ಕಾವ್ಯ ಭಾಗವತ 45: ಬಲಿ –1

ಅಷ್ಟಮ ಸ್ಕಂದ – ಅಧ್ಯಾಯ – 3
ಬಲಿ – 1 :
ಬಲಿ ದೈತ್ಯ ಚಕ್ರವರ್ತಿ
ದೇವ ದಾನವ ಯುದ್ಧಗಳಲಿ
ಸೋತು ಸುಣ್ಣವಾಗಿ ಸತ್ತರೂ
ಗುರು ಶುಕ್ರಚಾರ್ಯರ ತಪಃ ಶಕ್ತಿಯಿಂದ
ಮತ್ತೆ ಮತ್ತೆ ಬದುಕಿ
ನಿರ್ಣಾಯಕ ಸಮಯದಲಿ
ಮಾಯಾ ಯುದ್ಧದಿ ದೇವತೆಗಳ
ಬಗ್ಗು ಬಡಿದು
ದೇವೇಂದ್ರ ತನ್ನ ಸಕಲ ಪರಿವಾರದೊಡನೆ
ಅಮರಾವತಿಯ ತ್ಯಜಿಸಲು
ಬಲಿ, ಸ್ವರ್ಗರಾಜಾಧಿಪತ್ಯದಲಿ
ಮಹಾವೈಭವದಿ ಮೆರೆಯಲು
ದೇವಮಾತೆಯಾದ ಅದಿತಿ ದೇವಿ
ತನ್ನ ಮಕ್ಕಳ ದುರ್ದೆಶೆಗೆ
ಪರಿತಪಿಸಿ, ಕಶ್ಯಪ ಮಹಾಮುನಿ
ಉಪದೇಶಿಸಿದ
ಓಂ ನಮೋ ಭಗವತೇ ವಾಸುದೇವಾಯ
ಎಂಬ ದ್ವಾದಶಕಲ್ಪ ಬೀಜ ಮಂತ್ರವ
ಜಪಿಸಿ ತಪಸ್ಸುಗೈಯಲು
ವಾಸುದೇವನು
ದಿವ್ಯ ಪೀತಾಂಬರ ಕಿರೀಟ ಕುಂಡಲ ಧರಿಸಿ
ದರ್ಶನವಿತ್ತು,
ದೇವತೆಗಳು ಸರ್ವಾಧಿಪತ್ಯವ
ಮರಳಿ ಪಡೆಯಲು ಸಾಕ್ಷತ್ ದೇವನೇ
ಕಶ್ಯಪ ಮಹರ್ಷಿಯ ತಪಃಪ್ರಭಾವದಿಂ
ಅದಿತಿ, ಭಗವನ್ನಾರಾಯಣನಂಶವ
ಉದರದಲಿ ಧರಿಸಿ
ವಾಮನವತಾರವಾದ ಘಳಿಗೆ
ಬಲಿಗೆ ಮೋಕ್ಷದ ಘಳಿಗೆ,
ದೇವೇಂದ್ರಗೆ ಸ್ವರ್ಗಾಧಿಪತ್ಯವ
ಮರಳಿ ಪಡೆಯುವ ಘಳಿಗೆ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42660
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತದಲ್ಲಿ ಬಲಿ ಚಕ್ರವರ್ತಿ ಯ ಕಥೆಯ ಪ್ರಾರಂಭ ಚೆನ್ನಾಗಿ ಮೂಡಿಬಂದಿದೆ ಸಾರ್
ಪ್ರತಿಕ್ರಿಯೆಗಾಗಿ ವಂದನೆಗಳು
ಕಾವ್ಯ ಭಾಗವತದ ಈ ಭಾಗ ಕುತೂಹಲಭರಿತವಾಗಿ ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿದೆ.
ಪ್ರತಿಕ್ರಿಯೆಗಾಗಿ ವಂದನೆಗಳು.
Nice
Thank you.
ಪ್ರಕಟಿಸಿದಕ್ಕಾಗಿ ಧನ್ಯವಾದಗಳು.
ಬಲಿ ಚಕ್ರವರ್ತಿ ಕಥೆಯ ಮೊದಲ ಭಾಗ ಮನಮುಟ್ಟುವಂತಿದೆ.
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.