Daily Archive: January 16, 2025
ಜನವರಿ 15ರಂದು ಭಾರತದಲ್ಲಿ ಸೇನಾದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 15, 1949 ಫೀಲ್ಡ್ ಮಾರ್ಶಲ್ ಕೋಡಂದೆರ ಮಾದಪ್ಪ ಕಾರಿಯಪ್ಪನವರು, ಭಾರತೀಯ ಸೈನ್ಯದ ಪ್ರಥಮ ಪ್ರಧಾನ ದಂಡನಾಯಕರಾಗಿ ಅಧಿಕಾರವಹಿಸಿಕೊಂಡರು. ಅಲ್ಲಿಯವರೆಗೆ ಬ್ರಿಟೀಷ್ ಅಧಿಕಾರಿ ಜನರಲ್ ಫ್ರಾನ್ಸಿಸ್ ಬುಶರ್ ಪ್ರಧಾನ ದಂಡನಾಯಕನಾಗಿ ಅಧಿಕಾರವಹಿಸಿಕೊಂಡಿದ್ದರು.(ಈತ ಭಾರತೀಯ ಸೈನ್ಯದ ಕೊನೆಯ ಬ್ರಿಟೀಷ್ ದಂಡನಾಯಕ). ಫೀಲ್ಡ್...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ನಾಲ್ಕು ದಿನದೊಳಗೆ ನೂತನ್‌ಮೆಲ್ ಒಪ್ಪಿಗೆ ಸಿಕ್ಕಿತು.ಗೋದಾಮಣಿ, ಮಧುಮತಿ, ಭವಾನಿ ಕುಳಿತು ಚರ್ಚಿಸಿ ಕೆಲಸ ಹಂಚಿದರು. ಒಂದು ವಾರ ಕಳೆಯಿತು. ಒಂದು ದಿನ ಗೌರಮ್ಮ ಕೆಲಸಕ್ಕೆ ಬರಲಿಲ್ಲ. ಫೋನ್ ಮಾಡಿದರೂ ಫೋನ್ ತೆಗೆಯಲಿಲ್ಲ. ಚಿನ್ಮಯಿ ಕೂಡ ಕಾಲ್ ರಿಸೀವ್ ಮಾಡಲಿಲ್ಲ. ಗೌರಮ್ಮ ಅದೇ ಏರಿಯಾದಲ್ಲಿದ್ದಾರೆಂದು...
26.ಸಪ್ತಮ ಸ್ಕಂದ – ಅಧ್ಯಾಯ 2-3ಪ್ರಹಾದ ಚರಿತ್ರೆ -2 ಬೆಳೆವ ಪೈರಿನ ಗುಣಮೊಳಕೆಯಲ್ಲೆಂಬಂತೆಹಿರಣ್ಯಕಶ್ಯಪು ಖಯಾದು ಪುತ್ರಪ್ರಹ್ಲಾದ ಜನ್ಮತಃ ದೈವಭಕ್ತಸದಾ ಧ್ಯಾನಮಗ್ನ ಪ್ರಹ್ಲಾದನ ದೈವಭಕ್ತಿಕೇವಲ ಹರಿಭಕ್ತಿಯೆಂದರಿತಗುರುಗಳು ಚಂಡಾವರ್ಕರಿಗೆಆಘಾತ ಉಂಟಾಗಿ, ಭಯಭಿತರಾಗಿಹಿರಣ್ಯಕಶ್ಯಪನಿಗೆಹೆದರುತ್ತಲೇ ಪ್ರಹ್ಲಾದನಹರಿಭಕ್ತಿಯನ್ನರುಹಿದಾಗ,ಕಶ್ಯಪ ಕ್ಷುದ್ರಗೊಂಡುಪ್ರಹ್ಲಾದನಿಗೆನಿನಗೆ ಹರಿಭಕ್ತಿಯ. ದುರ್ಬುದ್ಧಿಯಕಲಿಸಿದವರ್ಯಾರು?ಎಂದಾರ್ಭಟಿಸಿದಾಗ,ಶಾಂತಚಿತ್ತದಿಂ ಉತ್ತರಿಸಿದಪ್ರಹ್ಲಾದ ನುಡಿ ಅನನ್ಯ ಹರಿಭಕ್ತಿಯೆಂಬುದುಜನ್ಮಜನ್ಮಾಂತರದನಿರಂತರ ಪ್ರಯಾಣದಿಪಂಚೇಂದ್ರಿಯ ವಿಷಯ ಭೋಗದಿಂದಿರ್ಪಜೀವಿಗೆ ಲಭಿಸಿದ ಹರಿಭಕ್ತಿಅರಿಶಡ್ವರ್ಗಗಳ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಮೂರನೆಯ ದಿನ..17/09/2024 ವಿಯೆಟ್ನಾಂನಲ್ಲಿ ನಮ್ಮ ಮೂರನೆಯ ದಿನವಾದ 17/09/2024 ರಂದು ಬೆಳಗಾಯಿತು. ಆ ದಿನ ನಾವು ಬೆಳಗಿನ ಉಪಾಹಾರದ ನಂತರ ‘ಹಾಲಾಂಗ್ ಬೇ’ ಎಂಬಲ್ಲಿಗೆ ಹೋಗಬೇಕಿತ್ತು. ಸ್ಥಳೀಯ ‘ಹಲೋ ಏಶಿಯಾ ಟ್ರಾವೆಲ್ ‘ ಸಂಸ್ಥೆಯಿಂದ ನಮ್ಮ ಅಂದಿನ ಮಾರ್ಗದರ್ಶಿ ‘ಲಾರಿ’ ಎಂಬವರು...
ಭಾರತೀಯ ಬಾಹ್ಯವಿಜ್ಞಾನ ಸಂಶೋಧನಾ ಸಂಸ್ಥೆ_ಇಸ್ರೋಗೆ 1984-1994ರ ವರೆಗೆ ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದು ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಮಾರ್ಗದರ್ಶನ ನೀಡಿ ಸಂಸ್ಥೆಯನ್ನು ಬೆಳಸಿದವರು ‘ಉಪಗ್ರಹ ಪಿತಾಮಹ’ ಎಂದೇ ಪ್ರಖ್ಯಾತರಾಗಿದ್ದ ಡಾ.ಉಡುಪಿ ರಾಮಚಂದ್ರರಾವ್. ಜನಸಾಮಾನ್ಯರಿಗೆ ಪ್ರೊ.ಯು.ಆರ್.ರಾವ್ ಎಂದೇ ಪರಿಚಿತರಾಗಿರುವ ಡಾ.ರಾವ್ ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದ ಉಡಾವಣೆಯ ಜವಾಬ್ದಾರಿಯನ್ನು...
ಬಾಲ್ಯಕಾಲದಲ್ಲಿ ಮೈಸೂರಿನ ಹಳ್ಳದಕೇರಿ (ಈಗಿನ ಮಹಾವೀರನಗರ) ವಠಾರದ ಮನೆಯಲ್ಲಿದ್ದಾಗ ಮಾತು ಮಾತಿಗೆ ‘ಚಟ್ನಿಮನೆ’ ಎಂದು ಎಲ್ಲರೂ ಕರೆಯುವ ನಿಗೂಢಕ್ಕೆ ನಾನು ಭಯವಿಹ್ವಲನಾಗಿದ್ದೆ. ವಾಸ್ತವವಾಗಿ ನಮ್ಮ ವಠಾರದ ಹುಡುಗರೇ ಹೆಚ್ಚೂಕಡಮೆ ಮೂವತ್ತು ಮಂದಿ ಇದ್ದೆವು. ಗಿಲಾವು ಮಾಡದ ಗೋಡೆಗಳು ಕುಸಿದು, ತೆಂಗಿನಗರಿ ಮತ್ತು ಕಲ್ನಾರು ಶೀಟುಗಳಿಂದ ಮುಚ್ಚಿದ್ದ ಆ...
ದಿಕ್ಕು ದಿಶೆಯಲೂನೂರು ಬಿಂಬಗಳುಪ್ರತಿಬಿಂಬದ ನೆರಳುಅಂದುಕೊಳ್ಳದಯಾರೂ ಮರೆಯದಹೀಗೊಂದು ಸಾಲು ಬದುಕ ಹಣತೆಗೆಬೆಳಕಾಗಿ ಕಾಣುವಮಾತು ಮಾತಿಗೆಹಾಡಾಗಿ ಉಳಿವಕಾವ ಕಲ್ಪನೆಯಕೂಸಾಗಿ ಇರುವಹೀಗೊಂದು ಸಾಲು ಇಳೆಯ ನೆರಳಲ್ಲಿತಂಪು ಚೆಲ್ಲಿದ ನೆನಪುಪ್ರತಿ ಕವಿತೆಯೂಒಲವಿನ ರೂಪಕಪದವೇ ಸಗ್ಗವಾಗಿಉಳಿವ ಕೌತುಕವೇಹೀಗೊಂದು ಸಾಲು……… -ನಾಗರಾಜ ಬಿ. ನಾಯ್ಕ, ಕುಮಟಾ +3
ಸರ್ವವ್ಯಾಪಿಯಾಗಿರುವ ಮೊಬೈಲ್ ಕೈಯಲ್ಲಿ ಇದ್ದರೆ ಬೇರೆ ಯಾರೂ ಒಟ್ಟಿಗೆ ಇರಬೇಕೆಂದಿಲ್ಲ ಆದರೆ ನೆಟ್ವರ್ಕ್ ಮಾತ್ರ ಇರಬೇಕು ಅಷ್ಟೇ. ಅಳುವ ಪುಟ್ಟ ಮಕ್ಕಳ ಕೈಯಲ್ಲಿ ಮೊಬೈಲ್ ಇಟ್ಟು ನೋಡಿ! ಅಳು ಮಂಗಮಾಯ. ಗೊತ್ತಿಲ್ಲದ, ಗುರುತು ಪರಿಚಯ ಇಲ್ಲದ ಸ್ಠಳಗಳಿಗೆ ಪ್ರಯಾಣಿಸುವಾಗ ಮೊಬೈಲಿನಲ್ಲಿ ನಾವು ಹೋಗಬೇಕಾದ ಜಾಗವನ್ನು ಗೂಗಲ್ ಮ್ಯಾಪ್...
ಗಾಢನಿದ್ರೆಯಲ್ಲಿದ್ದ ನನ್ನನ್ನು ಯಾರೋ ಜೋರಾಗಿ ಅಲುಗಾಡಿಸಿದಂತಾಗಿ ಗಾಭರಿಯಿಂದ ಗಡಿಬಡಿಸಿಕೊಂಡು ಎದ್ದೆ. ಪಕ್ಕದಲ್ಲಿ ಮಲಗಿದ್ದ ನನ್ನಾಕೆ ಸಹನಾ ಗರ ಬಡಿದಂತೆ ಎದ್ದು ಕುಳಿತಿದ್ದಾಳೆ.“ಸಹನಾ, ಏನಾಯಿತೇ? ಏಕೆ? ಏನಾದರೂ ಕೆಟ್ಟ ಕನಸು ಬಿತ್ತೇ?” ಎಂದೆ.ಊಹುಂ ಮಾತಿಲ್ಲ ಕತೆಯಿಲ್ಲ, ಬರಿಯ ಕೈಸನ್ನೆ. ಛಳಿಗಾಲದಲ್ಲೂ ಬೆವರಿನಿಂದ ಒದ್ದೆಮುದ್ದೆಯಾಗಿದ್ದಾಳೆ. ಸ್ಟೂಲಿನ ಮೇಲಿಟ್ಟಿದ್ದ ಜಗ್ಗಿನಿಂದ ಲೋಟಕ್ಕೆ...
ಡಿಸೆಂಬರ್ 21 ರ ವಿಶ್ವ ಸೀರೆ ದಿನದ ಪ್ರಯುಕ್ತ ಡಾ. ಎಚ್. ಆರ್ ಮಂಜುರಾಜ್ ಅವರ ನೀರೆಯ ಸೀರೆ ಲೇಖನಕ್ಕೆ ಸುರಹೊನ್ನೆಯ ಅಡ್ಮಿನ್ ರವರಾದ ಶ್ರೀಮತಿ ಹೇಮಮಾಲಾ ರವರು ಅಭಿನಂದನೆಗಳನ್ನು ತಿಳಿಸುತ್ತಾ” ಇನ್ನೂ ಸುರಹೊನ್ನೆ ಬಳಗದ ನಾರಿಯರು ಬರೆದು ಮುಯ್ಯಿ ತೀರಿಸಿಕೊಳ್ಳದಿದ್ದರೆ ಸೀರೆಗೆ ಅವಮಾನ ಮಾಡಿದಂತೆ...
ನಿಮ್ಮ ಅನಿಸಿಕೆಗಳು…