Author: Lalitha S, lalithaskp16@gmail.com
ಕಣ್ತೆರೆದಾಗ ಕಂಡಿದ್ದು ಸುತ್ತ ಇದ್ದ ಕತ್ತಲು. ಭಯದಿಂದ ದನಿಯೇ ಹೊರಡದಂತಾಗಿತ್ತು. ನಿಧಾನವಾಗಿ ಸುತ್ತಲಿದ್ದ ಎಲ್ಲವೂ ಕಾಣುವಂತಾಗಿದ್ದು ಬೆಳಕು ಮೂಡಿದಾಗಲೇ. ಬೆಚ್ಚಗಿದ್ದ ಗೂಡಿನೊಳಗೆ ನಾನಿದ್ದೆ. ಅಮ್ಮ ತಂದು ಬಾಯಿಗಿಟ್ಟ ಆಹಾರವನ್ನು ಗುಟುಕರಿಸಿದಾಗ ಹಸಿವು ಅಡಗಿ ನಿದ್ದೆ ಸೆಳೆದಿತ್ತು. ಕಣ್ಮುಚ್ಚಿದ್ದೆ. ಮತ್ತೆ ಕಣ್ಣು ತೆರೆದಾಗ ಬೆಳಕು ಮಾಯವಾಗಿತ್ತು. ಮತ್ತದೇ ಕತ್ತಲು....
ಮುಸುಕಿನೊಳಗೆ ಸೇರಿದ್ದಾಗ ಒಳಗೆ ಅದೇನೋ ತಳಮಳ. ಅದೊಂದು ಮುಂಜಾನೆ ಮುಸುಕಿನೊಳಗಿಂದ ಹೊರಬಂದು ಮೊಗ್ಗಾಗಿದ್ದೆ. ಕೊರೆಯುವ ಛಳಿಯಲ್ಲೂ ಹಿತವಾದ ಅನುಭವ. ಹೊರಗೆ ಬಂದು ಉಸಿರಾಡುವ ಆ ಹೊತ್ತಿನಲ್ಲಿ ಬಂಧನದಿಂದ ಬಿಡುಗಡೆಗೊಂಡ ಭಾವ. ನಿಧಾನವಾಗಿ ಕಣ್ತೆರೆಯುತ್ತಿದ್ದಂತೆ ಮೊಗದ ಮೇಲೆ ಬಿದ್ದ ಆ ಬೆಳಕು ನಾನೆಲ್ಲಿರುವೆ ಎನ್ನುವುದನ್ನು ತೋರಿಸಿತ್ತು. ಸುತ್ತಲಿನ ಎಲ್ಲವೂ...
ಆಕಾಶ ನೋಡೋಕೆ ನೂಕುನುಗ್ಗಲೇಕೆ?-ಎನ್ನುವ ಮಾತನ್ನು ಕೇಳಿದಾಗಲೆಲ್ಲ, ಆಕಾಶವನ್ನು ಅದೇಕೆ ಇಷ್ಟೊಂದು ಅಗ್ಗವೆಂದು ಭಾವಿಸಿದ್ದಾರೆ ಎನ್ನುವ ಅನುಮಾನ ಮೂಡುವುದರ ಜೊತೆಗೆ ಸಿಟ್ಟೂ ಬರುತ್ತದೆ. ನನ್ನದೇನಿದ್ದರೂ ಸಾತ್ವಿಕ ಸಿಟ್ಟು ಅಷ್ಟೇ. ವಿಸ್ತೀರ್ಣದಲ್ಲಿ ಮತ್ತು ಸೌಂದರ್ಯದಲ್ಲಿ ಭೂಮಿಯ ಜೊತೆಗೆ ಸ್ಪರ್ಧಿಸುವಂತಿರುವ ಆಕಾಶದ ಬಗೆಗೆ ಉದಾಸೀನತೆಯ ಭಾವ ಸರಿಯೇ? ಇದು ನನ್ನನ್ನು ಕಾಡುವ...
ಅದೊಂದು ಭಾನುವಾರ, ಬೆಳಗಿನ ಹತ್ತರ ಸಮಯ. ಬಸ್ಸಿನಲ್ಲಿ ವಾಮಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದೆ. ನೀವು ಎಡಪಂಥೀಯರೇ ಎಂದು ನನ್ನನ್ನು ನೀವು ಕೇಳಬಹುದು. ಹೌದು, ವಾಹನದಲ್ಲಿ ಕುಳಿತುಕೊಳ್ಳುವಾಗ ನಾನು ಎಡಪಂಥದವಳೇ ಆಗಿರುತ್ತೇನೆ, ಕಾರಣ ಪ್ರಕೃತಿಯನ್ನು ಹತ್ತಿರದಿಂದ ವೀಕ್ಷಿಸುವ ಆಸೆ. ಬಾಲ್ಯದ ಆ ಚಟ ನನ್ನಿಂದ ಇನ್ನೂ ದೂರವಾಗಿಲ್ಲ. ಕಿಟಕಿಯ ಪಕ್ಕ...
ನಿಮ್ಮ ಅನಿಸಿಕೆಗಳು…