ವಿವೇಕಾನಂದ
ಮನದ ಒಳಗಡೆ ಬೆಂಕಿ ಕಿಡಿ ಹೊತ್ತಿಸಿ
ಧರ್ಮಕ್ಕೆ ಹೊಸ ವ್ಯಾಖ್ಯಾನ ಬರೆದುದಾನಂದ
ಶಬ್ದಗಳನ್ನೆಲ್ಲ ಶಸ್ತ್ರವಾಗಿಸಿ
ವೀರ ಸನ್ಯಾಸಿಯಾದ ವಿವೇಕಾನಂದ॥
ಬಡವರೊಳಗಡೆ ದೇವರ ಕಂಡು
ಎಲ್ಲರಿಗೂ ಗೌರವದಾನಂದ
ಕೇಸರಿ ತೊಟ್ಟರೂ ಕ್ಷಾತ್ರ ತೇಜದ ನುಡಿಗಳು
ವೀರ ಸನ್ಯಾಸಿ ವಿವೇಕಾನಂದ ॥
ತರುಣ ಜನಾಂಗಕೆ ನಾಯಕ ಮೂರ್ತಿ
ಹೃದಯಾಂಗಣದಲಿ ತುಂಬಿದ ಅಭಯದಾನಂದ
ಸ್ಫೂರ್ತಿಯ ಸೆಲೆಯನು ಸಾಗರವಾಗಿಸಿ
ಧುಮುಕಿಸಿದೆಲ್ಲರದರಲಿ ವಿವೇಕಾನಂದ ॥
ಬದುಕಿದ ದಿನಗಳು ತುಂಬಾ ಕಡಿಮೆ
ಬದುಕಿದಷ್ಟು ದಿನ ಸಿಂಹದ ಬದುಕಿನಾನಂದ
ಸೇವೆಯೇ ಶಿವನನು ತೋರುವ ಮಾರ್ಗ
ಕೇಸರಿ ಕ್ರಾಂತಿ ವಿವೇಕಾನಂದ ॥
-ಇಂದ್ರ, ಬೆಳಗಾವಿ
ಬದುಕಲ್ಲಿ ಭರವಸೆಯನ್ನು ತುಂಬುವಂತದ್ದು ವಿವೇಕಾನಂದರ ಪ್ರತಿಯೊಂದು ಮಾತು. ಸೋತೆ ಅನ್ನಿಸುವಾಗ, ಇಲ್ಲ, ಏನೂ ಮುಗಿದಿಲ್ಲ, ಇದೀಗ ಆರಂಭವಷ್ಟೇ ಅನ್ನುವುದನ್ನು ಅವರ ಸ್ಫೂರ್ತಿ ತುಂಬುವ ಮಾತುಗಳಲ್ಲಿ ನಾವು ಕಾಣಬಹುದು.
ನಮ್ಮ ದೇಶದ ವೀರಸನ್ಯಾಸಿ, ಸ್ವಾಮಿ ವಿವೇಕಾನಂದರ ಸ್ಪೂರ್ತಿಯುತ, ಮಾಣಿಕ್ಯದಂತಹ ಮಾತುಗಳು ಎಂದೆಂದಿಗೂ ಪ್ರಸ್ತುತ. .. ಸೊಗಸಾದ ಕವನ..ಧನ್ಯವಾದಗಳು.