Daily Archive: July 16, 2020
ವೈದ್ಯ ದೇವೋಭವ..!
ಮಾನವನ ಜೀವನಕ್ಕೆ ಧನ ಸಂಪತ್ತು ಮುಖ್ಯವೇ ಹೌದು. ಆದರೆ, ಅದಕ್ಕಿಂತಲೂ ಬೆಲೆಬಾಳುವ ಸಂಪತ್ತು ಇನ್ನೊಂದಿದೆ,ಅದೇ ಆರೋಗ್ಯ ಸಂಪತ್ತು! ರೋಗ ರುಜಿನಗಳು ದೇಹವನ್ನು ಆವರಿಸಿದಾಗ ಅವುಗಳ ಉಪಶಮನಕ್ಕೆ ವೈದ್ಯರ ನೆರವು ಅತ್ಯಗತ್ಯ.. ರೋಗಿಗಳಿಗೆ ವೈದ್ಯರೇ ದೇವರು. ಅದಕ್ಕೇ ಇದೆ ಈ ಮಾತು..’ವೈದ್ಯೋ ನಾರಾಯಣೋ ಹರಿ:’ ಇದಕ್ಕಾಗಿ, ಪಶ್ಚಿಮ...
ತ್ರಿಪದಿ ಮತ್ತು ಸಾಂಗತ್ಯ
ಚಿನುಮಯನ ರೂಪಕ್ಕೆ ಬೆರಗಾಗಿ ನಿಂತ್ಯಲ್ಲೊ ಹನುಮನೊಡೆಯನ ಮೂರ್ತಿನಿಜ ಕೀರ್ತಿ/ಆಗಸದಿ ತನಿಯಾಗಿ ಬೆಳಗಿದವೊ ಮೈಕಾಂತಿ ಮನಸಿನ ಮಾತಿಗೆ ಪದಗಳೆ ಬಾರವೊ ಮನ ಭಾರ ತಂಗಿ ಪದ ಭಾರ /ಒಡಲಿನ ಒಳಗುದಿ ಹೊರಗೆ ತರಲೆಂತೊ// ಮಾನಸ ಲೋಕಕ್ಕೆ ಹಲವು ಕಾಮನಬಿಲ್ಲು ಕಷ್ಟದ ಕಡಲಿಗು ನೊರೆಯೆಷ್ಟು ಹಾರುವ ಹೋರುವ ತೆರೆಮೊರೆದಾಡುವ ಆಡಿದ್ದೆ...
ನನ್ನ ದೇವರು….
ಆಜಾನು ಸುಪ್ರಭಾತ ಕೇಳಿ ಎದ್ದೇಳಿ ಏಳಿ ಎಂದು ಜನರನ್ನೂ ತನ್ನನ್ನೂ ಎಚ್ಚರಿಸಿಕೊಳ್ಳಲು ನನ್ನ ದೇವರೆಂದೂ ಮಲಗಿಲ್ಲ. ಹಾಲು ಮಜ್ಜನ, ತೀರ್ಥ ನೈವೇದ್ಯ ಉಪಚಾರ ಪಡೆದು; ಘಳಿಗೆ ನೋಡಿ ಬಾಗಿಲು ತೆಗೆಯಲು ನನ್ನ ದೇವರೆಂದೂ ಗುಡಿಯ ಮೂರ್ತಿಯಾಗಿಲ್ಲ. ಧೂಪ ದೀಪ ಮಂಗಳಾರತಿಗೆ ಪ್ರಸನ್ನವಾಗಿ ಸಾಲುನಿಂತ ಭಕ್ತಗಣ ಪರಿವಾರಕೆ ದರ್ಶನ...
ಕವಿ ಕೆ.ಎಸ್.ನ ನೆನಪು 3 : ವಿಸೀ ಹಾಗೂ ಕೆ ಎಸ್ ನ
ವಿಸೀ ಹಾಗೂ ಕೆ ಎಸ್ ನ ಕೃಷ್ಣಾರ್ಜುನ ಬಾಂಧವ್ಯ. ಕಾವ್ಯಲೋಕದ ಸಂದರ್ಭದಲ್ಲಿ ಕೆ ಎಸ್ ನ ಹಾಗೂ ವಿಸೀ ಅವರದ್ದು ಕೃಷ್ಣಾರ್ಜುನ ಬಾಂಧವ್ಯ.ಅದರಿಂದ ಆಚೆಗೂ ಪೂಜ್ಯ ವಿಸೀಯವರು ನಮ್ಮ ತಂದೆಯವರಿಗೆ ಆಪತ್ಬಾಂಧವರೇ.ಹಣಕಾಸು ಸಹಾಯ ,ಸಾಂತ್ವನ,ಬೆಂಬಲ ಹೀಗೆ ಹಲವಾರು ರೂಪಗಳಲ್ಲಿ ವಿಸೀಯವರು ನೆರವಾಗುತ್ತಿದ್ದರು. ವಿಸೀಯವರು ಮೈಸೂರಿನಲ್ಲಿದ್ದಾಗ ಹಾಗೂ ಬೆಂಗಳೂರಿದ್ದಾಗ ಕೆ ಎಸ್...
ಬೈಕರ್ ಗಳ ದುನಿಯಾ
ಬೈಕರ್ ಗಳನ್ನು ನೋಡಿದ್ದೀರಾ? ಬೈಕರ್ ಎಂಬ ಪದವನ್ನಾದರೂ ಕೇಳಿದ್ದೀರಾ? ಕೆಲವು ವರುಷಗಳ ಹಿಂದೆ ನನಗೂ ಅಷ್ಟೆಲ್ಲ ಪರಿಚಯವಿಲ್ಲದ ಶಬ್ದವಾಗಿತ್ತು ಈ “ಬೈಕರ್”. ಬೈಕ್ ಚಲಾಯಿಸುವವರು ಅಥವಾ ಆಸಕ್ತರು ಎಂಬ ಅಸ್ಪಷ್ಟ ಉತ್ತರವಷ್ಟೇ ನನ್ನ ಬಳಿ ಇದ್ದದ್ದು. ಹೆಣ್ಣುಮಕ್ಕಳಿಗೆ ಮದುವೆ ಆಗುತ್ತಲೇ ಹೊಸದೊಂದು ಪ್ರಪಂಚದ ಪರಿಚಯವಾಗುತ್ತದೆ ಅನ್ನುತ್ತಾರಲ್ಲ! ನನಗೆ...
ಹಳ್ಳಿ ಪಟ್ಟಣದ ನಡುವೆ ಕಳಚಿದ ಕೊಂಡಿ…
ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ.ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ,ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ ನನ್ನೆಲ್ಲ ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ ನನಗೆ ಮಜಬೂತು ಖಾತಿರ್ ದಾರಿಯ ಪ್ಲಾನ್ ಮಾಡಿಕೊಂಡಿದ್ದಳು. ಆತ್ಮೀಯತೆಯಿಂದ ನನ್ನನ್ನು...
ಸಂಜಯನ ದಿವ್ಯ ಚಕ್ಷು
ಮಾನವನ ಅಂಗಗಳಲ್ಲಿ ಕಣ್ಣು ಶ್ರೇಷ್ಠವಾದುದು. ದೃಷ್ಟಿಹೀನನ ಪಾಡು ಶೋಚನೀಯ. ಹೊರ ಪ್ರಪಂಚ ನೋಡಲಾರದವನು ನಿಜಕ್ಕೂ ದುರ್ದೆವಿ. ಅಂತಹವರಿಗೆ ಕಣ್ಣುಳ್ಳವರು ಸಹಾಯ ಹಸ್ತ ಚಾಚುವುದು ಮಾನವ ಸಹಜ ಗುಣ. ಜನ್ಮತಃ ಕಣ್ಣಿಲ್ಲದ ಹುಟ್ಟು ಕುರುಡರಿಗೆ ಕಣ್ಣು ನೀಡುವವರು ಸುದಾನಿಗಳು, ನೇತ್ರ ಹೀನನಿಗೆ ತಮ್ಮ ಕಣ್ಣುಗಳನ್ನು ದಾನ ಮಾಡುವುದು ನೇತ್ರದಾನಿಯ...
ಮಕ್ಕಳ ಸ್ಕೂಲು ಮನೇಲಲ್ವೇ…
ಒಂದು ಬೇಸಗೆ ರಜಾದಿನದಲ್ಲಿ ನಡೆದ ಘಟನೆ. ಸಂಜೆ ಸುಮಾರು 6.30 ರ ಸಮಯ. ಒಳಗೆ ಯಾವುದೋ ಕೆಲಸದಲ್ಲಿ ತೊಡಗಿದ್ದೆ. ಮನೆಯ ಮುಂದೆ ಬೀದಿಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ನನಗೆ ಠಳ್ ಎಂಬ ಶಬ್ಧ ಮುಂದುಗಡೆಯ ರೂಮಿನಿಂದ ಕೇಳಿಬಂತು. ಏನಾಯಿತೆಂದು ಹೊರಬಂದ ನನಗೆ ವೆರಾಂಡಾದ ಕಿಟಕಿಯ ಗಾಜು ಸೀಳಿಬಿಟ್ಟಿದ್ದು...
ನಿಮ್ಮ ಅನಿಸಿಕೆಗಳು…