Author: Tejas H Badala

3

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ತಿರುವಯ್ಯಾರಿನಿಂದ ಕುಂಭಕೋಣಂನ ಕಡೆಗೆ ಹೊರಟೆವು. ಅಲ್ಲಿ ಊಟಕ್ಕೆ ನಿಲ್ಲಿಸಿ, ನಂತರ ಅಲ್ಲಿಂದ ಧಾರಾಸುರದ ಐರಾವತೇಶ್ವರ ದೇವಸ್ಥಾನಕ್ಕೆ ಹೊರಟೆವು. ಅಲ್ಲಿಯ ಪೂಜೆಗಳನ್ನೆಲ್ಲಾ ಮುಗಿಸಿಕೊಂಡು, ದೇವಾಲಯದ ಕುರಿತಾಗಿ ತಿಳಿದುಕೊಳ್ಳಲು ಸಂಪನ್ಮೂಲ ವ್ಯಕ್ತಿಯೊಬ್ಬನನ್ನು ಕರೆದೆವು. ಅವರು ಆಂಗ್ಲದಲ್ಲಿ ನಮಗೆ ದೇವಾಲಯದ ಕುರಿತು ಹೇಳತೊಡಗಿದರು. ಗುರುಗಳು ಮಾತಿನಲ್ಲಿ ಹೇಳುವುದಾದರೆ...

4

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಇಷ್ಟನ್ನೂ ಮುಗಿಸಿ, ನಮ್ಮ ಪ್ರವಾಸದ ಅತ್ಯಂತ ಮುಖ್ಯ ಘಟ್ಟಕ್ಕೆ ತಯಾರಾಗಿ ಹೊರಟೆವು. ಸಂತ ತ್ಯಾಗರಾಜರ ಸಮಾಧಿ ಸ್ಥಳವಾದ ತಿರುವಯ್ಯಾರಿನ ಕಡೆಗೆ ಪ್ರಯಾಣ ಆರಂಭಿಸಿದೆವು. ನಾವು ನಿಷ್ಕಾರಣವಾಗಿ ನಮ್ಮ ಸಂಗೀತ ಸೇವೆ ಸಲ್ಲಿಸಲೂ ಹಾಗೆಯೇ ಸಂಗೀತ ಜ್ಞಾನವೃದ್ಧಿಯನ್ನು ಬೇಡುವ ಉದ್ದೇಶದಿಂದ ಅಲ್ಲಿಗೆ ಹೋದೆವು. ಸಮಾಧಿಯು...

4

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜಂಬುಕೇಶ್ವರ ದೇವಸ್ಥಾನದಿಂದ ನೇರವಾಗಿ ತಂಜಾವೂರಿಗೆ ಹೊರಟೆವು. ತಂಜಾವೂರು ನನಗೆ ವಿಶೇಷವಾಗಿ ಆಸಕ್ತಿಯ ಕ್ಷೇತ್ರವಾಗಿತ್ತು. ಕಾರಣ ಕಲ್ಕಿ ಕೃಷ್ಣಮೂರ್ತಿಯವರ ಪೊನ್ನಿಯಿನ್‌ ಸೆಲ್ವನ್‌ ಕಾದಂಬರಿಯಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ಒಂದು ಈ ತಂಜಾವೂರು. ಎರಡನೆಯದಾಗಿ ರಾಜರಾಜ ಚೋಳನು ಕಟ್ಟಿಸಿದ ಬೃಹದೀಶ್ವರ ದೇವಾಲಯವಿರುವುದೂ ಇಲ್ಲಿಯೇ. ತಂಜಾವೂರಿನ ಹೃದ್ಭಾಗದಲ್ಲಿ ಈ...

5

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವೈಭವೋಪೇತವಾದ, ದಿವ್ಯ ಶ್ರೀರಂಗದ ಸಾನ್ನಿಧ್ಯದಿಂದ ನಾವು ವೇಗ ವೇಗವಾಗಿ ಜಂಬುಕೇಶ್ವರ ದೇವಾಲಯದ ಕಡೆಗೆ ಹೊರಟೆವು. ಈ ಜಂಬುಕೇಶ್ವರ ದೇವಾಲಯವು ಭಾರತದಲ್ಲಿರುವ ಪಂಚಭೂತ ತತ್ವಲಿಂಗಳಲ್ಲಿ ಒಂದು. ಕಾಂಚೀಪುರದ ಏಕಾಮ್ರನಾಥ ಪೃಥ್ವೀ ತತ್ವ, ಜಂಬುಕೇಶ್ವರ ಜಲ ತತ್ವ, ತಿರುವಣ್ಣಾಮಲೈನ ಅರುಣಾಚಲೇಶ್ವರ ಲಿಂಗವು ತೇಜ ಅಥವಾ ಅಗ್ನಿ ತತ್ವ,...

9

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಸದಾಶಿವ ಬ್ರಹ್ಮೇಂದ್ರರು ಶಿವರಾಮಕೃಷ್ಣ ಎಂಬ ಹೆಸರಿನಲ್ಲಿ ಸೋಮಸುಂದರ ಅವಧಾನಿ ಹಾಗು ಪಾರ್ವತಿ ಎನ್ನುವ ದಂಪತಿಗಳಿಗೆ ಹುಟ್ಟಿದರು. ಅವರ ಹುಟ್ಟು, ನಂತರದ ಆಧ್ಯಾತ್ಮದ ಹಂಬಲ, ಇವೆಲ್ಲವೂ ನಿಮಗೂ ಗೂಗಲ್ಲಿನಲ್ಲಿ ಸಿಗುತ್ತದೆ. ವಿಶಿಷ್ಟವೆಂದರೆ, ಇವರು ಅದ್ವೈತ ತತ್ವವನ್ನೆ ಅವರ ಎಲ್ಲಾ ಬರಹಗಳಲ್ಲೂ ಪ್ರತಿಪಾದಿಸಿದ್ದಾರೆ. ಸದಾಶಿವ ಬ್ರಹ್ಮೇಂದ್ರರು...

11

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 1

Share Button

ತಮಿಳುನಾಡಿನ ಐದು ದಿನಗಳ ಪ್ರವಾಸಾನುಭವಉಪೋದ್ಘಾತನಮಸ್ಕಾರ. ಪ್ರವಾಸವು ಬರಹಗಾರನಿಗೆ ಮೃಷ್ಟಾನ್ನ ಭೋಜನದಂತೆ. ಬರಹ ಕಲಿಯುತ್ತಿರುವ ನನ್ನಂತಹವನಿಗೂ ಅದು ಒಂದು ಸಂತೋಷ. ಇಂಡಿಯಾ ಹೋಗಿ ಭಾರತ ಪ್ರವರ್ಧಮಾನಕ್ಕೆ ಬರುತ್ತಿರುವ ಕಾಲವಿದು. ನಮ್ಮ ದೇವಾಲಯಗಳು ಇಷ್ಟು ಅದ್ಭುತವಾಗಿದೆಯೇ? ಎಂದು ನಾವು ಕೇಳುವ ಕಾಲವೂ ಈಗ ಬರುತ್ತಿದೆ. ಏನು ಬರೆಯಲು ಕುಳಿತರೂ ಓಡದ...

3

ಗಲ್ಲಿ, ಗಂಗಾ, ಮತ್ತು ನಾನು – ಕಾಶಿ ಕ್ರಾನಿಕಲ್ಸ್‌

Share Button

ಬಹುಪಾಲು ಜನರು ಮರಣಕ್ಕೆಂದೇ ಬರುವುದು ಈ ಜಾಗಕ್ಕೇ. ಆದರೆ ಬಹಳಷ್ಟು ಜನರಿಗೆ ಈ ಜಾಗವೇ ಪುನರ್ಜನ್ಮವನ್ನು ನೀಡಿದೆ. ಹೆಣವನ್ನು ದಹಿಸುತ್ತಿರುವ ಬೆಂಕಿಯನ್ನೇ ಬೆಳಕೆಂದು ಭಾವಿಸಿ ಮಹಾಭೂತನಾಥನಿಗೆ ಅದೇ ಭಸ್ಮದಿಂದ ಅಲಂಕಾರ! ಮಹಾಸ್ಮಶಾನ ಎನಿಸಿಕೊಂಡಿರುವ ಕಾಶಿ ಅಲ್ಲದೆ ಇನ್ನಾವ ಜಾಗದಲ್ಲಿ ಈ ವೈಪರೀತ್ಯಗಳು ಕಾಣಸಿಗಬಹುದು? ಹಿಂದೆ ಕಾಶಿಗೆ ಹೋಗುತ್ತಿದ್ದವರೆಲ್ಲರೂ...

3

ಗುಂಡಾಡಿ ಗುಂಡ

Share Button

ಶಾಲೆಗಳಲ್ಲಿ ಸಾಮಾನ್ಯವಾಗಿ ಹುಡುಗರಿಗೆ ಶೋಕಿ ಮಾಡುವ ಗೀಳು. ʼಹುಡುಗರುʼ ಎಂದರೆ ಕೇವಲ ಬಾಲಕರು ಎಂದರ್ಥ. ಬಾಲಕಿಯರಲ್ಲ. ಹೊಸದಾಗಿ ಮಾರುಕಟ್ಟೆಗೆ ಬಂದ ವಾಚು, ಸ್ಮಾರ್ಟ್‌ ವಾಚು, ಬೂಟುಗಳು, ಅಥವಾ ಬೆಲ್ಟು; ಎಲ್ಲಕ್ಕಿಂತ ಮುಖ್ಯವಾಗಿ ಹೇರ್‌ ಸ್ಟೈಲು! ಈ ಕೂದಲನ್ನು ಬೇರೆ ಬೇರೆ ರೀತಿಗಳಲ್ಲಿ ಕತ್ತರಿಸಿಕೊಳ್ಳುವುದು ಒಂದು ಚಟ. ವಾರವಾರಕ್ಕೂ...

9

ನನ್ನ ತಲೆಯಲ್ಲಿ ಈರುಳ್ಳಿ

Share Button

ನನಗೆ ಇತ್ತೀಚಿಗೇ ತಿಳಿಯಿತು. ಹಸಿವಾದಾಗಲೆಲ್ಲ ಯೂಟ್ಯೂಬ್‌ ನಲ್ಲಿ ʼಈಜ಼ೀ ಸ್ನ್ಯಾಕ್ಸ್‌ʼ ಎಂಬ ವಿಡಿಯೋಗಳನ್ನು ನೋಡಬಹುದೆಂದು. ನೋಡುತ್ತಾ ನೋಡುತ್ತಾ ಅತ್ಯಂತ ಸುಲಭವಾದದ್ದನ್ನು ಮಾಡಬಹುದಲ್ಲವೇ ಎಂದುಕೊಂಡು ಎದ್ದು ಅಡುಗೆ ಮನೆಗೆ ಹೋಗುವುದು; ಅಥವಾ ಇನ್ನೂ ಒಳ್ಳೆಯ ಅನುಭೂತಿಗೆ ಅಮ್ಮನಿಗೆ ಅದೇ ವಿಡಿಯೋವನ್ನು ಫಾರ್ವರ್ಡ್‌ ಮಾಡುವುದು. ʼಅಮ್ಮಾ ಮಾಡಿಕೊಡುʼ ಎಂದು ಪೇಚಾಡುವುದರೊಳಗೆ...

14

ನೀರು

Share Button

‘ಬಸ್ಸು ಲೇಟಾದರೆ ಇಲ್ಲೇ ಉಳಿಯಬೇಕಾದೀತು!ʼ ಎಂದು ಅತ್ತೆ ಗುಡುಗಿದಾಗ ನನಗೆ ಹೆದರಿಕೆ ಆಯಿತು. ನಿಲ್ದಾಣಕ್ಕೆ ಧಾವಿಸಿ ಹೊರಡಬೇಕು ಎಂದಾಗ ಎದುರಿನಲ್ಲೇ ಕಾರೊಂದು ಬಂದು ನಿಂತಿತು. ಕಿಟಕಿಯಿಂದ ಚಿರಪರಿಚಿತ ಮುಖವೊಂದು ಇಣುಕಿ, “ಬಾರೋ ಲೋ! ಬಸ್ಟಾಂಡಿಗೇ ತಾನೆ?” ಎಂದು ಕೇಳಲು, ನಾನು ತಲೆಯಲ್ಲಾಡಿಸಿ ಕಾರು ಹತ್ತಿದೆ. ಹಿಂದೆಯೇ ಅತ್ತೆ...

Follow

Get every new post on this blog delivered to your Inbox.

Join other followers: