Daily Archive: July 9, 2020
ಬಣ್ಣಬಣ್ಣದ ಮೀನು ಇತ್ಯಾದಿ ಜಲಚರ ಎಷ್ಟು ಸುಂದರ ನಾ ಕಂಡ ಆ ಪರಿಸರ ಜಾತಿ ಹಲವಾದರೂ ಒಂದೆಡೆ ಬಿಡಾರ ವಿಸ್ಮಿತಳಾದೆ ಕಂಡು ಆ ದೃಶ್ಯ ಮನೋಹರ ಅಲ್ಲಿತ್ತು ವಿವಿಧತೆಯಲ್ಲಿ ಏಕತೆ ಮನಸೂರೆಗೊಳಿಸಿತ್ತು ಅಲ್ಲಿಯ ಸಾಮ್ಯತೆ ತಮ್ಮಯ ಲೋಕಕ್ಕೆ ಸ್ವಾಗತಕೋರಿ ಆರಂಭಿಸಿತು ಮಾತುಕತೆ ನೀವಿಲ್ಲಿ ಅತಿಥಿ ನಿಮ್ಮ...
ವಿಶ್ವದ ಅತಿ ಪುಟ್ಟ ಅಂತರರಾಷ್ಟ್ರೀಯ ಸೇತುವೆ ಯಾವುದು? ಎಂದಾಗ ಥಟ್ ಅಂತ ಎಲ್ಲರ ಮನಸ್ಸಿಗೆ ಬರುವುದು ಯುಎಸ್‌ಎ ಹಾಗೂ ಕೆನೆಡಾದ ಝವಿಕಾನ್ ದ್ವೀಪಗಳ ನಡುವಿನ ಸೇತುವೆ. ಸೈಂಟ್ ಲಾರೆನ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆಯ ಉದ್ದಕೇವಲ 32 ಅಡಿ. ಝವಿಕಾನ್‌ನ ದೊಡ್ಡ ದ್ವೀಪ ಕೆನಡಾಗೆ ಸೇರಿದ್ದರೆ,...
ನಮ್ಮ ಅತ್ತೆಗೆ ಕನಸು ಬೀಳುತ್ತಿದ್ದದ್ದು ಜಾಸ್ತಿ. ಅವರಿಗೆ ಬಿದ್ದ ಕನಸಿನ ಬಗ್ಗೆ ನಾನು ದಿನಾ ಬೆಳಗ್ಗೆ ತಿಂಡಿ ತಿನ್ನುವಾಗ ಇಲ್ಲವೇ ಮಧ್ಯಾಹ್ನ ಊಟ ಮಾಡುವಾಗ ಕೇಳುತ್ತಿದ್ದೆ. ಅವರು ಅತಿ ಉತ್ಸಾಹದಿಂದ ಸ್ವಾರಸ್ಯವಾಗಿ ಹೇಳುವ ಕನಸನ್ನು ಕೇಳುವುದು, ನನಗೆ ಬಹಳ ಇಷ್ಟದ ಕಾರ್ಯವಾಗಿತ್ತು. ಒಮ್ಮೊಮ್ಮೆ ಬಿದ್ದ ಕನಸನ್ನು ಖುಷಿಯಿಂದ ಹೇಳುತ್ತಿದ್ದರು. ಕೆಲವೊಮ್ಮೆ, ಎಲ್ಲ ಅರ್ಧಂಬರ್ಧ...
ನಾಗಲೋಟದಿಂದ ಓಡುತ್ತಿದ್ದ ಪ್ರಪಂಚವನ್ನ ಈ ಕೋರೋನ ಅನ್ನೋ ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮ ಜೀವಿ ಹಿಡಿದು ನಿಲ್ಲಿಸಿರುವುದು ನಮ್ಮ ಈ ಕಾಲದ ಸೋಜಿಗವೇ ಸರಿ. ಯಾವ ದೇಶವನ್ನೂ ಬಿಡದೆ ಇಡೀ ಭೂಮಿಯ ಎಲ್ಲರನ್ನೂ ಮನೆಗೆ ಕಟ್ಟಿ ಹಾಕಿ ಆತಂಕದಿಂದ ದಿನ ದೂಡುವಂತೆ ಮಾಡಿಬಿಟ್ಟಿದೆ. ಇಡೀ ದೇಶಕ್ಕೆ ಲಾಕ್ಡೌನ್ ಘೋಷಣೆಯಾಗಿ ...
ನನ್ನ ಬಾಲ್ಯದ ದಿನಗಳು. ನಮ್ಮ ಮನೆಯಿಂದ ತುಸು ದೂರದಲ್ಲಿದ್ದ ಆ ಮರದ ತುಂಬೆಲ್ಲಾ ನೇರಳೆ ಹಣ್ಣನ್ನು ಹೋಲುವ ಕಪ್ಪು ಬಣ್ಣದ ಹಣ್ಣುಗಳು ತೊನೆದಾಡುತ್ತಿದ್ದವು. ಯಾಕೋ ತಿಂದು ನೋಡುವ ಮನಸ್ಸಾಯಿತು. ಹಣ್ಣಿನ ಸಿಪ್ಪೆ ತೆಗೆದಾಗ ಒಳಗೆ ಇತ್ತ ಕೇಸರಿಯೂ ಅಲ್ಲದ ಅತ್ತ ಹಳದಿಯೂ ಅಲ್ಲದ ಬೀಜಸಹಿತ ತಿರುಳು. ತಿಂದಾಗ...
ಕೊರೋನ ಪ್ರಯುಕ್ತ ಲಾಕ್ ಡೌನ್ ಆದಾಗ ನೆಮ್ಮದಿಯಿಂದ ಉಸಿರು ಬಿಟ್ಟಿದ್ದು ನಿಜಾ.ಜೀವ ಕೈಯಲ್ಲಿ ಇಟ್ಟುಕೊಂಡು ಕರ್ತವ್ಯಕ್ಕೆ ಹೋಗುವಂತಿಲ್ಲ ಅನ್ನೋ ಬಹು ದೊಡ್ಡ ಸಮಾಧಾನವಾಗಿ ನೆಮ್ಮದಿಯಾಯಿತು. ಬೆಳಗ್ಗೆ ಗಡಬಡಿಸಿ ಏಳುವಂತೆ ಇಲ್ಲ, ಒಂದೇ ಉಸಿರಿನಲ್ಲಿ ಮನೆ ಕೆಲಸ ಮಾಡಿ,ಅಡುಗೆ ತಿಂಡಿ ತಯಾರಿಸಿ,ಗಬಗಬನೆ ಒಂದಿಷ್ಟು ತಿಂದು ಓಡುವಂತೆ ಇಲ್ಲ, ಬಸ್ಸಿಗಾಗಿ ಕಾಯುವ ಒತ್ತಡವಿಲ್ಲ, ಸಂಜೆ...
ಕೆಲವು ದಿನಗಳ ಹಿಂದೆ ನಾನು ಅಮ್ಮನಲ್ಲಿ ನನಗೆ ಬಹಳ ಬೋರಾಗುತ್ತದೆ ಎಂದೆ. ಆಗ ಅಮ್ಮ ಸರಿ, ಏನಾದರೂ ಹೊಸ ಡ್ರಾಯಿಂಗ್ ಮಾಡು ಎಂದು ಇಂಟರ್ನೆಟ್ ನಲ್ಲಿ ಹುಡುಕಿ ಒಂದು ಪ್ಯಾಟರ್ನ್ ತೋರಿಸಿಕೊಟ್ಟರು. ಅದು ಬಹಳ ಸುಂದರವಾಗಿತ್ತು. ಆದರೆ ಬಹಳ ಕಷ್ಟವಿರುವ ಹಾಗೆ ಅನಿಸಿತು. ಇದು ನನ್ನಿಂದ ಆಗಲ್ಲ...
ಮೂರು ಸಾಲಿನಲ್ಲಿ ಬರೆದಿದ್ದೆಲ್ಲ ಹಾಯ್ಕುವಾಗುವುದಿಲ್ಲ. ಮತ್ತು ಪದೇಪದೇ ಬರೆದಿದ್ದನ್ನೇ ಬರೆದರೆ ಕವಿತೆಗಳಲ್ಲಿ ಯಾವ ಸೃಜನಶೀಲತೆಯೂ ಉಳಿದಿರುವುದಿಲ್ಲ. ಇರುವುದರಲ್ಲಿಯೇ ಹೊಸತನ್ನು ತರುವುದು ಇಂದಿನ ಕವಿಯ ಪಾಲಿಗಿರುವ ವರವೂ ಹೌದು, ಶಾಪವೂ ಹೌದು. ಬರವಣಿಗೆಯ ಮಜಾ ಇರುವುದೇ ಇಲ್ಲಿ. ಎಲ್ಲರೂ ಬರೆದಿದ್ದನ್ನೇ ಬರೆಯುವುದು ಕಲೆಗಾರಿಕೆಯಲ್ಲ. ಹಿಂದಿನವರು ಬರೆದಿದ್ದನ್ನೇ ಮುಂದುವರಿಕೆಯಂತೆ ಬರೆಯುವುದರಲ್ಲಿ...
ಈಗಲೂ ನನ್ನೀ ಹೃದಯ ನೆತ್ತರು ಚಿಮ್ನುತಿದೆ ನಿತ್ಯವೂ ಮಿಡಿಯುತಿದೆ ಬದುಕಿಗಾಗಿ ತುಡಿಯುತಿದೆ ಖಾಲಿಯಿದೆ ಹೃದಯ ದಣಿವಿಲ್ಲ ಗುರಿಯಿಲ್ಲ ಕನಸುಗಳು ಮೂಡುತಿಲ್ಲ ಯಾವುದೋ ನೋವಿನಲ್ಲಿ ಹೇಳಲಾರೆ ದನಿಯಿಲ್ಲ ಯಾತರದ್ದೋ ಗೊಣಗಾಟ ಯಾರಿಗಾಗಿಯೋ ಹೆಣಗಾಟ ತೂರಿ ಬರುತಿದೆ ಬಿರುಗಾಳಿ ಬೀಸುತಿದೆ ಮುಗಿಲೊಂದಾಗಿ ಹಾರಿಹೋಗದು ಜೀವ ಹೃದಯವಂತೂ ಇನ್ನೂ...
‘ತೆರೆದ ಬಾಗಿಲು’ ಕವನ ಸಂಕಲನ;ನಿಘಂಟು ಬ್ರಹ್ಮ ಜಿ ವಿ ಅವರ ಪಾತ್ರ ನಮ್ಮ ತಂದೆಯವರು 1960ರಲ್ಲಿ ಪ್ರಕಟವಾದ ಮನೆಯಿಂದ ಮನೆಗೆ ನಂತರ 1977ರಲ್ಲಿ ಪ್ರಕಟವಾದ ‘ತೆರೆದ ಬಾಗಿಲು’ ವರೆಗೆ ಯಾವುದೇ ಕೃತಿಯನ್ನು ಹೊರತಂದಿರಲಿಲ್ಲ.ಅವರು ಈ ವಿರಾಮವನ್ನು ಜನಜೀವನವನ್ನೂ,ವಿದ್ಯಮಾನಗಳನ್ನೂ ಗಮನಿಸುವ/ಗ್ರಹಿಸುವ ಅವಧಿ ಎಂದು ಭಾವಿಸಿದ್ದರು.ಅದು ನವ್ಯಕಾವ್ಯದ ಏರುಕಾಲವೆಂದು ಪರಿಗಣಿತವಾಗಿತ್ತು ಎಂಬುದು ವಾಸ್ತವ.ನಮ್ಮ ತಂದೆಯವರಂತೆ...
ನಿಮ್ಮ ಅನಿಸಿಕೆಗಳು…