ಮುದ್ದು ಹುಡುಗ ಮಾಧವ
ಒಮ್ಮೆ ಹೇಳಿದ ಅಮ್ಮನಿಗೆ
ಹೋಗೋಣ್ವಾ ನಾವು ದೂರಕ್ಕೆ
ಹೊಸ ಊರು ನೋಡೋಕೆ
ಅಮ್ಮ ಹೇಳಿದ್ರು ಅಪ್ಪಂಗೆ
ಹೊರಡಿ ಶ್ರೀರಂಗಪಟ್ಣಕ್ಕೆ
ರಂಗನಾಥ ಸ್ವಾಮಿ ನೋಡೋಕೆ
ಭಾನುವಾರದ ರಜಾ ಬಂತು
ಅಪ್ಪಅಮ್ಮರ ಜೊತೇಲಿ ಕೂತು
ಕಾರಲ್ಲಿ ಸವಾರಿ ಹೊರಟೇಬಿಡ್ತು
ಶ್ರೀರಂಗಪಟ್ಣ ಬಂದೇಬಿಡ್ತು
ಕೋಟೆ ಬಾಗ್ಲು ದಾಟಾಯ್ತು
ಕಾವೇರಿ ನದಿಯೂ ಕಂಡಿತ್ತು
ಕೈಕಾಲೆಲ್ರೂ ತೊಳ್ಕೊಂಡು
ಹೂವು ಹಣ್ಣು ಹಿಡ್ಕೊಂಡು
ದೊಡ್ಡ ಬಾಗ್ಲು ದಾಟ್ಕೊಂಡು
ಹೊರಟರು ಗುಡಿಗೆ ನಡ್ಕೊಂಡು
ಅಮ್ಮ ಅಂದರು ಅಲ್ನೋಡು
ದೇವರ ದರ್ಶನ ಮಾಡು
ಅರೆ! ಅಲ್ಲೆ ಇದಾನೆ ರಂಗನಾಥ
ಮಲಗಿಕೊಂಡಿದಾನೆ ನಗನಗ್ತಾ
ಅರ್ಚಕರಿದಾರೆ ಅಲ್ಲಿ
ದೀಪ ಧೂಪ ಉಪಚರಿಸಿ
ಮಣಮಣ ಮಂತ್ರ ಆರತಿ
ಢಣ ಢಣ ಗಂಟೆ ಬಾರಿಸಿ
ಬಹಳ ಜನ ಸೇರಿದಾರೆ
ನಮಸ್ಕಾರ ಮಾಡ್ತಿದಾರೆ
ಅದ್ರೂ ದೇವರು ಏಳದೆ
ಮಾಡ್ತಾ ಇದಾರೆ ನಿದ್ರೆ !
ಮಾಧವಂಗೆ ಬೇಜಾರಾಗಿ
ಕೂಗಿಯೇ ಬಿಟ್ಟಜೋರಾಗಿ
ತಡವಾಗೋಯ್ತು ರಂಗನಾಥ
ಏಳಿ ಬೇಗನೆ ಎದ್ದೇಳಿ!!
ನವೆಂಬರ್ 20, ʼವಿಶ್ವ ಮಕ್ಕಳ ದಿನ
–ಅನಂತ ರಮೇಶ್

