ಮರುಳು ಮಾಡುವ ಶಾಯಿರಿಗಳು
ಗದಗನ ಪ್ರಸಿದ್ದ ಶಾಯಿರಿ ಕವಿ ಮರುಳಸಿದ್ಧಪ್ಪ ದೊಡ್ಡಮನಿ ಅವರ ಹೊಸ ಪುಸ್ತಕ ”ಎದೆಯಾಗಿನ ಮಾತು” ಶಾಯರಿಗಳ ಪುಸ್ತಕ ನನ್ನ ಕೈಸೇರಿತು.ಪುಸ್ತಕವನ್ನು ಓದಿದೆ. ಕನ್ನಡ ನಾಡಿನ ಜನರ ಮನ-ಮನೆಗಳನ್ನು ಸೇರಿ ಗೆದ್ದಿದೆ. ಇದಕ್ಕಾಗಿ ಕವಿಮಿತ್ರ ಶಾಯರಿಗಳ ಸರದಾರ ಶ್ರೀ ಮರುಳಸಿದ್ಧಪ್ಪ ದೊಡ್ಡಮನಿಯವರಿಗೆ ಅಭಿನಂದನೆಗಳು.
ಶಾಯರಿಗಳು ಓದಲು ಹೆಚ್ಚು ಸಮಯ ಆಗದು . ಏಕೆಂದರೆ ಅವು ಚಕ್ಕುಲಿ ಕೋಡುಬಳೆ ತರ ಚುರುಚುರು ಸವಿಯುತ್ತಾ ಬಹು ಬೇಗ ನಮಗೆ ಓದಿಸಿಕೊಂಡು ಹೋಗುತ್ತವೆ. ಪ್ರೇಮವೆಂಬುದು ಈ ಸೃಷ್ಟಿಯಲ್ಲಿ ಅಜರಾಮರವಾಗಿರುವ ಮಧುರರಾಕ್ಷರ. ಇಲ್ಲಿ ಪ್ರೇಮದ, ವಿರಹದ, ಆಘಾತದ,ನೋವಿನ, ಪರಾಮರ್ಶೆಯ, ಕನವರಿಕೆಯ, ಪ್ರೀತಿಯ ಅಮಲಿನ, ಪರಿತಾಪಗಳನ್ನು ಹೊತ್ತ ಶಾಯರಿಗಳು ಓದುಗರನ್ನು ಹಿಡಿದಿಡುತ್ತವೆ. ಪ್ರೀತಿಯಲ್ಲಿ ಬಿದ್ದು ಅದಕ್ಕೆ ಒಳಗಾದವರು ಕವಿತೆ, ಕಾವ್ಯ, ಗಜಲ್, ಶಾಯರಿಗಳನ್ನು ಬರೆಯುವುದು ಸಹಜ ಎಂದು ಹಿರಿಯರೊಬ್ಬರ ಮಾತು ಕೇಳಿದ್ದೇನೆ. ಈ ಶಾಯರಿಗಳನ್ನು ಓದುವ ಸಹೃದಯರು ಶಾಯರಿಗಳ ಪ್ರೇಮದಲ್ಲಿ ಬೀಳುವುದು ಖಂಡಿತ.
ನಿನ್ನ ನೆನಪಿನ್ಯಾಗ
ಏಸು ನಿದ್ದಿ ಕಳದು ಹೋಗ್ಯಾವು
ಪ್ರೀತಿ ಅನ್ನು ಹುಚ್ಚಿನ್ಯಾಗ
ಕೊಚ್ಚಿ ಹೋಗ್ಯಾವು
ಅವು ನನ್ನ ನಿನ್ನ ಎದಿಯಾಗ
ಅಚ್ಚಳಿಯದ ಬೆಚ್ಚಗ ಉಳಿದಾವು
ಪ್ರೇಮವೆಂಬುದೇ ನಿಗೂಢ. ರಟ್ಟಾಗದೆ ಗುಟ್ಟಾಗಿ ಹರಿಯುವ ಮನದ ಹೊನಲು.
ಹಗಲು ರಾತ್ರಿ ನಿನ್ನ ನೆನಪು
ಕಾಡಿ ಕಾಡಿ ನಾ ಸೊರಗಿನಿ
ಕಣ್ಣಾಗ ಜೀವಾ ಹಿಡಿದಿನಿ
ನಿನ್ನ ಕಾದು ಕಾದು ನಾ ಮಾತ್ರ
ಮೆತ್ತಗಾಗಿ ಹೋಗಿನಿ
ನಿರಾಶೆ ಇದ್ದರೂ ಅದೇ ಪ್ರೇಮದ ಪರಿಮಳ ಹೊಮ್ಮಿದ ಶಾಯರಿ..
ಎದಿ ತುಂಬಾ ನೋವಿದ್ದರು
ಮನಸು ಬಿಚ್ಚಿ ನಗಬೇಕು
ಎದಿ ತುಂಬಾ ಆಸೆ ಇದ್ದರು
ಅವನ್ನ ಗಟ್ಟಿಯಾಗಿ ಹಿಡಿಬೇಕು
ಪ್ರೇಮ ದೀಪವೂ ಹೌದು.. ಕಾಡ್ಗಿಚ್ಚು ಸಹ ಹೌದು ಎಂಬ ಮಾರ್ಮಿಕವಾಗಿ ಎಚ್ಚರಿಕೆ ಕೊಡುವ ಶಾಯರಿಯಾಗಿದೆ.
ಇಂತಹ ಅನೇಕ ಶಾಯರಿ ಕವಿತಾ ಕುಸುಮಗಳಿಂದ ಪುಸ್ತಕವು ಒಂದು ಹೂಗುಚ್ಛವೆನಿಸುತ್ತದೆ. ಕವಿ ಶ್ರೀ ದೊಡ್ಡಮನಿಯವರ ಇಂತಹ ಅನೇಕ ಪುಸ್ತಕಗಳು ಮೂಡಿಬರಲಿ. ಶುಭವಾಗಲಿ ಎಂದು ಹಾರೈಸುತ್ತೇನೆ.
-ಶ್ರೀಮತಿ ವಿಶಾಲ ಆರಾಧ್ಯ, ಬೆಂಗಳೂರು
ಅರ್ಥಪೂರ್ಣ ವಾದ ಶಾಯರಿಗಳು ಸಾರ್…
Nice
ಶಾಯರಿಗಳ ರುಚಿಯನ್ನು ಚಕ್ಕುಲಿ ಕೋಡುಬಳೆ ರುಚಿಗೆ ಹೋಲಿಸಿದ್ದು ಇಷ್ಟವಾಯಿತು. ಚಿಕ್ಕ ಚೊಕ್ಕ ಚಂದದ ಪುಸ್ತಕ ಪರಿಚಯ.
ಶಾಯಿರಿಗಳ ಪುಸ್ತಕದೊಳಗಿನ ಆಯ್ದ ಶಾಯಿರಿಗಳ ವಿಮರ್ಶಾತ್ಮಕ ಬರಹವು ಅಂದವಾಗಿ ಮೂಡಿಬಂದಿದೆ.