ಯಾರಿಗೇ ಆಗಲಿ ನೋವೆಂದರೆ ನೋವು
ಬಾಯಿ ಬಿಟ್ಟು ಹೇಳಿಕೊಳ್ಳಲಾಗದ್ದು ಹಲವು
ಹೊರನೋಟಕ್ಕೆ ನಮಗೆ ಕಾಣುವುದು ಕೆಲವು
ಒಮ್ಮೊಮ್ಮೆ ಒಳಗೊಳಗೇ ಅನುಭವಿಸುವೆವು
ಕೆಲವೊಮ್ಮೆ ದೇಹಕ್ಕೆ ಗಾಯವಾಗುವುದು
ಬಲವಾದ ಪೆಟ್ಟು ಬಿದ್ದು ತುಂಬ ಅಳಿಸುವುದು
ಕೆಲವು ಏಟಿಗೆ ಬಾಹುಬಂದು ಬೀಗುವುದು
ಜರ್ಜರಿತ ಮನ ಕಣ್ಣೀರಕೋಡಿ ಹರಿಸುವುದು
ಮತ್ತೆ ಕೆಲವು ನಮ್ಮ ಬರೀ ಕಣ್ಣಿಗೇ ಕಾಣಿಸದು
ಒಳಗೊಳಗೆ ಪೆಟ್ಟನ್ನು ನೋವನ್ನು ನೀಡುವುದು
ಒಳಮನಸ್ಸಿಗಾದ ಬಲವಾದ ಗಾಯವದು
ಪ್ರೀತಿ ತುಂಬಿದ ಅಂತಃಕರಣಕ್ಕಷ್ಟೆ ತೋರುವುದು
ಗಾಯವಾದಾಗ ಅನುಭವಿಸುವೆವು ನೋವು
ಕೆಲವೊಮ್ಮೆ ತುಂಬಿಕೊಳ್ಳುವುದು ಒಳಗೇ ಕೀವು
ಮೈಮೇಲಾದ ಗಾಯಕ್ಕೆ ಹಚ್ಚಬಹುದು ಮುಲಾಮು
ಮನಸ್ಸಿಗಾದ ಗಾಯಕ್ಕೆ ಎಲ್ಲಿದೆ ಮುಲಾಮು

–ನಾಗರಾಜ ಜಿ.ಎನ್. ಬಾಡ, ಕುಮಟ

