Monthly Archive: May 2025

17

ಅಪ್ಪನ ಆಪ್ತ ನೆನಪುಗಳು…

Share Button

ಎಲ್ಲಾ ಸಾಹಿತ್ಯಾಭ್ಯಾಸಿಗಳಿಗೂ ತಮ್ಮ ನೆಚ್ಚಿನ ಸಾಹಿತಿ ಮತ್ತು ಕವಿಗಳ ಬಗೆಗೆ ಒಂದು ಆಕರ್ಷಣೆಯಿದ್ದೇ ಇರುತ್ತದೆ. ನಮ್ಮೆದುರು ಒಂದು ಸುಂದರ ಕಲ್ಪನಾಲೋಕವನ್ನು ಕಟ್ಟಿಕೊಡುವ ಈ ಸೃಜನಶೀಲರ ಬದುಕಿನ ಬಗ್ಗೆ ಕುತೂಹಲವಿರುತ್ತದೆ. ಹಲವು ಹತ್ತು ಪರಿಚಿತರ ಬರಹಗಳಿಂದ, ಮಾತುಗಳಿಂದ, ಆಪ್ತಜನಗಳು ಕಟ್ಟಿಕೊಟ್ಟ ವಿವರಗಳಿಂದ, ಎಲ್ಲರ ಅನಿಸಿಕೆಗಳನ್ನೂ ನಮ್ಮಲ್ಲೇ ಮಥಿಸಿ ಕವಿಯ...

10

ಪುನರುತ್ಥಾನದ ಪಥದಲ್ಲಿ: ಹೆಜ್ಜೆ 29

Share Button

ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ 10:ಆಂಗ್ ಕೋರ್ ವಾಟ್ …ಟಾ  ಪ್ರೋಮ್ ಆಂಗ್ ಕೋರ್ ವಾಟ್ ನ ಉದ್ದವಾದ ಹೊರಾಂಗಣದ ಗೋಡೆಯಲ್ಲಿ ರಾಮಾಯಣ , ಮಹಾಭಾರತದ ಕಥೆಗಳನ್ನು ಬಿಂಬಿಸುವ ಉಬ್ಬುಶಿಲ್ಪಗಳಿವೆ. ನಮ್ಮ ಮಾರ್ಗದರ್ಶಿ ಚನ್ಮನ್ ಗೋಡೆಯಲ್ಲಿದ್ದ ಕೆಲವು ಉಬ್ಬುಶಿಲ್ಪಗಳನ್ನು ತೋರಿಸುತ್ತಾ, ಇದು ಸಮುದ್ರ ಮಥನ, ಅದು ಕುರುಕ್ಷೇತ್ರ ಯುದ್ದ, ಇವನು...

9

ಅಸೀಮ ‘ಅನಂತ’ ಅಮೇಯ !

Share Button

ಅಸೀಮ ಎಂದರೆ ಎಲ್ಲೆಕಟ್ಟಿಲ್ಲದ ಅನಿಕೇತನ ಚೇತನ. ಅನಂತ ಎಂದರೆ ಇಂಥದೊಂದು ಚೈತನ್ಯಕ್ಕೆ ಅಂತ್ಯವೇ ಇಲ್ಲ; ದಣಿವೆಂಬುದೇ ಗೊತ್ತಿಲ್ಲ! ಅಮೇಯ ಎಂದರೆ ಅಳತೆಗೇ ಸಿಗದ ಎಂದು. ಈ ಮೂರೂ ಮುಪ್ಪುರಿಗೊಂಡ ಆದರೆ ಮುಪ್ಪಿಲ್ಲದ ಭಾರತೀಯ ಚಲನಚಿತ್ರ ರಂಗ ಕಂಡ ಅನನ್ಯ ಮತ್ತು ಅದ್ಭುತ ಕಲಾಪ್ರತಿಭೆ ನಮ್ಮ ಅನಂತನಾಗ್. ಅವರ...

7

 ಅತ್ರಿಪುತ್ರ ದೂರ್ವಾಸ ಮಹರ್ಷಿ

Share Button

ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ  ಬರುವ ಪಾತ್ರಗಳು ನಮಗೆ ಮಹತ್ತರ ಆಶ್ವಾಸನೆ ನೀಡುತ್ತವೆ. ನಮ್ಮ ಮನದೊಳಗೆ ಬಿಂದುವಾಗಿದ್ದ  ಬುದ್ಧಿಯನ್ನು ಊದಿ ಊದಿ ಸಿಂಧುವಾಗಿಸುವ ಶಕ್ತಿ ಅವುಗಳಿಗಿದೆ. ಆದರೆ ಅವುಗಳನ್ನು ಉಪಯೋಗಿಸಿ ಕೊಳ್ಳುವ ತಾಕತ್ತು ನಮಗಿರಬೇಕು. ಎಷ್ಟೊಂದು  ಸದ್ವಿಚಾರಗಳು! ಏನೆಲ್ಲ ನೀತಿಗಳು! ತರತರದಲ್ಲಿ ತತ್ವಗಳು! ಅವುಗಳನ್ನು ಮನನ ಮಾಡುವ ಮನಸ್ಸು...

9

ಕಾವ್ಯ ಭಾಗವತ 45: ಬಲಿ –1

Share Button

ಅಷ್ಟಮ ಸ್ಕಂದ – ಅಧ್ಯಾಯ – 3ಬಲಿ – 1 : ಬಲಿ ದೈತ್ಯ ಚಕ್ರವರ್ತಿದೇವ ದಾನವ ಯುದ್ಧಗಳಲಿಸೋತು ಸುಣ್ಣವಾಗಿ ಸತ್ತರೂಗುರು ಶುಕ್ರಚಾರ್ಯರ ತಪಃ ಶಕ್ತಿಯಿಂದಮತ್ತೆ ಮತ್ತೆ ಬದುಕಿನಿರ್ಣಾಯಕ ಸಮಯದಲಿಮಾಯಾ ಯುದ್ಧದಿ ದೇವತೆಗಳಬಗ್ಗು ಬಡಿದುದೇವೇಂದ್ರ ತನ್ನ ಸಕಲ ಪರಿವಾರದೊಡನೆಅಮರಾವತಿಯ ತ್ಯಜಿಸಲುಬಲಿ, ಸ್ವರ್ಗರಾಜಾಧಿಪತ್ಯದಲಿಮಹಾವೈಭವದಿ ಮೆರೆಯಲು ದೇವಮಾತೆಯಾದ ಅದಿತಿ ದೇವಿತನ್ನ...

20

ಬೇಸಗೆಯ ಒಂದು ರಾತ್ರಿ.

Share Button

ಅಬ್ಬಬ್ಬಾ ! ಏನಪ್ಪಾ ವಿಪರೀತ ಸೆಖೆ, ತಡೆದುಕೊಳ್ಳಲಾಗುತ್ತಿಲ್ಲ, ಸ್ವಲ್ಪ ಹೊರಗಡೆ ಹೋಗಿ ತಣ್ಣನೆಯ ಗಾಳಿಯಲ್ಲಿ ಕುಳಿತರೆ ಹಾಯೆನ್ನಿಸಬಹುದು ಎಂದು ಗುಂಡಪ್ಪ ಹೊರಗೆ ಬಂದರು. ಪಕ್ಕದಲ್ಲೇ ಇದ್ದ ಕಲ್ಲು ಚಪ್ಪಡಿಯ ಮೇಲೆ ಕಾಲು ಚಾಚಿಕೊಂಡು ಕುಳಿತುಕೊಂಡರು. “ಅಬ್ಬಾ ಜೀವಕ್ಕೆ ಈಗ ಸ್ವಲ್ಪ ಸಮಾಧಾನವಾಯ್ತು” ಎನ್ನುತ್ತಾ ಕಣ್ಣುಗಳನ್ನು ಅತ್ತ ಇತ್ತ...

10

ಚಿತ್ರಕವನ: ಬೀದಿಗೆ ಬಿದ್ದ ದೇವರು

Share Button

ತನ್ನನ್ನೇ ಗೊ೦ಬೆಯಾಗಿಸಿ ಮಾರಿಸಿಕೊಳ್ಳುವ ದೇವರ ಆಟ…ಎಷ್ಟು ಮೋಹಕ..ಇದನರಿಯದ ಆ ಮುಗ್ದ ತಾಯಿಯ ನೋಟ…ಕಲಿಯಬೇಕಿದೆ ಇವಳಿ೦ದ ನಾವೊ೦ದು ಪಾಠ… ಕ೦ಕುಳು ಆಶ್ರಯಿಸಿ ಸರಗು ಹಿಡಿದಿರುವ ಮುದ್ದು ಕ೦ದ ಬೇಡುತಿದೆತಲೆಯೇರಿ ಕುಳಿತಿರುವ ಗೊ೦ಬೆಗಳೇ ನನ್ನಮ್ಮನ ಭಾರ ಇಳಿಸಿ…ತಬ್ಬಿ ಮುದ್ದಿಸಲಿ ಅವಳ ಎರಡೂ ಕೈಗಳೂ ನನ್ನನ್ನು ಬಳಸಿ… ಅಮ್ಮ ನಕ್ಕು ನುಡಿದಿಹಳು..ಬಿಗಿ...

14

 ಮತ್ತೆ ಮಳೆ ಹನಿ…….

Share Button

ಆ ಮುಗಿಲ ಮಾಲೆಯಲಿಹನಿ ಹನಿಯ ತೋರಣಇಡಿ ಬುವಿಯೊಳಗೆತುಂಬಿದ ನಗುವಿನ ಔತಣ ಮಣ್ಣೊಳಗೆ ರಂಗೋಲಿಬೇರು ಹಬ್ಬುವ ಪರಿಮರದೊಳಗೆ ಚಿತ್ತಾರಹರಿವ ನೀರಿನ ಝರಿ ಸುತ್ತು ಸುತ್ತುಗಳ ನಡುವೆಹಸಿರು ತುಂಬಿದ ಚಿಗುರುಇಳೆಯ ಎಳೆಯೊಳಗೆನೆಲ ತುಂಬುವ ನೆರಳು ಸೊಬಗೆಲ್ಲಾ ನೋಟಪಿಸುಮಾತಿನ ತಂಗಾಳಿಗೆಜಗವೆಲ್ಲಾ ತೊಯ್ದ ಸಂತಸಮತ್ತೆ ಬಿದ್ದ ಮಳೆ ಹನಿಗೆ –ನಾಗರಾಜ ಬಿ.ನಾಯ್ಕಹುಬ್ಬಣಗೇರಿ ,ಕುಮಟಾ. +7

5

ಪುನರುತ್ಥಾನದ ಪಥದಲ್ಲಿ: ಹೆಜ್ಜೆ 28

Share Button

ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ 9/10:ಆಂಗ್ ಕೋರ್ ವಾಟ್ … ಮಧ್ಯಾಹ್ನದ ಊಟ ಮುಗಿಸಿ, ತುಸು ವಿರಮಿಸಿ, ಸಂಜೆ ಸೀಮ್ ರೀಪ್ ನದಿಯ ಆಸುಪಾಸಿನಲ್ಲಿ ವಾಕಿಂಗ್ ಮಾಡಿದೆವು. ಮಾರ್ಗದರ್ಶಿ ಚನ್ಮನ್ ನಮ್ಮ ಬಳಿ , ಪಗೋಡಾದ ಪಕ್ಕದಲ್ಲಿಯೇ ಹೋದರೆ ‘ ಕರ್ರಿ ಕಿಂಗ್’ ರೆಸ್ಟಾರೆಂಟ್ ಸಿಗುತ್ತದೆ. ಅಲ್ಲಿ ನಮಗೆ...

9

ವಾಟ್ಸಾಪ್ ಕಥೆ 61: ಪರಿಹಾರ.

Share Button

ಒಂದೂರಿನಲ್ಲಿ ಒಂದು ಸಿಹಿನೀರಿನ ಬಾವಿಯಿತ್ತು. ಊರಿನ ಜನರೆಲ್ಲ ಅದೇ ಬಾವಿಯ ನೀರನ್ನೇ ಕೊಂಡೊಯ್ದು ಬಳಸುತ್ತಿದ್ದರು. ಒಂದುದಿನ ಒಬ್ಬ ಬೆಳಗ್ಗೆ ನಸುಕಿನಲ್ಲಿ ನೀರು ಸೇದಲು ಬಾವಿಯ ಹತ್ತಿರ ಬಂದನು. ಗಾಲಿಯ ಮೇಲಿಂದ ಹಗ್ಗವನ್ನು ಹಾಕಿ ಬಿಂದಿಗೆಗೆ ಕುಣಿಕೆ ಬಿಗಿದು ಬಾವಿಯೊಳಕ್ಕೆ ಬಿಡಲು ಬಗ್ಗಿದನು. ಅವನಿಗೆ ಬಾವಿಯ ನೀರಿನಲ್ಲಿ ಏನೋ...

Follow

Get every new post on this blog delivered to your Inbox.

Join other followers: