Daily Archive: June 5, 2025

12

ಪುನರುತ್ಥಾನದ ಪಥದಲ್ಲಿ: ಹೆಜ್ಜೆ 30

Share Button

ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ  10:ಬಯೋನ್ ಮಂದಿರ, ಅಪ್ಸರಾ ನೃತ್ಯ ಊಟದ ನಂತರ, ಮಾರ್ಗದರ್ಶಿ ನಮ್ಮನ್ನು ಸುಮಾರು 4 ಕಿಮೀ ದೂರದಲ್ಲಿದ್ದ , ಖ್ಮೇರ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ‘ಆಂಗ್ ಕೋಟ್ ಥಾಮ್’ ಗೆ ಕರೆತಂದ. ಇಲ್ಲಿರುವ ಬಯೋನ್ ಮಂದಿರವು ತನ್ನ ವಿಶಿಷ್ಟವಾದ ಸಂಕೀರ್ಣ ವಾಸ್ತುಶಿಲ್ಪಕ್ಕಾಗಿ ಪ್ರಸಿದ್ಧವಾಗಿದೆ. 12 ನೆಯ...

9

ಪರಿಸರ ; ಸರಸರ ; ಅವಸರ !?

Share Button

ಪ್ರತಿ ವರುಷ ಜೂನ್ ಐದರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. ಅರಿವು, ಜಾಗೃತಿ ಮತ್ತು ನೂತನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಂಡುಕೊಳ್ಳುವ ಪರಿಹಾರೋಪಾಯಗಳೇ ಇದರ ಸದಾಶಯ. 1973 ರಿಂದಲೂ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಜಗತ್ತಿನಾದ್ಯಂತ ಆಚರಿಸಲಾಗುವುದು. ಭಾಷಣ, ಲೇಖನ, ಪ್ರಚಾರೋಪನ್ಯಾಸಗಳ ಮೂಲಕ, ಶಾಲಾ ಕಾಲೇಜುಗಳಲ್ಲಿ ಚರ್ಚೆ, ಪ್ರಬಂಧ, ಭಿತ್ತಿಚಿತ್ರ...

9

ವಾಟ್ಸಾಪ್ ಕಥೆ 62 : ಹೊಂದಾಣಿಕೆ.

Share Button

ಹೊಸದಾಗಿ ವಿವಾಹವಾದ ಮದುಮಗಳು ಗಂಡನ ಮನೆಗೆ ಬಂದಳು. ಮನೆಯಲ್ಲಿ ಆಕೆಯ ಅತ್ತೆ, ಮೈದುನ ಮತ್ತು ಪತಿ ಅಷ್ಟೇ ಜನರ ಸಂಸಾರ. ಆಕೆ ಅತ್ತೆಯ ಮೇಲ್ವಿಚಾರಣೆಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅತ್ತೆಯು ಇವಳು ಮಾಡುವ ಕೆಲಸಗಳಲ್ಲಿ ಏನಾದರೂ ತಪ್ಪು ಕಂಡುಹಿಡಿದು “ಹೀಗೆ ಮಾಡಿದರೆ...

12

ಅಸಾಧಾರಣ ಪ್ರತಿಭೆಯ ಸಂಶೋಧಕ ಯುವ ವಿಜ್ಞಾನಿ ಡಾ.ಕೆ. ರವಿರಾಂ

Share Button

ದೂರದ ಲಕ್ನೋವಿನಲ್ಲಿ ಕೇಂದ್ರ ಸರ್ಕಾರದ ಒಂದು ದೊಡ್ಡ ಸಂಸ್ಥೆಯಾಗಿ ಸಿಎಸ್ಐಆರ್-ಭಾರತೀಯ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ ಇದೆ. ಅರ್ಥಾತ್ ಇಲ್ಲಿ ವಿಷವಿಜ್ಞಾನದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಒಬ್ಬ ಯುವ ವಿಜ್ಞಾನಿ ಇಲ್ಲಿ ವೃತ್ತಿಯಲ್ಲಿದ್ದಾರೆ. ಇವರ ಹೆಸರು ಡಾ. ರವಿರಾಂ ಕ್ರಿಸ್ಟಿಪಾಟಿ, ಪ್ರಿನ್ಸಿಪಲ್ (ಮುಖ್ಯ) ವಿಜ್ಞಾನಿ...

5

ಕಾವ್ಯ ಭಾಗವತ 46: ಬಲಿ-ವಾಮನ- 2

Share Button

ಅಷ್ಟಮ ಸ್ಕಂದ – ಅಧ್ಯಾಯ – 3:- ಬಲಿ – ವಾಮನ – 2:- ಜನನ ಮರಣಗಳ ಕೋಟಲೆಗೆ ಒಳಪಡದನಾರಾಯಣದೇವಕಾರ್ಯ ನಿರ್ವಹಿಸಲುಅದಿತಿಯ ಉದರದಿಂವಾಮನನಾಗಿ ಜನಿಸಿದ ಪರಿನೋಡು ನೋಡುತ್ತಿದ್ದಂತೆಯೇಪಂಚವರ್ಷಗಳ ವಟುವಾಗಿಸಕಲ ಉಪನಯನ ಸಂಸ್ಕಾರವನು ಪಡೆದುತನ್ನ ಅವತಾರದುದ್ಧೇಶ ಪೂರೈಸಲುಯಜ್ಞಾದೀಕ್ಷಿತನಾದ ಬಲಿಚಕ್ರವರ್ತಿಯಯಜ್ಞಶಾಲೆಯ ಪ್ರವೇಶಿಸೆ ಸಭೆಯಲ್ಲಿದ್ದಬಲಿ ಚಕ್ರವರ್ತಿಯೂ ಬ್ರಾಹ್ಮಣೋತ್ತಮರೂಚಕಿತರಾಗಿಸೂರ್ಯಾಗ್ನಿಯನು ಮೀರುವ ತೇಜಸ್ಸಿನವಟುವನ್ನು ನೋಡಿಮೂಕವಿಸ್ಮಿತರಾಗೆಬಲಿಯು...

5

 ತಂಬಾಕು ಮುಕ್ತ ಬದುಕು ನಮ್ಮದಾಗಲಿ

Share Button

ಪ್ರತೀವರ್ಷ ಮೇ 31 ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ 1987 ರಿಂದ ಆಚರಿಸಲು ವಿಶ್ವ ಆರೋಗ್ಯ ಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. ಈ ವಿಶ್ವ ತಂಬಾಕು ರಹಿತ ದಿನದ ಆಚರಣೆಯ ಮೂಲ ಉದ್ದೇಶ ಆರೋಗ್ಯಕ್ಕೆ, ಪರಿಸರಕ್ಕೆ ಮಾರಕವಾಗಿ ಸಾವಿನ ಕೂಪಕ್ಕೆ ದೂಡುವ ತಂಬಾಕಿನ...

7

ಅವನ ಮನಸ್ಸು

Share Button

“ಅಮ್ಮಾ…. ಕಾಲೇಜಿಗೆ ಹೋಗಿ ರ‍್ತೀನಿ, ಬರೋದು ಸ್ವಲ್ಪ ಲೇಟಾಗುತ್ತೆ”“ಹೌದಾ?”“ಹೂಂ, ಈವತ್ತು ನನ್ನ ಫ್ರೆಂಡ್ ಬರ್ತಡೇ ಇದೆ, ಅದಕ್ಕೇ ನಮಗೆಲ್ಲಾ ಪಾರ್ಟಿ ಕೊಡಿಸ್ತೀನಿ ಅಂದಿದ್ದಾಳೆ.”“ಸರಿಯಮ್ಮ, ಆದ್ರೂ ತುಂಬಾ ಲೇಟ್ ಮಾಡ್ಕೋಬೇಡ ಕಣೆ ಸಿರಿ.”“ಆಯ್ತು, ಆದಷ್ಟು ಬೇಗ ರ‍್ತೀನಿ, ತಲೆಕೆಡಿಸ್ಕೋಬೇಡ.”ಮಗಳನ್ನು ಕಾಲೇಜಿಗೆ ಕಳಿಸಿಕೊಟ್ಟು ಲೀಲಾವತಿ ಒಳಗೆ ಬಂದರು, ಅಡಿಗೆ ಮನೆಗೆ...

14

ಅವನಿಲ್ಲ ಇವನಿಲ್ಲ ಯಾರಿಲ್ಲ

Share Button

ಅವನಿಲ್ಲ ಇವನಿಲ್ಲ ಯಾರಿಲ್ಲಇಲ್ಲಿ ನಮಗೆ ನಾವೇ ಎಲ್ಲಅಲ್ಲಿಲ್ಲ ಇಲ್ಲಿಲ್ಲ ಇನ್ನೆಲ್ಲೂ ಇಲ್ಲಅರಿತುಕೊಳ್ಳಬೇಕು ನಾವು ನಮ್ಮೊಳಗೆ  ಇಲ್ಲದ್ದೇನಿಲ್ಲಹುಡು ಹುಡುಕಿಕೊಂಡಷ್ಟುಲಭ್ಯವಿರುವಷ್ಟು ನಮ್ಮದಾಗುವುದುಇಲ್ಲದೆ ಇರುವುದರ ಚಿಂತೆ ಬಿಟ್ಟುಇರುವುದರಲ್ಲಿ ತಿಂದುಂಡು ಒಂದಿಷ್ಟುಹಂಚಬೇಕು ನಾವಿಲ್ಲಿ ಸಾಧ್ಯವಾದಷ್ಟುಕೂಡಿಟ್ಟದ್ದು ಕೂಡಿಟ್ಟಲ್ಲಿ ಕೆಟ್ಟುಹಳಸಿ ಹಾಳಾಗಿ ಹೋಗುವುದುಬಿತ್ತಿದ್ದು ಗಿಡವಾಗಿ ಮರವಾಗಿಹೂವನ್ನು ಬಿಟ್ಟು ಕಾಯಿ ಹಣ್ಣಾಗುವುದುಬಾಳಿಗೆ ಜೊತೆಯಾಗುವುದು ನಮ್ಮೊಳಗಿನ ಒಳ್ಳೆಯ ಸಂಬಂಧಹಳಸಿದಷ್ಟು...

13

ಅರಳು ಸಂಡಿಗೆ ಅರಳು…ಬಿರಿದು ರುಚಿಯನು ನೀಡು

Share Button

ಓ, ಏನಪ್ಪಾ ಇದು, ಜನಪ್ರಿಯ ಗೀತೆಯ ಪಲ್ಲವಿಯನ್ನೇ ಸ್ವಲ್ಪ ಬದಲಾವಣೆ ಮಾಡಿ, ಶೀರ್ಷಿಕೆ ಇಟ್ಟುಬಿಟ್ಟಿದ್ದಾರಲ್ಲಾ . .  ಎಂದುಕೊಳ್ಳಬೇಡಿ.  ಆ ಹಾಡಿನಲ್ಲಿ “ಅರಳು ಮಲ್ಲಿಗೆ ಅರಳು”ವಿನ ಎರಡೂ “ಅರಳು”ಗಳಿಗೂ ಒಂದೇ ಅರ್ಥ ಚಿಗುರು, ಪಲ್ಲವಿಸು ಅಂತ.  ಆದರೆ ಈ ನನ್ನ ಸಂಡಿಗೆಯ ಶೀರ್ಷಿಕೆಯ ಎರಡು “ಅರಳು”ಗಳಿಗೂ ವಿಭಿನ್ನ...

Follow

Get every new post on this blog delivered to your Inbox.

Join other followers: