ಅವನಿಲ್ಲ ಇವನಿಲ್ಲ ಯಾರಿಲ್ಲ

ಅವನಿಲ್ಲ ಇವನಿಲ್ಲ ಯಾರಿಲ್ಲ
ಇಲ್ಲಿ ನಮಗೆ ನಾವೇ ಎಲ್ಲ
ಅಲ್ಲಿಲ್ಲ ಇಲ್ಲಿಲ್ಲ ಇನ್ನೆಲ್ಲೂ ಇಲ್ಲ
ಅರಿತುಕೊಳ್ಳಬೇಕು ನಾವು
ನಮ್ಮೊಳಗೆ ಇಲ್ಲದ್ದೇನಿಲ್ಲ
ಹುಡು ಹುಡುಕಿಕೊಂಡಷ್ಟು
ಲಭ್ಯವಿರುವಷ್ಟು ನಮ್ಮದಾಗುವುದು
ಇಲ್ಲದೆ ಇರುವುದರ ಚಿಂತೆ ಬಿಟ್ಟು
ಇರುವುದರಲ್ಲಿ ತಿಂದುಂಡು ಒಂದಿಷ್ಟು
ಹಂಚಬೇಕು ನಾವಿಲ್ಲಿ ಸಾಧ್ಯವಾದಷ್ಟು
ಕೂಡಿಟ್ಟದ್ದು ಕೂಡಿಟ್ಟಲ್ಲಿ ಕೆಟ್ಟು
ಹಳಸಿ ಹಾಳಾಗಿ ಹೋಗುವುದು
ಬಿತ್ತಿದ್ದು ಗಿಡವಾಗಿ ಮರವಾಗಿ
ಹೂವನ್ನು ಬಿಟ್ಟು ಕಾಯಿ ಹಣ್ಣಾಗುವುದು
ಬಾಳಿಗೆ ಜೊತೆಯಾಗುವುದು
ನಮ್ಮೊಳಗಿನ ಒಳ್ಳೆಯ ಸಂಬಂಧ
ಹಳಸಿದಷ್ಟು ಹೆಚ್ಚುವುದು
ಕೊಳೆತು ನಾರುವ ಗಬ್ಬು ದುರ್ಗಂಧ
ನಮ್ಮ ಸುತ್ತಮುತ್ತಲು ಬೀರಬೇಕು ಸುಗಂಧ
ಬಂಧ ಅನುಬಂಧ ಸಂಬಂಧ
ಹೆಚ್ಚಿಸುವುದು ಬಾಳಿನ ಅಂದ ಚಂದ
–ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.
ಅರ್ಥಪೂರ್ಣ ಕವನ ಸರ್.
…..ಶುಭಲಕ್ಷ್ಮಿ
ಧನ್ಯವಾದಗಳು
ಕವಿತೆ ಚೆನ್ನಾಗಿ ಮೂಡಿಬಂದಿದೆ.. ಸಾರ್
ಧನ್ಯವಾದಗಳು
ಚೆನ್ನಾಗಿದೆ ಕವಿತೆ
ಧನ್ಯವಾದಗಳು
ಚಂದದ ಕವನ.
ಧನ್ಯವಾದಗಳು
ಒಳ್ಳೆಯ ಕವಿತೆ
ಧನ್ಯವಾದಗಳು
ಕೊನೆಯ ಸಾಲುಗಳ ವಾಚ್ಯ ಹೊರತುಪಡಿಸಿದಂತೆ
ಚೆನ್ನಾಗಿದೆ, ಕವಿತೆಯೆಂದರೆ ಇರಬೇಕು ಧ್ವನಿ; ಭಾವಗಳ ಪ್ರತಿಧ್ವನಿ.
ಹುಡು ಹುಡುಕಿಕೊಂಡಷ್ಟು ಲಭ್ಯವಿರುವಷ್ಟು……ಎಂಥ ಪದಬಂಧ
ಇಷ್ಟವಾಯಿತು ಗೆಳೆಯರೇ, ಹೆಚ್ಚು ಬರೆಯಿರಿ, ಧನ್ಯವಾದ
ತಮ್ಮ ಗ್ರಹಿಕೆ ಮತ್ತು ವಿಶ್ಲೇಷಣೆ ಎರಡೂ ಅದ್ಭುತ, ಬರೆಯುವ ಮನಸ್ಸಿಗೆ ನವ ಚೈತನ್ಯವ ನೀಡುತ್ತದೆ. ಧನ್ಯವಾದಗಳು ಸರ್
ಉತ್ತಮ ಸಂದೇಶ ಹೊತ್ತ, ಸೂಕ್ಷ್ಮ ಸಂವೇದನೆಯುಕ್ತ ಚಂದದ ಕವನ.
ಧನ್ಯವಾದಗಳು