Author: K M Sharanabasavesha
ಉರಿಯುವ ದೀಪ ದಿಟ್ಟಿಸುತಾ ಅದರ ಬೆಳಕಲ್ಲಿಕರಗಿ ಯೋಚಿಸುವೆ…..ಕಳೆದ ದಿನಗಳ ಬಗ್ಗೆ……… ಒಮ್ಮೊಮ್ಮೆ ಅಂದುಕೊಳ್ಳುವೆ,ಕಾಲದ ಚಕ್ರ ಹಿಮ್ಮುಖವಾಗಿ ಚಲಿಸಿ ಹಿಂದಿನ ದಿನಗಳಿಗೆ ಹೋದರೆ….ಘಟಿಸಿದ ಘಟನೆಗಳ ಬದಲಿಸಲುಅಲ್ಲ ಬದಲಿಗೆ ಆ ಕಳೆದ ಕ್ಷಣಗಳ ಸವಿಯನ್ನುಮತ್ತೊಮ್ಮೆ ಮನಸಾರೆ ಅನುಭವಿಸಬೇಕೆಂದು….. ಒಮ್ಮೊಮ್ಮೆ ಅಂದುಕೊಳ್ಳುವೆ,ಮತ್ತೊಮ್ಮೆ ಎನ್ನ ತಾಯಿಯ ಮಡಿಲಲ್ಲಿ ಮಗುವಾಗಬೇಕೆಂದುಎಲ್ಲರೂ ಎತ್ತಿಕೊಂಡು ಮುದ್ದಾಡಲಿಎಂದಲ್ಲ ಬದಲಿಗೆ...
ಬೇಸರದ ಕಟ್ಟೆಯೊಡೆದು ಮಾತುಗಳು ಪ್ರವಾಹದ ರೂಪದಲ್ಲಿ ಹೊರಬರಲಿನೇಸರನ ಬೆಳಕಂತೆ ಪ್ರೀತಿ ಪ್ರೇಮ ತುಂಬಿ ಹರಿಯಲಿ ಮುಗ್ಧ ಮಗುವಿನ ತೊದಲು ನುಡಿಗಳು ಇಲ್ಲದ ಬಿಗುಮಾನ ನೀಗಿಸಲಿದಗ್ಧ ಹೃದಯಗಳ ನೋವು ದೂರವಾಗಿ ಹಾಸ್ಯ ಚಿಲುಮೆ ಚಿಮ್ಮಲಿ ವಯಸ್ಸಾದಂತೆ ಯಾರು ಎಮ್ಮ ಆಸ್ತಿ ಹಣಕ್ಕೆ ಆಸೆಪಡುವುದಿಲ್ಲಭರವಸೆಯ ಮಾತು ಮೊಗದ ತುಂಬಾ ನಗುವ...
ಭಾರತದ ಅಸ್ಮಿತೆಯ ಬಾಪೂಜಿಯ ಬಿಟ್ಟು ನೋಡಲಾದಿತೇಈ ದೇಶದ ಇತಿಹಾಸವ ಆ ಸಂತನ ಹೆಜ್ಜೆ ಗುರುತಿಲ್ಲದೆ ಬರೆಯಲಾದಿತೇ ಈ ನೆಲದ ಬಡವನಿಗೆ ಇಲ್ಲದ ಸೌಲಭ್ಯ ಎನಗೆ ಬೇಡವೆಂದ ಜನ ನಾಯಕತಾನು ಸ್ವತಃ ಆಚರಿಸಿ ತತ್ವ ಆದರ್ಶಗಳ ಬೋಧಿಸಿದ ಆಧ್ಯಾತ್ಮದ ಹರಿಕಾರ ಚಾರಿತ್ರ್ಯವಿಲ್ಲದ ಶಿಕ್ಷಣವ ಖಂಡಿಸಿದ ಭವ್ಯ ಪರಂಪರೆಯ ರಾಯಭಾರಿದುಡಿಮೆಯಿಲ್ಲದ...
ಜರುಗುವ ಪ್ರತಿಕ್ಷಣಕೊಬ್ಬರಂತೆ ಬಿಡುತಿಹರು ಈ ಜಗವನು ಆಳಿದ ಅರಸನಿಲ್ಲ ಬೇಡಿದ ಬಿಕ್ಷುಕನಿಲ್ಲಬೀಗಿದ ಸಿರಿವಂತನಿಲ್ಲ ಮಾಗಿದ ಬಡವನು ಬದುಕಿ ಉಳಿದಿಲ್ಲ ಅರಿವಿಲ್ಲದೆ ನಿಂತಿರುವೆವು ನಾವೆಲ್ಲರೂ ಆ ಸಾಲಿನಲ್ಲೇನಮ್ಮ ಮುಂದೆ ಎಷ್ಟು ಮಂದಿಯಿರುವರು ಎಂದು ಗೊತ್ತಿಲ್ಲದೇ ಆ ಸಾಲಿನ ಕೊನೆಗೆ ನಿಲ್ಲೋಣವೆಂದರೆ ಸಾಧ್ಯವಿಲ್ಲಸಾಲನು ತೊರೆದು ಹೋಗೋಣವೆಂದರೆ ಅನುಮತಿಯಿಲ್ಲ ಸಾಲೇ ಬೇಡವೆನ್ನಲು...
ಹದವಾಗಿ ಮಳೆ ಬಂದು ಮೇಲೆ ಹೂ ಬಿಸಿಲು ಕಾದುಆಗಾಗ ಹನಿಯಿಕ್ಕುವ ವಾತವರಣದಲಿ ನಡೆದಿದೆ ಉಳುಮೆಯ ಯಜ್ಞ ಒಳಗಿರುವ ಮಣ್ಣ ನವಿರಾಗಿ ಹೊರ ಹಾಕಿ ಇಡೀ ಹೊಲದಲಿ ತುಂಬಿದೆ ಕೆಂಬಣ್ಣಹಬ್ಬಿರುವ ಸಣ್ಣ ಹುಲ್ಲು ಗಿಡಗಂಟಿ ಬುಡ ಸಮೇತ ಮೇಲೆ ಬಂದು ಒಳ ಸೇರುತಿದೆ ಬುವಿಯ ತುಂಬೆಲ್ಲಾ ಸಾಲು ಸಾಲು...
ಇಂದೇಕೋ ತುಂಬಾ ಜನ ನನ್ನ ಬಳಿ ಬಂದಿಹರುತಮ್ಮ ಹೊಲ ಗದ್ದೆಗಳಿಗೆ ಹೋಗದೆ ಎನ್ನ ಸುತ್ತಿ ನಿಂತಿಹರುಹುರಿಮೆ ತಮಟೆ ಮೇಳಗಳ ತಾಳಕೆ ಕೇಕೆ ಹಾಕಿ ಕುಣಿದಿಹರು ಗಂಡುಗೊಡಲಿ ಮಚ್ಚು ಹಿಡಿದು ಜಳಪಿಸುತಾ ಸುತ್ತಿಹರುಕಳಸ ಹಿಡಿದ ಹೆಂಗಳೆಯರು ಮುಂದೆ ಮುಂದೆಕತ್ತಿಗೆ ಹಗ್ಗ ಹಾಕಿ ನನ್ನೆಳೆಯುತಾ ಕೆಲವರು ಹಿಂದೆ ಹಿಂದೆ ಮನೆ...
ಅರಳಿ ಬೆಳಗುವ ಸುಮವೇ ಕೇಳು ಎನ್ನ ಮಾತಾ… ಸಭ್ಯತೆಯ ಸಂಸ್ಕೃತಿಯ ಚೌಕಟ್ಟಿನಲ್ಲಿರುವವರಗೆ ಮಾತ್ರನಿನ್ನ ಈ ಅಪರಿಮಿತ ಅಂದ ಚೆಂದಕ್ಕೆ ಬೆಲೆಕಣ್ಣ ತುಂಬಿಕೊಳ್ಳುವರು ಆಗ ನೋಡಿ ನಿನ್ನ ಜೀವ ಕಳೆ ಹೊಳೆಯುವ ಹಳದಿ ದಳಗಳ ಮೋಡಿ ಮನವ ಸೆಳೆಯಬೇಕುಕಡು ಹಸಿರು ಬಣ್ಣದ ದಂಟು ಎಲೆಗಳೊಂದಿಗೆ ನಿನ್ನ ತೋರಬೇಕು ಕಪ್ಪು...
ಕಣ್ಣ ತುಂಬಿದ ಕನಸುಕಣ್ಣೀರಿನ ಹನಿಯಾಗಿ ಜಾರಿ ಹೋಗದಿರಲಿ ದುಃಖ ಭರಿತ ಮನಸ್ಸಲ್ಲಿಭರವಸೆಗಳು ಬತ್ತಿ ಒಣಗದಿರಲಿ ಭಾರವಾದ ಹೃದಯದಲಿನಾಳೆಗಳೆಂಬ ಮಿಡಿತಗಳು ನಿಲ್ಲದಿರಲಿ ಮೇಲೇಳಲಾಗದ ಹೆಜ್ಜೆಗಳಲಿ ಬದುಕೆಂಬ ತಾಳ ತಪ್ಪದಿರಲಿ ಎಲ್ಲರ ಬಾಳಲ್ಲಿ ಕವಿದ ಮೋಡಗಳು ಕರಗುವವು ಬದಲಾವಣೆಯ ವರ್ಷಮೈ ಮನಗಳಲಿ ತುಂಬುವುದು ಮತ್ತೆ ತುಟಿ ಕಚ್ಚಿ ಬದುಕುವ ಛಲಸಕಲ...
ಬೆಳಗೆದ್ದ ಕೂಡಲೇ ಎಂದಿನಂತೆ ದರ್ಪಣ ನನ್ನ ಕೂಗಿ ಕರೆದಿತ್ತುಮೂಡಿದ ಪ್ರತಿಬಿಂಬ ಎನ್ನ ಕಂಡು ಗಹಗಹಿಸಿ ನಕ್ಕಿತ್ತು ಸಾಲು ನೆರೆಗಟ್ಟಿದ ಮುಖ ಒಣಹುಲ್ಲಿನಂತ ಬಿಳಿ ಕೂದಲುಕೊಕ್ಕೆಯಂತೆ ಮೇಲಕ್ಕೆ ಬಾಗಿದ ಬೊಚ್ಚು ಬಾಯಿನತ್ತು ಸಿಕ್ಕಿಸಿದ ಗೊಪ್ಪೆಯಂತ ಮೂಗು ಮನ ಬಿಡದೆ ತಾರುಣ್ಯದ ದಿನಗಳ ನೆನೆದಿತ್ತುತಿದ್ದಿ ತೀಡಿದ ಮುಂಗುರುಳು ಮಾವಿನಕಾಯಿ ಮಾಟದ...
ಗೌಜು ಗದ್ದಲ ನಡೆದಿತ್ತು ಆಸ್ತಿ ಹಂಚಿಕೆಗಾಗಿಸುಕ್ಕುಗಟ್ಟಿದ ಹಿರಿಯ ಜೀವ ಮೌನದಿಂದಿತ್ತು ಮರ್ಯಾದೆಗಾಗಿ ನೀರಾವರಿಯ ಗದ್ದೆಗೆ ನನಗಿರಲಿ ಎಂದು ಹಿರಿಮಗಫಸಲು ಕೊಡುವ ಅಡಕೆ ತೋಟ ನನಗೆ ಬೇಕು ಎಂದು ಮಧ್ಯದವ ಮೇಲುಮುದ್ದೆಯ ಕಂಬದ ಮನೆಗೆ ಜೋತು ಬಿದ್ದ ಕಿರಿಯವನಮಗೂ ಆಸ್ತಿಯಲ್ಲೂ ಪಾಲು ಬೇಕೆಂದು ಸೀರೆ ಮೇಲೆ ಸಿಕ್ಕಿಸಿ ನಿಂತ ಹೆಣ್ಣುಮಕ್ಕಳು...
ನಿಮ್ಮ ಅನಿಸಿಕೆಗಳು…