Daily Archive: April 1, 2021
ನಾನು ಒಂದು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಿ ಜಿ ಟಿ ಶಿಕ್ಷಕಿಯಾಗಿ ಕೆಲಸ ಮಾಡುವುದು.ಎಲ್ಲೆಲ್ಲಿ ಪ್ರೌಢ ಶಾಲೆಗಳು ಹಿರಿಯ ಪ್ರಾಥಮಿಕ ಶಾಲೆಗಳಿಂದ ದೂರವಿದ್ದಾವೋ,ಅಂತಹ ಶಾಲೆಗಳಲ್ಲಿ ಹದಿನಾಲ್ಕು ವರ್ಷದವರೆಗೆ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಸಲುವಾಗಿ ಈಗ್ಗೆ ಸುಮಾರು ಹದಿನೇಳು ವರ್ಷಗಳ ಹಿಂದೆ ಸರ್ಕಾರ...
ಸಮಾನತೆ ಸಾಧನೆಯ ಅಸ್ತಿಭಾರ (ಅ) ವೇದಕಾಲೀನರು ಮಂತ್ರದ್ರಷ್ಟಾರರು: ವೇದ, ಉಪನಿಷತ್ತು, ಪುರಾಣಗಳು ನಮ್ಮ ಪ್ರಾಚೀನ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಆಕರಗಳು. ವೇದಗಳು ಮಂತ್ರದ್ರಷ್ಟಾರರ ಅಭಿವ್ಯಕ್ತಿ. ಅಸಂಖ್ಯಾತ ಪುರುಷ-ಮಂತ್ರದ್ರಷ್ಟಾರರ ಮಧ್ಯೆ ಎದ್ದು ಕಾಣುವ ಸ್ತ್ರೀಯರು ಲೋಪಾಮುದ್ರೆ, ಸುಲಭಾ, ವಿಶ್ವಾವರಾ, ಸಿಕತಾ, ನಿವಾವರಿ, ಘೋಷಾ, ಇಂದ್ರಾಣಿ, ಶಚಿ....
ಖಾಲಿಯಾಗಿದೆ ಜೋಲಿಹೊಡೆದಿದೆ ಮನದ ಒಳಗಿನ ಮಂಥನ ನಿನ್ನೆ ನೆನಪಲಿ ನಾಳೆ ಭ್ರಮೆಯಲಿ ಬದುಕು ಸತ್ತಿದೆ ಇಂದಿನ ಸುತ್ತ ಸಾಗುವ ಜಾತ್ರೆ ದಿಬ್ಬಣ ಮುಸುಕ ಮಸುಕನು ಕಳೆಯದೇ ಭಾವ ತಬ್ಬಲಿ ಮರುಗುತಿರುವುದು ಬೆಳ್ಳಿ ಕಿರಣವು ಹೊಳೆಯದೆ ನೋವಿನಾಸರೆ ಬೇಕು ಬದುಕಲಿ ನಲಿವ ಮಹಡಿಯ ಕಟ್ಟಲು ಆಸೆ ಇಟ್ಟಿಗೆ...
ನನ್ನನ್ನು ಬೆಂಗಳೂರಿನಲ್ಲಿ ಕರೆದುಕೊಂಡು ಹೋಗಲು ಬಂದಿದ್ದರು ಪತಿರಾಯರು. ಎಲ್ಲ ಫಾರ್ಮಾಲಿಟೀಸ್ ಮುಗಿಸಿ ಲಗೇಜು ಎತ್ತಿಕೊಂಡು ಏರ್ಪೋರ್ಟಿನಿಂದ ಹೊರಬಂದೆ. ಎಂದೂ ನೋಡೇ ಇಲ್ಲವೇನೋ ಎಂಬಂತೆ ನನ್ನನ್ನೇ ನೋಡುತ್ತಾ ‘ಸುಕನ್ಯಾ ಅಲ್ಲಿನ ಹವಾ ಒಗ್ಗಿದ ಹಾಗೆ ಕಾಣಿಸುತ್ತಿಲ್ಲ. ಬಹಳ ಇಳಿದು ಹೋಗಿದ್ದೀಯಾ’ ಎಂದರು. ‘ಹಾಗೇನಿಲ್ಲ ಬಿಡಿ, ನಾನೇನು ಹೊಸದಾಗಿ ಅಲ್ಲಿಗೆ...
. ಪುರಾಣ ಪುಣ್ಯಕಥೆ ಆಗಮ ಶಾಸ್ತ್ರಗಳ ಗಂಟನು ಮಸ್ತಕಕೆ ಏರಿಸುವ ಜ್ಞಾನಬುತ್ತಿಯ ಈ ಹೊತ್ತಿಗೆ…..!! ವಿವಿಧ ದೇಶ ವಿದೇಶಗಳ ಆಚಾರ- ವಿಚಾರ ರೀತಿ- ನೀತಿ ವೇಷ- ಭಾಷೆ ಸಾಮಾಜಿಕ ವೈವಿಧ್ಯತೆ ಆಹಾರ ಪದ್ದತಿ ಕುಟುಂಬ ವ್ಯವಸ್ಥೆಯ ಅರುಹುವದು ಈ ಹೊತ್ತಿಗೆ…….!! ರಾಜರ ಗಾಂಭಿರ್ಯ ಅಂಬಾರಿಗಳ ವೈಭೋಗ ಆಡಳಿತ...
ಒಲುಮೆಯಲಿ ಗೆಲ್ಲುವೆವು ಎನುತ ಓಡುವ ನದಿಗಳು ಸಾಗರದತ್ತ ಕಳೆದುಕೊಂಡು ತನ್ನತನವ ಕುದಿಯುತಿವೆ ಹತಾಶೆಯಲಿ ಅಸ್ತಿತ್ವಕ್ಕಾಗಿ ಅವುಗಳ ಮೊರೆತವು ಸಮಾನ ದುಃಖಿಗಳಿಗೆ ಅದೇ ಸಾಂತ್ವನವು *** ತಡವಾಯಿತು ಅಡುಗೆಯೆಂದು ಸಿಡುಕುತ್ತಲೆ ಅವನು ಸವಿಯಲೇ ಇಲ್ಲ ಅಡುಗೆಯ ಸವಿರುಚಿಯ *** ಸ್ಪರ್ಧೆಯಲಿ ಗೆಲುವೊಂದೇ ಲಕ್ಷ್ಯ ಸಹಬಾಳ್ವೆಯಲಿ ಸಮಾನತೆಯ ಸೌದಾರ್ಯ ***...
ಸುದಾಮ ಮಂದಿರ ಶ್ರೀಕೃಷ್ಣನ ಬಾಲ್ಯ್ಸ ಸ್ನೇಹಿತನಾದ ಸುದಾಮನ ಕಥೆಯನ್ನು ಕೇಳಿದ್ದೇವೆ. ಸುದಾಮನು ತನ್ನ ಕುಟುಂಬದೊಂದಿಗೆ ‘ಪೌರವೆಲಕುಲ’ ಎಂಬ ಹೆಸರಿದ್ದ ಈ ಜಾಗದಲ್ಲಿ ವಾಸವಾಗಿದ್ದನಂತೆ. ಇದನ್ನು ಸುದಾಮಪುರಿ ಅಂತಲೂ ಕರೆಯುತ್ತಾರೆ. ತನ್ನ ಸ್ನೇಹಿತನನ್ನು ಭೇಟಿಯಾಗಲು ಇಲ್ಲಿಂದ ಕಾಲ್ನಡಿಗೆಯಲ್ಲಿ, ಹೊರಟ ಬಡ ಸುದಾಮನು ಶ್ರೀಕೃಷ್ಣನು ವಾಸವಾಗಿದ್ದ ‘ಕುಶಸ್ಠಲಿ’ ನಗರವನ್ನು ತಲಪಿದ....
ಯಾರಾದರು ಸ್ನೇಹಿತರು ಅಥವಾ ಅಭಿಮಾನಿಗಳು ವಿಶ್ವಾಸದಿಂದ ನೀಡಿದ ಸ್ಮರಣಿಕೆಗಳನ್ನೋ, ಅಥವಾ ನಿತ್ಯುಪಯುಕ್ತ ವಸ್ತುಗಳನ್ನೋ ಬಹಳ ಜತನದಿಂದ ಕಾಪಾಡಿಕೊಳ್ಳುವ, ಅವರ ಔದಾರ್ಯವನ್ನು ನೆನಪಿಸಿಕೊಳ್ಳುವ ತಂದೆಯವರ ಸ್ವಭಾವ ಕೆಲವು ಸಾರಿ ವಿಚಿತ್ರವೆನಿಸುತ್ತಿತ್ತು..ಈ ವಸ್ತುಗಳು ಕಣ್ಣೆದುರು ಕಾಣದಿದ್ದರೆ ಅವರ ತಹತಹ ಹೇಳತೀರದು. ಅದಕ್ಕೆ ಸಾಕ್ಷಿ ಈ ನಡಿಗೆ ಬೆತ್ತ ಪ್ರಕರಣ. ಮೈಸೂರಿನಲ್ಲಿ...
ರಾತ್ರಿವೇಳೆ ಆಕಾಶದಲ್ಲಿ ಏಳು ನಕ್ಷತ್ರಗಳ ಸಮೂಹವನ್ನು ಕಾಣುತ್ತೇವೆ. ಈ ಸಪ್ತಋಷಿ ಮಂಡಲವನ್ನು ನೋಡುವುದರಿಂದ ಅಂದಿನ ಪಾಪ ಪರಿಹಾರ ಎಂದು ಹಿರಿಯರಿಂದ ಕೇಳಿದ್ದೇವೆ. ಅಲ್ಲಿ ಕಾಣುವ ಸಪ್ತಋಷಿಗಳೆಂದರೆ ಯಾರೆಲ್ಲ.?.. ಅವರೇ ಕಶ್ಯಪ, ಅತ್ರಿ, ಭಾರದ್ವಾಜ, ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಗೌತಮ, ಇವರು ಗೋತ್ರ ಪ್ರವರ್ತರು, ಸಪ್ತಋಷಿಗಳ ಹೆಸರಿನಲ್ಲಿ ಸಪ್ತಗೋತ್ರಗಳು,...
ಒಬ್ಬ ವ್ಯಕ್ತಿ ತನ್ನ ಬೈಕಿನಲ್ಲಿ ಯಾವುದೋ ಕೆಲಸದ ಮೇಲೆ ವೇಗವಾಗಿ ಹೊರಟಿದ್ದ. ದಾರಿಯಲ್ಲಿ ಒಂದು ಕಲ್ಲು ಬಿದ್ದಿರುವುದನ್ನು ಆತ ಗಮನಿಸಿದರೂ ಭಂಡ ಧೈರ್ಯದಿಂದ ಕಲ್ಲಿನ ಮೇಲೆ ಬೈಕನ್ನು ಚಲಾಯಿಸಿದ. ಬೈಕು ಕಲ್ಲಿಗೆ ಹೊಡೆದ ವೇಗಕ್ಕೆ ಆ ವ್ಯಕ್ತಿ ಬೈಕಿನಿಂದ ಜಿಗಿದು ಕೆಳಗೆ ಬಿದ್ದನು. ಸಣ್ಣ ಪುಟ್ಟ ಗಾಯಗಳಿಂದ ಪರಾದ ಅವನು...
ನಿಮ್ಮ ಅನಿಸಿಕೆಗಳು…