Daily Archive: January 23, 2025
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಮೂರನೆಯ ದಿನ..17/09/2024 ಹಡಗಿನ ಒಳಗಡೆ ವಿಶಾಲವಾದ ಕೊಠಡಿ ಹವಾನಿಯಂತ್ರಿತವಾಗಿತ್ತು. ಕಪ್ಪು ಬಣ್ಣದ ಮರದ ಪೀಠೋಪಕರಣಗಳು , ಕುಸುರಿ ಕೆತ್ತನೆಯುಳ್ಳ ಟೀಪಾಯಿ, ದೊಡ್ಡದಾದ ಗಾಜಿನ ಕಿಟಿಕಿಗಳು, ಚೆಂದದ ಪರದೆಗಳು, ಬಾತ್ ರೂಮ್ ನಲ್ಲಿ ಆಧುನಿಕ ಸವಲತ್ತುಗಳು, ಬಾತ್ ಟಬ್ ಇತ್ಯಾದಿ ಇದ್ದುವು. ವಿಯೆಟ್ನಾಂನಲ್ಲಿ ...
ಮೈಸೂರು ದಸರಾ ವಸ್ತು ಪ್ರದರ್ಶನ ನೋಡಲು ತಮ್ಮ ಮೊಮ್ಮಕ್ಕಳೊಡನೆ ಸ್ವಾಮಿ ಮಾಸ್ತರರು ಹೋಗಿದ್ದರು. ಬೆಳಕಿನ ಸಾಲುಸಾಲು ದೀಪಗಳಿಂದ ಅಲಂಕೃತಗೊಂಡಿದ್ದ ಅಂಗಡಿಗಳ ಮುಂದೆ ಗಿಜುಗುಟ್ಟುವ ಜನಸಂದಣಿ. “ಹಿಂದೆ ಮುಂದೆ ನೋಡಿಕೊಂಡು ನಡೆಯಿರಿ ಮಕ್ಕಳೆ. ಕಳೆದುಹೋದೀರಿ” ಎಂದು ಮೊಮ್ಮಕ್ಕಳನ್ನು ಎಚ್ಚರಿಸಿದರು. “ತಾತ ನೀವು ಜೋಪಾನ, ನಾವು ಕಳೆದು ಹೋಗುವ ಭಯವಿಲ್ಲ....
“ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು”- ಎನ್ನುವಂತೆ… ಈ ಹಂತದಲ್ಲಿ ನಾವು ಮಕ್ಕಳನ್ನು ಹೇಗೆ ಕಾಣುತ್ತೇವೆ, ಹೇಗೆ ಬೆಳೆಸುತ್ತೇವೆ ಎನ್ನುವುದರ ಮೂಲಕ ನಮ್ಮ ಮಕ್ಕಳ ಉತ್ತಮ ಭವಿಷ್ಯ ಅವರ ಬೆಳವಣಿಗೆ ಅಡಗಿದೆ. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕೊಡಿಸುವುದೇ ಸಾಹಸದ ಕೆಲಸ. ಈ ಹಂತದಲ್ಲಿ ಒಂದು ರೀತಿಯಲ್ಲಿ ಗೊಂದಲ....
ರಾಜಲಕ್ಷ್ಮಿಗೆ ಸಮಾಧಾನವಾಯಿತು. ನೀಲಕಂಠ ನೋಡಿಕೊಳ್ಳುತ್ತಿರುವ ವೃದ್ಧಾಶ್ರಮದವರನ್ನು ಹೇಗೆ ಕರೆದೊಯ್ಯುವುದು?” ಎಂಬ ಸಮಸ್ಯೆ ಎದುರಾಯಿತು.“ಅವರನ್ನು ಕರೆದುಕೊಂಡು ಬರುವ ಜವಾಬ್ಧಾರಿ ನನ್ನದು. ಯೋಚಿಸಬೇಡಿ” ಎಂದರು ಗೌರಮ್ಮ. ಒಂದು ತಿಂಗಳ ಒಳಗೆ ಎಲ್ಲಾ ಏರ್ಪಾಡಾಡುಗುವುದು ಸಾಧ್ಯವಿರಲಿಲ್ಲ. ‘ಭರತ್ ಬಂದು ಹೋದ ನಂತರ ಶಿಫ್ಟ್ ಆಗುವುದು’ ಎಂದುಕೊಂಡರು ರಾಜಲಕ್ಷ್ಮಿ.ಹೇಳಿದ್ದಂತೆ ಭರತ್-ಇಂದಿರಾ ಆ ತಿಂಗಳ...
ಭಾರತೀಯ ನಾರಿಯರ ಉಡುಪಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ಸಲುವಾಗಿ ಪ್ರತೀ ವರ್ಷ ದಶಂಬರ 21ರಂದು ವಿಶ್ವ ಸೀರೆಯ ದಿನವನ್ನಾಗಿ ಆಚರಿಸುವ ಪದ್ಧತಿಯು ಜಾರಿಗೆ ಬಂದು; ಅಪ್ಪಟ ಭಾರತದ ಉಡುಗೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಿರುವುದು ನಮಗಂತೂ ಹೆಮ್ಮೆಯ ವಿಚಾರ! ನೇಕಾರರ ಸಮುದಾಯವನ್ನು ಮತ್ತು...
ನಿನ್ನ ಕಣ್ಣ ಕವಣೆಯ ಏಟಿಗೆ ಬಿದ್ದ ಹಣ್ಣು ನಾನುನೆಲ ಮುಟ್ಟಲಿಲ್ಲ, ಬಿದ್ದಿದ್ದು ನಿನ್ನೆದೆಗೆ.ನಿನ್ನ ಹೃದಯದ ಸದ್ದಾಗಿ ಅಲ್ಲೇ ಕುಳಿತೆ. ನಿನ್ನೆದೆಯ ಪರಿಮಳವ ಅರಸಿ ಬಂದಿಹ ದುಂಬಿ ನಾನುಝೇಂಕರಿಸಿ ಝೇಂಕರಿಸಿ ಸುತ್ತಿ ಸುಳಿಯುತ್ತಮಧುಹೀರುವಾಸೆಯಲಿ ಅಲ್ಲೇ ಕುಳಿತೆ. ನಿನ್ನ ಚಂಚಲದೃಷ್ಟಿಗೆ ಬಿದ್ದ ಮೀನು ನಾನುಬಲೆಯಿಲ್ಲ, ಗಾಳವಿಲ್ಲ, ಸಿಲುಕಿದ್ದು ನಿನ್ನ ಮನದೊಳಗೆಈಜಲಾರದೆ...
ಚಪ್ಪಾಳೆಯ ಸದ್ದು ಮಾರ್ದನಿಸುವ ಈ ಕ್ಷಣದಲಿಕಳೆದ ಸಂಕ್ರಮಣದ ದಿನಗಳು ಕಣ್ಣುಮುಂದೆ ಬರುತ್ತಿವೆ ಮೆಚ್ಚುಗೆ ಮಾತುಗಳಿಗೆ ಉಬ್ಬಿದ ಎದೆಯಿಂದು ಹಗುರವಾಗಿಕಡು ಕಷ್ಟದ ಹಾದಿಯ ನೆನೆಯುತ್ತಿದೆ ಸವಿನಿದ್ರೆ ಕಾಣದ ಕಣ್ಣುಗಳಲಿ ಆನಂದ ಬಾಷ್ಪ ಸುರಿಯುತ್ತಿದೆಹಬ್ಬಹರಿದಿನಗಳ ಬಿಟ್ಟ ಮನ ಈಗ ಸುಗ್ಗಿ ಸಂಭ್ರಮವ ಅನುಭವಿಸುತ್ತಿದೆ ತಾಳದ ಒತ್ತಡಕೆ ತಾಪಗೊಂಡ ಮೈ ಮನಸ್ಸುಗಳುಅಭಿನಂದನೆಯ...
27. ಸಪ್ತಮ ಸ್ಕಂದ – ಅಧ್ಯಾಯ – 4ವರ್ಣಾಶ್ರಮ ಧರ್ಮ ನಾರದರು ಧರ್ಮರಾಜನಿಗುಪದೇಶಿಸಿದಮಾನವ ಧರ್ಮ, ಸಕಲ ಮಾನವ ಕುಲಕೆದಾರಿದೀಪ ಸತ್ಯ, ಭೂತದಯೆ, ಜಪಸ್ನಾನಾದಿಗಳಿಂದದೇಹಶುದ್ಧಿಉಚಿತ ಕಾಲ – ಋತುಕಾಲದಲಿ ಮಾತ್ರಸ್ವಸ್ರ್ತೀಯ ಸಂಬಂಧಮನಸ್ಸು, ಮಾತು, ಕಾಯಗಳಲಿವ್ಯತ್ಯಾಸವಿಲ್ಲದ ಏಕರೂಪತೆಚರಾಚರಸಮಸ್ತ ಭೂತಗಳಲಿಜೀವಾತ್ಮದ ಇರುವಿಕೆಮತ್ತವನ ಅಂತರ್ಯಾಮಿಯಾಗಿಪರಮಾತ್ಮನಿಹನೆಂಬರಿವುತನ್ನೆಲ್ಲ ಕತೃತ್ವವ ಭಗವಂತಗೆ ಅರ್ಪಿಸಿಅನನ್ಯ ಶರಣ್ಯನಾಗೆಜನ್ಮಸಾರ್ಥಕ್ಯ ಪಡೆವುದು ನಿಶ್ಚಿತ...
”ಎಷ್ಟು ಸಲ ತೂಗಿ,ಸರಿ ತೂಕ ನೋಡುವುದು; ಒಂದಿಷ್ಟು ಹೆಚ್ಚು ಬಂದರೇನೀಗ ಆ ಟೊಮೆಟೋ ತೂಕಕ್ಕೆ….!?”ತರಕಾರಿಯವನ ಬಳಿ ತಕರಾರುಮಾಡುತ್ತಿದ್ದ ಆ ಮುದುಕಿಯನ್ನು ನೋಡಿದ ವಸುಂಧರಾ ತನ್ನ ಖರೀದಿ ತೀರಿಸಿ ನಡು ನೆಟ್ಟಗೆ ಮಾಡಿ ಇತ್ತ ತಿರುಗಿದ ಆ ವೃದ್ಧೆಯನ್ನು ಬೆರಗಾಗಿ ನೋಡಿದಳು!. “ಓಹ್…,ಕನಕಮ್ಮ ನೀವಾ?”“ಹೌದು.., ನೀನು ವಸುಂಧರಾ ತಾನೇ?...
ನಿಮ್ಮ ಅನಿಸಿಕೆಗಳು…