ವಿಶೇಷ ದಿನ

ಆಕಾಶವಾಣಿಗೆ 90

Share Button

ಭಾರತದಲ್ಲೇ ಮೊಟ್ಟ ಮೊದಲ ಆಕಾಶವಾಣಿ ಖಾಸಗಿಯಾಗಿ ಆರಂಭವಾಗಿದ್ದು ಮೈಸೂರಿನಲ್ಲಿ ಪ್ರೊ. ಎಂ.ವಿ ಗೋಪಾಲಸ್ವಾಮಿಯವರು ಎಂಬ ಮೈಸೂರಿನ ಮಹಾರಾಜ ಕಾಲೇಜಿನ ಮನಃಶಾಸ್ತ್ರದ ಪ್ರಾಧ್ಯಾಪಕರು 1935ರ ಸೆಪ್ಟಂಬರ್ 10ರಂದು, ಕೆ.ಆರ್. ರಸ್ತೆಯಲ್ಲಿರುವ ಮೈಸೂರಿನ ಒಂಟಿಕೊಪ್ಪಲಿನ ವಿಠ್ಠಲ ವಿಹಾರ ಎಂಬ ತಮ್ಮ ಮನೆಯಲ್ಲಿ ಖಾಸಗಿಯಾಗಿ ಸ್ಥಾಪಿಸಿದ್ದರು.

ಭಾರತದ ಮೊತ್ತ ಮೊದಲ ಖಾಸಗಿ ಬಾನುಲಿ ಕೇಂದ್ರ ಎಂಬ ಹೆಗ್ಗಳಿಕೆ ಮೈಸೂರು ಆಕಾಶವಾಣಿಯದು. ರೇಡಿಯೋ ಪ್ರಸಾರ ವಿಶಾಲ ಜನಸ್ತೋಮವನ್ನು ಉದ್ದೇಶಿಸುವ ಬದಲು ಒಂದು ಸಣ್ಣ ಸಮುದಾಯದ ವಾಣಿಯಾಗಬೇಕು. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು ಎಂಬ ಆಶಯದಿಂದ ನ್ಯಾರೋಕ್ಯಾಸ್ಟಿಂಗ್ ಪ್ರಯೋಗ ಮಾಡಿದ ಕೀರ್ತಿ ಗೋಪಾಲಸ್ವಾಮಿ ಅವರಿಗೆ ಸಲ್ಲುತ್ತದೆ. ತಮ್ಮ ಗೃಹ ಬಾನುಲಿ ಕೇಂದ್ರವನ್ನು 1939ರಲ್ಲಿ ಅಂದಿನ ಮೈಸೂರು ದಸರಾ ವಸ್ತುಪ್ರದರ್ಶನದ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸಿದರು. ಮುಂದೆ ಆರ್ಥಿಕ ತೊಂದರೆಗಳಿಂದಾಗಿ ಅದರ ಆಢಳಿತ ಮತ್ತು ನಿರ್ವಹಣೆಯನ್ನು ಮೈಸೂರು ನಗರಪಾಲಿಕೆಗೆ ವಹಿಸಿದರು. ಮುಂದೆ ಆಕಾಶವಾಣಿ ಭಾರತದ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟನಂತರವೂ ಭಾರತದ ಎಲ್ಲಾ ರೇಡಿಯೋ ಕೇಂದ್ರಗಳೂ ಆಕಾಶವಾಣಿ ಎಂಬ ಹೆಸರನ್ನೇ ಬಳಸಿಕೊಂಡವು. 1944ರ ಫೆಬ್ರವರಿಯಿಂದ ಯಾದವಗಿರಿಯಲ್ಲಿ ಆಕಾಶವಾಣಿ ಕೇಂದ್ರಕ್ಕೆ ನಿಲಯ ಹೋಯ್ತು. 1955ರಲ್ಲಿ ಈ ಕೇಂದ್ರವನ್ನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಕಳಿಸಲಾಗಿತ್ತು. ಮತ್ತೆ ಮೈಸೂರು ಆಕಾಶವಾಣಿ 19 ವರ್ಷಗಳ ನಂತರ 1974ರ ನವೆಂಬರ್ 14ರಂದು ಪುನರ್ ಆರಂಭವಾಯಿತು.

ಫೆಬ್ರವರಿ 13 ರಂದು ‘ವಿಶ್ವ ರೇಡಿಯೋ ದಿನಾಚರಣೆ’ ವಿಶ್ವಸಂಸ್ಥೆಯ ಸಾಮಾನ್ಯ ಸಭೆ. 2012ರ ಡಿಸೆಂಬರ್‌ನಲ್ಲಿ ಈ ದಿನಾಚರಣೆ ಆರಂಭಿಸಲು ಕರೆಯಿತ್ತಿತ್ತು. 21-2-2012ರಂದು. ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ, ವಿಶ್ವ ರೇಡಿಯೋ ದಿನಾಚರಣೆ ಆಚರಣೆಗಾಗಿ, ಒಂದು ಸಾರ್ವಜನಿಕ ಕಾರ್ಯಕ್ರಮವನ್ನು, ಕ್ಯಾಟಾಲುನ್ಯಾದ ದೂರಸಂಪರ್ಕ ಕಾಲೇಜಿನ ಅಭಿಯಂತರರು ಏರ್ಪಡಿಸಿದ್ದರು. ಸ್ವಿಟ್ಟರ್‌ಲ್ಯಾಂಡ್‌ನಲ್ಲಿ ಯುರೋಪಿಯನ್ ಪ್ರಸಾರ ಒಕ್ಕೂಟ, ಡಿಜಿಟಲ್ ರೇಡಿಯೋ ಸಪ್ತಾಹ ಆಚರಿಸಿತು.

ನನಗೆ ತುಂಬಾ ಅಭಿಮಾನದ ಸಂಗತಿಯೆಂದರೆ ನನ್ನ 7ನೇ ವರ್ಷದಿಂದ ಧಾರವಾಡ ಆಕಾಶವಾಣಿಯ ನೇರಪ್ರಸಾರದ ನಾಟಕ ಕಲಾವಿದನಾಗಿ, ರಂಗಭೂಮಿಯ ನಟನಾಗಿ, ಮುಂದೆ ಆಕಾಶವಾಣಿಯಲ್ಲಿ ಪ್ರಸಾರ ನಿರ್ವಾಹಕ ಹಾಗೂ ಕಾರ್ಯಕ್ರಮ ನಿರ್ವಾಹಕರಾಗಿ 36ವರ್ಷ ಸೇವೆ; ನಮ್ಮ ದೇಶದಲ್ಲಿ ರೇಡಿಯೋ ಪ್ರಸಾರ ಆರಂಭವಾಗಿ 84 ವರ್ಷಗಳಾಗಿದ್ದರೆ, ನನ್ನ ತಂದೆ ದಿ. ಎನ್.ಎಸ್ ವಾಮನ್ ಅವರ 43 ವರ್ಷ ಹಾಗೂ ನನ್ನ 36 ವರ್ಷ ಸೇವೆ ಹೀಗೆ ಒಟ್ಟು 79 ವರ್ಷ ರೇಡಿಯೋ ಸೇವೆ. ಹೀಗಾಗಿ ನಮ್ಮ ಮನೆಯಲ್ಲೇ ಬಹುಶಃ ಒಂದು ರಾಷ್ಟ್ರ ಹಾಗೂ ವಿಶ್ವದಾಖಲೆ ಇದೆ. ನನ್ನ 7ನೇ ವರ್ಷದಿಂದ ನಾನು ರೇಡಿಯೋ ಹಾಗೂ ರಂಗಭೂಮಿಯ ಕಲಾವಿದನಾಗಿದ್ದು, ಮುಂದೆ ನಾಟಕಕಾರ-ನಟ-ನಿರ್ದೇಶಕ, ಕವಿ ಹಾಗೂ ಭಾಷಣಕಾರನಾಗಿದ್ದೇನೆ.

ನಾನು 1958 ರಿಂದ ಧಾರವಾಡ ಆಕಾಶವಾಣಿಯ ನಾಟಕದ ಬಾಲಕಲಾವಿದನಾಗಿದ್ದೆ. ಆ ಸಂದರ್ಭದಲ್ಲಿ ನನ್ನ ತಂದೆ ಎನ್.ಎ ಸ್ ವಾಮನ್ ಆ ಕೇಂದ್ರದಲ್ಲಿ ನಾಟಕ ವಿಭಾಗದ ಕಲಾವಿದರು ಹಾಗೂ ನಿರ್ದೇಶಕರಾಗಿದ್ದರು. ಆಗ ಧ್ವನಿಮುದ್ರಣವಿರದ ಕಾಲ. ಆಗ:

  1. ನೇರಪ್ರಸಾರದಲ್ಲಿ ಸ್ಟೂಡಿಯೋದಿಂದ ನಾಟಕಗಳನ್ನು ಅಭಿನಯಿಸುತ್ತಿದ್ದ ದಾಖಲೆ ನಮಗಿದೆ. ಈ ಸಂದರ್ಭದಲ್ಲಿ ಎ.ಎಸ್ ಮೂರ್ತಿಯವರು ಬರೆದ ‘ಹುಚ್ಚ’ ನಾಟಕದ ಪ್ರಸಾರದ ಛಾಯಾಚಿತ್ರ. ಬಾಲಕಲಾವಿದನಾಗಿ ನಾನು ಹಾಗೂ ನಿರ್ದೇಶಕರಾಗಿ ಕುರ್ಚಿಯಲ್ಲಿ ಕುಳಿತಿರುವ ಎನ್.ಎಸ್ ವಾಮನ್. (ಚಿತ್ರ 1).
  2. ರಾಷ್ಟ್ರೀಯ ನಾಟಕದ ನೇರಪ್ರಸಾರದ ಚಿತ್ರ 1960ರ ದಶಕದ್ದು ಇದರಲ್ಲಿ ಬಾಲಪಾತ್ರದ ನಾನು ಹಾಗೂ ನಿರ್ದೇಶಕ ಎನ್.ಎಸ್ ವಾಮನ್ ಇದ್ದೇವೆ. (ಚಿತ್ರ 2).
  3. ನಾನು ರಾಯಚೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿದ್ದಾಗ ದಿಲ್ಲಿಯ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ ಅಡಿಯಲ್ಲಿ ರಾಜ್ಯಮಟ್ಟದಲ್ಲಿ ಪ್ರಸಾರವಾದ, ನಾನು ಈ ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿದ್ದೆ. ಅಂತಿಮವಾಗಿ ಹೊರಬಂದ ‘ಕೇಳಿ ಕಲಿ’ ಯೋಜನೆಯ ಪುಸ್ತಕದ ಪ್ರಕಟವಾಗಿತ್ತು.
  4. ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಗ್ರಾಮವೊಂದರಲ್ಲಿ ಮಕ್ಕಳ ಕಾರ್ಯಕ್ರಮ ಧ್ವನಿಮುದ್ರಿಸುತ್ತಿದ್ದಾಗ, ಒಂದು ಗ್ರಾಮೀಣ ಮಗು ಹೆಡ್ ಪೋನ್ ಹಾಕಿಕೊಂಡು ತನ್ನ ಧ್ವನಿಮುದ್ರಿತವಾದ ಧ್ವನಿಯನ್ನ ಕೇಳಿ ಅಚ್ಚರಿ ಪಡುತ್ತಿರುವ ದೃಶ್ಯದ ಫೋಟೋ (ಚಿತ್ರ 3).

LEAD Technologies Inc. V1.01

ಕರ್ನಾಟಕದ 6 ಕೇಂದ್ರಗಳಾದ ಕಲಬುರಗಿ, ರಾಯಚೂರು, ವಿಜಯಪುರ, ಮಡಿಕೇರಿ, ಭಧ್ರಾವತಿ ಕೇಂದ್ರಗಳಲ್ಲಿ ಸೇವೆ ಮಾಡುವಾಗ ಕೇಂದ್ರ ಸರ್ಕಾರದ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಂಪನ್ಮೂಲ ವ್ಯಕ್ತಿಯಾಗಿ ರೇಡಿಯೋ ಮೂಲಕ ಹಾಗೂ ರಂಗಭೂಮಿಯ ಮೇಲೆ ಸರಕಾರದ ವಿವಿಧ ಯೋಜನೆಗಳ ಬಗ್ಗೆ ನಾಟಕ ರೂಪಕಗಳ ರಚನೆ ಹಾಗೂ ಪ್ರದರ್ಶನ, ಭಾಷಣ, ಉಪನ್ಯಾಸ, ಸಂದರ್ಶನ, ಸಂವಾದ ನಡೆಸುತ್ತಿದೆ. ಶಿಕ್ಷಣ, ಪರಿಸರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ, ಕಾನೂನು ಸೇವಾ ಪ್ರಾಧಿಕಾರ, ಅರಣ್ಯ, ಆರೋಗ್ಯ ಮುಂತಾದ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ.

ಪ್ರತೀ ವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನಾಚರಣೆ ಈ ಸಂದರ್ಭದಲ್ಲಿ ಹಿಂದಿನಿದ ಇಂದಿನವರೆಗೆ ರೇಡಿಯೋ ಕೇಳುತ್ತಿರುವ ಎಲ್ಲಾ ಶ್ರೋತೃಗಳಿಗೆ, ದೇಶದಲ್ಲಿರುವ ಎಲ್ಲಾ ಬಾನುಲಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ, ಸಲ್ಲಿಸುತ್ತಿರುವವರಿಗೆ ನನ್ನ ಹಾರ್ದಿಕ ಶುಭಾಶಯಗಳು.

ಎನ್.ವ್ಹಿ.ರಮೇಶ್ , ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *