ಲಹರಿ

ಹುಟ್ಟು ಹಬ್ಬದ ಶುಭ ಹಾರೈಕೆಗಳು ಸುರಹೊನ್ನೆ

Share Button

 

ಆರು ವರ್ಷಗಳ ಹಿಂದೆ ಸಂಕ್ರಾಂತಿ ಶುಭದಿನದಂದು
ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಎಂದೇನೇ
ಪ್ರಾರಂಭವಾದ ಚಂದದ ಹೆಸರಿನ
ಹೆಮ್ಮೆಯ ಇ-ಪತ್ರಿಕೆ ‘ಸುರಹೊನ್ನೆ’
ಸೂರೆಗೊಂಡಿದೆ ಸಮಸ್ತ ಕನ್ನಡಿಗರ ಮನವನ್ನೆ.

ಉದಯೋನ್ಮುಖ ಕವಿಗಳಿಗೆ ಕತೆಗಾರರಿಗೆ ಲೇಖಕರಿಗೆ
ರೂಪಿಸಿದೆ ಇದು ಸರಿಯಾದ ವೇದಿಕೆಯನ್ನೆ
ನುರಿತ ಲೇಖಕರಾಗುವಂತೆ ಮಾಡಿ ನೀಡಿದೆ
ಅವರಿಗೆ ಸೂಕ್ತ ಪುರಸ್ಕಾರವನ್ನೆ
ಧರ್ಮ ರಾಜಕೀಯ ಮುಂತಾದ ವಿವಾದಗಳಿಂದ
ಕಾಯ್ದುಕೊಂಡಿದೆ ಇದು ಸರಿಯಾದ ಅಂತರವನ್ನೆ

ಈ(ಇ-) ಸುರಹೊನ್ನೆಯ ಒಡತಿ
ಆಗಿದ್ದಾರೆ ನಿಜವಾದ ಕನ್ನಡತಿ ಎಂಬುದರಲ್ಲಿ
ಅತಿಶಯೋಕ್ತಿ ಇಲ್ಲ ಎಂಬುದು ನಮ್ಮ ಭಾವನೆ.
ಅಲ್ಲದೆ ಸುರಹೊನ್ನೆ ಇನ್ನೂ ಹೆಚ್ಚಿನ ಯಶಸ್ಸು ಗಳಿಸಿ
ಮುಂದಕ್ಕೆ ಸಾಗಲಿ ಎಂಬುದು ಓದುಗರೆಲ್ಲರ ಶುಭಕಾಮನೆ..
‘ಹುಟ್ಟು ಹಬ್ಬದ ಶುಭ ಹಾರೈಕೆಗಳು ಸುರಹೊನ್ನೆ’

‘ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು’

-ಮಾಲತೇಶ ಹುಬ್ಬಳ್ಳಿ

4 Comments on “ಹುಟ್ಟು ಹಬ್ಬದ ಶುಭ ಹಾರೈಕೆಗಳು ಸುರಹೊನ್ನೆ

  1. ಬಹಳ ಸೊಗಸಾಗಿ ಸುರಹೊನ್ನೆಯನ್ನು ಕವಿತೆಯ ರೂಪದಲ್ಲಿ ಬಣ್ಣಿಸಿದ್ದೀರಿ ಸರ್. ಹಬ್ಬದ ಶುಭಾಶಯಗಳು ನಿಮಗೂ.

  2. ಸುರಹೊನ್ನೆಯ ಹುಟ್ಟು ಹಬ್ಬಕ್ಕೆ ಬಹಳ ಸೂಕ್ತವಾದ ಉಡುಗೊರೆಯನ್ನು ನೀಡಿದ್ದೀರಿ..ಸುಂದರ ಕವನ..ಎಲ್ಲರಿಗೂ ಶುಭಾಶಯಗಳು

  3. ನಮ್ಮೆಲ್ಲರ ಪ್ರೀತಿಯ ಸುರಹೊನ್ನೆಯ ಜನ್ಮದಿನವು ತಮ್ಮ ಸೊಗಸಾದ ಕವಿತೆಯಿಂದ ಭಾವಪೂರ್ಣವಾಗಿ ಆಚರಿಸಿದಂತಾಯ್ತು.. ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *