Daily Archive: August 1, 2024
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ”ಅರೆ ನೀನು !” ಎಂದು ಉದ್ಗಾರ ತೆಗೆಯುವಷ್ಟರಲ್ಲಿ ಕಣ್ಸನ್ನೆ ಮಾಡಿ ಅವನ ಕೈಹಿಡಿದು ಮತ್ತೆ ರೂಮಿಗೆ ಹಿಂತಿರುಗಿದರು. ರೂಮಿನ ಬಾಗಿಲನ್ನು ಭದ್ರಪಡಿಸಿದರು ಡಾ. ಚಂದ್ರಪ್ಪ. ”ಅಲ್ಲೋ ಗೆಳೆಯ ನೆನ್ನೆ ಬೆಳಗ್ಗೆ ನನಗೆ ಮೆಸೇಜ್ ಮಾಡಿದ್ದೆ, ರಾತ್ರಿ ನನ್ನ ಫಸ್ಟ್‌ನೈಟೆಂದು.. ಇದ್ದಕ್ಕಿದ್ದಂತೆ ಏನಾಯ್ತು?” ಎಂದು...
ಗದಗನ ಪ್ರಸಿದ್ದ ಶಾಯಿರಿ ಕವಿ ಮರುಳಸಿದ್ಧಪ್ಪ ದೊಡ್ಡಮನಿ ಅವರ ಹೊಸ ಪುಸ್ತಕ ”ಎದೆಯಾಗಿನ ಮಾತು” ಶಾಯರಿಗಳ ಪುಸ್ತಕ ನನ್ನ ಕೈಸೇರಿತು.ಪುಸ್ತಕವನ್ನು ಓದಿದೆ. ಕನ್ನಡ ನಾಡಿನ ಜನರ ಮನ-ಮನೆಗಳನ್ನು ಸೇರಿ ಗೆದ್ದಿದೆ. ಇದಕ್ಕಾಗಿ ಕವಿಮಿತ್ರ ಶಾಯರಿಗಳ ಸರದಾರ ಶ್ರೀ ಮರುಳಸಿದ್ಧಪ್ಪ ದೊಡ್ಡಮನಿಯವರಿಗೆ ಅಭಿನಂದನೆಗಳು. ಶಾಯರಿಗಳು ಓದಲು ಹೆಚ್ಚು ಸಮಯ...
ಪೀಠಿಕೆಸುಬೋಧ ರಾಮರಾಯರು ತಾವು ನಡೆಸುತ್ತಿದ್ದ “ಸುಬೋಧ” ಮಾಸಪತ್ರಿಕೆಯಲ್ಲಿ ಅಂಕಣಬರಹವಾಗಿ ಭಾಗವತ ಕಥಾಮೃತವನ್ನು ದಶಕಗಳ ಕಾಲ ಉಣಬಡಿಸುತ್ತಿದ್ದರು. ಅದು ಅತ್ಯಂತ ಜನಪ್ರೀತಿಯನ್ನು ಗಳಿಸಿತ್ತು. ಅದು ಪುಸ್ತಕ ರೂಪದಲ್ಲಿ ಮೊದಲ ಬಾರಿ 1959 ರಲ್ಲಿ ಪ್ರಕಟವಾಯಿತು. ನಂತರ ಐದು ಬಾರಿ ಮರುಮುದ್ರಣಗಳನ್ನು ಕಂಡಿದೆ. ಸುಬೋಧ ರಾಮರಾಯರು ನನ್ನ ಚಿಕ್ಕತಾತನಾಗಿದ್ದರು ಎಂಬುದು...
“ರಾಷ್ಟ್ರೀಯ ಪ್ರಸಾರ ದಿನ”ವೂ ಇದೆ. ನಮ್ಮ ಭಾರತದಲ್ಲಿ ಎಲ್ಲಾ ಜನರ ಜೀವನದಲ್ಲಿನ ಪ್ರಮುಖ ಒಡನಾಡಿಯಾಗಿರುವ, ಒಂದು ರೀತಿಯಲ್ಲಿ ಮಾಹಿತಿಗಳ ಆಗರವಾಗಿರುವ, ಜೊತೆಗೆ ಕುಳಿತಲ್ಲೇ ನಮಗೆ ಎಲ್ಲಾ ಬಗೆಯ ಸುದ್ದಿ,ಮಾಹಿತಿ, ಮನರಂಜನೆ….ಎಲ್ಲವನ್ನೂ ಕೂಡ ನಮ್ಮಮನೆ- ಮನಕ್ಕೆ ತಲುಪಿಸುವ ಒಂದು ಗುರುತರ ಜವಾಬ್ದಾರಿಯನ್ನು ಹೊಂದಿರುವ “ರೇಡಿಯೋ”ವನ್ನು ಈ ಸಂದರ್ಭದಲ್ಲಿ ನಾವು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜಂಬುಕೇಶ್ವರ ದೇವಸ್ಥಾನದಿಂದ ನೇರವಾಗಿ ತಂಜಾವೂರಿಗೆ ಹೊರಟೆವು. ತಂಜಾವೂರು ನನಗೆ ವಿಶೇಷವಾಗಿ ಆಸಕ್ತಿಯ ಕ್ಷೇತ್ರವಾಗಿತ್ತು. ಕಾರಣ ಕಲ್ಕಿ ಕೃಷ್ಣಮೂರ್ತಿಯವರ ಪೊನ್ನಿಯಿನ್ ಸೆಲ್ವನ್ ಕಾದಂಬರಿಯಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ಒಂದು ಈ ತಂಜಾವೂರು. ಎರಡನೆಯದಾಗಿ ರಾಜರಾಜ ಚೋಳನು ಕಟ್ಟಿಸಿದ ಬೃಹದೀಶ್ವರ ದೇವಾಲಯವಿರುವುದೂ ಇಲ್ಲಿಯೇ. ತಂಜಾವೂರಿನ ಹೃದ್ಭಾಗದಲ್ಲಿ ಈ...
ನಗುವಿನದ್ದೊಂದುಬಿಡಿಸಿದ ಚಿತ್ರ ಬೇಕಿದೆಗೆರೆಗಳಲ್ಲಿ ನೂರು ರೂಪಬಣ್ಣ ಭಾವ ಸಮೀಪಇರುವ ನಗುವಿನದ್ದು ಯಾರದ್ದು ಬೇಕಾದರೂಆಗಬಹುದು ಅದುದೇವರಂತೆ ನಗಬೇಕುನೋವಿರದ ಭಾವದೊಳಗೆನಮ್ಮ ಅರಿವುಳಿಸಿಸಂತಸ ಸಂಭ್ರಮನಗುವಿನದ್ದೊಂದು ಸಾಕ್ಷಿಗೆಉಳಿದು ಹೋಗಬೇಕು ಮನೆ ಬಾಗಿಲ ಮೇಲೆಮನದ ಖಾಲಿತನದ ಮೇಲೆಜೀವಿತದ ನೆಲೆಯೊಂದಕ್ಕೆಮೆರುಗಾಗಿ ಒಲವಾಗಿಸೋತ ಭರವಸೆಗೆ ಗೆಲುವುನಗುವಂತೆ ಮತ್ತೆ ಮತ್ತೆಉಳಿವ ಕಾಣಿಸಬೇಕು ನೋಡಿದ ಮೊಗದಲ್ಲಿಚಿತ್ತ ಗೆಲ್ಲಿಸುವಂತೆ -ನಾಗರಾಜ ಬಿ.ನಾಯ್ಕ,ಕುಮಟಾ....
ಪುಸ್ತಕ :- ಅರುಂಧತಿ (ಕಥಾ ಸಂಕಲನ)ಲೇಖಕರು :- ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿಪ್ರಕಾಶಕರು :- ನ್ಯೂ ವೇವ್ ಬುಕ್ಸ್ಪುಟಗಳು :-164ಬೆಲೆ :- 180/- “ಪ್ರೀತಿ” ಸಮಯ, ಸಂಧರ್ಭ, ಪರಿಸ್ಥಿತಿಗಳನ್ನು ನೋಡಿ ಹುಟ್ಟಿಕೊಳ್ಳುವುದಿಲ್ಲ. ಇದೊಂದು ನವಿರಾದ ಮನಸ್ಸಿನ ಭಾವ. ಕೆಲವೊಂದು ಪರಿಸ್ಥಿತಿಗಳು ಬದುಕಲ್ಲಿ ಹೇಗೆ ಬರುತ್ತವೆ ಎಂದರೆ ಮನಸ್ಸಿನಲ್ಲಿ...
ಗೆಲುವಿಹುದು ಬಾಳಿನಲಿ ಸಾಗುತಿರೆ ಮುಂದಕ್ಕೆಬಲಹೀನನಾಗದೆಯೆ ಛಲದಿ ನೀ ಬದುಕುಕೆಲಸಗಳು ಕೆಡದಂತೆ ಕಾಯುತಿರೆ ಭಗವಂತಫಲ ಸಿಗುವುದದು ಖಚಿತ ಬನಶಂಕರಿ ಅಪರಂಜಿಯಂತಿರುವ ಗುಣವ ಹೊಂದಲು ಬೇಕುಉಪಕಾರ ಮಾಡುತಲಿ ಅಸಹಾಯ ಜನಕೆಕಪಟ ಮನವನು ತೊರೆದು ಕಾಯಕವ ಮಾಡುತಿರೆತಪವದುವೆ ಜೀವನದಿ ಬನಶಂಕರಿ ಮುತ್ತಿನಾ ಮಾತುಗಳು ಮನಕೆ ಹಿತವಾಗಿರಲುಸುತ್ತಲಿನ ಜನಕೆ ಮುದ ನೀಡುವವು ನಿತ್ಯಕತ್ತಲನು...
ನಿಮ್ಮ ಅನಿಸಿಕೆಗಳು…