Author: Ma.Na.Latha Mohan
ಕುಂಡಿನಿ ಹಾಗೂ ಕಪಿಲಾ ನದಿಗಳ ಸಂಗಮ ತೀರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ. ನಂಜನಗೂಡಿನ ಹಿಂದಿನ ಹೆಸರು ಗರಳಪುರಿ. ಗರಳ ಎಂದರೆ ವಿಷ ಅರ್ಥಾತ್ ಹಾಲಾಹಲ. ಈ ಹಾಲಾಹಲವನ್ನೇ ಕುಡಿದ ನಂಜುಂಡ ನೆಲೆಸಿಹ ಪುಣ್ಯಭೂಮಿಯೇ ನಂಜನಗೂಡು. ನಂಜನಗೂಡು ಶ್ರೀಕ್ಷೇತ್ರ ನಂಜುಂಡೇಶ್ವರನಿಗೆ ಮೀಸಲಾಗಿರುವ ದೊಡ್ಡ ದೇವಸ್ಥಾನಕ್ಕೆ ಹೆಸರುವಾಸಿಯಾಗಿದ್ದು, ಯಾತ್ರಿಗಳ...
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವ ಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಪೂಜೆ ಮಾಡಿ ತಮ್ಮ ಪಾಪವನ್ನು ಪರಿಹರಿಸಿಕೊಂಡು ಮೋಕ್ಷ ದೊರಕುತ್ತದೆಂಬುದು ಬಲವಾದ...
ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ತನ್ನ ಬುದ್ಧಿವಂತಿಕೆಯನ್ನು ಸೀಮಿತಗೊಳಿಸುತ್ತಾ ಬದುಕಿನ ಬುತ್ತಿಯನ್ನು ಬಿಚ್ಚುವ ಮೊದಲೇ ಕಮರಿ ಹೋಗುವ ಎಷ್ಟೋ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ. ಮಹಿಳೆ ಇಂದು ಬಹಳ ಕಷ್ಟಪಟ್ಟು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಿದ್ದರೂ ಅವಳಿಗೆ ವೈಜ್ಞಾನಿಕ ಕ್ಷೇತ್ರದಲ್ಲಿ ದಾಪುಗಾಲಿಡಲು ಕಷ್ಟಸಾಧ್ಯವೆ ಆಗಿದೆ. ಪ್ರೋತ್ಸಾಹದ...
ಪ್ರೇಮಿಗಳ ದಿನವನ್ನು ವಿರೋಧಿಸಿಯೇ ಅದನ್ನು ಇಷ್ಟೊಂದು ಜನಪ್ರಿಯಗೊಳಿಸಿರುವುದು ಒಂದು ರೀತಿ ಹಾಸ್ಯಾಸ್ಪದವೆನಿಸಿದರೂ ಇದು ನಂಬಲೇ ಬೇಕಾದ ಕಟು ಸತ್ಯ. ಯಾವುದೇ ವಿಷಯವನ್ನಾದರೂ ಅತೀ ಹೆಚ್ಚಾಗಿ ಪ್ರಚಾರ ನೀಡುತ್ತಾ ಬಂದರೆ ಅದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಪ್ರೇಮಿಗಳ ದಿನಾಚರಣೆ ವರ್ಷದಿಂದ ವರ್ಷಕ್ಕೆ ತನ್ನದೇ ಆದ ರೀತಿಯಲ್ಲಿ...
ಕನ್ನಡ ಸಾಹಿತ್ಯ ಲೋಕದಲ್ಲಿ “ತ್ರಿವೇಣಿ” ಎಂಬ ಹೆಸರಿಗೆ ಮಹತ್ವದ ಸ್ಥಾನ ಇಂದಿಗೂ ಇದೆ. ಅವರು ಬರೆದಿರುವ ಕೃತಿಗಳು ಅಲ್ಪವೇ ಆದರೂ ಮಾಡಿರುವ ಹೆಸರು ಮುಗಿಲೆತ್ತರ. ಮಹಿಳಾ ಲೇಖಕಿಯರಲ್ಲಿ ಇಂದಿಗೂ ಅಗ್ರಸ್ಥಾನದಲ್ಲಿರುವ ತ್ರಿವೇಣಿಯವರ ಕೃತಿ “ಅವಳ ಮನೆ ” ಅವರ ಎಲ್ಲಾ ಕಾದಂಬರಿಗಿಂತಲೂ ಭಿನ್ನವಾಗಿದೆ. ಕತೆಯ ಓಟ ಸ್ವಲ್ಪ...
ಜನವರಿ 15ರಂದು ಭಾರತದಲ್ಲಿ ಸೇನಾದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 15, 1949 ಫೀಲ್ಡ್ ಮಾರ್ಶಲ್ ಕೋಡಂದೆರ ಮಾದಪ್ಪ ಕಾರಿಯಪ್ಪನವರು, ಭಾರತೀಯ ಸೈನ್ಯದ ಪ್ರಥಮ ಪ್ರಧಾನ ದಂಡನಾಯಕರಾಗಿ ಅಧಿಕಾರವಹಿಸಿಕೊಂಡರು. ಅಲ್ಲಿಯವರೆಗೆ ಬ್ರಿಟೀಷ್ ಅಧಿಕಾರಿ ಜನರಲ್ ಫ್ರಾನ್ಸಿಸ್ ಬುಶರ್ ಪ್ರಧಾನ ದಂಡನಾಯಕನಾಗಿ ಅಧಿಕಾರವಹಿಸಿಕೊಂಡಿದ್ದರು.(ಈತ ಭಾರತೀಯ ಸೈನ್ಯದ ಕೊನೆಯ ಬ್ರಿಟೀಷ್ ದಂಡನಾಯಕ). ಫೀಲ್ಡ್...
ಶ್ರೀ ವರಸಿದ್ಧಿ ವಿನಾಯಕ ವ್ರತ ಅಥವಾ ಗಣೇಶ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸುತ್ತಾರೆ. ಗೌರಿ ಗಣೇಶ ಹಬ್ಬವು ವಿಶೇಷವಾಗಿ ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆಚರಿಸಲ್ಪಡುವಂತಹ ಅತೀ ಪ್ರಾಮುಖ್ಯ ಹಬ್ಬವಾಗಿದೆ. ಉತ್ತರ ಭಾರತದಲ್ಲಿ ಇದನ್ನು ಹರತಲಿಕಾ ಎಂದು ಕರೆಯಲಾಗುತ್ತದೆ. ಬೆಳ್ಳಿ...
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಶ್ರೀ ಕೃಷ್ಣಾಷ್ಟಮಿಯು ವೈಷ್ಣವರ ಪಾಲಿಗೆ ಅತ್ಯಂತ ದೊಡ್ಡ ಹಬ್ಬ. ಚಾಂದ್ರಮಾನ ಪಂಚಾಂಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ ಶ್ರೀಕೃಷ್ಣನು ಸೌರಮಾನ ಪಂಚಾಂಗ ರೀತ್ಯಾ ಸಿಂಹಮಾಸದಲ್ಲಿ ಹುಟ್ಟಿದನೆಂಬ ಪ್ರತೀತಿ ಇದೆ. ಇದಲ್ಲದೇ ವರಾಹ ಪುರಾಣದ ಪ್ರಕಾರ...
ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದೇ ಮೊದಲ ಬಾರಿಗೆ ಯೋಗ ದಿನಾಚರಣೆಗೆ ಮಹತ್ವ ನೀಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿ ಎಂದು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿ. ನಾಗೇಶ್ ಬೆಟ್ಟಕೋಟೆ ಅವರು ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ...
ನಿಮ್ಮ ಅನಿಸಿಕೆಗಳು…