ಸಾಧಕರ ಮನದಾಳ
ಚಪ್ಪಾಳೆಯ ಸದ್ದು ಮಾರ್ದನಿಸುವ ಈ ಕ್ಷಣದಲಿ
ಕಳೆದ ಸಂಕ್ರಮಣದ ದಿನಗಳು ಕಣ್ಣುಮುಂದೆ ಬರುತ್ತಿವೆ
ಮೆಚ್ಚುಗೆ ಮಾತುಗಳಿಗೆ ಉಬ್ಬಿದ ಎದೆಯಿಂದು ಹಗುರವಾಗಿ
ಕಡು ಕಷ್ಟದ ಹಾದಿಯ ನೆನೆಯುತ್ತಿದೆ
ಸವಿನಿದ್ರೆ ಕಾಣದ ಕಣ್ಣುಗಳಲಿ ಆನಂದ ಬಾಷ್ಪ ಸುರಿಯುತ್ತಿದೆ
ಹಬ್ಬಹರಿದಿನಗಳ ಬಿಟ್ಟ ಮನ ಈಗ ಸುಗ್ಗಿ ಸಂಭ್ರಮವ ಅನುಭವಿಸುತ್ತಿದೆ
ತಾಳದ ಒತ್ತಡಕೆ ತಾಪಗೊಂಡ ಮೈ ಮನಸ್ಸುಗಳು
ಅಭಿನಂದನೆಯ ಸವಿಗಾಳಿಗೆ ತಂಪಾಗುತ್ತಿವೆ
ಕಠಿಣ ಸ್ಪರ್ಧೆಯಲಿ ದಣಿವಿಲ್ಲದೆ ಓಡಿದ ಚೇತನಕ್ಕಿಂದು
ಪುರಸ್ಕಾರದ ಸಾಂತ್ವಾನ ದೊರೆಯುತ್ತಿದೆ
ಸಣ್ಣ ಸಣ್ಣ ಸವಾಲುಗಳಲಿ ಸೋಲುಂಡ ಜೀವಕ್ಕಿಂದು
ದೊರೆತ ಯಶಸ್ಸು ಅಮೃತ ಸಿಂಚನಗೊಳಿಸಿದೆ
ವಿಫಲತೆಯ ಗುರಿಯಾಗಿಸಿ ತೂರಿಬಂದ ಮೂದಲಿಕೆ ಮಾತುಗಳ
ಜಾಗದಲಿ ಪ್ರಶಂಸೆಯ ನುಡಿಗಳು ಕೇಳಿ ಬರುತ್ತಿವೆ
ಉಳಿ ಪೆಟ್ಟು ತಿಂದ ಶಿಲೆಯೇ ಶಿಲ್ಪವಾಗುವುದೆಂಬ
ಪರಮ ಸತ್ಯ ಈಗ ಅರಿವಾಗುತ್ತಿದೆ
ಪರಿಶ್ರಮದೀ ಪಡೆದ ವಿಜಯಕೆ ಜಗವೇ ಬೆರಗಾಗಿ
ಜಯಘೋಷ ಮೊಳಗಿಸುತ್ತಿದೆ
ಸಕಲ ಸೌಲಭ್ಯ ನೀಡಿದ ಸಮಾಜಕ್ಕೆ ಕೃತಜ್ಞತೆಯ ಭಾವದಿಂದ ನಮಿಸುತ್ತಿದೆ ಈ ಮನ
-ಶರಣಬಸವೇಶ ಕೆ. ಎಂ
ಚೆನ್ನಾಗಿದೆ
ಕವನ ಚೆನ್ನಾಗಿದೆ.. ಸಾರ್
Super sir
ಯಶಸ್ಸಿನ ಉತ್ತುಂಗಕ್ಕೇರಿದ ಶ್ರೀ ಮನಸ್ಥಿತಿ ಬಿಂಬಿಸುವ ಚಂದದ ಕವನ
ಜೀವನದಲ್ಲಿ ಪಡೆದ ಗೆಲುವಿನಿಂದ ಸಾರ್ಥಕಭಾವ ಮೂಡಿದ ಕವಿ ಮನ ಧನ್ಯತೆಯನ್ನು ಹೊಂದಿದೆ…ಚಂದದ ಕವನದ ರೂಪದಲ್ಲಿ…
ಓದಿ ಪ್ರತಿಕ್ರಿಯೆ ನೀಡಿದ ಎಲ್ಲಾ ಸಹೃದಯರಿಗೆ ಧನ್ಯವಾದಗಳು. ಪ್ರಕಟಿಸಿದ ಹೇಮಮಾಲಾ ಮೇಡಂ ಗೆ ನಮಸ್ಕಾರ.
ಉಳಿ ಪೆಟ್ಟು ತಿಂದ ಶಿಲೆಯು ಶಿಲ್ಪವಾಗುವ ಪರಿಯನ್ನು ಚೆನ್ನಾಗಿ ಬಣ್ಣಿಸಿದ್ದೀರಾ
ನಿಜಕ್ಕೂ ಒಬ್ಬ ಸಾಧಕನ ಮನದಾಳದ ಮಾತುಗಳಿಲ್ಲಿ ಕವಿತೆಯ ರೂಪದಲಿ ʼಅಹುದಹುದುʼ ಎಂಬಂತೆ ವಿಜೃಂಭಿಸಿವೆ.