ಮನಸ್ಸು

Share Button
.

ಮನಸ್ಸು ಇದು
ಬಲು ಸೂಕ್ಷ್ಮ
ಯೋಚಿಸದಿರಿ
ನಕಾರಾತ್ಮ

ಕೆಸರಲ್ಲಿಯ
ಕಂಬದಂತೆ
ವಾಲುವುದು
ತನ್ನಿಷ್ಟದಂತೆ

ಇದ್ದರೆ ಸಾಕು
ನಮ್ಮಲ್ಲಿ ಛಲ
ಅದುವೇ
ನಮ್ಮಯ ಬಲ

ಹಿಡಿತದಲ್ಲಿರಲಿ
ಮನಸ್ಸು
ಅದರಲ್ಲೆ ಅಡಗಿಹುದು
ನಮ್ಮಯ ಯಶಸ್ಸು

ಇಚ್ಛಾಶಕ್ತಿಯು
ಬಲವಾದುದು
ಇದರ ಮುಂದೆ
ಯಾವುದೂ ನಿಲ್ಲದು…..

-ಡಾ ನಂದಾ ಕೋಟೂರ

3 Responses

  1. ನಯನ ಬಜಕೂಡ್ಲು says:

    ನಿಜ. ಗಟ್ಟಿಯಾದ, ಸ್ಪಷ್ಟವಾದ ನಿಲುವನ್ನು ಹೊಂದಿರುವ ಮನಸ್ಸನ್ನು ಹೊಂದುವುದು, ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವುದು ನಮ್ಮ ಕೈಯ್ಯಲ್ಲೇ ಇದೆ.

  2. ಲಾವಣ್ಯ ಪ್ರಭಾ ಕೆ.ಎನ್. says:

    ತುಂಬಾ ಸಕಾರಾತ್ಮಕ ಕವಿತೆ, ಇಷ್ಟವಾಯ್ತು

  3. ಶಂಕರಿ ಶರ್ಮ, ಪುತ್ತೂರು says:

    ಕೆಸರಲ್ಲಿರುವ ಕಂಬದಂತೆ ಮನಸ್ಸು.. ಸೊಗಸಾದ ಭಾವ. ಗಟ್ಟಿ ಮನಸ್ಸಿನ ಅಗತ್ಯತೆಯನ್ನು ಒತ್ತಿ ಹೇಳುವ ಚಂದದ ಕವನ…ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: