Daily Archive: July 2, 2020
*ಅರಳಿತು ಮೈಸೂರ ಮಲ್ಲಿಗೆ. ಇದು ಕೃಷ್ಣಶಾಸ್ತ್ರಿಗಳ ಕೃಪೆ* “ಅವತ್ತು ಕೃಷ್ಣಶಾಸ್ತ್ರಿಗಳ ಊಟದ ಏರ್ಪಾಡು ಬಹಳ ಜೋರಾಗಿತ್ತು.ಮಹಾರಾಜಾ ಕಾಲೇಜು ಅಂಗಳದಲ್ಲಿ ನೆಲದ ಮೇಲೆ ಬಾಳೆ ಎಲೆ,ಪ್ರತಿ ಎಲೆ ಮುಂದೂ ರಂಗೋಲೆ.ಚಿರೋಟಿ,ಗಸಗಸೆ ಪಾಯಸ ಮಾಡಿಸಿದ್ದರು.ಸ್ವತಃ ಕೃಷ್ಣಶಾಸ್ತ್ರಿಗಳೇ ಪ್ರತಿಯೊಬ್ಬರಿಗೂ ಚಿರೋಟಿ ಬಡಿಸ್ತಾ ಇದ್ರು…..” ಇದು ಸಾಮಾನ್ಯವಾಗಿ ನಮ್ಮ ಅಪ್ಪ ಅಪರೂಪಕ್ಕೆ ಬಂದ ನೆಂಟರೊಂದಿಗೆ ಹಂಚಿಕೊಳ್ಳುತ್ತಿದ್ದ ಸವಿನೆನಪುಗಳು. ಅಡುಗೆಮನೆಯಲ್ಲಿರುತ್ತಿದ್ದ ಅಮ್ಮ...
ಇತ್ತೀಚೆಗೆ ಫ಼ೇಸ್ ಬುಕ್ ನಲ್ಲಿನ ಎಳೆ ಗೆಳತಿಯ ವಾಲ್ ನಲ್ಲಿ ಪುನರ್ಪುಳಿ (ಬೀರುಂಡ) ಎಲೆಯ ಚಟ್ನಿಯ ರೆಸಿಪಿ ನೋಡಿದೆ. ಹಳ್ಳಿ ಮೂಲದಿಂದ ಬಂದ ನಮಗೆ ಪುನರ್ಪುಳಿ ಹಣ್ಣಿನ ಜ್ಯೂಸ್, ಸಿಪ್ಪೆಯ ಸಾರು, ಹಣ್ಣಿನಲ್ಲಿ ಸಕ್ಕರೆ ತುಂಬಿ ಬಿಸಿಲಿಗಿಟ್ಟು ಅಮ್ಮ ಮಾಡುತ್ತಿದ್ದ ಸಿರಪ್ ಎಲ್ಲ ನೆನಪಾಗಿ ಕುತೂಹಲದಿಂದ ಆಕೆಯ...
ಮಧ್ಯಾಹ್ನದ ಊಟವಾದ ನಂತರ ಹಾಗೇ ಸೋಫಾದಲ್ಲಿ ಒರಗಿ ಪೇಪರ್ ಓದುತ್ತಿದ್ದೆ. ಸ್ವಲ್ಪಜೊಂಪು ಬಂದಂತಾಗುತ್ತಿತ್ತು. ಆದರೂ ಕಷ್ಟಪಟ್ಟು ನನ್ನ ಆಸಕ್ತಿಯ ವಾರದ ಕಥೆಯನ್ನು ಓದುತ್ತಿದ್ದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ಧ್ವನಿ ಬಂದಂತಾಯ್ತು. ‘ಅಮ್ಮಾ ಇದೇನು ಮಾಡಿಬಿಟ್ಟಿರಿ? ನೀವು ಮಾಡಿದ್ದು ಸರಿಯಾ? ಈ ಮನೆಯಲ್ಲಿ ಇಪ್ಪತ್ತೆರಡು ವರ್ಷಗಳಿಂದ ಕುಟುಂಬದ...
ಕಪ್ಪು ಕಪ್ಪು ಎಂದೇಕೆ ಬಿಕ್ಕುವೆ? ಕಪ್ಪಗಿರುವುದೇ ತಪ್ಪೇ? ತೆಪ್ಪಗಿರು ಕಪ್ಪು ಕೀಳಲ್ಲ ಬಿಳುಪು ಮೇಲಲ್ಲ ಬಣ್ಣಗಳಲ್ಲಿ ಒಡಕಿಲ್ಲ ಯಾರಿಗೆ ಯಾವ ಬಣ್ಣ ಪ್ರಕೃತಿ ನಿರ್ಧಾರ ಅದಕ್ಕೆ ಹಚ್ಚಬೇಡ ಸುಣ್ಣ ಕೃತಕ ಬಣ್ಣಕ್ಕಿಲ್ಲ ಬಾಳಿಕೆ ಬಣ್ಣಬೆರೆತ ಮಾತಿಗಿಲ್ಲ ಏಳಿಗೆ ಬೇಡ ರಂಗುಗಳ ಹಂಗು ವರ್ಣ ವರ್ಣನೆ ಬರೀ ಬೆಂಡು ಬಣ್ಣ...
ಕುರುಡ ಧೃತರಾಷ್ಟ್ರ ಪಾಂಡವರ ಪ್ರಗತಿಗೆ ಮತ್ಸರ ತಾಳಿ ಅರಗಿನ ಮನೆಯಲ್ಲಿ ಸುಡಿಸಲು ಯತ್ನಿಸಿದ್ದು ತಿಳಿದಿದೆ. ಪಾಂಡವರು ಅಲ್ಲಿಂದ ಹೇಗೋ ಪಾರಾಗಿ ಏಕಚಕ್ರನಗರಕ್ಕೆ ಬಂದು ಭಿಕ್ಷೆ ಬೇಡಿ ತಂದದ್ದನ್ನು ಅವರಮ್ಮನಿಗೆ ಕೊಟ್ಟರೆ ‘ಅರ್ಧಪಾಲು ವೃಕೋದರಂಗೆ’. ಆದರೆ ವೃಕೋದರನಿಗೋ ಅದು ಏನೇನೂ ಸಾಲದೆ ಸದಾ ಕಾಲ ಅವನಿಗೆ ಅರೆಹೊಟ್ಟೆಯೇ ಆಗಿದ್ದಾಗ ಬಕಾಸುರನಿಗಾಗಿ ಕಳಿಸಿದ್ದ ರಾಶಿ...
1 ಹತ್ತು ನಿಮಿಷದಲೊಂದು ಕವಿತೆಯ ಹೆತ್ತು ಮಾತೆಯಾಗುವ ಮಾತೆ ಬೇಡ ನವಮಾಸ ತುಂಬಿ ಹಡೆಯಲಿ ಕೂಸು ಹೊರದನಿಯ ದಾರಿಯಲಿ ಹೆಕ್ಕ ಸಿಕ್ಕಿದ ಚೂರು ಒಳದನಿಯ ತಮ್ಮಟೆಯ ಬಡಿದು ಬಡಿದು ಕಣ್ಣುಕಿವಿಗಳು ಎಲ್ಲ ಏಕ ಇಂದ್ರಿಯವಾಗಿ ಹೊರದನಿಯ ಬಿಡಿಚೂರು ಒಳದನಿಯ ಶಿಶುವಾಗಿ ಅಂಗಾಂಗ ತುಂಬಿ ಜೀವರಸವಾಡಿ ಪ್ರಾಣವಾಯುವ...
ತಂಪು ತಾಣ ಡಾರ್ಜಿಲಿಂಗ್ ಸುಂದರ ನಾಮ್ಚಿ ಶಿವ ಮಂದಿರಗಳ ದರ್ಶನವು ಎಲ್ಲರಲ್ಲೂ ಧನ್ಯತಾ ಭಾವನೆ ಮೂಡಿಸಿತ್ತು. ಅಲ್ಲಿಂದ ಸುಮಾರು 50ಕಿ.ಮೀ. ದೂರದಲ್ಲಿದೆ, ಕನಸಿನ ತಂಪು ತಾಣ ಡಾರ್ಜಿಲಿಂಗ್ (ಗೇಂಗ್ಟೋಕ್ ನಿಂದ 98ಕಿ.ಮೀ). ವಾಹ್ ..! ಡಾರ್ಜಿಲಿಂಗ್ ಎಂದರೆ ಮೈಯೆಲ್ಲಾ ನವಿರೇಳುವುದು! ಪ್ರಕೃತಿದೇವಿಯ ಹಣೆ ಮೇಲಿನ ಸಿಂಧೂರದಂತೆ ರಾರಾಜಿಸುತ್ತಿದೆ ಇದು ಹಿಮಾಲಯದ ತಪ್ಪಲಲ್ಲಿ....
ಕಪಿಲ ಪಿ ಹುಮನಾಬಾದೆ ಅವರು ಬರೆದ “ಹಾಣಾದಿ” ಕಾದಂಬರಿಯು ಬಹಳ ಚೆನ್ನಾಗಿ ಮೂಡಿ ಬಂದಿದೆ. ಯಾವುದಾದರೂ ಚಲನಚಿತ್ರ ನಿರ್ದೇಶಕ ಇದನ್ನು ಓದಿದರೆ ಇದರ ಮೇಲೊಂದು ಚಿತ್ರವನ್ನು ಮಾಡುವ ಚಿಂತನೆಯನ್ನು ಮಾಡಿಯಾರು ಎಂದು ನನಗನ್ನಿಸಿತು. ಇದರಲ್ಲಿ ಆರಂಭದಿಂದ ಕೊನೆಯವರೆಗೂ ರೋಚಕತೆ ಹಾಗೂ ಕುತೂಹಲವನ್ನು ಕಾಪಾಡಿಕೊಂಡು ಬರಲಾಗಿದೆ. ಕೊನೆಯಲ್ಲಿ ಗುಬ್ಬಿ ಆಯಿ ಮೃತ ಆತ್ಮವೆಂದು...
ನಮ್ಮ ಬಾಲ್ಯದ ದಿನಗಳ ನೆನಪು. ಬಾನಂಗಳದಲ್ಲಿ ಚುಕ್ಕಿಗಳು ಮೂಡುವ ವೇಳೆಗೆ ಮನೆ ಅಂಗಳದಲ್ಲಿ ಚಾಪೆ ಹಾಕಿ ಮಕ್ಕಳೆಲ್ಲ ಅಲ್ಲಿ ಹಾಜರಿ ಇರುತ್ತಿದ್ದೆವು. ಅಡಿಕೆಲೆ ಚೀಲದಿಂದ ಒಂದೆರಡು ಪೇಡಡಿಕೆ ತೆಗೆದು ಬಾಯಿಗೆ ಹಾಕಿಕೊಂಡು, ತೋರು ಬೆರಳಲ್ಲಿ ಸುಣ್ಣದ ಡಬ್ಬಿಯಿಂದ ತೆಗೆದ ಸುಣ್ಣವನ್ನ ವೀಳ್ಯದೆಲೆಗೆ ಸವರಿ, ಎಲೆಮುದುರಿ ಬಾಯಿಗಿಟ್ಟು ಅಗಿದು,...
ಭಾವದ ಭಾರ ಹೊತ್ತ ಕಾರ್ಮುಗಿಲು ಪಳ್ ಪಳಾರೆಂದು ಸಿಡಿಮಿಡಿಯುತ್ತಾ ಇನ್ನು ಹೊರಲಾರೆನೆಂದು ಗುಡುಗುಡಿಸುತ್ತಾ ಒಮ್ಮೆಲೇ ಸುರಿಸಿತ್ತು ಧೋ..ಧೋ..ಮಳೆ ಭಾವದ ಬರ ಹೊತ್ತ ಇಳೆ ಹನಿ ನೀರಿಗಾಗಿ ಪರಿತಪಿಸುತ್ತಾ ಬಿಡುಸುಯ್ವ ಬೇಗೆಯಲಿ ಬೇಯುತ್ತಾ ಕಾಯುತ್ತಿತ್ತು ತೊಳೆದುಕೊಳ್ಳಲು ತನ್ನ ಕೊಳೆ. ಒಮ್ಮೆಲೇ ಸುರಿದ ಕುಂಭದ್ರೋಣ ಮಳೆಗೆ ಇಳೆ ಕೊಚ್ಚಿ,….ಕೋಡಿ ಕವಲುಗಳೊಡೆದು...
ನಿಮ್ಮ ಅನಿಸಿಕೆಗಳು…