Author: Vijaya Subrahmanya
ಒಬ್ಬ ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಅವರೆಲ್ಲ ಒಂದೇ ತೆರನಾಗಿರಬೇಕೆಂದೇನೂ ಇಲ್ಲ. ವಿವಿಧ ರೂಪ ಮಾತ್ರವಲ್ಲ, ವಿವಿಧ ಗುಣದವರೂ ಆಗಿರುತ್ತಾರೆ. ಒಬ್ಬ ಸಾಧು ಸ್ವಭಾವದವನಾದರೆ ಇನ್ನೊಬ್ಬ ಮುಂಗೋಪಿ, ಮತ್ತೊಬ್ಬ ವಾಚಾಳಿ, ಮಗದೊಬ್ಬ ದುರ್ಗುಣಿ, ಹೀಗೆ ನಾನಾವಿದ, ಕೆಲವೊಮ್ಮೆ ಮಿಕ್ಕವರೆಲ್ಲ ಕೆಟ್ಟ ಸ್ವಭಾವದಿಂದ ಕೂಡಿದ್ದು ಅವರಲ್ಲೊಬ್ಬ ಸದ್ಗುಣಿಯಾಗಿರಬಹುದು, ಕೆಟ್ಟ...
‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಾ’ ಎಂದು ಚಿಂತನಾ ಸೂಕ್ತಿಯನ್ನು ಹಿರಿಯರು ಆಗಾಗ ಹೇಳುವು ದನ್ನು ಕೇಳಿದ್ದೇವೆ. ಹೌದು, ಪತಿ-ಪತ್ನಿಯರ ಸಾಮರಸ್ಯ, ಕುಟುಂಬ ಸಂಬಂಧವಾಗಲೀ, ಗೋ ಸಂಪತ್ತಾಗಲೀ, ಮನೆಯಾಗಲೀ ಯೋಗ್ಯರೀತಿಯಲ್ಲಿ ದಕ್ಕಬೇಕಾದರೆ ಋಣಾನುಬಂಧ ಬೇಕಂತೆ. ಒಳ್ಳೆಯ ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ಲಭಿಸಬೇಕಾದರೂ ಪೂರ್ವಸುಕೃತ, ಕರ್ಮಫಲಗಳು ಒಳ್ಳೆಯ ರೀತಿಯಲ್ಲಾಗಬೇಕು....
ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ಬರುವ ಪಾತ್ರಗಳು ನಮಗೆ ಮಹತ್ತರ ಆಶ್ವಾಸನೆ ನೀಡುತ್ತವೆ. ನಮ್ಮ ಮನದೊಳಗೆ ಬಿಂದುವಾಗಿದ್ದ ಬುದ್ಧಿಯನ್ನು ಊದಿ ಊದಿ ಸಿಂಧುವಾಗಿಸುವ ಶಕ್ತಿ ಅವುಗಳಿಗಿದೆ. ಆದರೆ ಅವುಗಳನ್ನು ಉಪಯೋಗಿಸಿ ಕೊಳ್ಳುವ ತಾಕತ್ತು ನಮಗಿರಬೇಕು. ಎಷ್ಟೊಂದು ಸದ್ವಿಚಾರಗಳು! ಏನೆಲ್ಲ ನೀತಿಗಳು! ತರತರದಲ್ಲಿ ತತ್ವಗಳು! ಅವುಗಳನ್ನು ಮನನ ಮಾಡುವ ಮನಸ್ಸು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶುಕ್ರರು ಮಗಳಿಗೆ ಬಹಳವಾಗಿ ನೀತಿ ಹೇಳಿದರೂ ದೇವಯಾನಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಶುಕ್ರರು ಸ್ವಲ್ಪ ಹೊತ್ತು ಯೋಚಿಸಿದವರೇ ನೇರವಾಗಿ ವೃಷಪರ್ವನಲ್ಲಿಗೆ ಹೋದರು. “ರಾಜಾ, ನಿನ್ನ ಮಗಳು ನನ್ನ ಮಗಳನ್ನು ಕಟುವಾಗಿ ನಿಂದಿಸಿದ್ದಲ್ಲದೆ ಬಾವಿಗೆ ತಳ್ಳಿಬಿಟ್ಟು ಬಂದಿದ್ದಾಳೆ.ಇಂತಹ ಅವಮಾನದ ಕಡೆ ನಾನಿನ್ನು ನಿಲ್ಲಲಾರೆ,ಈಗಲೇ ಹೊರಟೆ” ಎಂದರು....
“ಮಾತು ಬೆಳ್ಳಿ, ಮೌನ ಬಂಗಾರ”“ಮಾತನಾಡಿದರೆ ಮುತ್ತು ಉದುರುವಂತಿರಬೇಕು”“ಮಾತು ಬಲ್ಲವನಿಗೆ ಜಗಳವಿಲ್ಲ”“ಮಾತಿನಲ್ಲಿ ತೂಕವಿರಬೇಕು”. ಮೊದಲಾದ ನುಡಿಗಳು ವಿವೇಕವರಿತು ಹಿತಮಿತವಾದ ಮಾತನಾಡುವುದಕ್ಕೆ ಎಚ್ಚರಿಕೆಯ ಸಲಹೆಗಳು. ಹೌದು. ಮಾತು ಮಿತ್ರನನ್ನೂ ಸೃಷ್ಟಿಸುತ್ತದೆ, ಶತ್ರುವನ್ನೂ ಹುಟ್ಟಿಸುತ್ತದೆ. ಹದತಪ್ಪಿ ಮಾತನಾಡಿದ ಬಳಿಕ ಪಶ್ಚಾತ್ತಾಪ ಪಡುವವರು ಅನೇಕರಾದರೆ; ಅನಗತ್ಯವಾಗಿ ಕಠೋರ ಮಾತನ್ನಾಡಿದರೂ ತಾವು ಹೇಳಿದ್ದೇ ಸರಿಯೆಂದು...
”ಎಷ್ಟು ಸಲ ತೂಗಿ,ಸರಿ ತೂಕ ನೋಡುವುದು; ಒಂದಿಷ್ಟು ಹೆಚ್ಚು ಬಂದರೇನೀಗ ಆ ಟೊಮೆಟೋ ತೂಕಕ್ಕೆ….!?”ತರಕಾರಿಯವನ ಬಳಿ ತಕರಾರುಮಾಡುತ್ತಿದ್ದ ಆ ಮುದುಕಿಯನ್ನು ನೋಡಿದ ವಸುಂಧರಾ ತನ್ನ ಖರೀದಿ ತೀರಿಸಿ ನಡು ನೆಟ್ಟಗೆ ಮಾಡಿ ಇತ್ತ ತಿರುಗಿದ ಆ ವೃದ್ಧೆಯನ್ನು ಬೆರಗಾಗಿ ನೋಡಿದಳು!. “ಓಹ್…,ಕನಕಮ್ಮ ನೀವಾ?”“ಹೌದು.., ನೀನು ವಸುಂಧರಾ ತಾನೇ?...
ನಮ್ಮ ಬದುಕಿನ ದಾರಿದೀಪಗಳಾದ ರಾಮಾಯಣ,ಮಹಾಭಾರತ ಮೊದಲಾದ ಪುರಾಣಗಳಲ್ಲಿ ಸಾಮಾನ್ಯವಾಗಿ ಶಿಷ್ಟರು ಹಾಗೂ ದುಷ್ಟರು ಎಂಬ ಎರಡು ವಿಧದ ವ್ಯಕ್ತಿತ್ವ ಉಳ್ಳವರನ್ನು ಕಾಣುತ್ತೇವೆ. ಶಿಷ್ಟರು ಎನಿಸಿಕೊಳ್ಳುವಂತವರು ಆರಂಭದಿಂದ ಅಂತ್ಯದವರೆಗೂ ಮೌಲ್ಯಾಧಾರಿತ ಮಹಾಗುಣದಿಂದ ಕೂಡಿದ್ದರೆ ದುಷ್ಟರು ಹುಟ್ಟಿನಿಂದ ಸಾಯುವ ತನಕವೂ ಕೆಟ್ಟವರಾಗೇ ಬಾಳುವಂಥವರು. ಆದರೆ ಅಪರೂಪವಾಗಿ ಇವೆರಡಕ್ಕೂ ವಿಭಿನ್ನವಾದ ಇನ್ನೊಂದು...
ತಾನೇ ಮೇಲು, ತನ್ನಿಂದ ಮಿಕ್ಕಿ ಯಾರೂ ಇಲ್ಲ, ತಾನು ಹೇಳಿದಂತೆ ಮನೆ ಮಂದಿ ಕೇಳಬೇಕು, ತನ್ನಿಂದ ಮತ್ತೆಯೇ ಇನ್ನುಳಿದವರೆಲ್ಲಾ ಎಂಬ ಗರ್ವಭಾವ ಸಂಸಾರವಂದಿಗರಾದ ಹೆಂಗಳೆಯರಲ್ಲಿ ಸರ್ವೇ ಸಾಮಾನ್ಯ. ಅದೂ ವಾರಗಿತ್ತಿಯರಲ್ಲಿ ಈ ಕುತ್ಸಿತ ಬುದ್ಧಿ ಅಧಿಕವೆಂದೇ ಹೇಳಬೇಕು. ಆದರೆ ಇಂತಹ ಸಣ್ಣಬುದ್ಧಿಯನ್ನು ಅರಿತುಕೊಂಡು ತಿದ್ದುವವರು ಮಾತ್ರ ವಿರಳ.ಸ್ವತಃ...
ನಮ್ಮ ಪುರಾಣದ ಮಹಾ ಪುನೀತೆಯರಲ್ಲಿ ದೇವಾಂಗನೆಯರು, ರಾಜರಾಣಿಯರು, ಋಷಿಪತ್ನಿಯರು ಶರಣೆಯರು ಮೊದಲಾದ ಮಹಾಮಾತೆಯರು ಬೆಳಗಿ ಹೋಗಿದ್ದಾರೆ.ಅಂತಹವರ ಬದುಕಿನಿಂದ ನಮಗೆ ತತ್ವಾದರ್ಶಗಳು,ನೀತಿಪಾಠಗಳಾಗಿ ದೊರಕುತ್ತವೆ. ಅಂತಹ ಆದರ್ಶ ನಾರಿಯರ ಜೀವನವನ್ನು ಅಧ್ಯಯನ ಮಾಡಿದಾಗ ಬ್ರಾಹ್ಮಣ ಸ್ತ್ರೀಯರೂ ಪೂಜನೀಯ ಸ್ಥಾನದಲ್ಲಿ ಬರುತ್ತಾರೆ.ಅಂತಹವರಲ್ಲಿ ಗುಣವತಿ ಯು ಶ್ರೇಷ್ಠಳಾಗಿ ಶೋಭಿಸುತ್ತಾಳೆ. ‘ಹೆಣ್ಣಿಗೆ ಗುಣವೇ ಭೂಷಣ.ಹೆಂಗಳೆಯರ...
” ನೋಡು ರವೀ ನಾನು ಮದುವೆಗೆಲ್ಲ ಒಪ್ಪಿದ್ದೇನೋ ನಿಜ.ಆದ್ರೆ ಈಗ್ಲೇ ಮಕ್ಕಳಾಗಬೇಕು ಎಂಬ ವರಸೆ ನಿನ್ನ ಅಪ್ಪ+ಅಮ್ಮಂದಾದರೆ ಅದಕ್ಕೆಲ್ಲ ನಾನು ರೆಡಿ ಇಲ್ಲ.” ಮೊಬೈಲ್ ಕಿವಿಗಾನಿಸಿ ತುಸು ಗಟ್ಟಿ ದನಿಯಲ್ಲೇ ಹೇಳುತ್ತಿದ್ದಳು ಚಿನ್ಮಯಿ. “ಈಗ್ಲೇ ಇಷ್ಟ ಇಲ್ಲಾಂದ್ರೆ ಬೇಡ ಬಿಡು, ಒಂದು ವರ್ಷ, ಎರಡು ವರ್ಷ ಹೋದಮೇಲಾದ್ರೂ...
ನಿಮ್ಮ ಅನಿಸಿಕೆಗಳು…