Monthly Archive: June 2025
ಮನಸ್ಸು ಹಕ್ಕಿಯಂತೆ ಉಲ್ಲಾಸದಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿತ್ತು. ನಾವು ಕೋಚ್‌ನಲ್ಲಿ ಕುಳಿತು ಸಾಗುತ್ತಿದ್ದ ಹಾದಿಯುದ್ದಕ್ಕೂ ಮುಗಿಲೆತ್ತರಕ್ಕೆ ಎದ್ದು ನಿಂತ ಪರ್ವತಶ್ರೇಣಿಗಳು, ಆ ಗಿರಿ ಶಿಖರಗಳನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಶ್ವೇತವರ್ಣದ ಮೋಡಗಳು, ಮೋಡಗಳ ಮರೆಯಿಂದ ಬಾಗುತ್ತಾ ಬಳುಕುತ್ತಾ ಧುಮ್ಮಿಕ್ಕುತ್ತಿರುವ ಜಲಧಾರೆಗಳು, ಆ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ನೀಲಮಣಿಯಂತೆ ಕಂಗೊಳಿಸುತ್ತಿದ್ದ...
ಭಾರತ ಕೃಷಿ ಪ್ರಧಾನವಾದ ದೇಶ. ರೈತರೇ ಈ ರಾಷ್ಟ್ರದ ಪ್ರಗತಿಗೆ ಕಾರಣ. ಅವರೇ ದೇಶದ ಬೆನ್ನೆಲಬು. ಹಸಿವು ಇಂಗಿಸುವ ರೈತನನ್ನು ಅನ್ನದಾತ, ನೇಗಿಲ ಯೋಗಿ ಎಂದೆಲ್ಲಾ ವೈಭವೀಕರಿಸಿದರೂ ಆತನ ಕಾಯಕಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನೀಡುವಲ್ಲಿ, ಕೃಷಿ ಕೆಲಸಗಳಿಗೆ ಉತ್ತಮ ಮಾರ್ಗದರ್ಶನ ನೀಡುವುದರಲ್ಲಿ ದೇಶದ ಜನತೆ ಬಹಳ ತಡವಾಗಿ...
ಅಷ್ಟಮ ಸ್ಕಂದ – ಅಧ್ಯಾಯ 4-: ಮತ್ಸಾವತಾರ – 2 :- ವೈವಸ್ವತ ಮನುಪದವಿ ಪಡೆದರಾಜಶ್ರೀ ಸತ್ಯವ್ರತಕೃತಮಾಲೆ ನದಿಯ ದಡದಿಬೊಗಸೆಯಲಿ ಜಲವ ತುಂಬಿಜಲತರ್ಪಣವ ಅರ್ಪಿಸಲನುವಾದಸಮಯದಿಬೊಗಸೆಯಲ್ಲಿರ್ಪ ಜಲದಲಿ ಸಣ್ಣಮೀನೊಂದ ಕಂಡುಅದ ನೀರಲಿ ವಿಸರ್ಜಿಸ ಹೊರಟಾಗಆ ಸಣ್ಣ ಮೀನು ಮನುಷ್ಯ ಭಾಷೆಯಲಿದಯಾಳು ರಾಜ, ನನ್ನನ್ನು ಈ ನದಿಯಲಿವಿಸರ್ಜಿಸದಿರು, ಅಲ್ಲಿರುವಇತರೆ ಜಲಚರಗಳ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕೆಲವು ಸಂಪಾದಕರು ನುಡಿಯಲ್ಲಿ ಟೈಪು ಮಾಡಿ ಕಳಿಸಿ ಎನ್ನುವರು. ಇನ್ನು ಕೆಲವರು ಯುನಿಕೋಡ್ ಬೇಕು ಎನ್ನುವರು. ನುಡಿಯಿಂದ ಯುನಿಕೋಡ್‌ಗೂ ಯುನಿಕೋಡ್‌ನಿಂದ ನುಡಿಗೂ ‘ಬದಲಿಸುವ ಪರಿವರ್ತಕ’ಗಳು ಇವೆ ಎಂಬುದು ಬೇರೆ ಮಾತು. ಹಲವು ಪತ್ರಿಕೆ, ಮ್ಯಾಗಜೀನುಗಳು ನುಡಿಯನ್ನು ನಿರೀಕ್ಷಿಸುತ್ತವೆ. ಅಂತರ್ಜಾಲ ಪತ್ರಿಕೆ, ಮ್ಯಾಗಜೀನುಗಳು ಯುನಿಕೋಡ್...
ತುಂಬಾ ಜನರಿಗೊಂದು ಅಭ್ಯಾಸ. ತಮಗೆ ತೋಚಿದ್ದನ್ನು ಥಟ್ ಅಂತ ಹೇಳಿಬಿಡುವುದು ಹಾಗೆಯೇ ಏನಾದರೂ ಕೇಳಬೇಕೆಂದಿದ್ದರೆ ಥಟ್ ಅಂತ ಕೇಳಿಬಿಡುವುದು. ಆ ಸಂದರ್ಭದಲ್ಲಿ ಸುತ್ತ ಮುತ್ತ ಯಾರಿದ್ದಾರೆ ಅಂತ ಗಮನಿಸುವುದೂ ಇಲ್ಲ. ಗಮನಿಸಿದರೂ ಆ ಬಗ್ಗೆ ಲಕ್ಷ್ಯವಿಲ್ಲ. ತನ್ನ ಮಾತು ಕೇಳಿದವರ ಮೇಲೆ ಯಾವ ಪರಿಣಾಮ ಬೀರಬಹುದು ಅಂತಾ...
ಒಂದೂರಿನಲ್ಲಿ ಅಂಚೆ ಪೇದೆಯೊಬ್ಬನಿದ್ದ. ಅವನು ಮನೆಮನೆಗೆ ಅಂಚೆಯನ್ನು ಹಂಚುವ ತನ್ನ ಕೆಲಸವನ್ನು ಕರ್ತವ್ಯನಿಷ್ಠೆಯಿಂದ ಮಾಡುತ್ತಿದ್ದ. ಒಮ್ಮೆ ಒಬ್ಬರಿಗೆ ರಿಜಿಸ್ಟರ್ ಪೋಸ್ಟ್ ಬಂದಿತ್ತು. ಅದನ್ನು ವಿತರಿಸಲು ವಿಳಾಸದ ಮನೆಗೆ ಹೋದ. ಅದೊಂದು ಸಾಧಾರಣ ಜನರ ಮನೆ. ಬಾಗಿಲು ಮುಚ್ಚಿತ್ತು. ಹೊರಗಿನಿಂದ ‘ಪೋಸ್ಟ್’ ಎಂದು ಕೂಗಿದ. ಒಳಗಿನಿಂದ “ಹೊರಗಿಟ್ಟಿರುವ ಡಬ್ಬದಲ್ಲಿ...
ಮದುವೆಗೆಂದು ಮನೆ ಮುಂದೆ ಹಾಕಿದ ಹಂದರ ಒಣಗಿತ್ತುಬಂಧು ಬಳಗದವರಿಂದ ತುಂಬಿ ಹೋಗಿದ್ದ ಮನೆ ಖಾಲಿಯಾಗಿತ್ತು ಕೈಯಲ್ಲಿರುವ ಮದರಂಗಿಯ ಬಣ್ಣ ಮಾಸಿತ್ತುಕಟ್ಟಿದ ಕಂಕಣದ ಎಲೆಯೆಲ್ಲಾ ಉದುರಿ ಹಳದಿ ದಾರ ಮಾತ್ರ ಉಳಿದಿತ್ತು ನಾಳೆ ನನ್ನ ಗಂಡನ ಮನೆಗೆ ಕಳುಹಿಸಿ ಬರಲು ಚಿಕ್ಕಮ್ಮನನ್ನು ಅಮ್ಮ ಒಪ್ಪಿಸುತ್ತಿದ್ದಳುಬಟ್ಟೆಯ ಮಡಿಸುತಾ ಉಪಾಯವಾಗಿ ನೀತಿ...
ದೇವರೇ ಎತ್ತ ಸಾಗುತ್ತಿದೆ ನಮ್ಮ ಸಮಾಜಅರಿಯದಾಗಿದೆ ಇಂದಿನ ವಿದ್ಯಮಾನಯಾರಿಗೂ ಇಲ್ಲ ಒಂದುಚೂರು ತಾಳ್ಮೆಯುಇಲ್ಲ ಯಾರಲ್ಲೂ ಕೇಳಿಸಿಕೊಳ್ಳುವ ವ್ಯವಧಾನ ಹೆಜ್ಜೆ ಹೆಜ್ಜೆಗೂ ಬೇಕು ನಮ್ಮೊಳಗೆ ಸಮಾಧಾನಬೇಕಿಲ್ಲ ಯಾವುದೇ ಬಿಂಕ ಬಿಗುಮಾನಮಾಡಿಕೊಳ್ಳಬಾರದು ಸುಮ್ಮನೆ ಅವಮಾನಅರಿತು ಹೊಂದಿಕೊಳ್ಳುವುದೇ ಜೀವನ ಮಾತು ಮಾತಿಗೂ ಕೋಪ ತಾಪತೋರಿಸುವರು ಉಗ್ರ ರೌದ್ರಾವತಾರನಡೆಸುವರು ದೈಹಿಕ ಹಲ್ಲೆ ಭಯಾನಕ...
‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಾ’ ಎಂದು ಚಿಂತನಾ ಸೂಕ್ತಿಯನ್ನು ಹಿರಿಯರು ಆಗಾಗ ಹೇಳುವು ದನ್ನು ಕೇಳಿದ್ದೇವೆ. ಹೌದು, ಪತಿ-ಪತ್ನಿಯರ ಸಾಮರಸ್ಯ, ಕುಟುಂಬ ಸಂಬಂಧವಾಗಲೀ, ಗೋ ಸಂಪತ್ತಾಗಲೀ, ಮನೆಯಾಗಲೀ ಯೋಗ್ಯರೀತಿಯಲ್ಲಿ ದಕ್ಕಬೇಕಾದರೆ ಋಣಾನುಬಂಧ ಬೇಕಂತೆ. ಒಳ್ಳೆಯ ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ಲಭಿಸಬೇಕಾದರೂ ಪೂರ್ವಸುಕೃತ, ಕರ್ಮಫಲಗಳು ಒಳ್ಳೆಯ ರೀತಿಯಲ್ಲಾಗಬೇಕು....
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 11/12:ಪೊನಾಮ್ ಕೂಲೆನ್….ಮರಳಿ ಗೂಡಿಗೆ. ಪುನ: ಕಾರಿನಲ್ಲಿ ಸ್ವಲ್ಪ ದೂರ ಪ್ರಯಾಣಿಸಿ, ಅದೇ ಮಹೇಂದ್ರ ಪರ್ವತದ ಅಂಗವಾದ ‘ಪೊನಾಮ್ ಕುಲೇನ್ ನ್ಯಾಶನಲ್ ಪಾರ್ಕ್’ ನಲ್ಲಿರುವ ರಮಣೀಯವಾದ ಜಲಪಾತವನ್ನು ವೀಕ್ಷಿಸಿದೆವು. ಇಲ್ಲಿ ಸೀಮ್ ರೀಪ್ ನದಿಯು ಎರಡು ಹಂತದಲ್ಲಿ ಜಿಗಿಯುತ್ತದೆ. ಮೊದಲ ಹಂತದಲ್ಲಿ ಸುಮಾರು 12...
ನಿಮ್ಮ ಅನಿಸಿಕೆಗಳು…