Monthly Archive: January 2021
ದೂರವಾಣಿ ಇಲಾಖೆಯಲ್ಲಿ ವೃತ್ತಿಪರಳಾಗಿದ್ದು ಅಲ್ಲಿಂದ ನಿವೃತ್ತಳಾದ ಬಳಿಕ ಏನು ಮಾಡಬೇಕೆಂದು ತೋಚಲಿಲ್ಲ. ನಮ್ಮ ಗೆಳತಿ ಹೇಮಮಾಲಾರು, ತಾವು ಉದ್ಯೋಗದಲ್ಲಿದ್ದ ಅಂತರಾಷ್ಟ್ರೀಯ ಕಂಪೆನಿಯಿಂದ ಸ್ವಯಂನಿವೃತ್ತಿ ಪಡೆದ ಬಳಿಕ ಪ್ರವೃತ್ತಿಯಾಗಿ ಅವರಿಷ್ಟದ “ಸುರಹೊನ್ನೆ” ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ನಡೆಸುತ್ತಿರುವ ಬಗ್ಗೆ ತಿಳಿಸಿದರು. ಅದರಲ್ಲಿ, ಆರಂಭಿಕ ಬರಹಗಾರರಿಗೆ ಪ್ರೋತ್ಸಾಹ ನೀಡುವ...
ನಮಸ್ಕಾರ್ರಿ ಬರ್ರಿ ಬರ್ರಿ ತಣ್ಣ ನೀರ ಅದಾವ ತೊಗೊರಿ ಕೈಕಾಲ ಮಾರಿ ತೊಕ್ಕೊರಿ ಬಿಸಲಾಗ ಬಂದೀರಿ. ಕುಂದರ್ರಿ ಆರಾಮ ಮಾಡ್ರಿ. ಚಹಾ ಕುಡಿತಿರೇನು? ಕೇಳೊದೇನ ಬಂತು ನಮ್ಮ ಹುಬ್ಬಳ್ಳಿಗ ಬಂದಮ್ಯಾಲ ಚಹಾ ಕುಡಿಯಾಕಬೇಕ… ಮತ್ತ ಬರೆ ಚಹಾ ಅಷ್ಟ ಅಲ್ಲ ಬಿಸಿ ಬಿಸಿ ಚಹಾದ ಜೋಡಿ ಗರಮಾ ಗರಮ್ ಮಿರ್ಚಿ ಭಜಿ, ಘಮಘಮ ಗಿರ್ಮಿಟ್ ಇದ್ರ...
. ಮನಸ್ಸು ಇದು ಬಲು ಸೂಕ್ಷ್ಮ ಯೋಚಿಸದಿರಿ ನಕಾರಾತ್ಮ ಕೆಸರಲ್ಲಿಯ ಕಂಬದಂತೆ ವಾಲುವುದು ತನ್ನಿಷ್ಟದಂತೆ ಇದ್ದರೆ ಸಾಕು ನಮ್ಮಲ್ಲಿ ಛಲ ಅದುವೇ ನಮ್ಮಯ ಬಲ ಹಿಡಿತದಲ್ಲಿರಲಿ ಮನಸ್ಸು ಅದರಲ್ಲೆ ಅಡಗಿಹುದು ನಮ್ಮಯ ಯಶಸ್ಸು ಇಚ್ಛಾಶಕ್ತಿಯು ಬಲವಾದುದು ಇದರ ಮುಂದೆ ಯಾವುದೂ ನಿಲ್ಲದು….. -ಡಾ ನಂದಾ ಕೋಟೂರ +6
ಬೆಳೆಯಲು ಬಿಡದೇ ತಡೆದಂತೆ ಬೆಳೆಯುತ್ತೆ ನೆನಪಿನ ನೋವು ಕಳೆಯಂತೆ ಸೋತು ಸೊರಗಿ ಕೈ ಚೆಲ್ಲಿದಾಗ ಹಟ ಕುಡುಗೋಲಾಗಿ ಕೈ ಸೇರುತ್ತೆ ಆಗ ಕತ್ತರಿಸಿ ಒತ್ತರಿಸಿದರೇ ಕಳೆಯಾಗಿ ಕಾಡುವ ನೋವನ್ನು ಹದವಾದ ನೆಲವೀಗ ಮನವು ಬಿತ್ತುತ್ತೇನೆ ಒಂದಿಷ್ಟು ಸಂತೋಷವನ್ನು ಸಂತೋಷವೆಂದರೆ ನೀನೇ.. ಅಂತಲ್ಲ ಸಾಂತ್ವನಪರಿಯರಿತ ಸ್ವಾರ್ಥ ಚೌಕಟ್ಟು ಮೀರಿದ ಸಂಗಾತ ನೀಡುವ...
ನಾನೇಕೆ ಬರೆಯುತ್ತೇನೆ? ಪ್ರಶ್ನಾರ್ಥಕ ದೃಷ್ಟಿಯಿಂದ ಯೋಚಿಸುತ್ತಿದ್ದೆ. ಒಂದು ದಿನ ಕುಳಿತುಕೊಂಡು ಸುಮ್ಮನೆ ಮತ್ತಷ್ಟು ಯೋಚನೆ ಮಾಡಿದೆ. ನನ್ನ ಮನದಲ್ಲಿ ನೂರಾರು ತರಹದ ಭಾವನೆಗಳು ಮೂಡಿಬಂದವು. ಬರೆಯುವುದು ಒಂದು ಕಲೆ. ಕೆಲವರು ಮಾತು….. ಬರಹ….. ಎಲ್ಲಾ ಶಕ್ತಿ ಇದ್ದರೂ ಸುಮ್ಮನೆ ಮೌನವಾಗಿ ಇದ್ದುಕೊಂಡು ಕೇವಲ ಓದುತ್ತಾರೆ ಅಷ್ಟೇ!. ಮತ್ತೊಂದೆಡೆ ಬರೆಯುವವರಿಗೆ ಮಾತುಗಾರಿಕೆ ಇರುವುದಿಲ್ಲ,...
. (ಇದುವರೆಗಿನ ಕಥಾಸಾರಾಂಶ: ಮಾಗಿದ ಬದುಕಿನ ಸಂಧ್ಯಾಕಾಲದಲ್ಲಿ, ಏಕಾಂಗಿಯಾಗಿ ಮನೆಯಲ್ಲಿದ್ದ ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ… ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಇನ್ನು ಮುಂದಕ್ಕೆ ಓದಿ) . ನನ್ನಪ್ಪ ನರಸಿಂಹಯ್ಯನವರಿಗೆ ಹೆಸರಿಗೆ ತಕ್ಕಂತೆ ನರಸಿಂಹನ...
ಮನದ ಒಳಗಡೆ ಬೆಂಕಿ ಕಿಡಿ ಹೊತ್ತಿಸಿ ಧರ್ಮಕ್ಕೆ ಹೊಸ ವ್ಯಾಖ್ಯಾನ ಬರೆದುದಾನಂದ ಶಬ್ದಗಳನ್ನೆಲ್ಲ ಶಸ್ತ್ರವಾಗಿಸಿ ವೀರ ಸನ್ಯಾಸಿಯಾದ ವಿವೇಕಾನಂದ॥ ಬಡವರೊಳಗಡೆ ದೇವರ ಕಂಡು ಎಲ್ಲರಿಗೂ ಗೌರವದಾನಂದ ಕೇಸರಿ ತೊಟ್ಟರೂ ಕ್ಷಾತ್ರ ತೇಜದ ನುಡಿಗಳು ವೀರ ಸನ್ಯಾಸಿ ವಿವೇಕಾನಂದ ॥ ತರುಣ ಜನಾಂಗಕೆ ನಾಯಕ ಮೂರ್ತಿ ಹೃದಯಾಂಗಣದಲಿ ತುಂಬಿದ...
ಸಾವಿತ್ರಿಬಾ ಫುಲೆಯವರ ಹೆಸರನ್ನು ಕೇಳಿದರೇನೇ ಮೈ ರೋಮಾಂಚನವಾಗುತ್ತದೆ. ಯಾಕೆಂದರೆ ಅವರು ಶತ ಮಾನಗಳಿಂದಲೂ, ಜನರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಅಕ್ಷರದವ್ವ, ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದೆ ಹೆಸರಾದವರು. ಇಂದು ನಾವೆಲ್ಲರೂ ಅವರ ದಾರಿಯಲ್ಲೇ ನಡೆದು, ಅವರ ಕನಸನ್ನು ನನಸು ಮಾಡಬೇಕಿದೆ. ಅವರು ಜನೆವರಿ 3,/1831 ರಲ್ಲಿ...
ಆರು ವರ್ಷಗಳ ಹಿಂದೆ ಸಂಕ್ರಾಂತಿ ಶುಭದಿನದಂದು ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಎಂದೇನೇ ಪ್ರಾರಂಭವಾದ ಚಂದದ ಹೆಸರಿನ ಹೆಮ್ಮೆಯ ಇ-ಪತ್ರಿಕೆ ‘ಸುರಹೊನ್ನೆ’ ಸೂರೆಗೊಂಡಿದೆ ಸಮಸ್ತ ಕನ್ನಡಿಗರ ಮನವನ್ನೆ. ಉದಯೋನ್ಮುಖ ಕವಿಗಳಿಗೆ ಕತೆಗಾರರಿಗೆ ಲೇಖಕರಿಗೆ ರೂಪಿಸಿದೆ ಇದು ಸರಿಯಾದ ವೇದಿಕೆಯನ್ನೆ ನುರಿತ ಲೇಖಕರಾಗುವಂತೆ ಮಾಡಿ ನೀಡಿದೆ ಅವರಿಗೆ ಸೂಕ್ತ...
2020 ರ ವರ್ಷ ಇಡೀ ಜಗತ್ತಿನ ಜನರೆಲ್ಲಾ ಕಂಗೆಡುವಂತೆ ಮಾಡಿದ್ದು , ಅನುಭವಿಸಿದ ಕಷ್ಟ- ನಷ್ಟಗಳ ನಡುವೆ ಎಲ್ಲಾ ಕ್ಷೇತ್ರಗಳೂ ಕ್ರಮೇಣವಾಗಿ ಯಥಾಸ್ಥಿತಿಗೆ ಬರುವಂತಾಗಿ , ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡು ಹೊಸ ರೀತಿಯ ಜೀವನಶೈಲಿಗೆ ನಮ್ಮನ್ನು ನಾವು ಹೊಂದಾಣಿಕೆ ಮಾಡಿಕೊಂಡೆವು. ಕಾರಣ ಪರಿಸ್ಥಿಗೆ ತಕ್ಕಂತೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ ...
ನಿಮ್ಮ ಅನಿಸಿಕೆಗಳು…