ಮೌನದಲೇ ಒಲವೂಡುವೆ ; ಇದು ನನ್ನದೇ ಆಯ್ಕೆ
ಏಕೆಂದರೆ ನನಗದರಲಿ ತಿರಸ್ಕಾರದ ಭಯವಿರದು
ಏಕಾಂತದಲಿದ್ದೇ ಇಷ್ಟಪಡುವೆ ; ಏಕೆಂದರೆ ಇದು
ಸಹ ನನ್ನದೇ, ನನ್ನ ವಿನಾ ಬೇರಾರಿಗೂ ಹಕ್ಕಿರದು
ದೂರವಿದ್ದೇ ಆರಾಧಿಸುವೆ ; ಸಮೀಪವಾಗದೇ !
ಏಕೆಂದರೆ ಇದರಿಂದ ಯಾರಿಗೂ ನೋವಾಗದು !!
ಬೀಸಿ ಬಹ ತಂಗಾಳಿಯಲೇ ಕಚಗುಳಿಯಿಡುವೆ,
ಏಕೆಂದರೆ ಇದು ನನ್ನ ಅಧರಕಿಂತಲೂ ಮೃದು !!
ನಿನ್ನ ನನ್ನ ಕನಸುಗಳಲೇ ಅಪ್ಪಿ ಮುದ್ದಾಡುವೆ
ಕಾರಣ , ನನ್ನ ಮಧುರ ಸ್ವಪ್ನದಲಿ ನಿನಗೆ ಮುಪ್ಪೇ ಬರದು !
ಪರ್ಷಿಯನ್ ಮೂಲ : ಜಲಾಲ್ ಉದ್ ದೀನ್ ರೂಮಿ
ಇಂಗ್ಲಿಷಿನಿಂದ ಕನ್ನಡೀಕರಣ : ಡಾ. ಹೆಚ್ ಎನ್ ಮಂಜುರಾಜ್ , ಮೈಸೂರು


ಅನುವಾದದ ರೂಮಿ ಕವಿತೆ ಅರ್ಥಪೂರ್ಣ ವಾಗಿ ಬಂದಿದೆ ಮೂಲಲೇಖಕರು ಅನುವಾದಕ ದಿಬ್ಬ ರಿಗೂ ವಂದನೆಗಳು…ಸಾರ್
Beautiful
ಅನುವಾದಿತ ಕವನವು ಅರ್ಥಪೂರ್ಣವಾಗಿದೆ.
ಗುರೂಜಿ
ಪ್ರೇಮಿಗಳ ದಿನಕ್ಕೊಂದು ಪ್ರೇಮ ಕವನ
ಮೌನದಲೇ…ಒಲವೂಡುವೆ beautiful ಅನುವಾದ
Very romantic… ಅನುವಾದವೂ ಸೊಗಸಾಗಿದೆ
Good morning sir,
ಭಾವಾನುವಾದ ತುಂಬಾ ಪ್ರೇಮಮಯವಾಗಿದೆ.
ರೂಮಿ ಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಹಾಗೆಯೇ ರೂಮಿಯ ಮತ್ತಷ್ಟು ಕವನಗಳನ್ನು ಕನ್ನಡೀಕರಿಸಬೇಕಾಗಿ ತಮ್ಮಲ್ಲಿ ವಿನಯಪೂರ್ವಕ ಮನವಿ
ಪ್ರೇಮ ಪೂರ್ಣ ಕವಿತೆಯೂ ಅದರ ಅನುವಾದವೂ ಸೊಗಸಾಗಿ ಮೂಡಿ ಬಂದಿದೆ.