ನಾನು
ನಿನ್ನ ಕಣ್ಣ ಕವಣೆಯ ಏಟಿಗೆ ಬಿದ್ದ ಹಣ್ಣು ನಾನು
ನೆಲ ಮುಟ್ಟಲಿಲ್ಲ, ಬಿದ್ದಿದ್ದು ನಿನ್ನೆದೆಗೆ.
ನಿನ್ನ ಹೃದಯದ ಸದ್ದಾಗಿ ಅಲ್ಲೇ ಕುಳಿತೆ.
ನಿನ್ನೆದೆಯ ಪರಿಮಳವ ಅರಸಿ ಬಂದಿಹ ದುಂಬಿ ನಾನು
ಝೇಂಕರಿಸಿ ಝೇಂಕರಿಸಿ ಸುತ್ತಿ ಸುಳಿಯುತ್ತ
ಮಧುಹೀರುವಾಸೆಯಲಿ ಅಲ್ಲೇ ಕುಳಿತೆ.
ನಿನ್ನ ಚಂಚಲದೃಷ್ಟಿಗೆ ಬಿದ್ದ ಮೀನು ನಾನು
ಬಲೆಯಿಲ್ಲ, ಗಾಳವಿಲ್ಲ, ಸಿಲುಕಿದ್ದು ನಿನ್ನ ಮನದೊಳಗೆ
ಈಜಲಾರದೆ ಅಲ್ಲೇ ಕುಳಿತೆ.
ಬೆಂಬಿಡದೆ ಕಾಡುತ್ತಿವೆ ಪ್ರೇಮ ವೈರಾಗ್ಯಗಳು
ನಾನು ಉನ್ಮತ್ತ ಪ್ರೇಮಿ, ಕಾವಿ ತೊಡದ ವಿರಾಗಿ.
ನಿನಗೆ ಅಚ್ಚರಿಯಾಯ್ತೇ?
ನಿನ್ನತ್ತ ಬಂದಾಗ ಪ್ರೇಮಿ,
ನಿನ್ನುಳಿದು ಎಲ್ಲ ತೊರೆದ ವಿರಾಗಿ.
-ಲಲಿತ ಎಸ್
Opposite poles
Nice
ಚೆನ್ನಾಗಿ ದೆ
ಆಂತರ್ಯದಲ್ಲಿ ಅಡಗಿರುವ ಒಂದು ಪ್ರೇಮ ನಿವೇದನೆಯ ಕವನೆ ಅರ್ಥಪೂರ್ಣ ವಾಗಿದೆ ಗೆಳತಿ ಲಲಿತಾ
Thanks to Smt.Sudha, Smt. Nayana, Smt. Vidya and Smt. Nagarathna
Lalitha S
ಸೊಗಸಾದ ಕವಿತೆ.
ಚಂದದ ಪ್ರೇಮ ಕವಿತೆ
“ನಿನ್ನತ್ತ ಬಂದಾಗ ಪ್ರೇಮಿ, ಇನ್ನುಳಿದು ಎಲ್ಲ ತೊರೆದ ವಿರಾಗಿ” ಎಂತಹ ಚಂದದ ಸಾಲುಗಳು. ಉತ್ಕಟ ಪ್ರೇಮ ಗೀತೆಯಾಯ್ತು ನಿಮ್ಮ ಕವಿತೆ.