Daily Archive: July 23, 2020
ಪುತಿನ ಹಾಗೂ ಕೆ ಎಸ್ ನ ;ಭಿನ್ನಕಾವ್ಯಮಾರ್ಗದ ಆತ್ಮೀಯರು ಭಿನ್ನಕಾವ್ಯಮಾರ್ಗವನ್ನು ಅನುಸರಿಸುತ್ತಿದ್ದರೂ ನಮ್ಮ ತಂದೆ ಹಾಗೂ ಪುತಿನ ಆತ್ಮೀಯ ಸ್ನೇಹವನ್ನು ಹೊಂದಿದ್ದರು.ಇಬ್ಬರಲ್ಲೂ ಒಂದು ವಿಷಯದಲ್ಲಿ ಸಾಮ್ಯತೆ ಇತ್ತು.ಅದೆಂದರೆ ಇಬ್ಬರೂ ಅಕಡೆಮಿಕ್ ವಲಯದಿಂದಾಚೆ ರೂಪುಗೊಂಡ ಕವಿಗಳು.ಪುತಿನರವರು ಸೈನ್ಯದಲ್ಲಿ ಉದ್ಯೋಗದಲ್ಲಿದ್ದರೆ ,ನಮ್ಮತಂದೆ ಹೌಸಿಂಗ್ ಬೋರ್ಡ್ ನಲ್ಲಿ ಇದ್ದವರು. ಇಬ್ಬರೂ ಸಮಾರಂಭಗಳಲ್ಲಿ ಅಲ್ಲದೆ ಖಾಸಗಿಯಾಗಿ ಅಪರರೂಪಕ್ಕಾದರೂ ಭೇಟಿಯಾಗುತ್ತಿದ್ದರು.ನಾವು...
ಲಕ್ಷೋಪಲಕ್ಷ ಸುಡು ಸುಡುವ, ಕೊರೆ ಕೊರೆವ, ಹೊಗೆ-ಧಗೆಯ, ನರಪಿಳ್ಳೆ, ಅರೆಪಿಳ್ಳೆ, ಜಂತು ಜೀವಾಣುಗಳಿಲ್ಲದ, ನೀರು-ನಿಡಿ ಸುಳಿಗಾಳಿಗಳಿಲ್ಲದ ಭಯಂಕರ ಗ್ರಹಗಳ ಬಿಟ್ಟು ಈ ಭುವಿಯಲ್ಲಿ ಇಳಿದದ್ದು! ಕೆಂಪೊಡೆವ ಸೂರ್ಯ, ತಂಪಿಡುವ ಚಂದ್ರರು ಮೆರೆದು ಕಾಪಿಡುವ, ಹಸಿರು ಕಾನನ, ನೀಲ ಬಾನಿನ, ಹಳದಿ ಕಿತ್ತಳೆ ಕಂದು ನೇರಳೆ ಬಣ್ಣದೋಕುಳಿಯ ನೆಲೆವೀಡಿನಲ್ಲಿ...
ಮನುಷ್ಯನಿಗೆ ಬಗೆಬಗೆಯ ಪಾಠ ಕಲಿಸಿ ಬದುಕನ್ನು ರೂಪಿಸುವುದರಲ್ಲಿ ಅನುಭವಗಳ ಪಾತ್ರ ಬಹಳ ದೊಡ್ಡದು. ಕೆಲವು ಅನುಭವಗಳು ಮತ್ತೆ ಮತ್ತೆ ಮೆಲುಕು ಹಾಕುವಂತಿದ್ದರೆ ಇನ್ನು ಕೆಲವನ್ನು ಮರೆಯಲು ಹರ ಸಾಹಸ ಮಾಡುತ್ತೇವೆ. ಕೆಲವು ಅನುಭವಗಳನ್ನು ಹಾದು ಬರುವಾಗ ಕಷ್ಟ ಎನಿಸಿದ್ದರೂ ನಂತರ ಅವನ್ನು ನೆನೆಸಿಕೊಂಡು ಮುದಗೊಳ್ಳವುದೂ ಉಂಟು. ಈ...
ಅದು ನಮ್ಮ ಮದುವೆಯಾದ ಹೊಸತು. ನಾವಾಗ ಬೆಂಗಳೂರಿಗೆ ಹೋಗಿದ್ದೆವು. ನೂತನ ದಂಪತಿಗಳಿಗೆ ಅಂತಹ ಜವಾಬ್ದಾರಿಗಳೇನು ಇರುವುದಿಲ್ಲ. ಆ ದಿನಗಳಲ್ಲಿ ಅವರನ್ನು ಊರೂರಿನಲ್ಲಿರುವ ಬಂಧು ಬಳಗದವರು ಕರೆದು ಕಳಿಸುವುದು ನಮ್ಮ ಕಡೆಯ ವಾಡಿಕೆ. ನಾವು ಸಹ ಹಾಗೆಯೇ ಬೆಂಗಳೂರಿನಲ್ಲಿರುವ ನಮ್ಮ ಬಂಧುಗಳ ಮನೆಗೆಂದು ಹೋಗಿದ್ದು. ಅಲ್ಲಿ ಮೂರ್ನಾಲ್ಕು ದಿನಗಳಿದ್ದು,...
ನಿಷಧ ದೇಶದಲ್ಲಿ ನಳನೆಂಬ ರಾಜಕುಮಾರನಿದ್ದನು. ಅತಿ ಗುಣಸಂಪನ್ನನು, ಮಹಾಬಲಶಾಲಿಯು ಆಗಿದ್ದು, ತನ್ನ ಪರಾಕ್ರಮ, ತೇಜಸ್ಸಿನಿಂದಲೇ ಅವನು ಚಕ್ರವರ್ತಿಯಾಗಿ ಅನೇಕ ರಾಜರುಗಳ ರಾಜನಾಗಿ ಆಳ್ವಿಕೆ ಮಾಡುತಿದ್ದನು. ಆತನು, ವೇದಾಧ್ಯಯನ ಸಂಪನ್ನನಾಗಿ, ಬ್ರಹ್ಮನಿಷ್ಟನಾಗಿದ್ದು, ಅಶ್ವಪರೀಕ್ಷೆಯಲ್ಲಿ ನಿಷ್ಣಾತನಾಗಿದ್ದನು. ಅವನ ಸೌಂದರ್ಯಕ್ಕೆ ಮಾರುಹೋಗದವರೇ ಇರಲಿಲ್ಲ. ರೂಪು, ಸಂಪತ್ತು, ಯೌವ್ವನ ಇದೆಲ್ಲವೂ ಇದ್ದರೂ, ಸೌಜನ್ಯವರಿತ...
ಶ್ರಾವಣ ಬಂತೆಂದರೆ ಹಿಂದೂಗಳಲ್ಲಿ ಒಂದೊಂದೇ ಹಬ್ಬಗಳು ಪ್ರಾರಂಭಗೊಳ್ಳುತ್ತವೆ.ಈ ನಿಟ್ಟಿನಲ್ಲಿ ನಾಗರಪಂಚಮಿ ಮೊದಲನೆಯದು.ಈ ಬಾರಿ ಇದೇ ಜುಲೈ 25 ಕ್ಕೆ ನಾಗರಪಂಚಮಿ. ಹಿಂದೂಗಳು ನಾಗಾರಾಧಕರು. ಏಕೆಂದರೆ ನಾಗನು ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪ. ಗಣೇಶನ ಉದರ ಬಂಧವೂ ಹೌದು.ಶಿವನ ಕಂಠಾಭರಣ. ವಿಷ್ಣುವಿನ ತಲ್ಪ!ಶೇಷಶಯನನಲ್ಲವೇ?. ಕನ್ಯಾಕುಮಾರಿಯಿಂದ ಗೋಕರ್ಣದವರೆಗಿನ ಪರಶುರಾಮ ಕ್ಷೇತ್ರವನ್ನು...
ಬ್ಯಾಂಕಾಕ್ ನಿಂದ ಪಶ್ಚಿಮಕ್ಕೆ ಸುಮಾರು ಮೂವತ್ತೇಳು ಮೈಲಿ ದೂರದಲ್ಲಿಥೈಲ್ಯಾಂಡಿನ ಸಮುತ್ ಸಾಂಗ್‌ಕ್ರಾಮ್ ಮೇಕ್ಲಾಂಗ್ ರೈಲ್ವೆ ಮಾರುಕಟ್ಟೆಇದೆ. ಇದು ಏಷ್ಯಾದ ಬೇರಾವುದೇ ದೊಡ್ಡ ಕಟ್ಟಡ ರಹಿತ ಮಾರುಕಟ್ಟೆಯಂತೆಯೇ ಕಾಣುತ್ತದೆ. ಉಷ್ಣವಲಯದ ಹಣ್ಣುಗಳು ಮತ್ತು ತರಕಾರಿಗಳು, ಲಿಚಿ(ಮಜ್ಜಿಗೆ ಹಣ್ಣು), ದುರಿಯನ್ (ಮುಳ್ಳು ಹಲಸು), ಕಣ್ಣಿಗೆರಾಚುವಂತೆ ಜೋಡಿಸಿರುವ ಬಣ್ಣದ ಮಾವುಗಳು, ವಿವಿಧ...
ಯಾವ ಬೇಗುದಿಯಲೋ ಅದಾವ ಸಂತಸದಲೋ ಯಾರೋ ಹೊಸೆದ ಬತ್ತಿಗಳಿಗೆ ನಾನಿಲ್ಲಿ ಬೆಂಕಿಯ ಕಿಡಿಯನಿತ್ತೆ. ಹೊತ್ತಿ ಉರಿಯಿತೋ ಜ್ವಾಲೆ ಬೆಳಗಿ ತೋರಿತೋ ದೀಪ ಆದರೀ ಕ್ಷಣಕೆ ಅದನು ಕಾಣಲಾರೆ.. ಯಾರದೋ ಹಣೆಬೆವರು ಯಾವುದೋ ಹನಿ ನೀರು; ನೆನೆದ ನೆಲಕೆ ಬಿದ್ದ ಬೀಜ- ನೂರು ಬುತ್ತಿ; ಉಂಡು ಚೆಲ್ಲಿದ ಅನ್ನ...
ಮದುವೆಗೂ ಮುಂಚೆ ವಧುಪರೀಕ್ಷೆ ಮತ್ತು ವರ ಪರೀಕ್ಷೆ ನಡೆದೇ ನಡೆಯುತ್ತವೆ.ಅದು ಸಹಜ ಕೂಡ. ವರ ಅಥವಾ ವಧುವಿಗೆ ಈ ಪರೀಕ್ಷೆಗಳಲ್ಲಿ ಪಾಸಾಗುವುದು ಅನಿವಾರ್ಯ. ಹುಡುಗ ಹುಡುಗಿಯನ್ನು ನೋಡಿ ಪರಸ್ಪರ ಒಪ್ಪಿಗೆಯಾದರೆ ಮಾತ್ರ ಮದುವೆ. ಆದರೆ ಈ ಹಂತದಲ್ಲಿಯೇ ಎಷ್ಟೋ ಹುಡುಗರಿಗೆ ಹುಡುಗಿ ಇಷ್ಟವಾಗುವುದಿಲ್ಲ. ಹಾಗೆ ಹುಡುಗಿಗೂ ಹುಡುಗ ಇಷ್ಟವಾಗುವುದಿಲ್ಲ. ಹಾಗೆ ಇಷ್ಟವಾಗದಿರುವುದಕ್ಕೆ...
ನನ್ನ ಮಗ ಇನ್ನೂ ಎರಡು ವರ್ಷದವನಾಗಿದ್ದಾಗಲೇ, ನಾನೂ ನನ್ನ ಗಂಡ ಇಬ್ಬರೂ ಉದ್ಯೋಗಸ್ಥರಾದ್ದರಿಂದ ಮನೆಯಲ್ಲಿ ನೋಡಿಕೊಳ್ಳುವ ಜನರಿಲ್ಲದೇ ಬಹುಬೇಗ ಒಂದು ಪ್ರೀ ಸ್ಕೂಲ್ ಗೆ ಸೇರಿಸಬೇಕಾಯಿತು. ಅಲ್ಲಿ ಅವನ ಮಿಸ್ ತುಂಬ ಸ್ನೇಹಮಯಿ, ಹಸನ್ಮುಖಿ,ಅಪಾರ ಹಾಸ್ಯಪ್ರಜ್ಞೆ ಯುಳ್ಳ ಲೀಲಾ ಮಿಸ್ ಬಹು ಬೇಗ ಅವನ ಮನ ಒಲಿಸಿಕೊಂಡು ಬಿಟ್ಟರು.ಹೋದ...
ನಿಮ್ಮ ಅನಿಸಿಕೆಗಳು…