ಬೊಗಸೆಬಿಂಬ

ಲಿಪಿಡ್ ಪ್ರೊಫೈಲ್ ಪರೀಕ್ಷೆ

Share Button

ನಾನು ಸುಮಾರು 60 ವರ್ಷಗಳಿಂದ ಬಿ.ಪಿ, ಶುಗರ್, ಪಾರ್ಶ್ವವಾಯು ಇದ್ದ ನನ್ನ ತಂದೆಯನ್ನು ಥೈರಾಯಿಡ್ ಹಾಗೂ ಸಕ್ಕರೆ ರೋಗದ ನನ್ನ ತಾಯಿ, ಸಕ್ಕರೆ, ಕೊಲೆಸ್ಟ್ರಾಲ್ , ಥೈರಾಯಿಡ್, ಮೂತ್ರಪಿಂಡದ ಸಮಸ್ಯೆ ಇದ್ದ ನನ್ನ ಪತ್ನಿ, ಯಕೃತ್ತಿನ ತೊಂದರೆ ಇದ್ದ ನನ್ನ ಮಗ, ಹಾಗೂ ಥೈರಾಯಿಡ್, ಕೊಲೆಸ್ಟ್ರಾಲ್, ಗ್ಯಾಸ್ಟ್ರಿಕ್ , ಸಮಸ್ಯೆಗಳಿದ್ದ ನನ್ನ – ಹೀಗೆ ಇಡೀ ಕುಟುಂಬದ ಎಲ್ಲರ ರಕ್ತ ಹಾಗೂ ಮೂತ್ರ ಪರೀಕ್ಷೆಗಳನ್ನು ಮಾಡಿಸುತ್ತಾ ಬಂದಿರುವ ಅನುಭವದ ಹಿನ್ನೆಲೆಯಲ್ಲಿ ಈ ಲಿಪಿಡ್ ಪ್ರೊಫೈಲ್ ಪರೀಕ್ಷೆಗಳನ್ನು ನಾವೆಲ್ಲರೂ ಆಗಾಗ ಮಾಡಿಸಿಕೊಳ್ಳುತ್ತಾ ಬಂದಿದ್ದು, ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಈಗ ನಿಮ್ಮ ಎದುರು ನಿಮ್ಮೆದುರು ತೆರೆದಿಡುತ್ತಿದ್ದೇನೆ.

ಒಬ್ಬ ವ್ಯಕ್ತಿಯಲ್ಲಿ ಹೃದಯ ರಕ್ತನಾಳದ ಕಾಯಿಲೆಯ ಅಪಾಯ ಬಂದಿರಬಹುದು – ಬರುತ್ತಿರಬಹುದು – ಇಂಥ ಅಪಾಯ ಬರುವ ಸಾಧ್ಯತೆ ಇರುವ ವ್ಯಕ್ತಿಗಳಿಗೆ ತಜ್ಞ ವೈದ್ಯರು ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹೇಳುತ್ತರೆ. ಇದು ವಿವಿಧ ರಕ್ತ ಪರೀಕ್ಷೆಗಳ ಸಂಯೋಜನೆ ಆಗಿದ್ದು, ನಮ್ಮ ರಕ್ತದಲ್ಲಿನ 4 ರೀತಿಗಳ ಲಿಪಿಡ್ ಅಥವಾ ಕೊಬ್ಬಿನ ಮಟ್ಟವನ್ನು ಅಳೆಯಲು ಈ ಪರೀಕ್ಷೆಗಳನ್ನು ವೈದ್ಯರು ಸೂಚಿಸುತ್ತಾರೆ. ಅವು 1. ಒಟ್ಟೂ ಕೊಲೆಸ್ಟ್ರಾಲ್ 2. ಕಡಿಮೆ ಸಾಂದ್ರತೆಯ ಲಿಪೊಪ್ರೊಟೀನ್ ಕೊಲೆಸ್ಟ್ರಾಲ್ (ಎಲ್.ಡಿ.ಎಲ್) 3. ಹೆಚ್ಚಿನ ಸಾಂದ್ರತೆಯ ಲಿಪೊಪ್ರೊಟೀನ್ ಕೊಲೆಸ್ಟ್ರಾಲ್ 4. ಟೈಗ್ಲಿಸರೈಡ್ಗಳು.

ಲಿಪಿಡ್ ಒಂದು ಕೊಬ್ಬು ಅಥವಾ ಕೊಬ್ಬಿನಂತಹ ವಸ್ತುವಾಗಿದ್ದು, ನಮ್ಮ ದೇಹದ ಸರಿಯಾದ ಕಾರ್ಯ ನಿರ್ವಹಣೆಗೆ ಇದು ಆವಶ್ಯಕವಾಗಿದೆ. ಏಕೆಂದರೆ ಇದು ನಮ್ಮ ದೇಹಕ್ಕೆ ಶಕ್ತಿಯ ಮೂಲವಾಗಿದೆ. ಸಾಮನ್ಯವಾಗಿ ನಮ್ಮ ರಕ್ತ ಮತ್ತು ಅಂಗಾಂಗಳಲ್ಲಿ ಇದು ಸಂಗ್ರಹವಾಗುತ್ತವೆ. ಹೆಚ್ಚಿನ ಲಿಪಿಡ್ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ: ಪರಿಧಮನಿಯ ಕಾಹಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತ.

ಪರೀಕ್ಷಾ ವಿಧಾನ:- ಈ ಪರೀಕ್ಷೆಗೆ ಒಳಗಾಗುವ ಮೊದಲು ವೈದ್ಯರು ನಿಮ್ಮನ್ನು ಉಪವಾಸ ಮಾಡಲು ಹೇಳಬಹುದು. ರಾತ್ರಿಯ ಉಪವಾಸದ 12 ರಿಂದ 14ಗಂಟೆಗಳ ನಂತರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದರಿಂದ ಫಲಿತಾಂಶಗಳು ಹೆಚ್ಚು ನಿಖರವಾಗಿರುತ್ತವೆ. ಆ ಸಮಯದಲ್ಲಿ ನೀವು ಕಾಫಿ, ಚಹ ಕುಡಿದಿರಬಾರದು. ಈ ಪರೀಕ್ಷೆಯೊಂದಿಗೆ ಕೆಲವು ಮುನ್ನೆಚ್ಚರಿಕೆಯನ್ನು ನೀವು ತೆಗೆದುಕೊಳ್ಳಬೇಕು. ಮದ್ಯಪಾನ ನಿಲ್ಲಿಸಿ, ಹೆಚ್ಚಿನ ಕೊಬ್ಬಿನ ಅಹಾರವನ್ನು ತಪ್ಪಿಸಿ. ಶ್ರಮದಾಯಕ ವ್ಯಾಯಾಮವನ್ನೂ ತಪ್ಪಿಸಿ.

ಕೊಲೆಸ್ಟ್ರಾಲ್ ಮಟ್ಟಗಳು:- ನಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟಗಳನ್ನು ಸಾಮಾನ್ಯವಾಗಿ ಪ್ರತಿ ಡೆಸಿಲೀಟರ್‌ಗೆ ಮಿಲಿಗ್ರಾಂನಲ್ಲಿ ಅಳೆಯಲಾಗುತ್ತದೆ. (mg /dl.)
ಪ್ರೊಫೈಲ್ ಶ್ರೇಣಿ:– ಒಟ್ಟು ಕೊಲೆಸ್ಟ್ರಾಲ್ ಸಾಮಾನ್ಯ ಶ್ರೇಣಿ – 200 mg /dl. ಗಿಂತ ಕಡಿಮೆ.
HDL ಕೊಲೆಸ್ಟ್ರಾಲ್ ಶ್ರೇಣಿ – 40 ರಿಂದ 60 mg /dl ನಡುವೆ ನೀವು ಕಡಿಮೆ ಮಟ್ಟದ HDL ಕೊಲೆಸ್ಟ್ರಾಲ್ ಹೊಂದಿದ್ದರೆ ನೀವು ಹೆಚ್ಚಿನ ಅಪಾಯದಲ್ಲಿದ್ದೀರಿ. ಪುರುಷರಿಗೆ 40 mg /dl ಗಿಂತ ಕಡಿಮೆ ಇರುವುದು ಹೆಚ್ಚಿನ ಅಪಾಯವನ್ನು ಸೂಚಿಸುತ್ತದೆ.

ಮಹಿಳೆಯರಿಗೆ 50 mg /dl ಗಿಂತ ಕಡಿಮೆ ಇರುವುದು ಹೆಚ್ಚಿನ ಅಪಾಯವನ್ನು ಸೂಚಿಸುತ್ತದೆ. HDL ಕೊಲೆಸ್ಟ್ರಾಲ್ ಆನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. HDL ಮಟ್ಟ ಹೆಚ್ಚಿದ್ದರೆ ನಿಮಗೆ ಕಡಿಮೆ ಅಪಾಯವಿದೆ. ಏಕೆಂದರೆ ನಿಮ್ಮ ಅಪಧಮನಿಯ ಗೋಡೆಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುವ ಮೂಲಕ ಊಆಐ ಕೊಲೆಸ್ಟ್ರಾಲ್ ಹೃದಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಸ್ಟಾಟಿನ್ ಔಷಧ ಮತ್ತು ಸರಿಯಾದ ವ್ಯಾಯಾಮವೂ ನಿಮ್ಮ ರಕ್ತದಲ್ಲಿನ HDL ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.
ಟೈಗ್ಲಿಸರೈಡ್ಗಳ ಸಾಮಾನ್ಯ ಶ್ರೇಣಿ 10ರಿಂದ 150 mg /ಜಟ ನಡುವೆ ಇರುತ್ತದೆ. 150ರಿಂದ 199 mg /ಜಟ ನಡುವೆ ಗಡಿರೇಖೆಯ ಹೆಚ್ಚಿನ ಅಪಾಯವಿದೆ. 200ರಿದ 400 mg /ಜಟ ನಡುವೆ ಹೆಚ್ಚಿನ ಅಪಾಯ 500 mg /ಜಟ ಇದ್ದರೆ ಅತಿ ಹೆಚ್ಚು ಅಪಾಯವಿದೆ.

ನಿಮ್ಮ ರಕ್ತದಲ್ಲಿನ ಹೆಚ್ಚುವರಿ ಟ್ರೈಗ್ಲಿಸರೈಡ್‌ಗಳು ಹೃದಯರಕ್ತನಾಳದ ಕಾಯಿಲೆ ಮತ್ತು ಮೇದೋಜ್ಜೀರಕ ಗ್ರಂಥಿಯ ಉರಿಯೂತಕ್ಕೆ ಸಂಬಂಧಿಸಿವೆ.

ಎನ್.ವ್ಹಿ.ರಮೇಶ್ , ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *