ಚಿತ್ರಕವನ: ಬೀದಿಗೆ ಬಿದ್ದ ದೇವರು

ತನ್ನನ್ನೇ ಗೊ೦ಬೆಯಾಗಿಸಿ ಮಾರಿಸಿಕೊಳ್ಳುವ ದೇವರ ಆಟ…
ಎಷ್ಟು ಮೋಹಕ..ಇದನರಿಯದ ಆ ಮುಗ್ದ ತಾಯಿಯ ನೋಟ…
ಕಲಿಯಬೇಕಿದೆ ಇವಳಿ೦ದ ನಾವೊ೦ದು ಪಾಠ…
ಕ೦ಕುಳು ಆಶ್ರಯಿಸಿ ಸರಗು ಹಿಡಿದಿರುವ ಮುದ್ದು ಕ೦ದ ಬೇಡುತಿದೆ
ತಲೆಯೇರಿ ಕುಳಿತಿರುವ ಗೊ೦ಬೆಗಳೇ ನನ್ನಮ್ಮನ ಭಾರ ಇಳಿಸಿ…
ತಬ್ಬಿ ಮುದ್ದಿಸಲಿ ಅವಳ ಎರಡೂ ಕೈಗಳೂ ನನ್ನನ್ನು ಬಳಸಿ…
ಅಮ್ಮ ನಕ್ಕು ನುಡಿದಿಹಳು..
ಬಿಗಿ ಹಿಡಿದಿರುವೆ ಆಳದಿರು ಸನ್ನ ಕ೦ದಾ…
ನಮ್ಮ ಪೊರೆವ ಇವರ, ಹೊತ್ತು ತಿರುಗುವುದೇ ಚ೦ದ…
ಭಾರವಲ್ಲ ಈ ಕಾಯಕ ಇದರಿ೦ದಾಗಿದೆ ನನಗಾನ೦ದ…
ಮಣ್ಣಿಗೆ ಜೀವ ನೀಡಿ ದೈವತ್ವ ಕೊಟ್ಟ ಆ ಕಲಾವಿದರನ್ನು ಅಭಿನ೦ದಿಸೋಣ…
ಕೆಲವರ ಹಸಿವು ನೀಗಿಸುತ್ತಿರುವ ಅವರಿಗೆ ಕೃತಜ್ಞತೆಯನ್ನು ಆರ್ಪಿಸೋಣ…
ಕಾಯಕದಲ್ಲಿ ಕೈಲಾಸ ಕಾಣುತ್ತಿರುವ ಇವರು ನೆಮ್ಮದಿಯಿ೦ದ ಇರಲೆಂದು
ಪ್ರಾರ್ಥಿಸೋಣ…

-ಕುಸುಮ, ಮೈಸೂರು
ಅತ್ಯಂತ ಸೂಕ್ತ ಮತ್ತು ಚಂದದ ಚಿತ್ರ ಕವನ.
ವಂದನೆಗಳು..
ವಂದನೆಗಳು
ಸುಂದರ ಆಶಯ ಹೊತ್ತ ಕವನ
ವಂದನೆಗಳು
ಸರಳ ಸುಂದರ ವಾದ ಕವಿತೆ..ಗೆಳತಿ..
ಅಕ್ಕ ..ನಿಮ್ಮ ಪ್ರೋತ್ಸಾಹ ಎಂದಿಗೂ ಇರಲಿ
ತಾಯಿ ಪ್ರೀತಿ ಹಂಬಲಿಸಿದ ಮಗುವಿನ ವಾಕ್ಯ ವಾಹ್
ಸೂಕ್ಷ್ಮ ಸಂವೇದನೆಯುಳ್ಳ ಕವನ, ಇಷ್ಟವಾಯಿತು
ನೈಜತೆಯನ್ನು ಮೈದುಂಬಿಕೊಂಡ ಕವನವು ಭಾವಪೂರ್ಣವಾಗಿದೆ.