Author: Padma Anand

10

ಅಜ್ಜಿ ಮನೆ

Share Button

ಟ್ಯಾಕ್ಸಿಯಿಂದ ಹಾರಿಬಂದ ರಿಚಾ ಮೈಸೂರಿನ ಚಾಮುಂಡಿಪುರಂನ ಅಜ್ಜಿ ಮನೆಯೊಳಗೆ ನುಗ್ಗಲು ಪ್ರಯತ್ನಿಸದಾಗಲೇ – ಏ, ಮುದ್ದು, ಅಲ್ಲೇ ಇರು, ಆರತಿ ಮಾಡಿ ದೃಷ್ಠಿ ನಿವಾಳಿಸಿದ ನಂತರ ಒಳಗೆ ಬರುವೆಯಂತೆ, ಹನ್ನೊಂದು ವರ್ಷಗಳ ನಂತರ ಈ ಮನೆಗೆ ಬರುತ್ತಿದ್ದೀಯಾ – ಎನ್ನುತ್ತಾ ಪಕ್ಕದ ಮನೆಯ ಕಾಮಾಕ್ಷಮ್ಮನೊಡಗೂಡಿ ಆರತಿ ತಟ್ಟೆಯೊಂದಿಗೆ...

15

ನಾರಾಯಣಃ ಹರಿಃ

Share Button

ನಾನು ಸುಮಾರು ಎರಡು ವರುಷಗಳಿಂದ ಅನುಭವಿಸಿ, ಹೆಣಗುತ್ತಿದ್ದ ಆರೋಗ್ಯ ಸಮಸ್ಯೆ ಉಲ್ಭಣಗೊಂಡು, ಇನ್ನು ಸಹಿಸಲು ಸಾಧ್ಯವೇ ಇಲ್ಲವೆನ್ನಿಸಿದಾಗ ಬೆಂಗಳೂರಿನಲ್ಲಿ ಮಗಳಿಗೆ ಪರಿಚಯವಿದ್ದ ತಜ್ಙ ವೈದ್ಯರ ಬಳಿ ತಪಾಸಣೆಗೆ ಹೋದಾಗ, ಅವರಂದದ್ದು – ಇಷ್ಟು ದಿನ ಈ ನರಕಯಾತನೆಯನ್ನು ಹೇಗೆ ಸಹಿಸಿದಿರೀ ತಾಯಿ, ಇನ್ನು ತಡಮಾಡುವಂತಿಲ್ಲ, ಇನ್ನೇನಾದರೂ ಅಂಗಗಳು...

15

ಒಲವ ನೋಂಪಿ

Share Button

ಆಗ ತಾನೇ ಬೆಳಗಿನ ತಿಂಡಿಯನ್ನು ಮುಗಿಸಿ ದೈನಂದಿನ ಕೆಲಸಗಳತ್ತ ಗಮನ ಹರಿಸಬೇಕೆನ್ನುವಷ್ಟರಲ್ಲಿ ಬಂದ ದೂರವಾಣಿ ಕರೆ ಸುಚಿತ್ರಾಳ ಮನದಲೆಗಳ ಮೇಲೆ ಬಿದ್ದ ಸಣ್ಣ ಕಲ್ಲಿನಂತಾಗಿ ಎದ್ದ ಆವೃತ್ತಗಳು ಅವಳನ್ನು ನೆನಪಿನಾಳಕ್ಕೆ ಕರೆದೊಯ್ದವು.  ಪತಿಯನ್ನುದ್ದೇಶಿಸಿ ಹೇಳಿದಳು – ನಾಗೇಶ್‌, ನನಗೇಕೋ ಇಂದು ಮುಂದಿನ ಮನೆಕೆಲಸಗಳನ್ನು ಮಾಡುವ ಮನಸ್ಸಿಲ್ಲ ಪ್ಲೀಸ್‌ ...

17

ನಾನೇಕೆ ಬರೆಯುತ್ತೇನೆ ?

Share Button

ಒಂದು ಪದದ ಉತ್ತರ ಹೇಳಬೇಕೆಂದಿದ್ದರೆ, ನಾನು ಹೇಳುತ್ತಿದ್ದೆ – ಬರೆಯುವುದು ನನಗಿಷ್ಟ, ಅದಕ್ಕೇ ಬರೆಯುತ್ತೇನೆ – ಎಂದು. ಹಾಗಿಲ್ಲವಲ್ಲ, ಹಾಗಾಗಿ ಹೇಳುತ್ತೇನೆ. ತಿಂಗಳಿಗೊಮ್ಮೆ ಸಮಾನ ಮನಸ್ಕರು ಒಂದೆಡೆ ಸೇರಿ ಹೊಸದಾಗಿ ಬರೆದಿದ್ದ, ಸೃಷ್ಟಿಸಿದ್ದ, ಯಾವುದಾದರೊಂದು ಸಾಹಿತ್ಯ ಪ್ರಕಾರವನ್ನು ವಾಚಿಸಿ, ಇತರ ನವನವೀನ ತಾಜಾ ಸಾಹಿತ್ಯ ಪ್ರಕಾರವನ್ನು ಆಲಿಸಿ,...

13

ಅಳಲುಗಳಲ್ಲ, ಅಳಿಲುಗಳು

Share Button

ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಒಂದು ಪದ್ಯ ಇತ್ತು –ಚಿಕ್, ಚಿಕ್, ಚೀಂ, ಚೀಂ, ಎಂದುಕೊಂಡುಮರಗಳಲ್ಲಿ ಅತ್ತ ಇತ್ತ ಓಡುತಿರುವೆ, ನಾನು ಯಾರು?ಅಂತ. ಅದಕ್ಕೆ ಉತ್ತರ ನಾವುಗಳು, ʼಇಣಚಿʼ ಎಂದೇ ಹೇಳಬೇಕಿತ್ತು. ಆದರೆ ನಮ್ಮ ಪುಟ್ಟ ಅಳಿಲಿಗೆ ಇಣಚಿ ಎಂಬ ಪರ್ಯಾಯ ಪದ ಇದೆಯಾದರೂ, ಪ್ರಚಲಿತವಿರುವುದು ಅಳಿಲು ಎಂದೇ....

12

ನೀರೆಯರುಡುವ ಸೀರೆ

Share Button

ಡಿಸೆಂಬರ್‌ 21 ರಂದು “ವಿಶ್ವ ಸೀರೆಯ ದಿನ”ವಂತೆ. ಅದು ಯಾವಾಗ ವಿಶ್ವವೆಲ್ಲಾ ಸೀರೆಯನ್ನು ತಮ್ಮದೆಂದುಕೊಂಡರು? ಅದು ನಮ್ಮ, ಭಾರತೀಯರ ಜನ್ಮ ಸಿದ್ಧ ಅಧಿಕಾರವಲ್ಲವೇ? ಇರಲಿ, ಒಳ್ಳೆಯದು, ಚೆನ್ನಾಗಿರುವುದನ್ನು ತಾವೂ ಅಳವಡಿಸಿಕೊಳ್ಳುವುದು ಸಜ್ಜನ ಮನುಷ್ಯನ ಸಹಜ ಧರ್ಮ.  ಹಾಗಾಗಿ ನಮ್ಮ ಸೀರೆ ವಿಶ್ವ ಮಾನ್ಯತೆ ಪಡೆದರೆ ನಾವ್ಯಾಕೆ ಸಂಕುಚಿತ...

9

ಕಾಲಗರ್ಭ : ಮೊದಲ ಓದುಗರ ಅನಿಸಿಕೆಗಳು. (ಮೂಡಿದ ಭಾವಗಳು)

Share Button

‘ಅನುಭವವೇ ಗಾದೆಮಾತು’. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಮುಂತಾದವು ಗಾದೆಗಳ ಕುರಿತಾಗಿ ಪ್ರಚಲಿತವಾಗಿರುವ ಗಾದೆಗಳು. ಅಂತಹುದೇ ಮತ್ತೊಂದು ಜನಪ್ರಿಯ ಗಾದೆ “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ”. ಇದೇನಿದು? ಕಾಲಗರ್ಭದ ಮೊದಲ ಓದುಗಳ ಅಭಿಪ್ರಾಯವೇನೋ ತಿಳಿಯೋಣ ಎಂಬ ಕುತೂಹಲದಿಂದ ಓದಲು ಹೊರಟರೆ ಗಾದೆ ಮಾತುಗಳ ಕುರಿತಾದ...

3

ನೈತಿಕತೆ ಮತ್ತು ನ್ಯಾಯಸಮ್ಮತ

Share Button

ಸಾಲು ಮನೆಗಳಲ್ಲಿ ವಾಸವಿದ್ದ ತಂಗಿ ರೇವತಿಯ ಮನೆಗೆ ಬಂದಿದ್ದ ಕಲ್ಪನಾಗೆ ಅಕ್ಕಪಕ್ಕಗಳ ಮನೆಗಳಲ್ಲಿ ನಡೆಯುತ್ತಿದ್ದ ಮಾತುಕತೆಗಳೆಲ್ಲಾ ಕೇಳುತಿತ್ತು.  ಈ ರೀತಿಯ ಮನೆಗಳಿಗೆ ವಾಸಕ್ಕೆ ಬಂದ ಕೆಲದಿವಸಗಳು ಅವರಿವರ ಮನೆಯ ಮಾತುಗಳು, ಕೆಲವು ವೇಳೆ ಖಾಸಗೀತನವೆಲ್ಲಾ ಹರಾಜು ಆದಂತೆನಿಸಿ ತಾವುಗಳು ಮಾತನಾಡುವಾಗ ದನಿ ತಗ್ಗಿಸಿ ಮಾತನಾಡುವುದನ್ನೂ ರೂಢಿಸಿಕೊಂಡರೂ ಕೆಲವು...

9

“ಲೋಕಶಂಕರ” – ಕೃತಿಯ ವಾಚನ, ವ್ಯಾಖ್ಯಾನ

Share Button

ಹಿರಿಯ ಸಾಹಿತಿ, ʼರಸರಾಮಾಯಣʼದ ಕತೃ ಶ್ರೀ ಗಜಾನನ ಈಶ್ವರ ಹೆಗಡೆಯವರ ಕೃಷ್ಣಮೂರ್ತಿಪುರಂನ ʼಚಂಚಲʼ ಮನೆಯಲ್ಲಿ 21 ನೇ ಶುಕ್ರವಾರ ಸಂಜೆ, ಅವರ ತಾಯಿಯವರ ಸಂಸ್ಮರಣಾರ್ಥವಾಗಿ ಅವರ ಮತ್ತೊಂದು ಮೇರು ಕೃತಿ ʼಲೋಕಶಂಕರʼದ ʼಮಾತೆಯ ಮಡಿಲುʼ ಕಾಂಡದ ಆಯ್ದ ಭಾಗಗಳ ವಾಚನ, ವ್ಯಾಖ್ಯಾನ, ಲೇಖಕರಾದ ಓದುಗರು ಅರ್ಥೈಸಿದಂತೆ ಕಾವ್ಯಾನುಭೂತಿ...

10

ಅಂತರಂಗದ ಗೆಳೆಯರು

Share Button

ಆದ್ರೂ ನಂಗೆ ಸಿನಿಮಾ ಟಾಕೀಸಿನ ಗೇಟ್‌ ಕೀಪರ್‌ ಅನ್ನೇ ಮದ್ವೆ ಆಗಬೇಕೂಂತ ತುಂಬಾನೇ ಆಸೆ ಇತ್ತು ಮೀನಾ – ಅದ್ಯಾಕೆ ಗೀತಾ? – ಕೇಳಿದಳು ಮೀನಾ. ಹುಂ ಕಣೆ, ನಮಗೆ ಆಗ 10-12 ವರ್ಷಗಳು, ಎಷ್ಟೊಂದು ಒಳ್ಳೊಳ್ಳೆಯ ಕನ್ನಡ ಸಿನಿಮಾಗಳು ಬರ್ತಿತ್ತು ಗೊತ್ತಲ್ವಾ ನಿಂಗೆ, ಆದ್ರೆ ನಮ್ಮನೇಲಿ...

Follow

Get every new post on this blog delivered to your Inbox.

Join other followers: