ಆ ಮುಗಿಲ ಮಾಲೆಯಲಿ
ಹನಿ ಹನಿಯ ತೋರಣ
ಇಡಿ ಬುವಿಯೊಳಗೆ
ತುಂಬಿದ ನಗುವಿನ ಔತಣ
ಮಣ್ಣೊಳಗೆ ರಂಗೋಲಿ
ಬೇರು ಹಬ್ಬುವ ಪರಿ
ಮರದೊಳಗೆ ಚಿತ್ತಾರ
ಹರಿವ ನೀರಿನ ಝರಿ
ಸುತ್ತು ಸುತ್ತುಗಳ ನಡುವೆ
ಹಸಿರು ತುಂಬಿದ ಚಿಗುರು
ಇಳೆಯ ಎಳೆಯೊಳಗೆ
ನೆಲ ತುಂಬುವ ನೆರಳು
ಸೊಬಗೆಲ್ಲಾ ನೋಟ
ಪಿಸುಮಾತಿನ ತಂಗಾಳಿಗೆ
ಜಗವೆಲ್ಲಾ ತೊಯ್ದ ಸಂತಸ
ಮತ್ತೆ ಬಿದ್ದ ಮಳೆ ಹನಿಗೆ
–ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ ,ಕುಮಟಾ.
ಬ್ಯೂಟಿಫುಲ್ ಪೊಯಮ್
ಸರ್ ಧನ್ಯವಾದಗಳು ತಮ್ಮ ಆಪ್ತ ಓದಿಗೆ…….
ಸುಂದರವಾದ ಪದ್ಯ ಪರಿಮಳ
ಧನ್ಯವಾದಗಳು ಸರ್…..
ಸುಂದರ ಕವನ
ಧನ್ಯವಾದಗಳು
ಹನಿ ಹನಿ ಮಳೆಯ ವರ್ಣನೆ ಪ್ರಕೃತಿಯ ಪ್ರತಿಧ್ವನಿಯಂತೆ ಕವಿತೆ ಸೊಗಸಾಗಿ ಮೂಡಿ ಬಂದಿದೆ.
ಧನ್ಯವಾದಗಳು
ಚಂದದ ಕವನ ಸಾರ್
ಧನ್ಯವಾದಗಳು
ಮಣ್ಣೊಳಗೆ ರಂಗೋಲಿ ಬೇರು ಹಬ್ಬುವ ಪರಿ.
ಸೂಪರ್ ಕವನ ಸರ್
ಚಂದದ ವರ್ಣನೆ.
ಧನ್ಯವಾದಗಳು ತಮ್ಮ ಓದಿಗೆ….
ಮಳೆ ನೀರಿನ ಮುತ್ತಿನ ಹನಿಗಳಿಗೆ ಬಣ್ಣ ತುಂಬಿದ ಸಾಲುಗಳು ಚೆನ್ನಾಗಿವೆ.
ಧನ್ಯವಾದಗಳು ತಮ್ಮ ಓದಿಗೆ