ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 17 :ಸುದಾಮ ಮಂದಿರ
ಸುದಾಮ ಮಂದಿರ
ಶ್ರೀಕೃಷ್ಣನ ಬಾಲ್ಯ್ಸ ಸ್ನೇಹಿತನಾದ ಸುದಾಮನ ಕಥೆಯನ್ನು ಕೇಳಿದ್ದೇವೆ. ಸುದಾಮನು ತನ್ನ ಕುಟುಂಬದೊಂದಿಗೆ ‘ಪೌರವೆಲಕುಲ’ ಎಂಬ ಹೆಸರಿದ್ದ ಈ ಜಾಗದಲ್ಲಿ ವಾಸವಾಗಿದ್ದನಂತೆ. ಇದನ್ನು ಸುದಾಮಪುರಿ ಅಂತಲೂ ಕರೆಯುತ್ತಾರೆ. ತನ್ನ ಸ್ನೇಹಿತನನ್ನು ಭೇಟಿಯಾಗಲು ಇಲ್ಲಿಂದ ಕಾಲ್ನಡಿಗೆಯಲ್ಲಿ, ಹೊರಟ ಬಡ ಸುದಾಮನು ಶ್ರೀಕೃಷ್ಣನು ವಾಸವಾಗಿದ್ದ ‘ಕುಶಸ್ಠಲಿ’ ನಗರವನ್ನು ತಲಪಿದ. ಅಲ್ಲಿದ್ದ ನೂರಾರು ವೈಭವೋಪೇತ ಅರಮನೆಗಳಲ್ಲಿ ಶ್ರೀಕೃಷ್ಣನಿರುವ ಜಾಗ ಯಾವುದೆಂದು ಗೊತ್ತಾಗದೆ ‘ದ್ವಾರ ಕ: ದ್ವಾರ ಕ: ‘ ಎನ್ನುತ್ತಾ ಬೀದಿಯಲ್ಲಿ ಅಲೆದಾಡಿದನಂತೆ. ಅದನ್ನು ಕೇಳಿದ ಶ್ರೀಕೃಷ್ಣನು ಓಡೋಡಿ ಬಂದು ಸುದಾಮನನ್ನು ಉಪಚರಿಸಿದನಂತೆ. ಹೀಗೆ. ‘ದ್ವಾರ ಕ: ‘ ಎಂದು ಸುದಾಮನು ಅಲೆದಾಡಿದ ಕಾರಣ ಕುಶಸ್ಠಲಿಯು ‘ದ್ವಾರಕಾ’ ಎಂಬ ಹೆಸರು ಪಡೆಯಿತು. ಬಡ ಗೆಳಯ ಸಂಕೋಚದಿಂದ ಕೊಟ್ಟ ಹಿಡಿ ಅವಲಕ್ಕಿಯನ್ನು ಶ್ರೀಕೃಷ್ಣನು ಬಹಳ ಸಂತಸದಿಂದ ತಿಂದನಂತೆ. ಹೀಗೆ ಅವಲಕ್ಕಿ ಶ್ರೀಕೃಷ್ಣನಿಗೆ ಅತಿಪ್ರಿಯವಾದ ನೈವೇದ್ಯವಾಯಿತು.
ಪ್ರಸ್ತುತ ಸುದಾಮನು ವಾಸವಾಗಿದ್ದ ಜಾಗದಲ್ಲಿ ಅಚ್ಚುಕಟ್ಟಾದ ಮಂದಿರವಿದೆ. ಇದನ್ನು 1902- 1907 ರ ಅವಧಿಯಲ್ಲಿ ಕಟ್ಟಲಾಯಿತು. ಇಲ್ಲಿ ಅವಲಕ್ಕಿಯನ್ನು ಪ್ರಸಾದವಾಗಿ ಕೊಡುತ್ತಾರೆ.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=31784
– ಹೇಮಮಾಲಾ.ಬಿ
ಗೆಳೆತನಕ್ಕೆ ಸಾಕ್ಷಿ, ಉದಾಹರಣೆ ಕೃಷ್ಣ -ಸುದಾಮರ ಗೆಳೆತನ. ಇಂತಹ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ನೋಡುವುದು ನಿಮ್ಮ ಸೌಭಾಗ್ಯ, ಅದರ ಕುರಿತಾಗಿ ನಿಮ್ಮ ಲೇಖನದ ಮೂಲಕ ತಿಳಿದುಕೊಳ್ಳುವುದು ನಮ್ಮ ಅದೃಷ್ಟ.
ಧನ್ಯವಾದಗಳು.
ಲೇಖನ ಚೆನ್ನಾಗಿ ಮೂಡಿ ಬಂದಿದೆ.ಸ್ನೇಹಕ್ಕೆ ಉತ್ತಮ ಉದಾಹರಣೆ ಕೊಟ್ಟು ಹೇಳುವುದಕ್ಕೆ ಕೃಷ್ಣ ಸುಧಾಮರ ಹೆಸರು ಪ್ರಚಲಿತ.ಒಳ್ಳೆಯ ನಿರೂಪಣೆ ಗೆಳತಿ ಹೇಮಾ ಅಭಿನಂದನೆಗಳು.
ಧನ್ಯವಾದಗಳು.
Nice article. i have also visited this temple
ಕೃಷ್ಣ ಪರಮಾತ್ಮನ ಆತ್ಮೀಯ ಗೆಳೆಯ ಸುದಾಮನಿಗೂ ದೈವ ಪಟ್ಟವನ್ನಿತ್ತು ವಿಶೇಷವಾದ ಸುದಾಮ ಮಂದಿರ ಕಟ್ಟಿಸಿದ ಬಗೆ ನಿಜಕ್ಕೂ ಅದ್ಭುತ! ಪ್ರವಾಸ ಲೇಖನ ಬಹಳ ಇಷ್ಟವಾಯ್ತು.
ಧನ್ಯವಾದಗಳು