button

ಪ್ರಶಸ್ತಿ, ಮನ್ನಣೆ ,ಪುರಸ್ಕಾರಗಳತ್ತ ಅಷ್ಟಾಗಿ ಗಮನ ಹರಿಸದೆ ತಮ್ಮ ಪಾಡಿಗೆ ತಾವು ಕಾವ್ಯ,ಗದ್ಯ ಅನುವಾದಗಳತ್ತ ಗಮನ ಹರಿಸಿದ್ದ ನಮ್ಮ ತಂದೆಯವರಿಗೆ ಬಹುಪಾಲು ಎಲ್ಲ ಪ್ರಮಖ ಗೌರವಗಳೂ ಅರಸಿ ಬಂದವು. (ಅವುಗಳ ವಿವರವನ್ನು ಅಂತಿಮ ಭಾಗದಲ್ಲಿ ನೀಡಲಾಗುವುದು) ಅರ್ಜಿ ಹಾಕುವುದು ,ಒಬ್ಬರ ಹತ್ತಿರ ಶಿಫಾರಸು ಮಾಡಿಸುವುದು ತಮ್ಮ ಸ್ವಾಭಿಮಾನಕ್ಕೆ...

21

(ಅ)ಸತ್ಯ ಕರೆಗಳು!

Share Button

ಆ ದಿನ ತಂಬಾ ಸುಸ್ತಾಗಿತ್ತು. ಮರುದಿನ ತೆಗೆದುಕೊಳ್ಳಬೇಕಾದ ತರಗತಿಗೆ ತಯಾರಿ ಮಾಡಿಕೊಳ್ಳಬೇಕಿತ್ತು. ಆದರೂ ನಿದ್ರಾದೇವಿಯ ಕರೆಯ ಸೆಳೆತವೇ ಜಾಸ್ತಿಯಾಗಿ, ಬೆಳಿಗ್ಗೆ ಬೇಗ ಎದ್ದು ಓದಿದರಾಯ್ತು ಅಂದುಕೊಂಡು ರಾತ್ರಿ 9 ಘಂಟೆಗೇ ಮಲಗಿಬಿಟ್ಟೆ. ಇನ್ನೇನು ನಿದ್ದೆ ಬರುತ್ತಿದೆ ಅನ್ನುವಾಗಲೇ ನನ್ನ ಚರ ದೂರವಾಣಿ ಮೊಳಗಲಾರಂಭಿಸಿತು. ಇಷ್ಟು ಹೊತ್ತಿಗೆ ಕರೆ...

5

ಕವಿತೆಯಲ್ಲವೇ?.

Share Button

ಅಕ್ಕರಗಳನ್ನೆಲ್ಲ ಅಕ್ಕರೆಯಲಿ ಜೋಡಿಸಿದಾಗ ಸಕ್ಕರೆ ಪಾಕದಂತಾಗುವುದು ಕವಿತೆಯಲ್ಲವೇ?. ಜೀವನದ ಅನುಭವಗಳ ನವನೀತವನು ಕಡೆದಾಗ ಕಾವ್ಯ ಅಮೃತವಾಗುವುದು ಕವಿತೆಯಲ್ಲವೇ?. ನೋವು ನಲಿವುಗಳ ಕಾವಿನಲ್ಲಿ ಬೆಂದಂತಹ ಕವಿಯು ಕಟ್ಟುವುದು ಕವಿತೆಯಲ್ಲವೇ?. ತೋಚಿದೊಡನೆ ಗೀಚಿ ಬರೆದಾಗ ಹೊಚ್ಚ ಹೊಸದೆನಿಸುವುದು ಕವಿತೆಯಲ್ಲವೇ?. ಯಾರು ಹೊಗಳಿದರೇನು ಯಾರು ತೆಗಳಿದರೇನು ನೂರು ಬಾರಿ ಬರೆಯಬೇಕೆನಿಸುವುದು ಕವಿತೆಯಲ್ಲವೇ?...

6

“ದೋಸೆ”

Share Button

ಏನು ಮೋಡಿ ಮಾಡಿದಿಯೋ ದೋಸೆ, ಎಲ್ಲರಲೂ ಮೂಡಿದೆ  ನಿನ್ನ ಸವಿಯಬೇಕೆಂಬ ಆಸೆ, ಬೆಣ್ಣೆ ತುಪ್ಪ ಸವರಿದ ನೀನೆಂದರೆ ಎಲ್ಲರಿಗೂ ಅಚ್ಚುಮೆಚ್ಚು ನಿನ್ನ ಸವಿದು ವಾಟ್ಸಪ್ಪಲಿ/ಫೇಸಬುಕ್ಕಲಿ ಚಿತ್ರತೆಗೆದು ಕಳಿಸಿ ಹೆಚ್ಚಿಸುತಿಹರು ನಿನ್ನ ವರ್ಚಸ್ಸು, ಸೆಟ್ಟು, ಮಸಾಲೆ, ಖಾಲಿ, ತುಪ್ಪಾ ಬೆಣ್ಣೆ, ಪೇಪರ್, ನೀರು ಹೀಗೆ ವಿವಿಧ ರೂಪಗಳಿಂದ ಕಂಗೊಳಿಸುತಿಹೆ ಎಲ್ಲೆಲ್ಲೂ,...

9

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 16: ಪೋರ್ ಬಂದರ್-ಕೀರ್ತಿಮಂದಿರ್

Share Button

21 ಜನವರಿ 2019 ರಂದು, ಬೆಳಗ್ಗೆ ಬೇಗನೆ ಹೊರಟಿ ದ್ವಾರಕೆಯಿಂದ 60  ಕಿ.ಮೀ ದೂರದಲ್ಲಿರುವ ಪೋರ್ ಬಂದರ್ ತಲಪಿದೆವು. ಗುಜರಾತಿನ ಆ  ಮನೆಯಲ್ಲಿ ನಾವು ಕಾಲಿಟ್ಟೊಡನೆ, ಇಲ್ಲಿ ಪುಟ್ಟ ಬಾಪು ಅಂಬೆಗಾಲಿಟ್ಟಿರಬಹುದು, ಅಲ್ಲಿ ಬಾಲಕ ಮೋಹನದಾಸ ಓಡಾಡಿರಬಹುದು ಎಂಬ ಊಹೆಯಿಂದ ನಾವು ಪುಳಕಿತರಾಗುತ್ತೇವೆ. ಹದಿನೇಳನೆಯ ಶತಮಾನದಲ್ಲಿ, ಗುಜರಾತ್...

Follow

Get every new post on this blog delivered to your Inbox.

Join other followers: