Monthly Archive: April 2025
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 8: ಮೆಕಾಂಗ್ ನದಿ ಪ್ರದೇಶದಲ್ಲಿ ವಿಹಾರ 22 ಸೆಪ್ಟೆಂಬರ್ 2024 ರಂದು ಬೆಳಗಾಯಿತು. ಎಂದಿನಂತೆ ಸ್ನಾನಾದಿ ಪೂರೈಸಿ, ಹಲವಾರು ಆಹಾರ ವೈವಿಧ್ಯಗಳಿದ್ದ ಉಪಾಹಾರ ಮುಗಿಸಿ , ಹೊರಡಲು ಸಿದ್ಧರಾಗಿ ಹೋಟೆಲ್ ನ ರಿಸೆಪ್ಷನ್ ಹಾಲ್ ನಲ್ಲಿ ಕುಳಿತೆವು. ನಮ್ಮ ಆ ದಿನದ ಗೈಡ್...
ನೂರು ಅಳುವಿನ ನಡುವೆನಗುವೊಂದುಮೂಡಿದರೆಧೈರ್ಯ ಬಂದೀತು ಬಾಳಿಗೆ// ಬಣಗುಡುವ ನೆಲದಲ್ಲಿಹನಿಎರಡು ಹನಿಸಿದರೆಮೊಳೆದೀತು ಬೀಜ ನಾಳೆಗೆ// ಕತ್ತಲಿನ ಜಗದಲ್ಲಿಮಿಂಚೊಂದು ಬೆಳಗಿದರೆಬೆಳಕು ಕಂಡೀತು ಲೋಕಕೆ// ಬಾಯಾರಿ ಬೆಂದಾಗನೀರಸೆಲೆ ಚಿಮ್ಮಿದರೆದಾಹ ನೀಗೀತು ಜೀವಕೆ// ನಿಷ್ಕರುಣ ಮನದಲ್ಲಿತುಸು ಕರುಣೆ ಹುಟ್ಟಿದರೆಶಾಂತಿ ದೊರಕೀತು ಧರಣಿಯಲ್ಲಿ// ಸೋಲುಗಳ ಸಾಲಿನಲಿಗೆಲುವ ಎಳೆ ಕಾಣಲುಹೊಮ್ಮೀತು ಉತ್ಸಾಹ ಬಾಳಿನಲ್ಲಿ// ಕಷ್ಟದ ಶರಧಿಯಲಿಸುಖದ...
ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ – 1 ದೂರ್ವಾಸ ಮಹರ್ಷಿಗಳಿತ್ತಶಿವಪ್ರಸಾದ ರೂಪಪುಷ್ಪಮಾಲಿಕೆಯ ಭಕ್ತಿಯಿಂದಪುರಸ್ಕರಿಸದೆಅವಮಾನಿಸಿದ ದೇವೇಂದ್ರಮುನಿಶಾಪದಿಂರಾಜ್ಯಭ್ರಷ್ಟನಾಗಿತ್ರಿಲೋಕಾಧಿಪತ್ಯ ನಷ್ಟವಾಗಿಯಜ್ಞಯಾಗಾದಿಗಳಿಲ್ಲದಹವಿರ್ಭಾವ ವಂಚಿತದೇವತೆಗಳ ಅಸ್ಥಿತ್ವಕೆಕುಂದುಂಟಾಗಿಹತಾಶರಾಗಿ ಬ್ರಹ್ಮದೇವನಸಲಹೆಯಂ ಸ್ವೀಕರಿಸಿ, ರುದ್ರ ಶಂಕರ, ದೇವ ದಾನವಮಾನವ ಚರಚರಾತ್ಮಕ ಸಕಲಜೀವಕೋಟಿಗಳ ಉದ್ಭವಉಜ್ಜೀವಗಳ ಕಾರಣಕರ್ತನೂಸಕಲ ಜೀವಿಗಳಿಗೆಕರ್ಮಾನುಸಾರ ಸುಖಃ ದುಃಖಗಳನ್ನಿತ್ತುಸೃಷ್ಟಿ, ಸ್ಥಿತಿ ಸಂಹಾರ ಕಾರ್ಯನಡೆಸುವ ಶ್ರೀಮನ್ನಾರಾಯಣನ ಸ್ತುತಿಸಿಪ್ರಾರ್ಥಿಸಲು...
‘ತಿಂಡಿಪೋತರು’ ಎಂಬ ಪದಕ್ಕೆ ನಕಾರಾತ್ಮಕ ಅರ್ಥವೇ ಇರುವುದು. ಹೊತ್ತು ಗೊತ್ತಿಲ್ಲದೇ ಸಿಕ್ಕಿದ್ದೆಲ್ಲವನ್ನೂ ಬಾಯಾಡಿಸುವ ಪ್ರವೃತ್ತಿಯಿದು. ಮನೋವಿಜ್ಞಾನದ ಪ್ರಕಾರ ಇಂಥದು ‘ಗೀಳು’ ಎನಿಸಿಕೊಳ್ಳುತ್ತದೆ ಮತ್ತು ಇದಕ್ಕೆ ತಜ್ಞರಿಂದ ಆಪ್ತಸಲಹೆಯೂ ಲಭ್ಯವಿದೆ. ನಾಲಗೆಯನ್ನು ಹದ್ದುಬಸ್ತಿನಲ್ಲಿಡಲು ಆಗದೇ ಒದ್ದಾಡುವವರು ಸಹ ಇವರೇ. ಚಿಕ್ಕಂದಿನಿಂದಲೇ ಹೀಗೆ ಮೊಲದಂತೆ ಸದಾ ಬಾಯಾಡಿಸುವ ಅಭ್ಯಾಸ ಬಹುಶಃ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮರುದಿನ ಬೆಳಿಗ್ಗೆ ರಾಜಲಕ್ಷ್ಮಿ ಮೋಹನ್‌ಗೆ ಕರೆಮಾಡಿ “ನೀನು ಈಗಾಗಲೇ ಬಾ. ನಾನು ಭಾಸ್ಕರಂಗೂ ಫೋನ್ ಮಾಡ್ತೀನಿ. ಸ್ವಲ್ಪ ಮಾತಾಡುವುದಿದೆ.”“ಆಗಲಿ ಅಮ್ಮ. ನಾನೇ ಭಾಸ್ಕರನ್ನ ಕರೆದುಕೊಂಡು 12 ಗಂಟೆ ಹೊತ್ತಿಗೆ ರ‍್ತೀನಿ. ಚಿನ್ಮಯಿ, ಗೌರಮ್ಮ ಇಬ್ಬರೂ ಇದ್ದರೆ ಒಳ್ಳೆಯದು.”“ನೀವು ಎಲ್ಲಿಗೆ ಬರಬೇಕೂಂತ ನಾನೇ ಫೋನ್...
‘ದಂಡು ಬರಲಿ ದಾಳಿ ಬರಲಿ ಉಂಡಿರು ಮಗನೆ’ ಎನ್ನುವುದು ಗಾದೆ ಮಾತು. ಉಣ್ಣಲು ಊಟ ತಯಾರಿಸಲೇಬೇಕು. ಮನೆಗಳಲ್ಲಿ ಬಿಸಿ ಅಡುಗೆ ಮಾಡಿ ಉಣ್ಣುವುದು ಸರಿ. ಪ್ರಯಾಣದಲ್ಲಿರುವಾಗ ಬುತ್ತಿಯೂಟವೋ, ಆ ಸ್ಥಳದಲ್ಲೇ ಸಿಗುವ ಊಟವೋ ನಡೆಯುತ್ತದೆ. ಆದರೆ ಗಡಿಯಲ್ಲಿ ಹಲವು ತಿಂಗಳುಗಳೇ ಕಳೆಯುವ ಸೈನಿಕರಿಗೆ, ಹಲವಾರು ದಿನಗಳು ಅಂತರಿಕ್ಷದಲ್ಲಿರುವ...
ಈಗಿನ ಯುವಕರು ಕಾಲೇಜಿಗೆ ವ್ಯಾಸಂಗಕ್ಕಾಗಿ ಸೇರಿದರೆ ಅವರು ಬಯಸಿದ್ದನ್ನೆಲ್ಲ ಅಪ್ಪ, ಅಮ್ಮ ತೆಗೆಸಿಕೊಡಲೇಬೇಕೆಂದು ಹಟಮಾಡುತ್ತಾರೆ. ಅಪ್ಪನ ಹಣಕಾಸು ಪರಿಸ್ಥಿತಿಯೇನು ಎಂಬುದನ್ನು ಅವರು ತಿಳಿದುಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಹೀಗೆ ಒಬ್ಬ ಮಗನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ. ಅವನ ತಂದೆ ಕೆಳಮಧ್ಯಮ ವರ್ಗದ ಕಾರ್ಮಿಕರು. ಕಷ್ಟಪಟ್ಟು ಹುಡುಗನನ್ನು ಓದಿಸುತ್ತಿದ್ದರು. ತನ್ನ...
ಅವನಾಡಿಸಿದಂತೆಆಡುತಿರಬೇಕು ನಾವೆಲ್ಲರು. ಇರುವುದೆಲ್ಲವ ಬಿಟ್ಟುಈಶ್ವರನೆಡೆಗೆ ನಡೆಯಬೇಕೆಲ್ಲರು. ಉಸಿರು ನಿಲ್ಲುವ ಮುಂಚೆಯೇಊರ ಜನ ಕೊಂಡಾಡಬೇಕೆಲ್ಲರು. ಋಣತ್ರಯಗಳ ತೀರಿಸಿಯೇಎಲ್ಲವ ತೊರೆದು ನಡೆಯಬೇಕೆಲ್ಲರು. ಏನಿದ್ದರೂ ಏನಿಲ್ಲದವರಂತೆಐಹಿಕ ಸುಖಿಗಳಾಗಬೇಕೆಲ್ಲರು. ಒಂದೊಂದು ಕ್ಷಣವ ಮಕ್ಕಳಂತೆಓಜಸ್ಸು ಮೊಗದಿ ಬೆರೆಯಬೇಕೆಲ್ಲರು. ಔಚಿತ್ಯಪೂರ್ಣ ಮಾತುಗಳೆಲ್ಲರೂಅಂತಃಕರಣದಿ ಅರಿಯಬೇಕೆಲ್ಲರು. –ಶಿವಮೂರ್ತಿ.ಹೆಚ್, ದಾವಣಗೆರೆ. +3
ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ನಾವು ಯಾವಾಗ ಹೊರಡುತ್ತೇವೆಯೋ ಯಾರಿಗೂ ತಿಳಿದಿಲ್ಲ.ಜೀವನದಲ್ಲಿ ತೇಜೋಮಯ ಸೌಭಾಗ್ಯವನ್ನುಅನುಭವಿಸಲು ನಮಗೆ ಸಮಯವಿರುವುದಿಲ್ಲ –ಆದ್ದರಿಂದ ಆನಂದವನ್ನು ಅನುಭವಿಸುತ್ತಾ ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಜೀವನವು ಚಿಕ್ಕದಾಗಿ ಕಂಡರೂಅನುಭವದಲ್ಲಿ ಅದು ತುಂಬಾ ದೊಡ್ಡದುಹೊರಡುವ ಮೊದಲು ಮಾಡಬೇಕಾದದ್ದು ಎಷ್ಟೋ ಇದೆ.ತಪ್ಪುಗಳು ಎಷ್ಟೋ ನಡೆಯುತ್ತಿವೆ! ಬಹಳ ಕಾಲ ನಿಮ್ಮ ಬಲವನ್ನು ಬೆಳೆಸಿಕೊಳ್ಳಲು ಕಷ್ಟಪಡುತ್ತಿರುವೆ – ಆದ್ದರಿಂದ ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಕೆಲವು ಸ್ನೇಹಿತರು ನಮ್ಮೊಂದಿಗೆ ಇರುತ್ತಾರೆ,ಇನ್ನು ಕೆಲವರು ಹೊರಟು ಹೋಗುತ್ತಾರೆ.ನಾವು ಮೆಚ್ಚುವವರು ನಮ್ಮ ಮನಸ್ಸುಗಳಲ್ಲಿ ಉಳಿದುಹೋಗುತ್ತಾರೆ,ಆದರೆ ಎಲ್ಲರೂ ನಮ್ಮ ಮನಸ್ಸಿನಲ್ಲಿ ಉಳಿಯುವುದಿಲ್ಲ.ಮಕ್ಕಳು ರೆಕ್ಕೆಗಳು ಬಂದು ಹಾರಿಹೋಗುತ್ತಾರೆ.ಕಾಲವು ಹೇಗೆ ಪರಿಣಾಮ ಬೀರುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ – ಆದ್ದರಿಂದ ಆನಂದವನ್ನು ಅನುಭವಿಸುತ್ತಾ ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಏಕೆಂದರೆ ಈ ಪ್ರಪಂಚದಲ್ಲಿ ಆಗಲಿ,ಮೇಲಿರುವ ನಕ್ಷತ್ರ ಲೋಕದಲ್ಲಿ ಆಗಲಿ,ಯಾರು ನಿಸ್ವಾರ್ಥವಾಗಿ ಶ್ರದ್ಧೆಯಿಂದ ನೋಡಿಕೊಳ್ಳುತ್ತಾರೋಅವರೇ ಕೊನೆಗೆ ಪ್ರೀತಿಯನ್ನು ಅರ್ಥಮಾಡಿಕೊಳ್ಳುತ್ತಾರೆ.ಸಂತೋಷವಾಗಿ ಉಸಿರಾಡಿನಿಮ್ಮ ಮಾನಸಿಕ ವ್ಯಥೆಗಳು ಮಾಯವಾಗಿ ಹೋಗುತ್ತವೆ –ಆದ್ದರಿಂದ ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ನನ್ನ ಮರಣದ ನಂತರ ಕಣ್ಣೀರನ್ನು ಸುರಿಸುತ್ತೀರಿ.ಆದರೆ ಅದು ನನಗೆ ತಿಳಿಯುವುದಿಲ್ಲವಲ್ಲ –ಆದ್ದರಿಂದ ಈಗ ನಾನು ಬದುಕಿರುವಾಗಲೇನನ್ನ ನೋವುಗಳಲ್ಲಿ ನೀವೂ ನನ್ನ ಜೊತೆಗೂ ರೋದಿಸಿ! ನೀವು ನನ್ನ ಮರಣದ ನಂತರ ಹೂಗಳನ್ನು ತರುತ್ತೀರಿ.ಆದರೆ ನಾನು ಅವುಗಳನ್ನು ಈಗ ನೋಡಲಾರೆನಲ್ಲ! ಆದ್ದರಿಂದ ಅವುಗಳನ್ನುನಾನು ಬದುಕಿರುವಾಗಲೇ ತೆಗೆದುಕೊಂಡು ಬನ್ನಿ! ನನ್ನನ್ನು ಹೊಗಳಿ ಮಾತನಾಡುತ್ತೀರಿ.ಆದರೆ ಅದನ್ನು ನನ್ನ ಅಂತ್ಯದ ನಂತರ ಕೇಳಲು ಸಾಧ್ಯವಿಲ್ಲವಲ್ಲ!ಆದ್ದರಿಂದ ನಾನು ಬದುಕಿರುವಾಗಲೇ ನನ್ನನ್ನು ಹೊಗಳಿ! ನನ್ನ ಮರಣದ ನಂತರ ನನ್ನ ತಪ್ಪುಗಳನ್ನೆಲ್ಲಾ ಮರೆತುಬಿಡುತ್ತೀರಿ.ಆದರೆ ಅದನ್ನು ಆಗ ನಾನು ತಿಳಿಯಲಾರೆನಲ್ಲ!ಆದ್ದರಿಂದ ನಾನು ಬದುಕಿರುವಾಗಲೇ ನನ್ನನ್ನು ಕ್ಷಮಿಸಿ ಮರೆತುಬಿಡಿ! ನನ್ನ ಮರಣದ ನಂತರ ನನ್ನ ಅಸ್ತಿತ್ವವನ್ನು ಮರೆತುಬಿಡುತ್ತೀರಿ.ಆದರೆ ಅದು ನನಗೆ ತಿಳಿಯುವುದಿಲ್ಲವಲ್ಲ!ಆದ್ದರಿಂದ ನನ್ನ ಅಸ್ತಿತ್ವವನ್ನು ನಾನು ಬದುಕಿರುವಾಗಲೇ ಮರೆತುಬಿಡಿ! ನಾನು ಜೀವಂತವಾಗಿರುವಾಗ ನನ್ನೊಂದಿಗೆ ಹೆಚ್ಚು ಸಮಯಕಳೆಯಬೇಕಾಗಿತ್ತು ಎಂದುಕೊಳ್ಳುತ್ತೀರಿ.ಆದ್ದರಿಂದ ನನ್ನ ಮರಣಾನಂತರ ಆ ಕೆಲಸ ಮಾಡಿ! ನನ್ನ ಮರಣ ವಾರ್ತೆ ಕೇಳಿ ಸಂತಾಪ ವ್ಯಕ್ತಪಡಿಸಲುನನ್ನ ಮನೆಗೆ ಓಡಿ ಬರುತ್ತೀರಿ.ಆದರೆ ಕೆಲವು ವರ್ಷಗಳಿಂದ ನಾವು ಮಾತನಾಡಿಕೊಂಡಿಲ್ಲ.ಈಗ ನನ್ನ ಮರಣದ ನಂತರ ನನ್ನನ್ನು ಹುಡುಕಿ! ಮೂಲ: ಪ್ರೊ. ಲೀ ತ್ಸು ಫೆಂಗ್ಅನುವಾದ: ಕೊಡೀಹಳ್ಳಿ ಮುರಳೀಮೋಹನ್ +9
ಕನ್ನಡ ಸಾರಸ್ವತ ಲೋಕದಲ್ಲಿ ಅಗ್ರಪಂಕ್ತಿಯ ಸಾಹಿತಿಗಳಲ್ಲಿ ಇವರಿಗೆ ಪ್ರಮುಖ ಸ್ಥಾನವಿದೆ. “ಸಿಪಿಕೆ” ಈ ಹೆಸರಿನಿಂದಲೇ ಪ್ರಸಿದ್ಧರಾದವರು. ಈ ಮೂರು ಅಕ್ಷರದ ಚಮತ್ಕಾರ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿತು. ಡಾ ಸಿ ಪಿ ಕೃಷ್ಣಕುಮಾರ್ ರವರು ಸಾಹಿತ್ಯ ಲೋಕದಲ್ಲಿ ಸಾಧಿಸಿದ್ದು ಅಪಾರ. ಅಂದಿನಿಂದ ಇಂದಿನವರೆಗೂ ಕೂಡ ಸರಳ...
ನಿಮ್ಮ ಅನಿಸಿಕೆಗಳು…