Daily Archive: May 15, 2025
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 9:ಕಾಂಬೋಡಿಯಾದ ಸೀಮ್ ರೀಪ್ ನಲ್ಲಿ 23 ಸೆಪ್ಟೆಂಬರ್ 2024 ರಂದು ಮಧ್ಯಾಹ್ನ ಕಾಂಬೋಡಿಯಾ ತಲಪಿದ ಆದಿನ ಸಂಜೆ ನಮಗೆ ಪೂರ್ವ ನಿಗದಿತ ಕಾರ್ಯಕ್ರಮಗಳೇನೂ ಇರಲಿಲ್ಲ. ಅರ್ಧದಿನದ ಚಿಕ್ಕ ಕಾರ್ಯಕ್ರಮವಿದ್ದರೆ ಒಳ್ಳೆಯದಿತ್ತು ಅನಿಸಿತ್ತು. ಮಾರ್ಗದರ್ಶಿ ಚನ್ಮನ್ ನಮಗೆ ಎದುರು ಕಾಣಿಸುತ್ತಿದ್ದ ನದಿ, ಸೇತುವೆ ಹಾಗೂ...
ನಾರಾಯಣರಾವ್ ನನ್ನ ಬಾಲ್ಯದ ಸಹಪಾಠಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಣ್ಣ ಹಳ್ಳಿಯಿಂದ ಓದಲು ಬೆಂಗಳೂರಿಗೆ ಬಂದಿದ್ದಾತ. ಅವನು ಓದಿನಲ್ಲಿ ತುಂಬ ಆಸಕ್ತಿ ಇಟ್ಟುಕೊಂಡಿದ್ದ ಮೇಧಾವಿ. ಅವನು ಬೆಳೆದು ಬಂದ ಬಡತನದ ಹಿನ್ನೆಲೆಯೇ ಅವನಿಗೆ ಈ ರೀತಿಯ ಮನೋಭಾವನೆ ಬೆಳೆಯಲು ಪ್ರೇರಣೆ. ಚೆನ್ನಾಗಿ ಓದಿ ದೊಡ್ಡ ಹುದ್ದೆಯನ್ನು ಸಂಪಾದಿಸಿ...
43.ಅಷ್ಟಮಸ್ಕಂದ – ಅಧ್ಯಾಯ -2ಸಮುದ್ರ ಮಥನ – 5 ಅಮೃತೋತ್ಪತ್ತಿಯಾಯಿತೆಂಬಹರ್ಷೋಧ್ಗಾರಎಲ್ಲೆಡೆ ವ್ಯಾಪಿಸಿದೇವದಾನವರು ಸಂಭ್ರಮಿಸುತಿರೆಕೆಲದಾನವರು ಮುನ್ನುಗ್ಗಿಧನ್ವಂತರಿ ಹಸ್ತದಿಂಅಮೃತ ಕಳಶವ ಅಪಹರಿಸಿಓಡಿದಾಗದೇವತೆಗಳು ದಿಗ್ಭಾಂತರಾಗಿತಮ್ಮೆಲ್ಲ ಶ್ರಮ ನಿರರ್ಥಕವಾಯಿತೆಂದುಪರಿತಪಿಸುತಅಮೃತ ಪ್ರಾಪ್ತಿಯಿಂದಅಸುರರು ಅಮರರಾಗಿಬಲಾಢ್ಯರಾಗಿಮೆರೆಯುವರೆಂಬ ಭಾವದಿಂವ್ಯಸನಾಕ್ರಾಂತರಾದವರಸಂತೈಸಿದ ಭಗವಂತಅದೃಶ್ಯನಾದ ಸ್ವರ್ಗಲೋಕದಿಂ ಇಳಿದು ಬಂದಂತೆಭುವನಮೋಹಕ ಸ್ರ್ತೀರೂಪವೊಂದನುಸಮೀಪದಲೆ ಕಂಡದೇವದಾನವರಿಗೊಂದು ಅಚ್ಚರಿಅವಳ ರೂಪವ ಕಂಡುಭ್ರಮಿತರಾದ ದೇವ ದಾನವರುಅಮೃತವ ಮರೆತರುಮಹಾ ತಾಮಸ ರಾಜಸ...
ಪ್ರಸಂಗ-1. ಹೊರಟಿದ್ದಳು ಸುಜಾತ ತನ್ನ ಹಸುಗಳನ್ನು ಹೊಡೆದುಕೊಂಡು ಕಾಡಿನತ್ತ. ಕಂಡಳು ನಿರಂಜನ ನದಿಯ ತಟದಲ್ಲಿ ಅರೆಪ್ರಜ್ಞಾನವಸ್ಥೆಯಲ್ಲಿದ್ದ ಸನ್ಯಾಸಿಯೊಬ್ಬನನ್ನು. ಕೃಶನಾಗಿದ್ದ ಅವನನ್ನು ಕಂಡವಳೇ ತನ್ನ ಕುಟೀರದತ್ತ ಓಡಿ ಹೋಗಿ ತಂದಳು ಪಾಯಸವನ್ನು ಒಂದು ಬಟ್ಟಲಲ್ಲಿ ತುಂಬಿ. ಮರದ ಕೆಳಗೆ ಕುಳಿತಿದ್ದ ಸನ್ಯಾಸಿಗೆ ಗುಟುಕು ಗುಟುಕಾಗಿ ಕುಡಿಸಿದಳು ಪಾಯಸವನ್ನು. ಸನ್ಯಾಸಿಯು...
11-5-2025ರಂದು (ತಾಯಂದಿರ ದಿನದ ಸಂದರ್ಭಕ್ಕಾಗಿ) ಅನೇಕ ಹಿಂದಿ ಚಲನಚಿತ್ರಗಳಲ್ಲಿ ನಾಯಕ ಖಳನಾಯಕರ ಎದುರು ಹೇಳುವ ಒಂದು ಸಾಮಾನ್ಯ ಮಾತು. “ಇಲ್ಲಿ ತಾಯಿ ಹಾಲು ಕುಡಿದ ಗಂಡು ಯಾರಾದ್ರೂ ಇದ್ರೆ ಬನ್ನಿ ನನ್ನೊಂದಿಗೆ ಹೊಡೆದಾಡಲು”. ತಾಯಿ ಹಾಲು ಮಗುವಿನ ಪೋಷಣೆ, ಆರೋಗ್ಯ ರಕ್ಷಣೇಲಿ ವಹಿಸುವ ಪಾತ್ರವನ್ನು ವೈದ್ಯರು, ವಿಜ್ಞಾನಿಗಳು...
ಅಂದು ಕಛೇರಿಯಲ್ಲಿ ಮಧ್ಯಾನ್ಹದ ನಂತರ ಯಾರಿಗೂ ಕೆಲಸ ಮಾಡುವ ಮನಸ್ಥಿತಿಯೇ ಇರಲಿಲ್ಲ. ಎಲ್ಲರೂ ಒಂದು ಈತಿಯ ವಿಷಾದಪೂರಿತ, ಸಡಗರದಿಂದ. . . .ಆಂ! ವಿಷಾದಪೂರಿತ? ಸಡಗರ? . . ಹಾಗೆಂದರೇನೆಂದಿರಾ? . . ಹೌದು, ಅಂದು ಕಳೆದ 32 ವರುಷಗಳಿಂದ ತಮ್ಮೊಂದಿಗಿದ್ದ, ತಮ್ಮವರಲ್ಲೇ ಒಬ್ಬರಾಗಿದ್ದ, ಶ್ರೀನಿವಾಸಮೂರ್ತಿಯವರು ನಿವೃತ್ತಿಯಾಗುವವರಿದ್ದರು. ...
ಕಾಶ್ಮೀರದೊಡಲಿನಲಿಸ್ವರ್ಗಕ್ಕೆ ಲಗ್ಗೆ ಹಾಕಿದೆವೆಂದುಕುಣಿಯುತ್ತ ನಲಿಯುತಿರಲುನಿಮಿಷಾರ್ಧದಲಿ ಆಹುತಿಯಾದರುಶತ್ರುಗಳ ಮಾರಣ ಹೋಮಕೆತಾಯಂದಿರ ಒಲವಿನ ಪುತ್ರರು ಹಿಮದ ಮಡಿಲಲಿ ರಕ್ತದೋಕಳಿಅಮಾಯಕರ ಪ್ರಾಣಾರ್ಪಣೆಭಯೋತ್ಪಾದಕರ ಅಟ್ಟಹಾಸಮೊಳಗಿತು ಗಡಿಗಳ ದಾಟಿಬೆಚ್ಚಿತು ಇಡೀ ವಿಶ್ವ ನಂಬಲಾಗದೆ ಕಟು ಸತ್ಯ ಮತ್ತೀಗ ದಿಟ್ಟ ಮಾತೆಯರುಕಳಿಸಿಹರು ತಮ್ಮ ಕುಲಪುತ್ರರನುಕುತಂತ್ರಿ ನೀಚರನು ಸದೆಬಡೆಯಲೆಂದುಮಳೆ ಬಿಸಿಲು ಮಂಜು ಲೆಕ್ಕಿಸದೆ ಕಾದಲೆಂದುತಪ್ಪಿತಸ್ಥರಿಗೆ ಪಾಠ ಕಲಿಸಲೆಂದು...
ಬರೆಯುವುದು ಏಕೆ? ಅಭಿವ್ಯಕ್ತಿಸುವುದಕೆ ! ಭಾವನೆ, ಸಂವೇದನೆ, ಚಿಂತನಾಲೋಚನೆಗಳನು ಹೊರ ಹಾಕುವುದಕೆ!! ಒಟ್ಟಿನಲಿ ಪ್ರತಿಕ್ರಿಯಿಸಲು ಮತ್ತು ಪ್ರತಿಸ್ಪಂದಿಸಲು. ಇದು ಬರೆವಣಿಗೆಯೊಂದಕ್ಕೇ ಅಲ್ಲ; ಎಲ್ಲ ಲಲಿತಕಲೆಗಳ ಲಕ್ಷಣ; ಅದರ ಹುಟ್ಟು ಮತ್ತು ವಿಕಸನ. ಮಾತು ಹೇಗೇ ಸಂವಹನವೋ ಬರೆಹವೂ. ‘ಬರೆಹವೆಂಬುದು ಮನಸಿನ ನಾಲಗೆ ; ಸುಮ್ಮನೆ ತನ್ನಷ್ಟಕೆ ಬದುಕಿದವರ...
ನಿಮ್ಮ ಅನಿಸಿಕೆಗಳು…