Category: ಲಹರಿ

13

ಅರಳು ಸಂಡಿಗೆ ಅರಳು…ಬಿರಿದು ರುಚಿಯನು ನೀಡು

Share Button

ಓ, ಏನಪ್ಪಾ ಇದು, ಜನಪ್ರಿಯ ಗೀತೆಯ ಪಲ್ಲವಿಯನ್ನೇ ಸ್ವಲ್ಪ ಬದಲಾವಣೆ ಮಾಡಿ, ಶೀರ್ಷಿಕೆ ಇಟ್ಟುಬಿಟ್ಟಿದ್ದಾರಲ್ಲಾ . .  ಎಂದುಕೊಳ್ಳಬೇಡಿ.  ಆ ಹಾಡಿನಲ್ಲಿ “ಅರಳು ಮಲ್ಲಿಗೆ ಅರಳು”ವಿನ ಎರಡೂ “ಅರಳು”ಗಳಿಗೂ ಒಂದೇ ಅರ್ಥ ಚಿಗುರು, ಪಲ್ಲವಿಸು ಅಂತ.  ಆದರೆ ಈ ನನ್ನ ಸಂಡಿಗೆಯ ಶೀರ್ಷಿಕೆಯ ಎರಡು “ಅರಳು”ಗಳಿಗೂ ವಿಭಿನ್ನ...

9

ಅಸೀಮ ‘ಅನಂತ’ ಅಮೇಯ !

Share Button

ಅಸೀಮ ಎಂದರೆ ಎಲ್ಲೆಕಟ್ಟಿಲ್ಲದ ಅನಿಕೇತನ ಚೇತನ. ಅನಂತ ಎಂದರೆ ಇಂಥದೊಂದು ಚೈತನ್ಯಕ್ಕೆ ಅಂತ್ಯವೇ ಇಲ್ಲ; ದಣಿವೆಂಬುದೇ ಗೊತ್ತಿಲ್ಲ! ಅಮೇಯ ಎಂದರೆ ಅಳತೆಗೇ ಸಿಗದ ಎಂದು. ಈ ಮೂರೂ ಮುಪ್ಪುರಿಗೊಂಡ ಆದರೆ ಮುಪ್ಪಿಲ್ಲದ ಭಾರತೀಯ ಚಲನಚಿತ್ರ ರಂಗ ಕಂಡ ಅನನ್ಯ ಮತ್ತು ಅದ್ಭುತ ಕಲಾಪ್ರತಿಭೆ ನಮ್ಮ ಅನಂತನಾಗ್. ಅವರ...

11

ಪುಡಿಗಳಸಾಮ್ರಾಜ್ಯ !

Share Button

ಚಿಕ್ಕಂದಿನಲ್ಲಿ ನಮ್ಮಜ್ಜಿ ಮನೆಯಲ್ಲಿ ಇದ್ದ ದಿನಮಾನಗಳು. ದಸರೆಯ ರಜೆಗೆ ಬಂದಿದ್ದ ಮೊಮ್ಮಕ್ಕಳು. ಬಡತನದಲ್ಲೂ ಪ್ರೀತಿ ಮಮತೆಗೆ ಕೊರತೆ ಮಾಡದ ಈ ಮಡಿಹೆಂಗಸು, ಆಗಾಗ ಬಯ್ಯುತಿದ್ದರೂ ಅದರಲ್ಲಿ ಕಾಳಜಿ ಬೆರೆತ ವಾತ್ಸಲ್ಯವಿತ್ತು. ಹಗಲೆಲ್ಲಾ ಅದೂ ಇದೂ ಆಟವಾಡಿ, ದಣಿದು ರಾತ್ರಿಯಾಯಿತೆಂಬ ಕಾರಣಕ್ಕಾಗಿ ಒಂದೆಡೆ ಉಸ್ಸಪ್ಪ ಎಂದು ಗೋಡೆಯ ಕಂಬಕ್ಕೆ...

10

ಬರೆದು ಪ್ರಕಟಿಸಿದ ಮೇಲೆ !

Share Button

ಬರೆಯುವುದು ಏಕೆ? ಅಭಿವ್ಯಕ್ತಿಸುವುದಕೆ ! ಭಾವನೆ, ಸಂವೇದನೆ, ಚಿಂತನಾಲೋಚನೆಗಳನು ಹೊರ ಹಾಕುವುದಕೆ!! ಒಟ್ಟಿನಲಿ ಪ್ರತಿಕ್ರಿಯಿಸಲು ಮತ್ತು ಪ್ರತಿಸ್ಪಂದಿಸಲು. ಇದು ಬರೆವಣಿಗೆಯೊಂದಕ್ಕೇ ಅಲ್ಲ; ಎಲ್ಲ ಲಲಿತಕಲೆಗಳ ಲಕ್ಷಣ; ಅದರ ಹುಟ್ಟು ಮತ್ತು ವಿಕಸನ. ಮಾತು ಹೇಗೇ ಸಂವಹನವೋ ಬರೆಹವೂ. ‘ಬರೆಹವೆಂಬುದು ಮನಸಿನ ನಾಲಗೆ ; ಸುಮ್ಮನೆ ತನ್ನಷ್ಟಕೆ ಬದುಕಿದವರ...

4

ಇತ್ತೀಚೆಗೆ ನೋಡಿದ ಸಿನಿಮಾ: ಯುದ್ಧಕಾಂಡ ಭಾಗ 2

Share Button

ರಾಮಾಯಣದಲ್ಲಿ ಬರುವ ಯುದ್ಧಕಾಂಡ ಅಧ್ಯಾಯದಲ್ಲಿ ಹಾಗೂ ನಂತರದಲ್ಲಿ ದುಷ್ಟ ರಾವಣನ ಸಂಹಾರ ಹಾಗೂ ಶಿಷ್ಟ ರಕ್ಷಣೆ ಪ್ರಸಂಗಗಳು ಬರುತ್ತವೆ. ಅನೇಕ ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳಲ್ಲಿ ನಾನಾ ರೀತಿಯ ಯುದ್ಧಕಲೆಗಳು ವಿಜೃಂಭಿಸುತ್ತವೆ. ಸಾಮಾಜಿಕ ಹಾಗೂ ಜಾನಪದ ಚಲನಚಿತ್ರಗಳಲ್ಲಿ ಹಿಂದಿನಿಂದ ಕೋಲು ಹೊಡೆದಾಟ, ಕತ್ತಿವರಸೆ, ಕುಸ್ತಿ, ಬಾಕ್ಸಿಂಗ್ ಮುಂತಾದ...

10

ಜೀವನ ಮತ್ತು ಉಂಗುರ, ಕ್ಷಣ ಭಂಗುರ

Share Button

ಜಮ್ಮು ಕಾಶ್ಮೀರಕ್ಕೆ ಹೋಗಿ ಹೆಚ್ಚು ಕಡಿಮೆ ನಲವತ್ತಮೂರು ವರ್ಷಗಳಾಗಿದ್ದುವು. ನನ್ನ ಗೆಳತಿ ಬೆಂಗಳೂರಿನಿಂದ ಪ್ಯಾಕೇಜ್ ಟೂರಿನಲ್ಲಿ ಹೊರಟಿದ್ದಳು. ನನ್ನನ್ನು ಬರುತ್ತೀಯಾ ಎಂದು ವಿಚಾರಿಸಿದಳು. ಮೊದಲು ಅನುಮಾನದಿಂದ ‘ನೋಡೋಣ’ ಎಂದು ಉತ್ತರ ಕೊಟ್ಟೆ. ನಂತರ ನನ್ನ ಪತಿ ‘ನೋಡಿ ನಾಲ್ಕು ದಶಕಗಳ ಮೇಲಾಗಿದೆಯಲ್ಲಾ ಹೋಗೋಣ’ ಎಂದರು. ಸರಿ ಮುಂಗಡ...

11

ಗುಂಡು ಕಥೆ

Share Button

ನಾನಿಂದು ಗುಂಡು ಕಥೆ ಬರೆಯಲು ಹೊಟಿದ್ಧೀನೆಂದರೆ ನೀವಲ್ಲಿ ಏನೇನೋ ರೋಚಕ ಪ್ರಸಂಗಗಳು ಇರುತ್ತವೆ ಎಂದುಕೊಂಡು ಮತ್ತೇರಿಸಿಕೊಳ್ಳಬೇಡಿ.  ಕರೋನಾ ಸಮಯದಲ್ಲಿ ಮದ್ಯಕ್ಕೆ ಎಣ್ಣೆ ಎಣ್ಣೆ ಎಂದು ನಮ್ಮ ದೃಶ್ಯ  ಮಾಧ್ಯಮದವರು ಹೇಳುತ್ತಾ, ಹೇಳುತ್ತಾ ಪಾಪ, ನಿಜವಾದ ಎಣ್ಣೆಯನ್ನು ಮೂಲೆಗುಂಪು ಮಾಡಿಬಿಟ್ಟರಲ್ಲಾ ಹಾಗೆ.  ನಮ್ಮ ಸುತ್ತಲಿನ ಕೆಲವಾರು ಗಂಡಸರಂತೂ ಕರೋನಾ...

5

ರಕ್ಷಿಸುವ  ಭೂಮಿ ತಾಯಿಯ

Share Button

‘ಇರುವುದೊಂದೇ ಭೂಮಿ’ ಹೆತ್ತ ತಾಯಿ ಮತ್ತು ಹೊತ್ತ ಭೂಮಾತೆ ಯ ಮಹತ್ವವನ್ನು ವರ್ಣಿಸಿದಷ್ಟೂ ಕಡಿಮೆ. ಪದಗಳು ಸಾಲವು.” ಜನನೀ ಜನ್ಮ ಭೂಮೀಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಉಕ್ತಿಯಲ್ಲಿ ನಮಗೆ ಭೂಮಿಯ ಮಹತ್ವ ತಿಳಿಯುತ್ತದೆ. ಪಂಚಭೂತಗಳಲ್ಲಿ ಒಂದಾದ ಭೂಮಿ ಮಾತ್ರ ಸಕಲ ಜೀವಿಗಳಿಗೆ ವಾಸಿಸಲು ಯೋಗ್ಯವಾದ ಗ್ರಹ ಎಂಬುದು...

18

ವ್ಯಂಜನ ವಿಚಾರ !

Share Button

ವ್ಯಂಜನವೆಂದ ಕೂಡಲೇ ನೆನಪಾಗುವುದು ವ್ಯಾಕರಣ. ಸ್ವರಗಳು ಮತ್ತು ವ್ಯಂಜನಗಳು ಎಂದು. ಸ್ವರಗಳ ಸಹಾಯದಿಂದಲೇ ಉಚ್ಚಾರವಾಗುವ ವ್ಯಂಜನಗಳು ಭಾಷೆಯ ಮೂಲಧಾತು. ಅಕಾರದಿಂದ ಔಕಾರದವರೆಗೆ ಇರುವ ಅಕ್ಷರಗಳೇ ಸ್ವರ. ಇವುಗಳ ಸಂಕೇತ ಚಿಹ್ನೆಯೇ ಗುಣಿತಾಕ್ಷರ. ವ್ಯಂಜನಗಳು ಅರ್ಧಾಕ್ಷರಗಳು. ಇವು ಪೂರ್ಣವಾಗಲು ಸ್ವರದ ಸಹಾಯ ಬೇಕೇ ಬೇಕು. ಎಲ್ಲ ಭಾಷೆಗಳಲ್ಲೂ ಸ್ವರ...

48

ಫಿಟ್‌ನೆಸ್‌ : ಒಂದು ಮರುಕಲ್ಪನೆ

Share Button

ಬಹುಶಃ ಜಗತ್ತಿನಲ್ಲಿಯೇ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲಾದ ಒಂದು ಪದವೆಂದರೆ ಫಿಟ್‌ನೆಸ್. ತಮಗಿದು ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಎಲ್ಲರೂ ಅಂದುಕೊಂಡು, ತಪ್ಪಾಗಿ ಅರ್ಥಮಾಡಿಕೊಂಡಿರುವ ಕಾನ್ಸೆಪ್ಟ್ ಕೂಡ ಇದೇ ಎಂದು ನನ್ನ ಅನಿಸಿಕೆ. ದಿನವೂ ಯಾವುದಾದರೊಂದು ಹೊಸ ಫಿಟ್‌ನೆಸ್ ಥಿಯರಿಯನ್ನು ಜಾಹಿರಾತುಗಳಲ್ಲಿ ನೋಡುತ್ತಿರುತ್ತೇವೆ. ಈಗಂತೂ ಅಮ್ಮಂದಿರ, ಅಜ್ಜಿಯಂದಿರ ಬಾಯಲ್ಲೂ...

Follow

Get every new post on this blog delivered to your Inbox.

Join other followers: